Life Goes On...

Life Goes On...
Life--- The way u Look at it

Tuesday, November 16, 2010

ಪುಂಗಾಯಣ

ರಂಗ : ಏನೋ ಮಗನೆ, ಹೇಗಿದಿಲೆ, ಎಲ್ಲಿಗೋ ಓಡೊಕತ್ತಿ ?

ಪುಂಗಾ: ನಮಸ್ಕಾರ ಕಣನ್ನೋ, ಸಂದಕಿದಿನೀ, ಯಾವಾಗ ಬಂದ್ರಿ ಊರಕಡೆ?

ರಂಗ: ಅದಿರ್ಲಿ, ಎಲ್ಲಿಗೋ ಓಡೋಕತ್ತಿ ? ಅಂತ ಹೊಗೆಹಾಕಿಸಿಕೊಂಡಿರೋ ವಿಷ್ಯ ಏನೋ?

ಪುಂಗಾ: ಏನಿಲ್ಲ ಕಣನ್ನೋ, ಹಿಂಗೆ ರಾಜ್ಯೋತ್ಸವ ಪ್ರಶಸ್ತಿಗೆ " Nomination" ಹಾಕೋಕೆ ಹೊಯ್ತಿದಿನಿ.

ರಂಗ: ಅದೇನ್ಲ, ಏನ್ ಬೋಗೊಳಕತ್ತಿ. ಅಲ್ಲಲೇ ದ್ಯಾಬೇರಿ ನೀ ಏನ್ ಕಿಸಿದಿದಿಯಾ ಅಂತಲೇ ನಿಂಗೆ ಪ್ರಶಸ್ತಿ?

ಪುಂಗಾ: ಅಲ್ಲ ಪ್ರಶಸ್ತಿ ಸಿಕ್ಕಿರೋರೆಲ್ಲ ಏನ್ ಕಿಸ್ದೊವ್ರೆ ಅಂತ. ಈ ಕಿತ ಬೇರೆ ಪ್ರತಿಯೊಂದು ಜಿಲ್ಲೆಗೂ ಪ್ರಶ್ಯಸ್ತ ಕೊಟ್ಟೋರೆ ಮತ್ತೆ ಸಿಕ್ಕ ಸಿಕ್ಕ ಎಲ್ಲಾ ಕ್ಷೇತ್ರಗಳಿಗೂ ಕೊಟ್ಟೋರೆ. ಏನೋ ಮುಂದಿನ ಕಿತ ಪ್ರತಿಯೊಂದು ತಾಲುಕಿಗೂ ಅದನ್ನ ಕೊಡ್ತಾರೋ ಏನೋ. ಅದು ಅಲ್ಲದೆ ಎಡ್ಡಿಗೋ, ಇಲ್ಲ ಕಾರಜೋಳಗೋ ಅದು ಆಗಿಲ್ಲ ಅಂದ್ರೆ ಪ್ರಶಸ್ತಿ ಸಮಿತಿಯವರಿಗೆ ಯಾರಿಗದ್ರು ಒಂದು ಪೋನ್ ಮಾಡಿ ಕೇಳುದ್ರೆ ಸಾಕಂತೆ... ಅದುಕ್ಕೆ ಪಷ್ಟು "ಅಪ್ಲಿಕೇಶನ್" ಹಾಕಿ ಆಮ್ಯಾಗೆ ಅವ್ರಿಗೆ ಪೋನ್ ಮಾಡ್ಕೊತೀನಿ. ಸ್ವಲ್ಪ ದುಡ್ಡಿಂದು ಕಾಟ ಇತ್ತು ಅದುಕ್ಕೆ ಈ ಪ್ರಶಸ್ತಿ ನ ಗಿಟ್ಟಿಸಿಕೊಂಡರೆ ಮೇಲು ಅಂತ.

ರಂಗ: ಅಲ್ಲಾ ಲೇ ಇಗ ಕೊಟ್ಟಿರೋರ್ಗೆಲ್ಲ ಹೇಳ್ಕೊಲೋಕೆ ಯಾವುದೂ ಒಂದು ಕ್ಷೇತ್ರ ಅಯ್ತೆ, ನಿಂಗೆ ಯಾವುದಯ್ತೆಲೆ?

ಪುಂಗಾ: ಯಾಕೆ ಹಾಗೆಳ್ತಿರಿ, ಈ ಸಲ ಅದು ಇದು ಅಡೋರಿಗೆ, ಹೊಲದಾಗೆ ಸುಮ್ಕೆ ಕೆಲಸ ಮಾಡ್ಕೊತಿರೋರಿಗೆ ಹಾಗೇನೆ TV ನ್ಯಾಗೆ ಸುಮ್ಕೆ ಪುನ್ಗೊರಿಗೆ ಮತ್ತೆ ಪೇಪರ್ ನೋರಿಗೆ, ಎಲ್ಲರಿಗೂ ಕೆಲವು ಪ್ರಶಸ್ತಿ ಕೊಟ್ಟೋರೆ. ನನ್ ಏನ್ ಕಡಿಮ್ ತಿಂದಿನಿ, ನಾನು ಉರಾಗಿರೋ ಎಲ್ಲ ವಿಷ್ಯನು ಸಕ್ಕತ್ತಾಗಿ ಮಸಾಲೆ ಹಾಕಿ ನಿಮ್ಮಂತೋರಿಗೆಲ್ಲ ಹೇಳ್ಕೊಂಡ್/ ಹಬ್ಬಿಸಿಕೊಂಡು ಬರ್ತೀನಿ. ಅದುಕ್ಕೆ ನಾನು " ಪ್ರಾದೇಶಿಕ ವರದಿಗಾರ " ಅಂತ Nomination ಹಾಕೋತಿನಿ. ಪಷ್ಟು ಹೆಸರು ಬರ್ಸುದ್ರೆ ಸಾಕು, ಆಮ್ಯಾಗೆ ಯಾರಕಯ್ಯಗಾದ್ರು ಪೋನ್ ಮಾಡ್ಸಿ ಗಿಟ್ಟುಸ್ಕೊಂತೀನಿ

ರಂಗ: ಲೇ ತಿರ್ಬೋಕಿ ನಿಂಗೆ ಯಾರಲ ಪೋನ್ ಮಾಡಿ ಪ್ರಶಸ್ತಿ ಕೊಡ್ಸೋದು?

ಪುಂಗಾ: ನಮ್ಮೂರು ಮಿನಿಸ್ಟ್ರು PS ಸ್ಸು(ಪರ್ಸನಲ್ secretary) ನಮ್ಮನೆ ಪಕ್ಕನೆ ಇರೋದು, ಎಲೆಕ್ಷನ್ ಟೈಮಾಗೇ ಅದು ಇದು ಪುಂಗಿ ಅವರಿಗೆ ಸ್ವಲ್ಪ ಹೆಲ್ಪ್ ಮಾಡಿದ್ದೆ. ಅದುಕ್ಕೆ ಅವರ್ನ ಕೇಳುದ್ರೆ ಆಗೋಯ್ತದೆ

ರಂಗ: ಅವಯ್ಯ ಇನ್ನವ್ ಮಿನಿಸ್ಟ್ರು ಲೇ, ಅವಯ್ಯ ಮೊದಲಿಂದಾನು ಅನರ್ಹ ಶಾಸಕ ಆಗಿದ್ರುನು, ಎಲ್ಲಾರಿಗೂ ಗೊತ್ತಾಗೋ ಹಾಗೆ ಈಗ ಅನರ್ಹ ಶಾಸಕ ಅಂತ ಬೋಪಯ್ಯನೋರು announce ಮಾಡೋರೆ.

ಪುಂಗಾ: ಅದೆಲ್ಲ ಏನೆ ಇರಲಿ ಬಿಡಿ, ಈ ರಾಜಕೀಯದೋರಿಗೆ ಗೆದ್ರು, ಸೋತರು, ಇದ್ರೂ, ಅನರ್ಹರಾದರು ಅವರಿಗೆ ಸ್ವಲ್ಪ ಹವಾ ಇರುತ್ತೆ. ಕುಮಾರಣ್ಣನ ಅವಾಗವಾಗ ಹೇಳ್ತಾರಲ್ಲ " ರಾಜಕಿಯದಾಗೆ 'ಶಾ'ಶ್ವತ ಶತ್ರುಗಳಿಲ್ಲ ಅಂತ", ಹಾಗೆ ಯಾರಿಗೊತ್ತು ಎಡ್ಡಿ ಮತ್ತೆ ರೆಡ್ಡಿ ಗೇಲ್ಸಿ ನಮ್ ಮಿನುಸ್ತ್ರುನ ಬೆಂಬಲ ಕೊಡಿ ಅಂತ ಕೆಳ್ಕೊತರೇನೋ. ಅಂಗೆನಾರ ಕೇಳುದ್ರೆ, ಈ ಕಿತ ದುಡ್ಡು ಜತೆಗೆ ಒಂದು ನಾಲ್ಕು ರಾಜ್ಯೋತ್ಸವ ಪ್ರಶಸ್ತಿ ನಮ್ಮುರಿನವರಿಗೆ ಕೊಡ್ಸಿ ಅಂತ ಕೇಳೋಕೆ ಹೇಳುದ್ರೆ ಆಗೋಯ್ತದೆ. ಎಂಗೋ ಅಲ್ಲಿ ಇಲ್ಲಿ ಅಂತ ಸುತ್ತಡಿದೃನು ಎಡ್ಡಿನಾ ಕೆಳಗಿಲ್ಸಿ, ಒಂದು ಒಳ್ಳೆ position  ಗಿಟ್ಟಿಸ್ಕೊಳೊ ಪ್ಲಾನ್ ಹೋಗೆ ಹಾಕಿಸ್ಕೊಂಡು, ಕುಮಾರಣ್ಣನನ್ನ ನಂಬಿ ಬಲೆಗೆ ಸಿಕ್ಕಿಬಿದ್ದ ಹಂದಿ ತರ ಆಗಿರೋ ಇವರಿಗೆ, ಇಗ ಏನ್ ಕೊಡ್ತೀವಿ ಅಂದ್ರುನು ಓಡೋಯ್ತನೆ.

ರಂಗ: ಲೇ ಪುಂಗಿ, ನಿಂತಗು ಬಾಳ ವಿಷ್ಯ ಆಯ್ತಲೆ. ಭಲೇ ತಲೆ ಇಟ್ಟಿಯಲೇ. ಅದ್ರುನು ನಿ ಕೇಳುದ್ರೆ ಅವಯ್ಯ ಕೆಳ್ತಾನೆನ್ಲೆ.

ಪುಂಗಾ: ಕೇಳ್ತಿವಿ ಒಪ್ಕೊಂಡ್ರೆ ಸರೆ...

ರಂಗ: ಇಲ್ಲಾಂದ್ರೆ?

ಪುಂಗಾ: ಎನಯ್ತೆ, ಈಗ ರೇವಣ್ಣನ ತರ ಒಂದು ನಿಂಬೆಹಣ್ಣು ಇಟ್ಕೊಂಡು ಹೊಯ್ತಿದಿನಿ, ಇದುಕ್ಕು ಬಗಿಲ್ಲ ಅಂದ್ರೆ....

ರಂಗ: ಅಂದ್ರೆ?

ಪುಂಗಾ: ಯೆನಯ್ತೆ ಎಡ್ಡಿ ತರ ನಾವುನೂ ಬುಲ್ಡೆ, ಬೂದಿ ತಗೊಂಡು ಮಂತ್ರ ಹಾಕುಸ್ತಿನಿ
ರಂಗ: ಅಯ್ಯೋ ಬೇವರ್ಸಿ, ನಿ ಉದ್ದಾರ ಆಗೋಲ್ಲ ಕಣ್ಲ. ಕೊಳ್ಳೆಗಾಲ, ಮಳವಳ್ಳಿ ಆಕಡನೆ ಇದ್ದ ಈ ಮಂತ್ರ ತಂತ್ರ ನಮ್ಮುರ್ಗು ತರ್ತಿಯೇನ್ಲೆ. ಅಲ್ಲಾ ಲೇ ನಿಂಗ್ಯಕ್ಲೆ ಆ ಪ್ರಶಸ್ತಿ ಮ್ಯಾಗೆ ಅಸ್ಟೊಂದು ಆಸೆ.


ಪುಂಗಾ: ಪ್ರಶಸ್ತಿ ಬಂದ್ರೆ, ನಮ್ಗುಯ ಜನ ಸ್ವಲ್ಪ ಮರ್ವಾದಿ ಕೊಡ್ತಾರೆ. ಹಾಗೇನೆ ಸ್ವಲ್ಪ ದುಡ್ದುನೂ ಗಿಟ್ಟುತ್ತೆ. ನೋಡುತಿರ್ರಿ ಈ ಪ್ರಶಸ್ತಿ ಸಿಕ್ಮ್ಯಗೆ ನೀವು " ಬದಲಾಗಿರೋ ಪುಂಗನ್ನ" ನೋಡ್ತಿರಿ

ರಂಗ: ಲೇ ಗೂಬೆ, ತಿಂಗ್ಲಿಒಂದ್ಸಲ ಬದಲಾಗೋಕೆ ನಿ ಏನ್ ಎಡ್ಡಿ ಕೆಟ್ಟೋದ. ಅವ್ರು ಅಂದರೆ ಸಿಯೆಮ್ಮು ಯಾವಾಗಬೇಕದ್ರು ಬದಲಾಗ್ತಾರೆ. ಮೊನ್ನೆ ತಾನೆ ಹೇಳಿದ್ದೆ, ನಮ್ಮೂರು ಮಿನಿಸ್ಟ್ರು ಬಂಡಾಯದ ಬಾವುಟ ಹಾರುಸ್ದಾಗ, ನನಿಗೆ ಟೈಮ್ ಬಂದೆಯ್ತೆ, ಇನ್ ಮ್ಯಾಗೆ ಪುಂಗಾ ಬದಲಾಗ್ತನೆ ಅಂತ. ಯಾಕೆ ಅವಗೆನು ಗಿಟ್ಲಿಲ್ವ? ಈಗ ಮತ್ತೆ ಪ್ರಶಸ್ತಿ ಮ್ಯಾಗೆ ಕಣ್ಣಾಕಿ?

ಪುಂಗಾ: ನಿಮಿಗೆ ಗೊತಲ್ವ, ಆಗ ಪಾಪ ನಮ್ ಮಿನಿಸ್ಟರ್ ಅವರೇ ಹೋಗೆ ಹಾಕಿಸ್ಕೊಂಡೊರೆ. ಆ situation ನಾಗೆ ಏನರ ಕೇಳಿದ್ರೆ, ಮಿನಿಸ್ಟರ್ ಆಗಿದ್ದಾಗ ಏತಿದ್ದ ಒಂದೆಲ್ದು ರೇಷ್ಮೆ ಸೀರೆ ಕೊಟ್ಟು ಕಳಿಸ್ತಿದ್ರು.

ರಂಗ: ಆ ಸೀರೆಗೆ ಎಷ್ಟು scope ಗೊತ್ತ, ಭಾಗ್ಯಲಕ್ಷ್ಮಿ ಸೀರೆ ಈಗ ನಮ್ಮ ರಾಜ್ಯದ ಅಭಿರುಧಿಯ ಸಂಕೇತನಂತೆ.  ಅದೆಂಗೆ ಅಂತ ನಂಗು ಗೊತ್ತಿಲ್ಲ.
ಸರೇ ಪುಂಗಾ ನಿಂಜತೆ ಹರಟೋಕೆ ಪುರಸೋತಿಲ್ಲ ಮತ್ತೆ ಸಿಗ್ತೀನಿ. ಅದೇನು ನಿಂಬೆಹಣ್ಣೆ ಇಟ್ಕೊತಿಯೋ ಇಲ್ವೋ ಬೂಧಿ ನೆ ಬಳುಸ್ತಿಯೋ, ಪ್ರಶಸ್ತಿ ಏನರ ಸಿಕ್ಕರೆ ನಮಿಗು ಸ್ವಲ್ಪ ಮುಖ ತೋರ್ಸಿ.  ಸರೇ ತಗೋ ಮತ್ತೆ ಯಾವಾಗರ ಪುಂಗಿಯಂತೆ.

ಪುಂಗಾ: ಸರೇ ತಗಳಿ ಮತ್ತೆ ಸಿಗ್ತೀನಿ.....