Life Goes On...

Life Goes On...
Life--- The way u Look at it

Thursday, February 24, 2011

ಆ ಮುಂಜಾವು

ಈ ಹೊಸ ಕಂಪನಿ ಸೇರ್ಕೊಂಡಮೇಲೆ ದಿನ ಪೂರ್ತಿ ಆಫೀಸ್ ಕೆಲಸಾನೆ ಆಗೋಗ್ತಿದೆ. ಕಡೆಗೆ ವೀಕೆಂಡ್ ಪ್ಲಾನ್ ಮಾಡೋಕು ಟೈಮ್ ಇಲ್ಲದೆ ಇರೋ ತರ ಹಾಳಾಗಿಹೋಗಿದಿನಿ. ಮೊನ್ನೆನು ಹೀಗೆ ಶುಕ್ರ ವಾರ ಸಂಜೆ ಅಲ್ಲಾ ರಾತ್ರಿ ೯ ೩೦ ಕ್ಕೆ ಆ ಕೆಲಸ ಎಲ್ಲ ಮುಗ್ಸಿ ಮನಗೆ ಬಂದ್ಮೆಲೇನೆ ನಾಳೆ ವೀಕೆಂಡ್ ಅಂತ ತಿಳ್ದಿದ್ದು. ಇದ್ದ ಬದ್ದ ಪ್ರಾಜೆಕ್ಟ್ಸ್ ಗಳೆಲ್ಲವುಗಳನ್ನ ಒಂದು ಹಂತಕ್ಕೆ ಮುಗಿಸಿ ಸ್ವಲ್ಪ ಖುಷಿಯಾಗಿದ್ದ ನಾನು ವೀಕೆಂಡ್ನ ಪ್ಲಾನ್ ಮಾಡೋಕೆ ಶುರು ಮಾಡಿದೆ.

ಕೆಲಸ ಮುಗುಸಿ ಮನೆಗೆ ಬರೋವಾಗ್ಲೆ ದಾರಿಯಲ್ಲಿ ಸಿಕ್ಕ ಒಂದು ಹೋಟೆಲ್ ನಲ್ಲಿ ಊಟ ಮುಗಿಸಿದ್ದೆ. ಮನೆಗೆ ಬಂದಿದ್ದೆ, ನಮ್ಮ ಹಳೇ ಗುಂಪಿನವರಿಗೆ ವೀಕೆಂಡ್ ಪ್ಲಾನ್ ಗಾಗಿ message ಕಳುಸ್ದೆ. ತುಂಬಾ ದಿನ ದಿಂದ ಟಚ್ ಅಲ್ಲಿ ಇಲ್ಲದೆ ಇದಿದ್ದರಿಂದ ನನ್ನ "SMS " ಗೆ ಅಂತ ಆದರಣೆ ಸಿಗ್ಲಿಲ್ಲ. ಇದರಿಂದ ಸ್ವಲ್ಪ ಬೇಜರಾದ್ರುನು, ಇದಷ್ಟೇ ಜೀವನ ಅಲ್ಲಾ ಅಂದ್ಕೊಂಡು ಹಾಗೆ ಲ್ಯಾಪ್ಟಾಪ್ ಮುಂದೆ ಕುಂತೆ. ತುಂಬಾ ದಿನ ಆದಮೇಲೆ ಸಿಕ್ಕ ಆ ಆರಾಮಿನ ಕ್ಷಣಗಳನ್ನ ಹಾಗೆ ಆ ಒಯ್ಯಬಲ್ಲ ಗಣಕದಲ್ಲಿ, ತುಂಬಾ ದಿನದ ನಂತರ ಸಿಕ್ಕ ನನ್ನ ಅಂತರಜಾಲ ಮಿತ್ರರನ್ನ ಹಾಗೆ ಕೆದಕುತ್ತ, ಅದು ಇದು ಹುಡುಕುತ್ತ, ಹೊಸ ಹೊಸ profiles ನ ಹೆಕ್ಕುತ ಹಾಗೆ ಆ ರಾತ್ರಿನ ಕಳೀತ ಕೂತೆ. ಎಲ್ಲಾ ಮುಗಿಸಿ ಮಲಗೋಕೆ ಅಂತ ಹಾಸಿಗೆಮೇಲೆ ಬಿದ್ದಾಗಲೇ "ವೀಕೆಂಡ್" ಈ ರೀತಿ ಪ್ಲಾನ್ ಇಲ್ಲದೆ ಹಾಳು ಮಾಡಬಾರದು ಅಂತ ಅನ್ನುಸ್ತು, ಅಷ್ಟೇ ಬೆಳಿಗ್ಗೆ 6 ಗಂಟೆಗೆ ಎದ್ದು ನಮ್ಮ " ಹಕ್ಕಿ ವೀಕ್ಷಣೆ\ bird watching " ಶುರುಮಾಡೋಣ ಅಂತ ನಿರ್ಧಾರ ಮಾಡಿ, ಅದೇ ಗುಂಗಲ್ಲಿ ನಿದ್ದೆಗಿಳ್ದೆ.

ದಿನಾ ೭ ಗಂಟೆಗೇ ಕಷ್ಟಪಟ್ಟು ಏಳೋ ನಾವು, weekend ದಿನ ಮಾತ್ರ ಬೇಕಿರೋ ಟೈಮ್ ಗೆ ಯೆಳ್ತಿವಿ , ಅವತ್ತು ಹಾಗೆ ಬೆಳ್ಳಂಬೆಳಗ್ಗೆ ೫-೩೦ ಗೆ ಎದ್ದು ಆ ಮುಂಜಾವಿನ ಒತ್ತಡ ಬೇನೆ ಗಳನ್ನ ಮುಗುಸ್ಕೊಂಡು, ದೇಹ ಶುದ್ದಿ ಮಾಡಿಕೊಂಡು ಪಕ್ಷಿವಿಕ್ಷಣೆಯ "Getup ",  ಅದೇ binocular , ಒಂದು ಪುಸ್ತಕ, Birding Guide ಮತ್ತೆ ಒಂದು ಕ್ಯಾಮೆರಾ ಹೆಗಲಿಗೆ ಏರಿಸಿಕೊಂಡು, ಮನೆ ಹತ್ತಿರಾನೆ ಇರೋ ಅಗರ ಕೆರೆ ಕಡೇ ಹೊರಟೆ.

ಹಾಗೆ ಆ ಮುಂಜಾವಿನ ಮಂಜಿನಿಂದ ಕೂಡಿದ್ದ ಚಳಿಯಲ್ಲಿ, ಆ ಗುರುಗುಟ್ಟೋ ಬೀದಿ ನಾಯಿಗಳ ಕಾಟ ತಡಕೊಂಡು ಹಾಗೆ ಕೆರೆ ಕಡೆಯ ದಾರಿ ಇಡ್ಕೊಂಡು ಹೊರಟಿದ್ದೆ. ಕೆರೆಗೆ ಹೋಗೋ ದಾರಿಯಲ್ಲೇ ಇದ್ದ ಬೇಜಾನ್ ದೇವಸ್ತಾನಗಳಲ್ಲಿ ಬೆಳಕರಿಯೋ ಮುಂಚೆನೇ ದೇವರ ತಲೆ ಕೆಡಿಸೋಕೆ ಅಂತ ಸಾಲುಗಟ್ಟಿ ನಿಂತಿದ್ದ ಜನರ ಆ ಭಕ್ತಿಯಾ ಪರಾಕಾಷ್ಟೆ ನೋಡ್ಕೊಂಡೆ ಕೆರೆ ಬಳಿ ಬಂದೆ.

ಎಲ್ಲಾ ವಾಣಿಜ್ಯಿಕಾರಣ ಆಗಿರೋ ಈ ಬೆಂಗಳೂರಲ್ಲಿ, ಕಾಣೋತರ ಉಪಯೋಗಕ್ಕೆ ಅಥವಾ ದುಡ್ಡು ಬರೋ ವಸ್ತುಗಳು ಅಥವಾ ಪ್ರದೇಶಗಳಿಗೆ ಮಾತ್ರನೇ ಬೆಲೆ ಇಲ್ಲ ಮರ್ಯಾದೆ. ಈ ಕೆರೆಗಳ ಇಂದಲೂ ಕಾಣೋ ರೀತಿಲಿ ಅಂತ ಲಾಭ ಇಲ್ಲದಿರೋದ್ರಿಂದ ಇವುಗಳ ಬಗ್ಗೆನು ದಿವ್ಯ ನಿರ್ಲಕ್ಷ್ಯ. ಆ ರೀತಿಯ ನಿರ್ಲಕ್ಷ್ಯ ಅಸಡ್ಡೆ ಗಳಿಗೆ ಗುರಿಯಾಗಿ, ಅವಸಾನದ ಅಂಚಿಗೆ ಬಂದು ಇಗೋ ಅಗೋ ಅನ್ನೋ ಹಾಗಿರೋ ಆ ಘತಕಾಲದ ಭವ್ಯ ಕೆರೆಯಾ ಹೀನಾಯ ಸಿತಿತಿ ನೋಡ್ಕೊಂಡೆ ಅದರ ಏರಿಯ ಕಡೇ ಹೊರಟೆ. ಹೇಗಿದ್ರು ಮನೇಲಿ ನಲ್ಲಿ ತಿರುವಿದರೆ ನೀರು ಬರುತ್ತೆ so ಈ ಕೆರೆಗಳ ಉಪಯೋಗ ಏನು ಅಂತ ತಿಳಿದಿರೋ ನಮ್ ಈ ಜನ ಸಹ, ಈ ಕೆರೆಗಳ ಬಗ್ಗೆ ಒಳ್ಳೆ ನಿರ್ಲಕ್ಷ್ಯನೆ ಹೊಂದಿದರೆ. ಹಾಗೆ ಕೆರೆ ಏರಿ ಕಡೆಗೆ ಹೋಗುವ ದಾರಿ ಕೆಂಡಮಾಯವಾಗಿದ್ದರು, ಹಾಗೆ ಆ ಸುವಾಸನೆಯ ನಡುವೆ ಸ್ವಲ್ಪ ಮುನ್ನಡೆದಾಗ ಕಂಡಿದ್ದು, ಚಿಲಿಪಿಲ್ಲಿ ಸಪಳ್ಲ ಮಾಡ್ತಾ ಆ ಹೂವಿನ ಗಿಡದಲ್ಲಿ ಆಟಡ್ತಿದ್ದ "Flower Pecker" ಪಕ್ಷಿಗಳು. ಆ ಪಕ್ಷಿಗಳ ಆಟ ನೋಡಿ ಖುಷಿಯೊಂದಿಗೆ, ನಾವು ಹೀಗೆ ನೆಮ್ಮದಿಯಾಗಿ ಇರೋಕೆ ಆಗದೆ ಇರೋದರ ಬಗ್ಗೆ ಬೇಸರನು ಮಾಡ್ಕೊಂಡು, ಕಡೆಗೂ ಆ ಕೆರೆ ಏರಿ ತರ ಇರೋ ಆ "walking track " ಮೇಲೆ ಬಂದು ಸೇರಿದೆ.
ಆಗ್ಲೇ ತುಂಬಾ ಜನ ಅಲ್ಲಿ ಮೈ ಭಾರ ಹಾಗು ಮನಸಿನ ಭಾರ ಇಳಿಸೋಕೆ ಅಂತ ಆ ನಿರ್ಮಲ, ನಿರಾಳತೆಯ ಕೆರೆಯ ಪರಿಸರದಲ್ಲಿ, ಅತಿಂದಿತ ಅಲೆದಾಡುತಿದ್ದರು.

ತುಂಬಾ ದಿನದ ನಂತರ ಸಿಕ್ಕ ಈ ರೀತಿಯ ನಿರಾಳ, ಪ್ರಶಾಂತ ಪರಿಸರದಲ್ಲಿ, ನನ್ನ ತಲೇಲು ನೂರೆಂಟು ಆಲೋಚನೆ, ಯೋಚನೆಗಳು ಶರವೇಗದಲ್ಲಿ ಒಂದನ್ನೊಂದು ಡಿಕ್ಕಿ ಹೊಡೆಯುತ್ತ ಗಿರಕಿ ಹಾಕ ತೊಡಗಿದವು. ನಾ ಕಣ್ಣುಹಾಕಿದ್ದ ಹುಡುಗಿ ಬಗ್ಗೆ, ನನ್ನ ಮೇಲೆ ಕಣ್ಣುಹಾಕಿದ್ದ ಕೆಲವರ ಬಗ್ಗೆ, ದಿನ ತಲೆ ಕೆಡಿಸೋ ಆ ನನ್ನ ಕೆಲಸದ ಬಗ್ಗೆ, ಇಂಜಿನಿಯರಿಂಗ್ ಎಂಬ ನಾ ಮಾಡಿದ  ದೊಡ್ಡ ತೊಪ್ಪಿನ ಬಗ್ಗೆ ಹಾಗು ಮುಂದೆ ನಾನು ಸಾದಿಸ ಬಹುದಾದ ಕೆಲವು ವಿಷಯಗಳ ಬಗ್ಗೆ ಧೀರ್ಘವಾಗಿ ಯೋಚಿಸುತ್ತ, ದಿಗಂತದ ಕಡೇ ನೋಟ ಬಿರುತ್ತ ಆ ಕೆರೆ ಅಂಚಿನಲ್ಲೇ ನಡಿತಿದ್ದೆ. ಅಲ್ಲೇ ಮುಂದೆ ಬಂದ ಒಂದು ಮರಗಳ ಸಮೂಹದಲ್ಲಿ ನಲಿತಿದ್ದ, ನುಲಿತಿದ್ದ ಕೆಲವು ಪಕ್ಷಿಗಳನ್ನ ವಿಕ್ಷಿಸುತ್ತ, ಕೆರೆಯ ಒಂದು ಭಾಗ ದಲ್ಲಿ ಕಟ್ಟಿರೋ ವೀಕ್ಷಣ ಕಟ್ಟೆಯ ಬಳಿ ಬಂದು ನಿಂತೇ.



ಒಂದು ಕಡೇ ತಂಗಾಳಿ, ಮತೊಂದುಕಡೆ ಎಳೆ ಬಿಸಿಲ, ಆ ಮನಮೋಹಕ ಸಮ್ಮಿಲನದಿಂದ ಉಂಟಾಗಿದ್ದ ಪ್ರಶಾಂತ ಪರಿಸದರಲ್ಲಿ, ಆ ಕೆರೆಯ ಕಟ್ಟೇ ಮೇಲೆ ನಿಂತು ವಿಶಾಲವಾಗಿ ಹರಡಿದ್ದ ಕೆರೆಯ ಪ್ರದೇಶವನ್ನ ಹಾಗೆ ನೋಡ್ತಾ ನಿಂತೇ. ಅಲ್ಲೇ ಆ ನಿರ್ಮಲ ನಿರಳತೆಗೆ ಧಕ್ಕೆ ತರೋ ರೀತಿಲಿ ಒಂದು ನವ ವಿವಾಹಿತ ಜೋಡಿಯಾ ಮಧುವೆ ನಂತರವೂ ಮುಗಿಯದ ಆ ಸಲ್ಲಪಗಳ ಸಪ್ಪಳದಲ್ಲಿ ನನ್ನ ಏಕಾಗ್ರತೆಗೆ ದಕ್ಕೆ ಉಂಟಾಗಿ, ಆ ಜೋಡಿಗೆ ಒಂದು ಹಿಡಿ ಶಾಪ ಹಾಕಿ ಮತ್ತೆ ಆ ವಿಶಾಲ ಕೆರೆಯ ನೋಡನಿಂತೆ. ಆ ವೀಕ್ಷಣ ಕಟ್ಟೆಯ ಬಳಿಯೇ ಒಂದು ಹೆಂಗಸು ತಮ್ಮ ಬಟ್ಟೆಯ ಕೊಳೆ ತೆಗೆಯುತಲ್ಲೇ ಕೆರೆಗೆ ಆ ಕೊಳೆಯನ್ನ ತುಂಬುತಿದಳ್ಳು. ಮತ್ತೆ ಆಗಷ್ಟೇ ಮುಗಿದಿದ್ದ ಕೆಲವು ಧರ್ಮಗಳ ಹಬ್ಬ ಹರಿದಿನಗಳ, ಅಟ್ಟಹಾಸದ ಆಚರಣೆಗಳ ಅತ್ಯಾಚಾರಕ್ಕೆ ಗುರಿಯಾಗಿದ್ದ ಆ ಕೆರೆ, ಕಣ್ಣಲ್ಲೂ ನೋಡಲಾಗದಷ್ಟು ರಾಡಿ ಯಾಗಿತ್ತು. ಭವ್ಯವಾಗಿ ಮೆರೆದಿರಬಹುದಾದ ಈ ವಿಶಾಲ ಕೆರೆ ಇಂದು ತನ್ನ ಸುತ್ತಲು ಆದ ಅಭಿವೃದ್ದಿ ಎಂಬ ಮಾರಣಾಂತಿಕ ಹಲ್ಲೆ ಇಂದ ತನ್ನ ಉಳಿವನ್ನೇ ಪ್ರಶ್ನಾರ್ತಕ ಚಿನ್ಹೆ ಹಾಕಿಕೊಂಡು ನೋಡೋಹಗಾಗಿದೆ. ಸುತ್ತ ಬಂದ ಆ ಡಾಂಬಾರು  ರಸ್ತೆಗಳಿಂದ, ಇದರ ನೀರಿನ ಮೂಲವೇ ಅಳಿಸಿ ಹೋಗಿ ಇಂದು ಅರ್ದದಷ್ಟು ಸಹ ತುಂಬುತಿಲ್ಲಾ.

ಇಷ್ಟೆಲ್ಲಾ ಯೋಚಿಸುತ್ತ ಆ ಕಟ್ಟೇ ಮೇಲೆ ನಿಂತಿದ್ದ ನನ್ನ ಬಳಿ, ಯಾರೋ ಒಬ್ಬ ಉತ್ತರ ಭಾರತದ ವ್ಯಕ್ತಿ ಒಬ್ಬ ಬಂದು ನಿಂತ. ನನ್ನ ಪಾಡಿಗೆ ನಾನು, ಆ ಕೆರೆಲೇ ಇದ್ದ ನೂರಾರು ಹಕ್ಕಿ ಗಳ ನೋಡಲೆಂದು ನನ್ನ "binocular " ತೆಗೆದು, ಅಲ್ಲೇ ಕುಂತಿದ್ದ ಒಂದು ಕರೀ ಪಕ್ಷಿಯನ್ನ ದಿಟ್ಟಿಸಲು ಶುರುಮಾಡಿದೆ, ಅಷ್ಟರಲ್ಲೇ ನನ್ನ ಪಕ್ಕ ನಿಂತಿದ್ದ ಆ ವ್ಯಕ್ತಿ ಅದು "cormorant " ಪಕ್ಷಿ ಎಂದ. ಹಾಗೆ ಆ ಪಕ್ಷಿ ಈ ಪಕ್ಷಿ ಅಂತ ಶುರುವಾದ ನಮ್ಮ ಆ ವಿಚಕ್ಷಣ ರಹಿತ ಮಾತಿನ ಲಹರಿ, ಅವನು ಹೇಗೆ ಬೇಟೆಯಡುವದನ್ನು ಬಿಟ್ಟು ಈಗ ಒಬ್ಬ ಶಿಕ್ಷಕನಾದ ಹಾಗು ಅವನ ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಒಂದು ಸಂಕ್ಷಿಪ್ತ ವಿವರದ ವರೆಗೆ ಸಾಗಿತು. ನಮ್ಮ ಸಂಬಾಷಣೆ ಅಲ್ಲಿಗೆ ಮೊಟಕು ಗೊಳಿಸಿ ನಮ್ಮ ನಮ್ಮ ದಾರಿ ಹಿಡಿದು ಮುಂದೆ ಸಾಗಿದೆವು.

ತಲೆಯಲ್ಲಿ ಹರಿದಾಡುತಿದ್ದ ನೂರೆಂಟು ಆಲೋಚನಾ ಅಲೆಗಳಲ್ಲಿ ತೇಲುತ್ತ, ಆ ನಿರ್ಮಲ ಪರಿಸದಲ್ಲಿ ಕೆರೆಯ ಏರಿ ಮೇಲೆ ಪಾದಸೇವೆ ಮುಂದುವರಿಸಿದೆ. ಇನ್ನೇನು ಅವಸಾನದ ಅಂಚಿನಲ್ಲಿರೋ ಆ ಕೆರೆಲೂ ತುಂಬಾನೆ "wetland " birds ವಿಹರಿಸುತಿದ್ದವು. ಅಲ್ಲೇ "sunbath " ಗೆ ಅಂತ ರೆಕ್ಕೆ ಬಿಚ್ಚಿ ಒಳ್ಳೆ babe ತರ ಪೋಸ್ ಕೊಡ್ತಿದ್ದ "Cormorant "ಗಳು, ಹಾಯಾಗಿ ನೀರಮೇಲೆ ತೇಲುತಿದ್ದ " ನಾಮ ಹೊತ್ತ common coot 's " , ವಿವಿದ ರೀತಿಯ ಬಾತುಕೋಳಿಗಳು, ಮೀನು ಹಿಡಿತ ಬ್ಯುಸಿ ಇದ್ದ purple heron , grey heron , pond heron , Egret ಗಳು ಹಾಗು ಇನ್ನು ಹಲವು ಖಗ ಮಿತ್ರರು. ಇವರ ಈ ನಿಶ್ಚಿಂತ ಜೀವನ ನೋಡಿ, ನಮ್ಮ ಈ ಬಿಡುವಿಲ್ಲದ ದರಿದ್ರ ಜೀವನದೊಂದಿಗೆ ಹೋಲಿಸಿ ಅನುಕಂಪೆ, ಅಸೂಯೆ ಎರಡನ್ನು ಮಾಡ್ಕೊಂಡು ಮುನ್ನಡೆದೆ. ಅಲ್ಲಿಗೆ ಕೆರೆಯ ಎರಡು ಕಡೇ ಏರಿಯನ್ನ ಕ್ರಮಿಸಿದ್ದ ನಾನು ಈಗ ಮುಖ್ಯ ರಸ್ತೆಗೆ ಹತಿರವಿದ್ದ ಏರಿಯ ಬಳಿ ಬಂದು ಸೇರಿದ್ದೇ. ಈ ಭಾಗದ ಏರಿಯ ಪಕ್ಕ ವಿರಾಜಮಾನವಾಗಿ, ವಿಜ್ರುಂಬಣೆಯಿಂದ, ಮೈತುಂಬಿ ಹರಿತಿದ್ದ ನಮ್ಮ ನಗರಗಳ ಜೀವ ನದಿಯಾ ರೀತಿ ಕಾಣಸಿಗುವ ಒಂದು ದೊಡ್ಡ "ಚರಂಡಿ ಅಥವಾ ಮೋರಿ" ನೆಲಿಸಿತ್ತು. ಆ ಮೋರಿಯಾ ವೈಭವ ನಿಜಕ್ಕೂ ಈ ಕೆರೆಯನ್ನು ನಾಚಿಸುವ ಹಾಗಿತ್ತು. ಕೆರೆಯಲ್ಲಿ ಜೀವಿಸುತಿದಂತ ಕೆಲವು ಪಕ್ಷಿಗಳು "adaptability "ಗೆ ಮಾರುಹೋಗಿ ಈ ಮೋರಿಯನ್ನೇ ತಮ್ಮ ವಾಸ(ನಾ)ಸ್ಥಾನವಾಗಿ ಮಾಡಿಕೊಂಡಿವೆ.

ಹೀಗೆ ಒಂದು ಮುಂಜಾವಿನಲ್ಲಿ ಮಾಡಿದ  ಒಂದು ನಿರಾಯಾಸ ನಡಿಗೆಯಲ್ಲೇ ಕಂಡ ನೂರೆಂಟು ಸಮಸ್ಯೆಗಳು ಹಾಗು ಆ ಸಮಸ್ಯಗಳಿಗೆ ಕಾರಣೀಬೂತರಾದವರ ಬಗ್ಗೆ ಆಲೋಚಿಸುತ್ತ, ಆ ಮುಂಜಾವಿನ ಪ್ರಾಕೃತಿಕ ಸೌಂದರ್ಯ ಸವಿಯುತ್ತ ಸಾಗುತ್ತಿದ್ದೆ.

ಹೀಗೆ ಸಾಗುತ್ತಿದ್ದ ನನಗೆ, ನಿಂತ ನೀರಲ್ಲಿ ಕಲ್ಲು ಒಗೆದಾಗ ಅಗೋ ಅಲ್ಲೋಲಕಲ್ಲೋಲ ದಂತೆ, ನನ್ನ ಆ ಧ್ಯಾನ ನಿರತ ನಡಿಗೆಗೆ ಕಲ್ಲು ಹಾಕಿದ ಹಾಗೆ ನನ್ನ ಮೊಬೈಲ್ ಗೆ "ದೂರವಾಣಿ ಕರೆ " ಬಂತು. ಅ ಕಲ್ಲು ಎಸೆದವನು ಮತ್ತಾರೂ ಅಲ್ಲಾ, ನನ್ನ ದೋಸ್ತ್ "Bucket ಗುಂಡ".

"ಎನಲ ಏನ್ ದಬ್ಬಾಕುತಿದಿಯ" ಅಂತ ಒಂದು ಅರ್ತನಾದದೊಂದಿಗೆ ಮತ್ತೆ ಆ ನಿರ್ಮಲ ಪರಿಸರದಿಂದ ಕಳಚಿಕೊಂಡು ಬಂದು ಈ ನಾಗ(ರ)ರೀಕಾ ಬದುಕಿಗೆ ವಾಪಸಾದೆ.


--

Happy