Life Goes On...

Life Goes On...
Life--- The way u Look at it

Tuesday, October 30, 2012

ಆಕರ್ಷಕ ಅನಿರೀಕ್ಷಿತಗಳು -- ೧





ಒಂಟಿತನದ ಬೇಗೆಯಲಿ ಬೇಯುತಿರಲು ನಾನು
ಕುಲುಕುತ, ಬಳುಕುತ ಎದುರಲಿ ಬಂದಳವಳು
ಆ ಕ್ಷಣ ಮೊಳಗಿಸಿತು ಮೊದಲಬಾರಿ ನನ್ನ ಮನದಲಿ "ಪ್ರೇಮ ನಿನಾದ"

ಆತುರದಿ ಹೊರಟಿರಲು ಅದೆಲ್ಲಿಗೊ ನಾನು
ಆಕಸ್ಮಿಕವಾಗಿ ಅಲ್ಲಿ ಕಾಣಲು ಅವಳು
ಅಚ್ಚರಿಯಲಿ ಮೂಡಿದ ಮಂದಹಾಸ, ಸಾಕ್ಷಿಕರಿಸಿತು ನಮ್ಮ ಮೊದಲ ಮೂಖ "ಸಂಭಾಷಣೆ"

ಮನಸಿಲ್ಲದೆ ತಿರುಗುತಿರಲು ದೇವರ ಗುಡಿಯಲ್ಲಿ
ಆರಹೊರಟ್ಟಿದ್ದ ದೀಪದಾಸರೆಗೆ ನ ಕೈ ಚಾಚಲು
ಅದೇ ತವಕದಲ್ಲಿದ್ದ ಅವಳ ಕೈ ಅಚಾನಕ್ಕಾಗಿ ತಾಕಿ, ಸಾದ್ಯವಾಗಿಸಿತು ನಮ್ಮ ಮೊದಲ " ಸ್ಪರ್ಷ"

ಹುಣ್ಣಿಮೆ ಚಂದಿರನ ಬೆಳಕಲ್ಲಿ ಹರಟ್ಟುತ್ತಾ ಕೂತಿರಲು
ಆ ಬೆಳೆದಿಂಗಳ ಆಗಸದಿ ತಾರೆಗಳ ಹುಡುಕುತ, ಸಿಡಿಸಿದ ಹಾಸ್ಯ ಚಟಾಕಿಗೆ
ಅಬ್ಬರಿಸಿ ನಕ್ಕಾಗ ನಾವಿಬ್ಬರು, ತೆರೆದಂತಿತ್ತು ನಮ್ಮ ಮೊದಲ "ಸಲ್ಲಾಪದ" ಪುಟ

ಬೆಳಕು ಕ್ಷೀಣಿಸುತ್ತಿರಲು ರವಿ ಕರಗಿ
ಜಿನುಗುವ ತುಂತುರು ಮಳೆಯಲಿ ಹೆಜ್ಜೆಹಾಕುತಿರಲು ನಾವು ಒಂದಾಗಿ
ಝೇಂಕರಿಸಿದ ಗುಡುಗಿಗೆ ಹೆದರಿ ತಬ್ಬಿದಾಗವಳು, ಚಿತ್ರಿಸಿದಂತಿತ್ತು ನಮ್ಮ ಮೊದಲ "ಪ್ರೇಮದಾಲಿಂಗನ"

ಮೋಹಕ ಸಮುದ್ರ ತೀರದಲ್ಲಿ, ಸರಸದಿ ಎರಚಾಡುತಿರಲು ಮರಳನ್ನು,
ಅನಿರೀಕ್ಷಿತವಾಗಿ ಧೂಳು ಬಿದ್ದು ಉರಿಯಲು ನನ್ನ ಕಣ್ಣು,
ಗಾಳಿ ಊದುವ ತವಕದಲ್ಲಿ ಅವಳ ತುಟಿ ತಾಗಲು ನನ್ನ ಕೆನ್ನೆಗೆ, ಮೂಡಿಸಿತು ನಮ್ಮ ಮೊದಲ " ಚುಂಬನ"

ಅಂದುಕೊಂಡಂತೆ ಅದರೆ, ಅವು ಕ್ಷಣಗಳು
ಅನಿರೀಕ್ಷಿತವಾಗಿ ಅದರೆ ಮರೆಯಲಾಗದ ನೆನಪುಗಳು
ನನ್ನವಳೊಂದಿಗೆ ಈ ಆಕರ್ಷಕ ಅನಿರೀಕ್ಷಿತಗಳ ಆಶಯದೊಂದಿಗೆ------ ಸಂತ

------->