Life Goes On...

Life Goes On...
Life--- The way u Look at it

Monday, March 25, 2013

ಪ್ರಕ್ಷೂಬ್ಧ ನನ್ನ ಪ್ರಾರಬ್ಧ



ಹಿಂದೆ ಗುರುಯಿಲ್ಲ
ಮುಂದೆ ಗುರಿಯಿಲ್ಲ
ದಿಕ್ಕು ದೆಸೆಯಿಲ್ಲದಂತಾಗಿದೆ ಈ ಪಯಣ
ಎತ್ತ ಸಾಗುತಿದೆ ಈ ಜೀವನ?

ದಿನವೂ ಮಿಡಿಯುತಿದೆ ಮನವು, ಮುಂದೇನು? ಮುಂದೇನು?
ದಿನವೂ ತುಡಿಯುತಿದೆ ಅಂತಃಕರಣ ಇನ್ನೆಂದು? ಇನ್ನೆಂದು?
ಮೂಡುತಿವೆ ಸಾಸಿರ ಪ್ರಶ್ನೆಗಳು ಅನುದಿನ
ಅವುಗಳ ಉತ್ತರ ಹುಡುಕುವುದರೊಳಗೆ ಮೂಡುತಿದೆ ಮರುದಿನ
ಪ್ರತಿದಿನವೂ ಕಾಣುವುದು ನೂರು ದಿಕ್ಕು ದಾರಿ
ಸಾಗುವುದು ಎತ್ತಕಡೆ ಎಂದು ತಿಳಿಯದೇ ಈ ವರಿ

ದುಡಿಮೆಗೆ ಮಾಡುತಿರುವ ಕೆಲಸವೇಕೋ ಬೇಡವೆನಿಸುತ್ತೆ
ಇದನ್ನು ಬಿಟ್ಟರೆ ಬೇರೇನಿದೆ? ಅಂತಲೂ ಅನಿಸುತ್ತೆ.
ಮಾಡುತಿದ್ದರು ಹಲವು ಮನಸಿಗೊಪ್ಪುವ ಪ್ರವೃತ್ತಿಗಳು
ಅವನ್ನೇ ವೃತ್ತಿಗಳಾಗಿ ತೆಗೆದುಕೊಳ್ಳಲು ಹಲವು ತೊಡರುಗಳು
ತೊಡಗಿಸಿಕೊಂಡಿದ್ದರು ಕೆಲವು ವೈವಿದ್ಯಮಯ ಹವ್ಯಾಸಗಳಲ್ಲಿ
ಹೇಳಲಾಗದನ್ನ ಬಯಸಿ ಮನವು ಸೊರಗುತಿದೆ ಚಿಂತೆಯಲ್ಲಿ

ಇದ್ದರು ನಮ್ಮಬಳಿ ಬೇಕಾದ ಹತ್ತು ಹಲವು
ಸದಾ ತವಕಿಸುವೆವು ಬೇಕೆಂದು ಇನ್ನೂ ಕೆಲವು
ಎಲ್ಲರಂತೆ ನಾನಿರಬಾರದೆಂದು ಹಂಬಲಿಸಿದಂತೆ
ಆ ಆಲೋಚನೆಯಲ್ಲೇ ಆಗಿರುತ್ತೆವೆ ಹತ್ತರಲ್ಲಿ ಒಬ್ಬರಂತೆ

ಮಾಡಲೇ ಬೇಕು ಏನಾದರೊಂದು ಅದ್ಭುತ ಎಂಬ ಆಸೆ ಮನದಲ್ಲಿ
ಸದ್ಯಕ್ಕೆ ಮಾಡದಿದ್ದರೂ ಮುಂದೆ ಮಾಡುವೆವು ಎಂಬ ನಂಬಿಕೆಯಲ್ಲಿ

"ಇರುವ ಭಾಗ್ಯಾವ ನೆನೆದು ಬಾರನೆಂಬುದ ಬಿಡು, ಹರುಷಕಿದೆ ದಾರಿ" ಎಂದು ಡಿವಿಜೀ ಹೇಳಿದರು
"ಇರುವುದೆಲ್ಲ ಬಿಟ್ಟು ಇರುವೆ ಬೀಟ್ಕೊಂಡೇ" ಸಾಗಿಸುವೆವು ನಮ್ಮ ಜೀವನ!!

ನಾನೇ ಇಷ್ಟೊಂದು confusion ನಲ್ಲಿ ಒದ್ದಾಡ್‌ತಿದ್ರೆ, ಮನೇಲಿ ಹುಡುಗಿ ನೋಡೋಣ, ನಿನ್ ಮಧುವೆ ಮಾಡೋಣ ಅಂತಾರೆ... ಅದಕ್ಕೆ ಪ್ರಕ್ಷುಬ್ದ ವಾಗಿದೆ ನನ್ನ ಪ್ರಾರಬ್ದ!






Tuesday, March 12, 2013

ಮನಮೋಹಕ ಮಳೆ


ಆಗಸದಲ್ಲಿ ಮೇಘಗಳ ಆಲಿಂಗನ,
ಭುವಿಗೆ ಮಳೆ ಹನಿಗಳ ಚುಂಬನ,
ಮಳೆಗಾಲ - ಅದೆಂತ ರೋಮಾಂಚನ!!

ರವಿ ಕಾಣದೆ ಆ ಮುಗಿಲು, ಸುರಿಸಲು ವರುಷಧಾರೆಯ
ಅಲ್ಲೇ ಅವಿತು ಇಣುಕುತಿದ್ದ ಅವನು, ತುಂಟತನದಿ ಹರಿಸುತಿದ್ದ ಹರುಷಧಾರೆಯ
ತಣಿಸಲು ಮೂಡಿಸಿದ "ಕಾಮನಬಿಲ್ಲೆಂಬ" ಬಣ್ಣದ ಉಡುಗೊರೆಯ!!

ಅನಂತಾಕಶದ ಪರದೆಯ ಮೇಲೆ, ಮಧವೇರಿದ ಮೇಘಗಳದೇ ಆಟ
ಎಲ್ಲರ ರಂಜಿಪಲು ಮಳೆಯಸುರಿಸಿದಂತಿತ್ತು ಅವುಗಳ ಒಡನಾಟ
ಅತಿರೇಕದಿ ಗುದ್ದಾಡಲು ಕಂಡ "ಕೋಲ್ಮಿಂಚು" ನೆನಪಿಸಿತು ಖಡ್ಗ ಜಳಪಿಸಿದಂತೆಯ ನೋಟ!!