ಕಡಲಂಚಿನಲ್ಲಿ ಮೂಡಿಸಿಹೊರಟಿವೆ ನನ್ನ ಹೆಜ್ಜೆ ಗುರುತುಗಳು,
ಗುರುತುಗಳ ಅಳಸುತ್ತ, ಪಾದಗಳ ನೆನೆಸುತ್ತಿವೆ ಕಡಲ ಅಲೆಗಳು,
ಬಾಣದಂತೆ ಎದೆಯ ಮೀಟುತಿವೆ ಆ ನನ್ನ ನೆನಪುಗಳು.....
ಹೊಳೆವ ರವಿ ಮರೆಯಾಗುವ ಸಮಯ,
ನನ್ನ ಮನಸು ಬುದ್ದಿಗಳ ನಡುವೆ ಯೋಚನೆಗಳ ವಿನಿಮಯ,
ಆದರು ಕಂಡವು ಕೆಲವು ಬಣ್ಣ ಬಣ್ಣದ ಕನಸುಗಳು, ಎಂತಹ ವಿಸ್ಮಯ......
ಬೆಳಕು ಕರಗಿ ಕತ್ತಲು ಮೂಡುತ್ತಿತ್ತು,
ತನ್ನದೇ ಲೋಕದಲ್ಲಿ ಮನಸು ತೊಯ್ದಾಡುತಿತ್ತು,
ವಿಶ್ರಾಂತಿಗಾಗಿ ದೇಹ ತವಕಿಸುತಿತ್ತು....