Life Goes On...

Life Goes On...
Life--- The way u Look at it

Friday, September 13, 2013

ಮಧುವೆಯೆಂಬ ಪ್ರಹಸನ - ೨



ಅಪ್ಪ ಟಕ್ಮಾಡು ಅಂತ, ಅಮ್ಮ ತಲೆ ಬಾಚು ಅಂತ
ಅಕ್ಕ ಕ್ರೀಮ್ ಹಚ್ಕೊಂತ, ಬಾವ ಶೂ ಹಾಕು ಅಂತ
ಕಡೆಗೆ ಪ್ರದರ್ಶನದ ಗೊಂಬೆಯಂತಾಗಲು, ಹುಡುಗಿ ನೋಡಲುಹೋರಡುವುದೂ ಅಂತ
(ಅದಕ್ಕೆ ಹಿಂದೆ ಹೇಳಿದ್ದ್ರು ಕಾಗೆ ಮರಿ ಕಾಗೆಗೆ ಮುದ್ದು ಅಂತ)

ಅವರ ಮನೆಗೆ ಹೊರಡಲು ನೋಡುವರು ಶುಭ ಮುಹೂರ್ತ
ಗಾಡಿ ಹತ್ತಿಇಳಿಯುವವರೆಗೆ, ಪಾಲಿಸಬೇಕಾದ ಪರಿ ಪಾಠಗಳ ಭೋರ್ಗೆರೆತ
ಮನಸಿನಲ್ಲಿ ವಿಚಿತ್ರ ಅಭಿಪ್ರಾಯ ಆಲೋಚನೆಗಳ ಆರ್ತ ಮೊರೆತ

ಹಾಗೂ ಹೀಗೂ
ಬಂದು ಸೇರಲು ಹುಡುಗಿಯವರ ಮನೆಯ ಬಳಿ
ಎಲ್ಲರೂ ಇಳಿದ ಮೇಲೆ ಕಡೆಗೆ ಇಳಿಯುವುದೇ ನಮ್ಮ ಬಳುವಳಿ
ಅಲ್ಲಿ, ಇನ್ನೂ ಶುರು ಉಭಯ ಕುಶಲೋಪರಿಗಳ ಹಾವಳಿ

ಸುತ್ತ ಕುಕ್ಕುವ ಹತ್ತು ಕಣ್ಣ್ ನೋಟಗಳೋಡನೆ, ಮನೆಯೊಳಗೆ ಪ್ರವೇಶ
ಪೂರ್ವನಿಯೋಜಿತ ಆಸನದ ಮೇಲೆ ನಾವು ಕೂರಬೇಕೆಂಬ ಆದೇಶ
ಅಲ್ಲಿಂದ ಶುರು ಮನೆಯವರು ತೋರುವ ಉಪಚಾರಗಳ ವೀರಾವೇಶ

ಕುಡಿಯಲು ಕೊಡುವರು ಯಾವುದೋ ಒಂದು ಪಾನೀಯ
ಅದು ಕುಡಿಯುವ ಅಷ್ಟೂ ಹೊತ್ತು, ಅಲ್ಲಿ ರಸಪ್ರಶ್ನೆಗಳ ವಿನಿಮಯ
ಕುಡಿದ ಗ್ಲಾಸ್ ತೆಗೆದು ಅಣಿ ಮಾಡಿದರೆ, ಶುರುವೆಂದು ಪ್ರದರ್ಶನದ ಸಮಯ

ಕಾಲ್ಪನಿಕ
ಕೇಳುವ ಗೆಜ್ಜೆಯ ಸದ್ದಿಗೆ, ಎದೆಯಲ್ಲಿ ಕಂಪನ
ಸೇದಲು ಮಲ್ಲಿಗೆಯ ವಾಸನೆ, ಮನದಲಿ ಸ್ಪಂದನ
ಅವಳ ಬಗೆಗಿನ ಕೌತುಕ ನಮ್ಮಲ್ಲಿ ಮೂಡಿಸುವುದು ಸಿಂಚನ

ವೈಯ್ಯರದ ನಡುವಿರಲು, ನಾಚಿಕೆಯ ನಡಿಗೆಯಲಿ
ಸಿಂಗಾರದ ಗೊಂಬೆಯಂತೆ, ಬಂದು ಕೂರಲು ನಮ್ಮೆದುರಲಿ
ಕನಸು ನನಸಾಗ ಬಹುದೆಂದು ಮನವು ಮಿಡಿಯುವುದು ನಿರೀಕ್ಷೆಯಲಿ

ವಾಸ್ತವಿಕ
ಸರ್ರನೆ ತೆರೆದುಕೊಳ್ಳುವುದು ಒಂದು ಅಜ್ಞಾತ ಕದದ ಬಾಗಿಲು
ಅಜ್ಜಿಯೋ/ಅತ್ತೆಯೋ/ಅಕ್ಕನೋಡನೆಯೋ ಬಂದು ಎದುರಲಿ ಕೂರುವಳು
ನಾಚಿಕೆಯಲಿ ನೋಡಲವಳನು, ನೋಡುತಿರಲು ನನ್ನನೂ ಅವಳು

ಪರಿಹಾಸದ ಆ ಸನ್ನಿವೇಶದಿ ಮೂಡುತಿರಲು ವಿಚಿತ್ರ ಅನುಭವಗಳು
ನಮ್ಮ ಬಳಗದಿ, ಕೇಳಲೆಂದೇ ಕೇಳುವರು ಹಲವು ಕಿರಿಕಿರಿಯ ಪ್ರಶ್ನೆಗಳು
ಪ್ರತಿ ಉತ್ತರಕ್ಕೂ ಮನವ ಪ್ರಕ್ಷುಬ್ದವಾಗಿಸುವವು ನಿರೀಕ್ಷೆ ವಾಸ್ತವಗಳು

ನೋಡಿ, ನೋಡುದ್ರ ಎಂದು ಕೇಳುವರು ಹತ್ತು ಹಲವು ಭಾರೀ
(ಹುಡುಗಿಯರನ್ನು ನೋಡಿ) ಅಭ್ಯಾಸವಿದ್ದರು ತುಂಬಾ ಕಷ್ಟವೆನಿಸುವುದು ಈ ರೀತಿ ನೋಡೋ ಪರಿ
ಅನಿಸುವುದು ಈ ಸಂಕೋಚ, ಸಂಧಿಗ್ದ ಸ್ಥಿತಿಯಿಂದ ಯಾವಾಗ ಆಗೋಣ ಪರಾರಿ


ಇದೆಲ್ಲ ನೋಡಿ ಕೆಲವೊಮ್ಮೆ ಅನಿಸುತ್ತೆ,, ಲೊವ್ ಮ್ಯಾರೇಜ್ ಬೆಟರ್ ಅಂತ
ಅದರೆ ಅದರಲ್ಲಿ
     ಹುಡುಗಿನ ಬೀಳಿಸೊದು ಕಷ್ಟ
     ಬೀಳಿಸಿದ ಮೇಲೆ ನಷ್ಟ
     ಮುಂದಿನ ಭವಿಷ್ಯ ಅಸ್ಪಷ್ಟ
ಇದರಲ್ಲಿ
     ಹುಡುಗೀನ ಹುಡುಕೋದು ಸಾಹಸ
     ಮಧುವೆ ಅಗೋದು ಸಂಭ್ರಮ ಸಂತಸ
ಸಹ ಕುಟುಂಬ ಸಪರಿವಾರದ ಜತೆ ಆಜೀವ ಸಹವಾಸ

No comments:

Post a Comment