ಅದೊಂದು ಸಂಜೆ, ಸಾಮಾನ್ಯವಾಗಿ ವಾರಾಂತ್ಯ ಎರಡು ದಿನ ಹುಮ್ಮಸ್ಸಿನಿಂದ ಕಳೆದು ಹೋದರು ಆ ಶೆನಿವರದ ಸಂಜೆ ಅದ್ಯಾಕೋ ಇದ್ದಕಿದ್ದ ಹಾಗೆ, ಮುಂದ ದಿನದ ಮುಂಜಾವಿನ ಬಗ್ಗೆ ಒಂದು ನಿರೀಕ್ಷೆ ಹಾಗು ಆ ನಿರೀಕ್ಷೆಯನ್ನು ಪೂರ್ಣಗೊಳಿಸುವ ಬಗೆಗಿನ ಆತಂಕ ಆವರಿಸಿತ್ತು.
ಇದೆಲ್ಲ ಶುರುವಾಗಿದ್ದು ಅದೇ ದಿನ ಸಂಜೆ, ಅದೇನನ್ನೋ ಬೆನ್ನುಹತ್ತಿ ಹೋಗುತಿದ್ದ ನನಗೆ, ಇದ್ದಕಿದ್ದ ಹಾಗೆ ಬಂದ್ ಒಂದು ದೂರವಾಣಿ ಸಂದೇಶ. ಆ ಸಂದೇಶ ನೋಡಿ, ಅದರ ಗುಂಗಿನಲ್ಲೇ ಇತರ ನಿಗದಿತ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮನೆ ಕಡೇ ಹೆಜ್ಜೆ ಹಾಕ ತೊಡಗಿದೆ.
ಆ ಸಂದೇಶ ಸೂಚಿತ ವಿಷಯ ಕುತೂಹಲಕಾರಿ ಇದ್ದರು ಸಹ, ಅದನ್ನು ಪೂರ್ಣಗೊಳಿಸಲು ಪಡಬೇಕಾದ ಪರಿಶ್ರಮ, ಆತಂಕ ಮೂಡಿಸಿತ್ತು. ಇಂತ ನಿರೀಕ್ಷೆ ಹಾಗು ಅದನ್ನು ಮಿರಿಸಿದ ಆತಂಕದ ಜೊತೆ, ರಾತ್ರಿಯಾ ಊಟವನ್ನು ಮರೆತು ಮನೆ ಸೆರಿ ಮಲಗಲು ಶುರು. ಮಲಗಲೆಂದು ಹಾಸಿಗೆ ಮೇಲೆ ಬಿದದ್ದೇ ಸರಿ, ಆ ಸಂದೇಶ ಸೂಚಿತ ವಿಷಯದ, ಸ್ಥಳದ ಚಿಂತೆ ತಲೆಯಲ್ಲೇ ಗಿರಕಿ ಹೊಡೆಯಲು ಶುರುಮಾಡಿತು. ಈಗಲೇ ಎದ್ದು ಅದರ ತಯಾರಿನಡೆಸುವುದೋ ಇಲ್ಲ ಬೇಗ ಎದ್ದು ತಯಾರಾಗುವುದೋ, ಯಾವ ವಸ್ತುಗಳ ಅಗತ್ಯ ಬರಬಹುದೋ ಹಾಗು ಮುಂತಾದ ಆಲೋಚನೆಗಳ ಜೋಗುಳದಲ್ಲೇ , ಅತ್ತ ಇತ್ತ ಮಗಲ್ಲು ಬದಲಿಸುತ್ತ ನಿದ್ದೆಗೆ ಜಾರಿದ್ದೆ. ಹೀಗೆ ಕಣ್ಣು ಮುಚ್ಚಿ ಒಂದು ಗಂಟೆ ಯಾದರು ಮುಗಿಯಿತೋ ಇಲ್ಲೋ, ಆಗಲೇ ಎದ್ದು ಕೂತು ನನ್ನ ಒಯ್ಯಬಲ್ಲ ದೂರವಾಣಿಯಲ್ಲಿ ಸಮಯ ನೋಡಲು, ಅದು ಇನ್ನು 12 ಗಂಟೆಯ ಆಸುಪಾಸಿನಲ್ಲಿ ನುಲಿದಾಡುತಿತ್ತು. ಈ ಅಕಾಲಿಕ ಎಚ್ಚರಿಕೆಯ ಕಾರಣ ಹುಡುಕುತ್ತ, ಮತ್ತೆ ನಿದ್ದೆಯೆಂಬ ಖರ್ಚಿಲ್ಲದ ಐಭೋಗವನ್ನು ಸವಿಯಲು ಶುರುಮಾಡಿದೆ.
ಮತ್ತೆ ಸ್ವಲ್ಪ ಸಮಯದ ನಂತರ ಅದೇ ರೀತಿ ಎದ್ದು, ಆ ಒಯ್ಯಬಲ್ಲ ದೂರವಾಣಿಯಲ್ಲಿ ಇಣುಕಿ ನೋಡಲು ಅದು ೩ ೩೦ ಗಂಟೆಯ ಅಂಚಿನಲಿತ್ತು. ನನ್ನ ಅಂದಿನ ಮುಂದಿನ ನಡೆಗೆ ಇನ್ನು ಒಂದು ಗಂಟೆಯ ಸಮಯ ಎಂದೆನ್ನ್ನುತ್ತ, ಆ ಸಂದೇಶ ನನ್ನಲ್ಲಿ ಮುಡಿಸಿದ ಈ ಪರಿಯ ತಳಮಳವನ್ನು ಹಾಗೆಯೆ ಆತಂಕದಲ್ಲಿ ಆಲೋಚಿಸುತ್ತ ಮೆಲ್ಲಗೆ ಮತ್ತೆ ನಿದ್ರಾ ಲೋಕಕ್ಕೆ ಸೆರೆಯಾದೆ
ಗಂಟೆ ೪ ೩೦, ನಿಶಬ್ದಕ್ಕೆ ಅರ್ಥದಂತಿದ್ದ ಆ ಮುಂಜಾವಿನ ಪರಿಸರದಲ್ಲಿ ಇದ್ದಕಿದ್ದ ಹಾಗೆ " ಡಣ್!" "ಡಣ್!" ಎಂಬ ಸದ್ದು. ಬೆಚ್ಚಿಬೀಳಿಸುವ ರೀತಿಯಲ್ಲಿ ನನ್ನನ್ನು ನಿದ್ರಲೋಕದಿಂದ ಎಚ್ಚರಿಸಿತು ಆ ನನ್ನ alarm . ಸೂರ್ಯ ನೆತ್ತಿ ಮೇಲೆ ಬಂದ್ರು ಏಳದ ನಾವು, ಅಂದುಕೊಂಡ ಸಮಯಕ್ಕೆ ಎದಿದ್ದೆ ಅಂದು ಮಾಡಬೇಕಿದ್ದ ಕಾರ್ಯಗಳಿಗೆ ಒಂದು ಶುಭಾರಂಭ ನೀಡಿದ ಹಾಗಿತ್ತು.
ರಾತ್ರಿ ಮನೇಲಿ ಒಂಟಿಯಾಗಿ ಮಲಗಿದ್ದ ನಾನು ಈ ೪ ೩೦ ಸಮಯದಲ್ಲಿ, ಕತ್ತಲು ಹಾಗು ಆ ನಿಶಬ್ದದ ನಡುವೆ ಎದ್ದು, ಬೆಳಕಿನ ಆಗರದಂತಿದ್ದ ಗೋಡೆಯ ಮೇಲಿನ ಒತ್ತು ಗುಂಡಿಯನ್ನು ಒತಿದ್ದೆ, ಸಿಡಿಲ ಮುಂಚೆ ಬರುವ ಮಿಂಚಿನಂತೆ ಮಿನುಗಿ ಹೊಳೆಯಲಾರಂಬಿಸಿತು ಆ ನನ್ನ ಕೊಠಡಿಯ ಟ್ಯೂಬ್ ಲೈಟ್ . ಕತ್ತಲನ್ನು ಸೀಳಿಬಂದ ಆ ಬೆಳಕಿನ ನೆರವಿನಿಂದ, ನಮ್ಮ ಮುಂಜಾವಿನ ಒತ್ತಡಗಳನ್ನ ನೀಗಿಸಲು ಮಾಡಲೇ ಬೇಕಾದ ಆ-ಪವಿತ್ರ ಮತ್ತು ಅನಿವಾರ್ಯ ಕೆಲಸಗಳನ್ನು ಮುಗಿಸಲು ಶೌಚಾಲಯದ ಕಡೇ ಹೆಜ್ಜೆ ಹಾಕಿದೆ. ನನ್ನ ಕೊಠಡಿಯಿಂದ ಹೊರಬಂದು ಆ ಶೌಚಾಲಯದ ಕಡೇ ಹೊರಟಿದ್ದ ನನಗೆ, ಹೃದಯ ಜಲ್ ಎಂದು ಗಾಬರಿ! ಒಬ್ಬನೇ ಮಲಗಿದ್ದ ಆ ಮನೆಯಲ್ಲಿ, ಮತ್ತಾರೂ ಇದ್ದ ಸದ್ದು ಕೇಳಿಸುತಿತ್ತು. ಕಂಗೆಟ್ಟು ಗಾಬರಿಯಾಗಿದ್ದ ನಾನು, ಸದ್ದು ಬರುತಿದ್ದ ಕೊಠಡಿಯ ಬಾಗಿಲನ್ನು ಗಟ್ಟಿಯಾಗಿ ಎಳೆದು ಹಿಡಿದು, ಅದರ ಚಿಲುಕ ಹಾಕಿ ಅಲ್ಲೇ ಬಾಗಿಲ ಮೂಲೆಗೆ ಏನು ತೋಚದೆ ಕುಳಿತೆ.

ಆ ಭಯದ ದೆಸೆಯಿಂದ ಹೆಚ್ಚಾದ ಒತ್ತಡವನ್ನು ನಿವಾರಿಸುವ ಸಲುವಾಗಿ ಕಡೆಗೂ ಆ ಶೌಚಾಲಯದ ಒಳ ಹೊಕ್ಕೆ. ಮಾಡುವ ಕೆಲಸ ಮಾಡುತ್ತ, ಹಾಗೆ ಖಾಲಿಯಾಗಿ ಶೌಚಾಲಯದಲ್ಲಿ ಮೌನದಲ್ಲಿ ಕೂತೆ. ಆ ಕಗ್ಗತ್ತಲ ನೀರವತೆಯಲ್ಲಿ, ಬುಸುಗುಡುತಿದ್ದ ಆ ತಂಗಾಳಿಯ ಶಬ್ದ ಸ್ಪಷ್ಟವಾಗಿ ಕೇಳುತಿತ್ತು. ಹಾಗೆ ಕೂತು, ಎಲ್ಲೋ ಶೂನ್ಯದ ಕಡೇ ದೃಷ್ಟಿ ನೆಟ್ಟು ಒಂದು ಹೇಳಲಾಗದ ವಿಷಯದ ಬಗ್ಗೆ ಯೋಚಿಸ ಹೊರಟೆ. ಹಾಗೆ ಯೋಚಿಸುತ್ತಿರುವಾಗ, ಅನುಮತಿ ಇಲ್ಲದೆ ಉಪನ್ಯಾಸ ಕೊಠಡಿಗೆ ಯಾರೋ ಪ್ರವೇಶಿಸಿದ ಹಾಗೆ, ಆ ನೀರವತೆ ನಿಶಬ್ದವನ್ನು ಅಲುಗಾಡಿಸುವ ರೀತಿಯಲ್ಲಿ ಒಂದು ತುಕ್ಕುಹಿಡಿದ ತುಕಾಲಿ Two wheeler ಗಾಡಿ ಒಂದು, ನಮ್ಮ ಕೇರಿಯಲ್ಲಿ ಶರವೇಗದಲ್ಲಿ ಬಂದು ಹಾಗೆ ಮಾಯವಾಯಿತು. ಅದು ಬಂದು ಹೋದದ್ದು ಎರಡೆ ಕ್ಷಣಗಳಾದರು, ಅದರನಂತರ ಕೇರಿಯಲ್ಲಿ ಉಂಟಾದ ಪರಿಣಾಮ ಹೇಳತೀರದು. ನಮ್ಮ ಕೇರಿಯ ಒಡೆಯರಂತೆ ವರ್ತಿಸುವ ಆ ಕೆಲವರ ಗುಂಪು, ನಿಶಬ್ದ ಸೀಲಿಬಂದ ಆ ದ್ವಿಚಕ್ರ ವಾಹನದ ಮೇಲೆ ತಮ್ಮ ಆಕ್ರೋಶದ ಆವೇಶಗಳನ್ನ ವ್ಯಕ್ತ ಪಡಿಸುತ್ತಾ, ಕೇರಿನೆ ಬೆಚ್ಚಿಬೀಳುವ ಹಾಗೆ ಗದ್ದಲ ಶುರು ಮಾಡಿದರು. ಅದೇನೋ ವಾಹನ ಓಡಿಸುವುದೇ ತಪ್ಪು ಅನ್ನುವ ರೀತಿಲಿ ಉಂಟಾದ ಅವರುಗಳ ಗದ್ದಲ ನಿಜಕ್ಕೂ,,,,,,,,,
ಈ ಗದ್ದಲದ ಗೊಂದಲದಲ್ಲೇ ನನ್ನ ಆ ಶೌಚಕಾರ್ಯ ಮುಗಿಸಿ ಹೊರಬರುವ ಹೊತ್ತಿಗೆ, ನನ್ನ ಪಕ್ಕದ ಕೋಣೆಯಲ್ಲಿ ಸದ್ದು ಮಾಡುತಿದ್ದ ವ್ಯಕ್ತಿಯ ಸುಳಿವು ಸಿಕ್ಕು ಸ್ವಲ್ಪ ಸಮಾದಾನವಾಯಿತು. ಅಲ್ಲಿ ನೆಮ್ಮದಿಯಾಗಿ ಗೊರಕೆ ಸದ್ದು ಮಾಡಿಕೊಂಡು ಮಲಗಿದ್ದವ, ನನ್ನ roommate ಹೊರತು ಬೆರಾರುಅಲ್ಲ. "ಮಧ್ಯ" ರಾತ್ರಿ ಕಳೆದ ಅವನು, ಕಿಟಕಿಯಲ್ಲಿ ಇರಿಸಿದ್ದ ಬೀಗದ ಕೈ ಬಳಸಿ ಒಳ ಬಂದಿದ್ದ.
ಹೀಗೆ ಸ್ವಲ್ಪ ಸಮಾದಾನವಾಗಿ, ನನಗೆ ಬಂದ ಆ ಸಂದೇಶ ಸೂಚಿಸಿದ ಕೆಲಸಕ್ಕೆ ಬೇಕಾದ ತಯಾರಿ ನಡೆಸಲು ಶುರುಮಾಡಿದೆ. ಹೀಗೆ ಒಂದೊಂದೇ ಬೇಕಾದ ವಸ್ತುಗಳನ್ನ ನನ್ನ ಚೀಲದಲ್ಲಿ ತುಂಬ್ಬುತಿರಲು, ಮತ್ತೆ ನಮ್ಮ ಬೀದಿಯಲ್ಲಿ ಯಾವುದು ಕರ್ಕಶ ಶಬ್ದ ಕೆಲ ಶುರುವಾಯಿತು, ಯಾರೋ ಮನೆಯಾಕೆ ಆ ಮುಂಜಾವಿನಲಿ ಪತ್ರೆ ತಿಕ್ಕಲು ಶುರು ಮಾಡಿದ್ದರು.......ಅಷ್ಟೇ ಆ ನಿರ್ಮಲ ನಿರಾತಂಕ ಮುಂಜಾನೆಯ ಪರಿಸರದಲ್ಲಿ ಮತ್ತೆ ಅಲ್ಲೋಲಕಲ್ಲೋಲ. ಮತ್ತೆ ಅದೇ ಆ ಕೆಲವರು ಈ ಕರ್ಕಶ ಶಬ್ದದಿಂದ ಕೆರಳಿ, ಅದಕ್ಕೆ ವಿರುದ್ದವೆನ್ನುವ ರೀತಿಲಿ ಏರುದನಿಯಲ್ಲಿ ಚಿರಾಡಲು ಶುರು ಹಚ್ಚಿದರು. ಮನೆ ಒಳಗೆ ಇದ್ದ ನನಗೆ ಅವರ ಗದ್ದಲ ದಿಗಿಲು ಹುಟ್ಟಿಸುತ್ತಿರಲು, ಅದನ್ನು ಪ್ರತ್ಯಕ್ಷವಾಗಿ ಅನುಭವಿಸುವವರ ಪರಿಸ್ತಿತಿ.....ಮತ್ತೆ ಈ ಗದ್ದಲದಿಂದ ಗಲಿಬಿಲಿ ಗೊಂಡಿದ್ದ ಕೇರಿ, ಉರಿವ ಮೇಣದಬತ್ತಿಯಂತೆ ಪ್ರಶಾಂತತೆಗೆ ಬರುವುದರೊಳಗೆ ನನ್ನ ತಯಾರಿ ಮುಗಿಸಿದ್ದೆ.
ಹೇಳಿದ ಸಮಯಕ್ಕೆ ಆ ಕೆಲಸ ಮಾಡಲು ಆಗುತ್ತದೋ ಇಲ್ಲವೊಯೆಂಬ ಆತಂಕದಲ್ಲೇ, ಬೇಕಿದ್ದ ಸಮಯಕಿಂತ್ತ ಒಂದು ಗಂಟೆ ಮುಂಚಿತವಾಗೆ ತಯಾರಿಮುಗಿಸಿದ್ದ ನಾನು ಈಗ ಮನೆಯಿಂದ ಹೊರನಡೆದು ಹೋಗಬೇಕ್ಕಿದ ಕಡೇ ಹೆಜ್ಜೆ ಹಾಕುವುದರ ಬಗ್ಗೆಯೇ ಭಯ ಆತಂಕ. ಮನೆ ಹೊರಗಿನ ಬಿದಿಯಲ್ಲಿರೋ "ಆ ಕೆಲವರು", ಎಲ್ಲಿ ಮೇಲೆರಗುವರೂ ಎಂಬ ಭಯ. ಹೇಗೆ ಆತಂಕ ಪಡುತ್ತಿರಲು, ದೂರದಿಂದ ಎಲ್ಲೊ ಒಂದು ಅಗೋಚರ ಅಶರೀರವಾಣಿ ಕೇಳಲು ಶುರುವಾಯಿತು. ಲೀನನಾಗಿ ಆಲಿಸಿದ ನಂತರ ತಿಳಿಯಿತು ಅದು ನಮ್ಮ ಮುಸಲ್ಮಾನ ಬಾಂಧವರ "ನಮ್ಮಜ್" ಎಂದು. ಆ ಪ್ರಶಾಂತ ವಾತಾವರಣದ ಬೀದಿಯಲ್ಲಿ ಕೇಳಿಸಿದ ಈ ನಮಾಜ್ ನಿಂದ ಮತ್ತೆ ಎದ್ದ " ಆ ಕೆಲವರು", ಆ ವಾಣಿಯನ್ನು ತಮ್ಮದೇ ರೀತಿಯಲ್ಲಿ ಅನುಕರಿಸಲು ಶುರುಮಾಡಿದರು. ಆ ಕೆಲವರ, ಆ ಅನುಕರಣೆ.....ಅಬ್ಬಾ ಯಾವುದೊ ಭೂತ ಪ್ರೇತ ಪಿಶಾಚಿಗಳ ಆರ್ತನಾದದಂತಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆ, ನ ಹೋಗಬೇಕಿದ್ದ ಸ್ಥಳಕ್ಕೆ ಹೊರಡಲು ತಡವಾಗುತಿರುವುದರ ಅರಿವಾಗಿ, ಆ ಕೆಲವರ ಬಗೆಗಿನ ಭಯವನ್ನು ಅಂಕೆಯಲ್ಲಿಟ್ಟು ಕೊಂಡೆ ಮನೆ ಇಂದ ಹೊರಡುವ ಸಾಹಸಕ್ಕೆ ಕೈಹಾಕಿದೆ. ಬಾಗಿಲ ಚಿಲಕವನ್ನು ತೆಗೆದು, ಸುತ್ತ ಯಾರು ಇಲ್ಲದನ್ನು ಖಾತರಿ ಮಾಡಿಕೊಂಡು, ಎರಡನೆ ಅಂತಸ್ತಿನಲ್ಲಿದ್ದ ನನ್ನ ಆ ಕೊಠಡಿಯಿಂದ ಕೆಲ ಮಳಿಗೆಗೆ ನಡೆದು ಬರತೊಡಗಿದೆ. ಮನೆ ಗೇಟಿನ ಹೊರಗೆ ರೊಚ್ಚಿಗೆದ್ದು ಕೂತಿದ್ದ "ಆ ಕೆಲವರ" ಬಗ್ಗೆ ಮನದಲ್ಲೇ ಹೆದರುತ್ತ, ಕಡೆಗೂ ಗೇಟಿನ ಬಳಿ ಬಂದು ಅಡಗಿ ಕೂತೆ. ಆ ಗೇಟಿನ ಸೊಂದಿ ಇಂದಲೇ ಹೊರಗೆ ನದಿಯುತಿದ್ದ ಸನ್ನಿವೇಶಗಳನ್ನ ಗಮನಿಸುತ್ತ ಕೂತಿದ್ದೆ. ಹೀಗೆ ಸ್ವಲ್ಪ ಸಮಯದ ನಂತರ, " ಆ ಕೆಲವರು" ಒಬೋಬ್ಬರಾಗಿ ಚದುರಿದರು ಹಾಗು ಆ ಗುಂಪಿನ ನಾಯಕನಂತಿದ್ದ ನಮ್ಮ ಎದುರು ಮನೆಯ ದಡಿಯ ಒಳಹೊಕಿದ್ದು ಕಂಡಿತು. ನನ್ನ ಮುಂದಿನ ನಡೆಗೆ ಇದೇ ಸೂಕ್ತ ಸಮಯವೆಂದು ಭಾವಿಸಿ, ನ ಗೆಟನ್ನು ತೆಗೆದು ಹೊರ ನಡೆದೇ.....
ನನ್ನ ದುರಾದೃಷ್ಟವು ಎನ್ನುವಂತೆ, ಆ ಗೇಟಿನ ಪಕ್ಕದಲ್ಲೇ "ಆ ಕೆಲವರ" ಗುಂಪಿನ ಕೆಲ ಸದಸ್ಯರು ಇನ್ನು ತಿರುಗುತಿದ್ದರು. ಆದರೆ ನನ್ನ ಕಂಡು ಉದ್ರೇಕಿತರದರು ಸಹ ಅದನ್ನು ತೋರಿಸದೆ ತಮ್ಮ ಪಾಡಿಗೆ ಅವರು ಮುಂದುವರಿದರು. ಒಂದು ನಿಟ್ಟುಸಿರು ಬಿಡುತ್ತ ನಾಲ್ಕು ಹೆಜ್ಜೆ ಹಾಕಲು, ಮತ್ತೆ ಆ ಬೀದೀಲಿ ಒಂದು ಕಟೂರ ಕರ್ಕಶ ನಾದ ಮೂಡಿಸುತ್ತ ಪೇಪರ್ ವ್ಯಾನ್ ನ ಆಗಮನವಾಯಿತು. ಮತ್ತೆ "ಆ ಕೆಲವರ" ಅರ್ಭಟ ಎಲ್ಲಿ ಶುರುವಗುವುದೋ ಎಂಬ ಭಯದಿಂದ ನನ್ನ ಹೆಜ್ಜೆಯಾ ವೇಗ ಎಚ್ಚಿಸಿದೆ. ಆಗಲೇ ಚದುರಿ ಹೋಗಿದ್ದ "ಆ ಕೆಲವರ" ಯಾವುದೇ ಪ್ರತಿಕ್ರಿಯೆ ಕೇಳಲಿಲ್ಲ. ಇದಾಗುವುದರೊಳಗೆ ನ ಮನೆಗೆ ಸಮೀಪವಿರುವ ಬಸ್ ನಿಲ್ದಾಣದ ಬಳ್ಳಿ ಬಂದು ಸೇರಿದ್ದೇ, ಅದೃಷ್ಟವೆಂಬಂತೆ ನ ಹತ್ತ ಬೇಕಿದ್ದ ಬಸ್ ಅಷ್ಟರಲ್ಲೇ ಬಂದು, ನ ಸೇರಬೇಕಿದ್ದ ಸ್ಥಳಕ್ಕೆ ಸೆರಿಯಾದ ಸಮಯಕ್ಕೆ ತಲುಪಿಸಿತು.
ನ ಹೋಗ ಬೇಕಿದುದ್ದು ಹೆಬ್ಬಾಳದ ಬಳಿ ಇರುವ ಒಂದು ಕೆರೆಗೆ, ಪಕ್ಷಿ ವೀಕ್ಷಣೆ ಮಾಡಲು. ಇದೇ ಆ ಸಂದೇಶ ಸೂಚಿಸಿದ ವಿಷಯ ಹಾಗು ಮಾಡಬೇಕಿದ್ದ ಕೆಲಸ. ಹಾಗೆ ಮೇಲೆ ಬಳಸಿದ "ಆ ಕೆಲವರು" ಎಂದರೆ "ನಮ್ಮ ಬೀದಿಯ ನಾಯಿಗಳು".
ಇಲ್ಲಿ ಹೇಳಬೇಕೆಂದಿದ್ದ ವಿಷಯವೆಂದರೆ ಬೆಂಗಳೂರಿನ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಬೀದಿಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಹುಲಿ ಆನೆ ಇರೋ ಕಾಡಲ್ಲಿ ನಿರ್ಭಯವಾಗಿ ಓಡಾಡುವ ನಾನು, ನಮ್ ಬೀದೀಲಿ ಇರೋ ನಾಯಿಗಳನ್ನ ನೆನಪಿಸಿಕೊಂಡೆ ಗಾಬರಿಗೊಲ್ಳೋ ಹಾಗಾಗಿದೆ.
ಸುರ್ಯವಂಶದ ಕುಡಿಗಳಾದ ನಾವು ಮುಂಜಾನೆ ಸೂರ್ಯ ಬರುವ ಮುಂಚೆ ಪಕ್ಷಿ ವೀಕ್ಷಣೆಗೆ ಹಜರಾಗುವುದು ಒಂದು ಅಸಾಧ್ಯ ಕೆಲಸವಾದರೂ, ಹೇಗೋ ಕಷ್ಟಪಟ್ಟು ನಿಗದಿತ ಸಮಯಕ್ಕೆ ಆ ಕೆಲಸ ಶುರು ಮಾಡಿದ್ದೆ. ಆದರೆ ಅಂತಹ ಒಂದು ವಿರೋಚಿತ ಸಾಧನೆ ಮಾಡ ಹೋರಾಟ ನನ್ನ, ದಾರಿಗೆ ಈ ಬೀದಿನಾಯಿಗಳ ಕಾಟ ಬಹಳ ತ್ರಾಸ ಉಂಟು ಮಾಡಿತ್ತು. ಆದರು ದೃಡ ನಿಶ್ಚಯದ ಕೆಚ್ಚಿನಿಂದ ಆ ಕೆಲಸ ಹೇಗೋ ಪೂರ್ಣಗೊಳಿಸಿದಂತಾಯಿತು .

No comments:
Post a Comment