Life Goes On...

Life Goes On...
Life--- The way u Look at it

Tuesday, September 6, 2011

ತೋಚಿದ್ದು ಗೀಚಿದ್ದು, ನನ್ನ ಕೆಲವು G - Talk status 's


ಅವಳು ನನ್ನ ನೋಡಿ ನಕ್ಕಳು, 
ಟ್ರೈ ಮಾಡದೇ ಸಿಕ್ಕಳು, 
ಆದವು ಮಧುವೆ ಮಕ್ಕಳು, 
ಅಲ್ಲಿಗೆ ಜೀವನ ಹಾಳು 
ಓ ನನ್ನ ಚೆಲುವೆ, ಎಲ್ಲಿರುವೆ
ತಿಳಿಸಿದರೆ ಎಚ್ಚರವಹಿಸುವೆ ಅತ್ತ ಕಡೆ ಬರದೆ 
ಅವಳು ಸಿಗೊವರಗು ಸಿಗಲಿಲ್ಲ ಅಂತ ಬಾದೆ, ಸಿಕ್ಕ ಮೇಲು ಇನ್ ಅದೇ (ಬಾದೆ)
ಕೆಲವನ್ನ ಬೇಕು ಅಂದ್ರು ಕೊಡಲ್ಲ, 
ಇನ್ ಕೆಲವನ್ನ ಬೇಡ ಅಂದ್ರು ಬಿಡಲ್ಲ, 
eದು ಇದದ್ದೇ companyili ಇದಷ್ಟು ಕಾಲ ಅದುಕ್ಕೆ ನೋಡ್ಕೋಬೇಕು ನಾನು ನನ್ನ manageru ಬಲಾಬಲ.  

ತುಂಬ ದಿನಗಳ ನಂತರ ನನ್ನ ಹುಡುಗಿಯಿಂದ ಬಂತು ಕರೆ
ಅದು ಹೊರಗೆ ಹೋಗಬೇಕಂತೆ, so ನ ಅಂದೇ ಸರೆ
ರೋಚಿಗೆದ್ದ ಅವಳು ಕೊಂಡಳು ಬಟ್ಟೆ ಬರೆ
ಬೇಕೆನ್ದಳು ಆಭರಣ ಉಡುಗೊರೆ
ನೋಡ್ಬೇಕಂದ್ಲು ಚಲನಚಿತ್ರ on PVR ತೆರೆ 
ಅಲ್ಲಿಗೆ ಬಿತ್ತು ನನ್ನ pocket ಗೆ ಬರೆ
So Guys beware tomorrow is "Valentines Day"
                                            ಪ್ರೇತಿ ಪ್ರೇಮ - ನಿಮ್ಮ ನಿಮ್ಮ ಕರ್ಮ 
ಅಂದು ರಾಮ ಬಿಲ್ಲು ಮುರ್ದಿದಕ್ಕೆ ಸೀತೆ ಅಪ್ಪನ ಬಿಟ್ ಬಂದ್ಲು
ಕೃಷ್ಣ ಕೊಳಲು ಉದಿದಕ್ಕೆ ರಾಧೆ ಅಪ್ಪನ ಬಿಟ್ ಬಂದ್ಲು 
but ನಾನು ಬರಿ ಕಣ್ಣು ಹೊಡೆದಿದಕ್ಕೆ ಒಂದ್ ಹುಡುಗಿ ಅವರಪ್ಪಾನು ಕರಕೊಂಡ್ ಬರೋದ
ಎತ್ತ ಸಾಗಿದೆ ಜೀವನ . . . .ದಿಕ್ಕು ದೆಸೆ ಇಲ್ಲದೆ ಪಯಣ!!!!!!
A simple escape plan ( dating plans in small towns)
" ನೀನು ಊರಿಗೆ ಬಾ, ನಾನು ನಿರಿಗೆ ಬರ್ತೀನಿ" 


ಪ್ರಿಯ ಸಹ Gtalk ಬಳಕೆದಾರರೇ ಈ ಮೂಲಕ ತಿಳಿಸುವುಧೆನಂದರೆ May 20 ನೆ ತಾರೀಕಿನಿಂದ ನಾನು ಹೊಸ company ಗೆ ಹೋಗುವುದರಿಂದ ಮತ್ತು ಅಲ್ಲಿ Gtalk ಸುಧಿಗಾರನ access ಇಲ್ಲದಿರುವದರಿಂದ working hoursನಲ್ಲಿ ನಿಮ್ಮ ಸಂಪರ್ಕಕ್ಕೆ ಬರಲಾಗುವುದಿಲ್ಲ. So ಇನ್ಮೇಲೆ ನೀವುಗಳು ನನ್ನ ಉಪಟಳವಿಲ್ಲದೆ ನೆಮ್ಮದಿ ಇಂದ ನಿಮ್ ಕೆಲಸ ಮಾಡ್ಕೋಬಹುದು (because ಇತೀಚೆಗೆ ನಾನು notice period ಅಲ್ಲಿ ಇರೋದ್ರಿಂದ ತುಂಬ ಜನರ ತಲೆ ತಿನ್ತಿದೆ). But you need to bare me for next 10days...
ತುಂಬಾ ದಿನಗಳಿಂದಾನೆ ಮನೇಲಿ ಒಂದ್ proposal ( relatives ಹುಡುಗಿ ) ಬಗ್ಗೆ discussion ನಡಧು, ನನ್ನ strong no ಇಂದ ಅದನ್ನು drop ಮಾಡಿದ್ರು. But recent ಆಗಿ ನನಗೆ ಒಂದ್ wild thought ಬಂತು, " ಅದೇ ಅ ಹುಡುಗಿನ ಮಧುವೆ ಆದ್ರೆ bangalore ಅಲ್ಲಿ ಕಡೇಪಕ್ಷ 2 ಮನೆ ಬರುತ್ತೆ ಅಂತ ಅಂದ್ಕೊಂಡೆ" but ಆಮೇಲೆ realise ade

" ಅಸೆ ಪಟ್ಟು ಆಸ್ತಿಗೋಸ್ಕರ ನನ್ನ ಆನಂದನ ಅಡ ಇಡೋದು ಬೇಡ ಅಂತ"
" 2 ಮನೆ ಇದ್ರೆನಂತೆ, ಮನೆಗೆ ಹೋಗೋಕೆ motivation ಇಲ್ಲದ ಮೇಲೆ.... "    ಅದೃಷ್ಟ ಯಾರಿಗೂ ಈ wild thought ಬಗ್ಗೆ ಹೇಳಿರಲಿಲ್ಲ...... All izz well...



ಓ ನನ್ನ ಚೆಲುವೆ,
ನಿನ್ನ ಬಗೆಗಿನ ಸೆಳೆ
ಮೂಡಿಸಿದೆ ಭಾವನೆಗಳ ಅಲೆ, 
ಮಿತಿಮೀರಿದ ಅವು ಮನದಲಿ ಮೂಡಿಸಿವೆ ನೆರೆ, 
ಅವ ನಿವೇದಿಸಿಕೊಳ್ಳಲು ಅಡ್ಡಿಯಿದೆ ನಮ್ಮ ನಡುವೆ ಮಾತಿಲ್ಲವೆಂಬ ತೆರೆ, 

ನಿನ್ನ ಕಂಡ ಆ ಕ್ಷಣ, 
ತಕ್ಷಣ,
ಬಲವಗಿಸಿತು ನನ್ನಲ್ಲಿಯಾ ಪ್ರೀತಿಯ ಕಣ,
ಅಂದಿನಿಂದ ಶುರು ನಿನಗಾಗಿಯ ನನ್ನ ನಿರೀಕ್ಷಣ,
ಇನ್ನು ಉಳಿದ ಪ್ರಪಂಚವೆಲ್ಲ ನನಗೆ ಕ್ಷೀಣ, 

ಅಲ್ಲೆಲ್ಲ ಖಾಲಿ ಖಾಲಿ, ಇಲ್ಲಿ ಬರೆ ಕೆಲಸನೇ ಕೆಲಸರೀ
ಅಲ್ಲಿ ನಾನು ಮಾಡಬೇಕು ಅಂತಾನು ಅಂದ್ಕೊಲಿಲ್ಲ ಅವರು ಮಾಡಿಸಬೇಕು ಅಂದ್ಕೊಲಿಲ್ಲ.. 
ಇಲ್ಲಿ ನಾನು ಬೇಡ ಅಂತಿಲ್ಲ ಅವರು ಸಾಕು ಅನ್ಲಿಲ್ಲ
ಅಲ್ಲಿ ಆಡಿದ್ದೆ ಆಟ... ಇಲ್ಲಿ ಅವರದೆ ಆಟ
ಸಾಗಬೇಕೆಂದಿದ್ದೆ ನಿನ್ನೊಟ್ಟಿಗ್ಗೆ  ತುಂಬಾ ದೂರ,
ಆದರೆ ಇಲ್ಲಿಗೆ ನಿಂತಿತು ನಮ್ಮ ಪಯಣ,
ಜೊತೆಜೊತೆಯೇ ಸೇರಬೇಕೆಂದಿದ್ದೆ ಭವಸಾಗರದ ಅಂಚು,
ಆದರೆ ಒಟ್ಟಾಗಿ ಸಾಗಲೇ ಇಲ್ಲ ಒಂದು ನೂರು ಇಂಚು,
 
ಇದೆಲ್ಲ ಅವನದೇ ಸಂಚು
 """


ಕಡಲಂಚಿನಲ್ಲಿ ಮೂಡಿಸಿಹೊರಟಿವೆ ನನ್ನ ಹೆಜ್ಜೆ ಗುರುತುಗಳು,
ಗುರುತುಗಳ ಅಳಸುತ್ತ, ಪಾದಗಳ ನೆನೆಸುತ್ತಿವೆ ಕಡಲ ಅಲೆಗಳು,
ಬಾಣದಂತೆ ಎದೆಯ ಮೀಟುತಿವೆ ಆ ನನ್ನ ನೆನಪುಗಳು.....

ಹೊಳೆವ ರವಿ ಮರೆಯಾಗುವ ಸಮಯ,
ನನ್ನ ಮನಸು ಬುದ್ದಿಗಳ ನಡುವೆ ಯೋಚನೆಗಳ ವಿನಿಮಯ,
ಆದರು ಕಂಡವು ಕೆಲವು ಬಣ್ಣ ಬಣ್ಣದ ಕನಸುಗಳು, ಎಂತಹ ವಿಸ್ಮಯ......

ಬೆಳಕು ಕರಗಿ ಕತ್ತಲು ಮೂಡುತ್ತಿತ್ತು,
ತನ್ನದೇ ಲೋಕದಲ್ಲಿ  ಮನಸು ತೊಯ್ದಾಡುತಿತ್ತು,
ವಿಶ್ರಾಂತಿಗಾಗಿ ದೇಹ ತವಕಿಸುತಿತ್ತು....
""""



ಮನದಲ್ಲಿ ನೆನೆಯುತಲ್ಲೇಯಿದ್ದೆ ನಿನ್ನ ಬಗ್ಗೆ,
ಕಂಡ ಪ್ರತಿ ಜೀವಿಯು ಕಾಣುತಿತ್ತು ನಿನ್ನ ಹಾಗೆ 
ಏನೀ ವಿರಹದ ಬೇಗೆ.......
ಎಷ್ಟೇ ದೂರ ಎಸೆದರು, ಅಲೆಗಳು ಮತ್ತೆ ಕಡಲು ಸೇರೋ ಹಾಗೆ,ಆ ನೆನಪುಗಳನ್ನ ಎಷ್ಟೇ ಮರೆತರು, ಮನಸ್ಸಿಗ್ಗೆ ಮತ್ತೆ ಮತ್ತೆ ಬಂದು ಬಡಿತಿವೆ....

ಪ್ರತಿಬಾರಿ ಬಾಡ ಹೊರಡಲು ಎನ್ನ ಮನದ ಹೂವು,ಬಂದು ನಾಲ್ಕು ಹನಿ ನೀರೆರಚುವರು ಯಾರೋ ಒಬ್ಬರು........
ಮುಚ್ಚಿರುವ ಕಣ್ಣ ರೆಪ್ಪೆಗಳನ್ನೇ ಪರದೆಯನ್ನಾಗಿಸಿ, ಮೂಡುತಿವೆ ನಿನ್ನ ದೃಶ್ಯಗಳು,ಹೌದು ನಿನ್ನ ನೆನಪಲ್ಲೇ, ನಿದ್ದೆಯಿಲ್ಲದೆ ಸಾಗುತಿವೆ ನನ್ನ ರಾತ್ರಿಗಳು...

ಆರ್ತನಾದದಿ ಮೊಳಗುತ್ತಿತ್ತು ನನ್ನ ದೂರವಾಣಿ,
ತುಂಬಾ ದಿನದ ನಂತರ ಕರೆ ಮಾಡಿದ್ಲು ನನ್ನ ಕನಸಿನ ರಾಣಿ,
ಅವಳಂದಳು - ನನ್ನ ಮಧುವೆ, Please "Come , ಬನ್ನಿ"
ಅದ ಕೇಳಿದ ನನ್ನ, ಕಣ್ಣಲ್ಲಿ "ಕಂಬನಿ"
ರವಿ ಮೂಡುವ/ಮುಳಗುವ ಸಮಯದಿ,
ಬೆಳಕು ಕತ್ತಲುಗಳು ತೊಡಗಿವೆ ಜಗಳದಿ,
ಆ ಕದನದ ಸಾಕ್ಷಿಯಾಗಿ ಮೂಡಿದೆ ಚಿತ್ತಾರ ಕೆಂಪು ಬಣ್ಣದಿ......