ಅವುಗಳ ಸೃಷ್ಟಿಲಯಕ್ರಿಯೆಗಳಿಗು
ಇವನೆ ಗುಟ್ಟು
ಜೀವಜಾಲದುಗಮಕ್ಕೆ
ಬೆಳಕಕೊಟ್ಟರು
ಕತ್ತಲೊಸಗಿ ಮರೆಯಾಗಲೆಬೇಕು
ಆ ರವಿಯೂ ಇರುಳಲಿ!!
ಮೇಘಗಳಾಲಿಂಗದಿ ಹನಿಗಳು
ಜಿನುಗಿ
ಭೂತಳವೆಲ್ಲ ಹಚ್ಚಹಸುರಲಿ
ಮಿನುಗಿ
ಸಕಲ ಜೀವಜಾಲಗಳಲ್ಲಿ
ನವೋತ್ಸಾಹ ಚಿಗುರಿಸಿದರು
ಮುಂಗಾರು ಮುಗಿಯಲೇಬೇಕು
೩ ಮಾಸಗಳಲ್ಲಿ!!
ಬಿತ್ತ ಬೀಜ ಮೊಳಕೆಯೋಡೆದು
ಸಸಿಯಾಗಿ, ಹೂವ ತಳೆದು
ಪರಾಗದಿಂದ ಹಣ್ಣ್
ಕಾಯಿ ಹಡೆದು
ಹೊಲವನ್ನು ವಯ್ಯಾರದಿ
ಆವರಿಸಿದರು,
ಕಿತ್ತು ಕೆಡವಲೆಬೇಕು
ಅದನು, ಪಸಲಿನಾಸೇಯಲಿ!!
ಏರಡು ಕಣಗಳ ಮಿಲನದಿ ಮೂಡಿದ ಜೇವ ನಾವು
ಅಳುತ, ನಗುತ, ಕಲಿತ, ದುಡಿತ, ಸಾಗುತ ಸೇರುವೆವು ಸಾವು
ಇರುವ ನಲ್ಕೂದಿನದಲಿ ಪ್ರೀತಿ ಪ್ರೇಮ ಬಂಧನಗಳಲ್ಲಿ
ದಿನವು ಶಪಿಸುತ ಸಾಗುಸುವೆವು ಈ ನಶ್ವರದ ಜೀವನದಲಿ!!
ಶಾಶ್ವತವೆಂಬುದಿಲ್ಲ, ಬದಲಾಗಲೆಬೇಕು ಏಲ್ಲ!!
ಏರಡು ಕಣಗಳ ಮಿಲನದಿ ಮೂಡಿದ ಜೇವ ನಾವು
ಅಳುತ, ನಗುತ, ಕಲಿತ, ದುಡಿತ, ಸಾಗುತ ಸೇರುವೆವು ಸಾವು
ಇರುವ ನಲ್ಕೂದಿನದಲಿ ಪ್ರೀತಿ ಪ್ರೇಮ ಬಂಧನಗಳಲ್ಲಿ
ದಿನವು ಶಪಿಸುತ ಸಾಗುಸುವೆವು ಈ ನಶ್ವರದ ಜೀವನದಲಿ!!
ಶಾಶ್ವತವೆಂಬುದಿಲ್ಲ, ಬದಲಾಗಲೆಬೇಕು ಏಲ್ಲ!!