ಬೇಸುಕ್ಯಾಂಪಿನಲ್ಲಿ ಕೂತು ನಾವು ಗೆಳೆಯರು
ಶ್ರೀನಿಯನ್ನು ಪಾಪ ಗೇಲಿಮಾಡುತಿದ್ದೆವು
ಕಾರ್ಡ್ಸು ಆಡೋ ಶ್ರೀನಿ, ನಂಗೆ ಬೇಡಪ್ಪ ಅದು ವ್ಯಸನಿ
ಹೋಗ್ಲಿ ಹೇಳೋ ಕಹಾನಿ, ತತ್ವ ಹೇಳ್ತೀನಿ ಬನ್ನಿ
ಕಲ್ಚರಲ್ ಹಾಲೀನೊಳಗೆ ತೇಲಿ ಬಂದಳು
ಕಾವೇರಿ, ಕಾವೇರಿ, ಕಾವೇರಿ ( ಜ್ಯೋತಿ ಬೆಲನಿ)
ಅವಳ ಅಂದದಾ ಅಲೆಗೆ ತೂಗಿದರೀ
ನಮ್ಮ ಶ್ರೀನಿ, ನಮ್ಮ ಶ್ರೀನಿ, ನಮ್ಮ ಶ್ರೀನಿ
ಘಟಾಗಿದ್ದಳು ಅವಳು ಘಾಟಿ ಇದ್ದಳು
ಬಿಟ್ಟ ಕಣ್ಣು ಬಾಯಿ ಶ್ರೀನಿ, ಘುಮ್ ಆದನು
ಅವಳ ಹಾಡಿಗಿವನು ಕೋರಸ್ ರಿಧಮ್ ಆದನು
ಗುಡ್ಡ ಗಾಡು ಚಳಿಗೆ ಅವಳು ಬೇಸರಿಸುತ್ತಾ
ತನ್ನ ದೇಹವನ್ನು ತಾನೇ ಎಳೆದಾಡುತ್ತ
ನಿಧ ನಿಧಾನವಾಗಿ, ವಿಧ ವಿಧಾನವಾಗಿ
ಹತ್ತುತಿರಲು ಅವಳು, ಶ್ರೀನಿ ಒಂದಾದನು
ಅವಳ ಬೇಸರವಳಿಸುವ (ಬೇಸರ ಅಳಿಸುವ) ಆಸೆಲಿ ಸ್ಮೈಲು ಕೊಟ್ಟನು
ಮರು ದಿನವೂ ಶ್ರೀನಿ ನಮ್ಮ ತೊರೆದು ಹೊರಟನು
ಅವಳ (ಕವಿತಾ ಸುರ್ವೆ) ಹಿಂಡ ಹಿಂದೆ ಹೆಜ್ಜೆ ಹಾಕಿ ನಡೆದನು
ತುಂಬಾ ನಡೆದ ಮೇಲೆ ತುಟಿ ಬಿಚ್ಚಿ ನುಡಿದಳಾ ಬಾಲೆ
ಬುರ ಬುರ ಬುರ ಓಡಿ, ಶ್ರೀನಿ ಕೂಲ್ ಡ್ರಿಂಕ್ ತಂದನು
ಅವಳ ದಣಿವನು ಅರಸಿದಿವನು ವೀರನಾದನು
ಕಟ್ಟ ಕಡೆಯ, ಒಟ್ಟ ನಡೆವ, ದಿನವದು ಆ ಟ್ರೆಕ್ಕಲಿ
ಕ್ಯಾಂಪನ ನಂಟು ಮೀರಿ, ನಾವು ಹೊರಡುವಷ್ಟರಲ್ಲಿ
ನಾನೆಂತ ಪಾಪಿ, ಅವಳ ನೆನಪು ತಾಗಿ (ಮಾರಡಿ)
ಗಂಟನ್ನು ಅಲ್ಲೇ ಇಟ್ಟು ಒಳಗೆ ಓಡಿ ಹೋದನು
ಆ ನಾರಿಗೆ ಟಾಟಾ ಹೇಳಿ ಮನವ ಗೆದ್ದನು
Note:- ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ಸಾಂಗ್ ಟ್ಯೂನ್ ಅಲ್ಲಿ
-ಸಂತ