Life Goes On...

Life Goes On...
Life--- The way u Look at it

Thursday, June 2, 2011

ಹುರುಳಿಲ್ಲದ ಹುಡು"ಕಾಟ"

ಅಂದು, ಕಳೆದವು ತುಂಬಾ ವರುಷಗಳು,

ನಾನು ಚಿಕ್ಕವನು, ಅವಳು ಚಿಕ್ಕವಳು,

ಅಲ್ಲಿ ಅದು ಹಾಳು, ಬರೆ ಓಳು ......


ಬಂದೆ ಪ್ರಾಥಮಿಕ ಹಂತಕ್ಕೆ,

ಕಂಡಲೋಬ್ಬಳು ಶಿಲಾಬಾಲಿಕೆ,

ಕಂಡು ೩ರೆ ತಿಂಗಳು, ಅವರ ಅಪ್ಪನ "Transfer " ಓಕೆ,

ಅಲ್ಲಿಗೆ ಇವಳು ಮರೀಚಿಕೆ.....


ಅದು ಹಿರಿಯ ಪ್ರಾಥಮಿಕ ಶಾಲೆ,

ನನ್ನ ಕಣ್ಣಿಗೆ ಬಿದ್ದಳು ಒಬ್ಬ ಬೆಳದಿಂಗಳ ಬಾಲೆ,

ಇವಳು ನಮ್ಮೂರಲ್ಲಿ ಓದಲು ಎಂದಳು ಒಲ್ಲೆ,

ಮುಗಿತು ನಮ್ಮ ನೋಟ ಅಲ್ಲೇ.....


ಒಂಬತ್ತು ಹತ್ತನೇ ಕ್ಲಾಸು,

ಇತ್ತು ಒಂದು ಜೂನಿಯರ್ ಐಸು,

ಆದರೆ ತಿಳೀತು ಅವಳು hopelessu

ನಮ್ಮ ಆಟ ಅಲ್ಲಿಗೆ ಟುಸ್ಸು.....


ಶುರುವಾಯಿತು ನಮ್ಮ puc ,

ಕೆಲವರು "very pretty " and we used to see "

ಆದರೆ ಏನು, ನಮಗೆ ಜೀವನದ ಮೇಲೆ ಆಶೆ,

ಅದರಿಂದ ನಮ್ಮ ಹುಡುಗಾಟಕ್ಕೆ ಅಮವಾಸೆ.......


ಮೊದಲಾಯಿತು ಇಂಜಿನಿಯರಿಂಗ್ ಎಂಬ ನಮ್ಮ ಜೀವನೋಧರಕ ,

vtu under ಅದೊಂದು ನರಕ, ಜೀವನಕ್ಕೆ ಮಾರಕ,

ಅದರಲ್ಲೂ ಪ್ರತಿ ಸೆಮಿಸ್ಟರ್ ಕಾಣುತಿತ್ತು ಕೆಲವೊಂದು ಮೋಹಕ, ರೋಚಕ, ಮಾದಕ,

ಆದರೆ ಅವರಲ್ಲಿ ಸಾದಕ (always studying ), ಬಾದಕ (with backs & detained), ರೋದಕ (ಸಿಕ್ಕಾಪಟ್ಟೆ ತಲೆ ತಿನ್ನೋರು), (ದೊಡ್ದು ಕಾಲಿ ಮಡ್ಸೋರು) ಮತ್ತೆ ಉಳಿದವರು ಕ್ಷಣಿಕ (ಚಳ್ಳೆಹಣ್ಣು ತಿನ್ನಿಸೋರು )

ಅಲ್ಲಿಗೆ ನಮ್ಮ ಅಸೆ ಬರೆ ಆಕಸ್ಮಿಕ, ಅವೈಜ್ಞಾನಿಕ, ಕಾಲ್ಪನಿಕ...........



ಕೆಲ್ಸಕ್ಕೆ ಸೇರಿದ ಮೇಲಿನ ಸ್ಟೋರಿ ಮತ್ತೆ ಹೇಳ್ತೀನಿ...........



ಹ ಹ ಹ್ಯಾಪಿ....

Sunday, May 22, 2011

"ನೀಲಿ ಬಾನಲಿ ತೇಲಿಹೋದೆನೂ ನಾನು ಆ ದಿನ"




ಇದು ನಡೆದು ಆಗಲೇ ಒಂದು ತಿಂಗಳು ಕಳೆದಿದೆ. ಆದರೆ ಅಂದು ನಡೆದ ಆ ಅದ್ಭುತವಾದ ಘಟನೆಯನ್ನ ಹೇಗೆ ವಿವರಿಸ ಬೇಕೆಂದು ಯೋಚಿಸುತ್ತಲೇ ಈ ಒಂದು ತಿಂಗಳನ್ನ ಕಳೆದೆ.


ಅದು ಸಹ ಒಂದು ವಾರಾಂತ್ಯ, ಆ ವಾರಾಂತ್ಯ ಊರಲ್ಲಿ ಕಳೆಯಬೇಕೆಂದು ನಿರ್ದರಿಸಿ , ಶುಕ್ರವಾರ ರಾತ್ರಿಯೇ ಊರನ್ನು ತಲುಪಿದೆ. ಹಾಗೆ ಆ ವಾರಾಂತ್ಯವನ್ನ ಅಪ್ಪ, ಅಮ್ಮನೋಟ್ಟಿಗೆ ಮಾತಾಡ್ಕೊಂಡು, ಊರಿನ ಸ್ನೇಹಿತರೊಂದಿಗೆ ಅಲೆದಡ್ತಾ ಹಾಗು ನಮ್ಮ ನೆಚ್ಚಿನ ಪಕ್ಷಿ ವೀಕ್ಷಣೆ ಮತ್ತು ಜಿಂಕೆಗಳ ಹುಡುಕಾಟದಲ್ಲಿ (ನಿಜವಾದವು) ಕಳೆದೆ. ಒಳ್ಳೆ relaxed mood ನಲ್ಲಿದ್ದ ನಾನು ಸೋಮವಾರ ಬೆಳಗ್ಗೆ ಹೊರಡುವುದೆಂದು ತೀರ್ಮಾನಿಸಿ ಆ ವಾರಾಂತ್ಯಕ್ಕೆ ಒಂದು ಒಳ್ಳೆ ಅಂತ್ಯ ಕೊಟ್ಟು ಹಾಗೆ ನಿದ್ದೆಗೆ ಇಳಿದೆ. ಮತ್ತೆ ಬೆಳಿಗ್ಗೆ ೪ ೩೦ ಗಂಟೆಗೆ ನಮ್ಮ ಊರಿಂದ ಹೊರಡುವ ಮೊದಲ ಬಸ್ನಲ್ಲಿ ಕುಂತು ಬೆಂಗಳೂರಿಗೆ ಹೊರಟೆ.....

ಬೆಳಗಿನ ಈ ೪ ೩೦ ರ ಬಸ್ ಬಹಳ ವಿಶೇಷವದದು. ಯಾಕೆಂದರೆ ಬೆಂಗಳೂರಿಗೆ ಇಲ್ಲ ತುಮಕೂರಿಗೆ, ಕಾಲೇಜು ಅಥವಾ ಕಚೇರಿಗೆ ತೆರಳುವ ಯಾರೇ ಇದ್ದರು, ಇದೇ ಬಸ್ ನಲ್ಲಿ ಕುಳಿತು ಬರೋದು. ಅದರಿಂದ ಈ ಬಸ್ ಹತ್ತಿದರೆ ಕಡೇ ಪಕ್ಷ ನನಗಿಂತ 3 ವರ್ಷ seniors ಹಾಗು juniors ಗಳನ್ನ ನೋಡೋ ಅವಕಾಶ.... ಆದರೆ ಏನು ಮಾಡೋದು, ಆ ದಿನದ ಬಸ್ನಲ್ಲಿ ನೋಡೋಣ ಅಂದ್ರು ಒಂದೇ ಒಂದು ಆಕರ್ಷಣಿಯ ತುಂಡು ಸಹ ಇರಲಿಲ್ಲ ಹಾಗು ಹರಟೋಣ ಅಂದರು ಯಾರು ಇರಲಿಲ್ಲ. ಅರೆ ಬರೆ ನಿದ್ದೆ ಇಂದ ಎದಿದ್ದ ನಾನು, ಈ ರೀತಿ ಆಕರ್ಷಣೆ ರಹಿತ ಬಸ್ನಲ್ಲಿ ಏನು ಮಾಡಲಾಗದೆ, ಕನಸುಕಾಣುತ್ತ ನಿದ್ದೆಗಿಳಿದೆ.

ನಿಜ ಜೀವನದಲ್ಲಿ ಸಾದಿಸೋಕೆ ಆಗದ ನನ್ನ ಅದೆಷ್ಟೋ ಆಸೆಗಳನ್ನ ಆ ಮುಂಜಾವಿನ ನಿದ್ದೆಯಲ್ಲಿ ಸಾಧಿಸಿದ್ದಯಿತು, ಮಾಡಬೇಕೆಂದಿದ್ದ ಆದೆಷ್ಟೋ ಸಾಹಸಗಳನ್ನ ಮುಗಿಸಿದ್ದಯಿತು. ಹಾಗೇನೆ ತಾಕಬೇಕೆಂದಿದ್ದ ಹಾಗು ಸನಿಹದಿಂದ ನೋಡಬೇಕೆಂದಿದ್ದ ಅದೆಷ್ಟೋ ಸುಂದರ ವಸ್ತು ವ್ಯಕ್ತಿಗಳೊಟ್ಟಿಗೆ ಕಾಲಕಳೆದಿದ್ದು ಮುಗಿಯಿತು. ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ನಡೆದ ಆ ನನ್ನ ಕನಸೆಂಬ ಬಣ್ಣದ ಚಿತ್ರಕ್ಕೆ ವಿರಾಮ ಬಿದಿದ್ದು, ನನ್ನ ಪಕ್ಕದ " seat " ಅಲ್ಲಿ ಯಾರೋ ಬಂದು ಕೂತಮೇಲೆ. ನನ್ನ ಆಸೆಗಳನ್ನ ಈಡೇರಿಸುತಿದ್ದ ಆ ಕನಸಿನಿಂದ ಹೊರಬರುವ ಮನಸೇಇಲ್ಲದಿದ್ದ ನಾನು, ಪಕ್ಕ ಕೂತದ್ದು ಯಾರು ಅಂದು ನೋಡದೆ ಮತ್ತೆ ನಿದ್ದೆಗೆ ಜಾರಿದೆ. ಮತ್ತೆ ಥಟನೆ ಶುರುವಾಯಿತು ನನ್ನ ಕನಸುಗಳ ಚಿತ್ತಾರ, ಆಗಷ್ಟೇ ಕೈ ಕೊಟ್ಟ ಒಬ್ಬಳು, ಹೊಸದಾಗಿ ಕೈ ಹಿಡಿಯಲು ಬಂದ ಇನ್ನೋಬಳು, ನೆಮ್ಮದಿಯಾಗಿ ಮಾಡುವಂತ ಕಚೇರಿ ಕೆಲಸ, ಮುಂದೆ ಇರಬಹುದಾದ ಸುಂದರ ಸರಾಗವಾದ ಜೀವನದ ಚಿತ್ರಗಳು ಸಾಗಿ ಹೋಗುತಿದ್ದ ಆ ನನ್ನ ಕನಸಿಗೆ "ಶುಭ" ಹಾಡಿದ್ದು ಈ ನಮ್ಮ ಬೆಂಗಳೂರು traffic jam ನಲ್ಲಿ ಕೇಳಿಸೋ horn ಶಬ್ದ.

ಒಂದೇ ಒಂದು ನಿದ್ದೆಯಲ್ಲಿ ಕಂಡ ಇಷ್ಟೆಲ್ಲಾ ಕನಸುಗಳಿಂದ ಪುಲಕಿತನಾಗಿ ಎದ್ದ ನಾನು, ನನ್ನ ಪಕ್ಕ ಕೂತಿದ್ದ ಹಾಗು ನನ್ನ ಹೆಗಲ ಮೇಲೆ ತಲೆ ಹಾಕಿ ಮಲಗಿದ್ದ ಆ ಜೀವ ಯಾವುದು ಎಂದು ನೋಡುತಿದ್ದೆ. ತೆಳ್ಳಗೆ, ಬೆಳ್ಳಗೆ, ನಾಜುಕಗಿದ್ದು, "ನೀಲಿ" ವಸ್ತ್ರಾಲಂಕಾರ ಮಾಡ್ಕೊಂಡಿದ್ದ ಆ ಅವರು, ಆಹಾ!! ಒಂದು figeru . ಹಾಯಾಗಿ ನನ್ನ ಹೆಗಲಮೇಲೆ ಮಲಗಿದ್ದ ಆ ಅವರು, ನನ್ನಂತೆಯೇ traffic ಶಬ್ದಕ್ಕೆ disturb ಆಗಿ ಎದ್ದು ಕುಂತರು. ಇನ್ನೇನು ಇಬ್ಬರು ನಾಚ್ಕೊಂಡು, ಒಬ್ಬರನ್ನ ಒಬ್ಬರು ನೋಡ್ಬೇಕು, ಅಷ್ಟರಲ್ಲೇ ಅವಳ stop ಬಂತು. Mostly ಅವಳು ಮನಸಿಲ್ಲದಿರು, ಸ್ಟಾಪ್ ಬಂದ ತಪ್ಪಿಗೆ ಹಿಂದೇ ಸಹ ನೋಡದೆ ಇಳಿದುಹೋದಳು........... ನಮ್ಮ ದರಿದ್ರನೇ ಹೀಗೆ, live ಆಗಿ ನಡಿತಿರಬೇಕಾದ್ರೆ, ಅದನ್ನೇ ಕನಸಲ್ಲಿ ನೋಡೋ ಗತಿ......... "ಹತ್ತಿರವಿದ್ದರು ದೂರ ಉಳಿಯುವೆವೂ, ನಮ್ಮ ನಿದ್ದೆ, ಕನಸುಗಳಲಿ"

ಒಂತರ ರೋಮಾಂಚಿತನಾಗಿ ಹಾಗೇನೆ ಒಂತರ ಅವಕಾಶ ವಂಚಿತನಾಗಿ, ಕಡೆಗೂ ಮಜೆಸ್ಟಿಕ್ ಗೆ ಬಂದು ಸೇರ್ದೆ......

ಇಲ್ಲಿ ಶುರುವಾಯ್ತು ನಮ್ಮ ಮತ್ತೊಂದು ಅದ್ಭುತ ಪ್ರಯಾಣ. ಆಗ್ಲೇ ಕೆಲಸಕ್ಕೆ ಲೇಟ್ ಆಗಿದ್ದ ನಾನು, ಸ್ವಲ್ಪ ಬೇಗ ಹೋಗೋಣ ಎಂದು ಆ ಕೆಂಪು ಡಬ್ಬ - ವೋಲ್ವೋ ಬಸ್ ಹತ್ತಿದೆ. Electronic City ಕಡೇ ಬಸ್ ಆಗಿರೋದ್ರಿಂದ ಬಸ್ ಆಗಲೇ ತುಂಬೋಗಿ, ಸೀಟ್ ಎಲ್ಲಾ ಬರ್ತಿ ಆಗಿತ್ತು. ಆದರೆ ಮುಂದೆ ಆ ಚಕ್ರಗಳ ಮೇಲೆ ಅಡಡ್ಡವಾಗಿ ಕೂರಾ ಬಹುದಾದ ಸೀಟ್ (ಡ್ರೈವರ್ ಸೀಟ್ ಹತ್ತಿರ) ಮಾತ್ರ ಕಾಲಿಯಿತ್ತು. ಅಲ್ಲೇ ಹಿಂದೇ luggage ಹಾಕಿ, ಆ ಸೀಟ್ ಮೇಲೆ ಕುಂತೆ. ಸ್ವಲ್ಪ ಹೊತ್ತಿಗೆ ಬೊಮ್ಮನಹಳ್ಳಿಗೆ ಟಿಕೆಟ್ ತಗೊಂಡು, ನಿದ್ದೆಗಿಳಿದೆ. ಒಳ್ಳೆ ನಿದ್ದೆಲೆ ಇದ್ದ ನಾನು, ಅಂತ ಆರಾಮಗಿರೋ ಸೀಟ್ ಅಲ್ಲದ ಕಾರಣ, ಸ್ವಲ್ಪ ಹೊತ್ತಿಗೆ ಎದು ಕೂತೆ. ಎದಿದ್ದೆ ತಡ, ನನಗೆ ತುಂಬಾ ಆಶ್ಚರ್ಯ, ನನ್ನ ಕಣ್ಣನ್ನ ನಾನೆ ನಂಬೋಕಗ್ತಿಲ್ಲ. ಇದೇನು ವೋಲ್ವೋ ಬಸ್ಸೋ ಇಲ್ಲ ಅದೇನು ಸ್ವರ್ಗ ಅಂತಾರಲ್ಲ ಅದೆನ ಅಂತ ಅನುಮಾನ. ನನ್ನ ಆ ಅಡಡ್ಡವಾಗಿ ಕೂರಾ ಬಹುದಾದ ಸೀಟ್ಗೆ ಆಕಡೆ ಒಬ್ಬರು, ಇಕಡೆ ಒಬ್ಬರು ಸುರ ಸುಂದರಿಯರು. ಹಿಂದೇ ಮುಂದೆ ಇದ್ದ ಸೀಟ್ಗಳಲ್ಲೂ full ಮಿಂಚಿಂಗು, ಒಳ್ಳೆ ಇಂದ್ರನ ತರ ಕಾಲಮೇಲೆ ಕೈ ಊರಿ, ಸುತ್ತಲಿನ ಅಂದವನ್ನ ಅಸ್ವಾದಿಸುತಿದ್ದೆ. ಮತ್ತೆ ನೋಡಿದ್ರೆ, ನನ್ನ ಎದುರಿಗೆ, ನ ಕುತಿರೋ ಸೀಟ್ ತರಾನೆ ಇರೋ ಸೀಟ್ ನಲ್ಲಿ, ಮತ್ತೆ ಒಂದು "ನೀಲಿ" ವಸ್ತ್ರಾಲಂಕಾರದಲಿದ್ದ ಒಂದು ಸುಂದರ ಚೆಲುವೆ. ....

ಅಡಡ್ಡವಾಗಿ ಕುತಿದ್ರಿಂದ, ನಾನು ಅವಳು ಇಬ್ಬರು ಎದುರು ಎದುರಾಗಿ ಕೂತಿದ್ವಿ. ಅಬ್ಬಾ ಅಂತು ಅದೊಂದು ಸಕತ್ ಜಾಗ, ನಾವು ಕೂತಿದ್ದ style ಇಂದ ಇಬ್ಬರಿಗೂ ಬೇರೆ ಕಡೇ ನೋಡೋಕೆ ಕಷ್ಟ, ಅದರಿಂದ ಅವಳು ನನ್ನ ಸ್ವಲ್ಪ ಹೊತ್ತು ನೋಡಿ ತಲೆ ಬಗ್ಗಿಸುತಿದ್ದ್ಲು, ನಾನು ಆಗ ಸ್ವಲ್ಪ ಹೊತ್ತು ಅವಳನ್ನ ನೋಡ್ತಾ ಕುರ್ತಿದ್ದೆ. ಆಗಾಗ ಇಬ್ಬರು ಒಬ್ಬರನ್ನೋಬರು ನೋಡ್ಕೊತಿದ್ವಿ. ಆ A / C ಬಸ್ನಲ್ಲಿ, ಒಳ್ಳೆ ರಾಜ ರಾಣಿ ತರ ನಾವಿಬ್ರು ಕುಂತಿದ್ವಿ, ಅಕ್ಕಪಕ್ಕದವರೆಲ್ಲ ನಮ್ಮ ಸಹಾಯಕರಾಗಿ ಕಾಣ್ತಿದ್ರು. ನಂಗೆ ಯಾವಾಗಲು ಆಗೋತರನೆ, ಆ situation ಗೆ ಸರಿಯಾಗಿ fm ನಲ್ಲಿ ಒಳ್ಳೆ ಹಾಡುಗಳ ಸರಣಿ. " ಕಣ್ಣಾ ಕಣ್ಣ ಸಲಿಗೆ, ಸಾಲಿಗೇ ಅಲ್ಲಾ ಸುಲಿಗೆ" ಅಂತ , " ಏನೋ ಒಂತರ, ಏನೋ ಒಂತರ" ಅಂತ "ಮಿಂಚಾಗಿ ನೀನು ಬರಲು" ಅಂತ ಆ ಕನ್ನಡ ಹಾಡುಗಳ background ಮ್ಯೂಸಿಕ್ ನಲ್ಲಿ ಸಾಗಿತು ನಮ್ಮ ಆ ಪಯಣ. ಈ ರೀತಿ romantic ಹಾಡುಗಳು ಬರ್ತಿದ್ದ ಆ fm ನಲ್ಲಿ "ಏನಾಗಲಿ ಮುಂದೆ ಸಾಗು ನಿ, ಬಯಸಿದೆಲ್ಲ ಸಿಗದು ...." ಅಂತ ಹಾಡು ಶುರ್ವಾಯ್ತು, ಬೇಜಾರಾಗಿ ಹೊರಗೆ ನೋಡಿದ್ರೆ ದರಿದ್ರ "ಬೊಮ್ಮನಹಳ್ಳಿ" ಸ್ಟಾಪ್ ಬಂದಿತ್ತು. ಏನು ಮಾಡೋಕೆ ಆಗಲ್ಲ, ಬಯಸಿದೆಲ್ಲ ಸಿಗೋಲ್ಲ ಅಂದ್ಕೊಂಡು, ಅವಳನ್ನ ಕಡೇಬಾರಿ ನೋಡಿ ಬಸ್ ಇಳಿದೆ.

 ಬೆಂಗಳೂರು traffic ನಲ್ಲಿ ೧೦ ನಿಮಿಷ ಬಸ್ನಲ್ಲಿ ಹೋದರು ತಲೆಕೆಡ್ತಿದ್ದ ನನಿಗೆ, ಅವತು ಒಂದುವರೆ ತಾಸು ಕುಂತಿದ್ರು ಟೈಮ್ ಹೋದದ್ದೇ ತಿಳಿಲಿಲ್ಲ. ಆ ದಿನ ಅದೇನೋ "ನೀಲಿ" ಬಣ್ಣದ್ದೇ ದರ್ಬಾರು, "ನೀಲಿ ಬಾನಲಿ ತೇಲಿ ಹೋದೆನು ನಾನು ಆ ದಿನ"...........

ಬಸ್ ಇಳಿದು ಹೊರಗೆ ನೋಡಿದ್ರೆ, ಅಲ್ಲೇ ಮತ್ತೆ ಅದೇ "ನೀಲಿ" ಬಣ್ಣದಲ್ಲಿ ದೊಡ್ಡದಾಗಿ "bosch " ಅಂತ ಕಾಣುಸ್ತು. ಅಲ್ಲಿಂದ ಮತ್ತೆ ನಮ್ಮ ಕೆಲಸದ ಸವಾರಿ ಶುರು.......















--

Happy

Tuesday, March 15, 2011

ನಮ್ಮೂರ ಉಸಾಬರಿ ----Pavagada!!- A Natures Paradise?

Well, as hints or to highlight few points about my HomeTown - Pavagada. Its an border Taluka of Karnataka but located mostly in to the AndhraPradesh. And this is one among the three Forts (Penukonda and Madhugiri being others) that were built during revival era of Vijayanagara Empire.

This is just an brief intro to my HomeTown. The way it is popular or was reminded in the minds of people, is through the Notorious but most happening events like Murders, Naxal attacks, thefts, Factionism and many equivalent activities. And the other competing popularities of our Town is, the extreme Drought and Dryness it enjoys. 

Considering these, it has become an Undeclared Desert and in the way, it is nominated as the place for nothing.  
But let this post try its best to show how different the Town is and the thought people have.

Here comes the First Pic, which shows the FortFull and historical monument - The Pavagada Betta.
And the Pic is being taken from the Nature's own Entrance to our Town "Kanive" (Valley through which we enter the Town). This entrance is followed by an Lake, which makes the entry to the Town much more pleasant. And in the Night, its Feast to the Eyes to view the Illuminated Town from the Outskirts with Sloth Bears giving the Background score.

And below is the Brief List of birds and WildLife, which we noticed with in couple of Kms radius from the Town. 

Indian Robin,
Magpie Robin,
Red Rumped and common Swallow,
Great and Pied Tit,
Bay Backed, brown and other Shrikes,
Purple sunbird,
 
Loten sunbird,
small sunbird, (also few others),
(fire breasted and others)Flower peckers,
Tailor Bird,
Brahminy Starling,
Black napped Oriole,
 
Ashy Crowned Sparrow Lark,

Scaly Breasted Munia,
White rumped munia and others,

Black Shouldered Kite,
Shikra/Eurasian Sparrow Hawk?
Different Bee Eaters,
 
Red vented Bulbul,

Red whiskered Bulbul,
Black Bulbul,
Laughing Dove,
Blue rocked pigeon,
Ashy Prinia, Jungle Prinia and other prinia's
Many warblers,
 
Black kite,
Common Krestel,
 
Pallid Harrier,
Drango,
Indian Koel,
Rose Ringed Parakeet,

House Sparrow,
Golden backed Wood pecker,
Common Hoopoe,
Pied Bushchat
White breasted Kingfisher,
India Roller,
Baya weaver (male and female),
Black chested weaver,
Pied Wagtail,

Spotted chest Babler,
Large Grey, common Babblers,
 
BushLark,
Peacocks,
House Crow, Jungle Crow,
Myna, Jungle Myna,
Long tailed Minivet,
 
Pipits,
Francolin,
Owl/owlet?,
Coucal,
Red wattled Lawping,
Pond Heron,
Gargany duck,
Egret,
Common Sandpiper,
Stilt?
Common Grebe,
CopperSmith Barbet,


Its not the final list, its just an part that we identified. There are still lot many to get into the list.

And here is the small but really astonishing list of the WildLife that is available in Pavagada

Pangolian,
Wolves,
Foxes,
Leopards,
Black bucks (which is really unbelievable thing for Pavagada),

Wild boars,
Mangoose,
Hares,
Sloth Bears

It is really tough to imagine and to believe the presence of all the above creatures in the land of Hard hearted and heavily heated Pavagada. Its our multiple visits to different corners of the town which made us to explore its hidden life. And the sighting of the BlackBucks (krishna Mruga, Scat (dropouts)of Leopard, flight of many Raptors (kites, Krestel, Shikra) really increased our enthu. Also the info from locals about Wolves and foxes, herds of Peacocks and the presence of Solth bears and Pangolians which is driving us to explore further.

The above details must make people to change their thought about our dry beauty -Pavagada. There are many other things which can again support our claim, "Natures Paradise - Pavagada!!!". Let me post them later.

All these are the outcome of the Survey or useless roaming of Two Guys, one with SLR camera and other with Binocular. One for photography and other for Identification. 



And the All the above pics are from my Buddy and budding Wildlife photographer - Sunil.


Let this Go on.......


Thursday, February 24, 2011

ಆ ಮುಂಜಾವು

ಈ ಹೊಸ ಕಂಪನಿ ಸೇರ್ಕೊಂಡಮೇಲೆ ದಿನ ಪೂರ್ತಿ ಆಫೀಸ್ ಕೆಲಸಾನೆ ಆಗೋಗ್ತಿದೆ. ಕಡೆಗೆ ವೀಕೆಂಡ್ ಪ್ಲಾನ್ ಮಾಡೋಕು ಟೈಮ್ ಇಲ್ಲದೆ ಇರೋ ತರ ಹಾಳಾಗಿಹೋಗಿದಿನಿ. ಮೊನ್ನೆನು ಹೀಗೆ ಶುಕ್ರ ವಾರ ಸಂಜೆ ಅಲ್ಲಾ ರಾತ್ರಿ ೯ ೩೦ ಕ್ಕೆ ಆ ಕೆಲಸ ಎಲ್ಲ ಮುಗ್ಸಿ ಮನಗೆ ಬಂದ್ಮೆಲೇನೆ ನಾಳೆ ವೀಕೆಂಡ್ ಅಂತ ತಿಳ್ದಿದ್ದು. ಇದ್ದ ಬದ್ದ ಪ್ರಾಜೆಕ್ಟ್ಸ್ ಗಳೆಲ್ಲವುಗಳನ್ನ ಒಂದು ಹಂತಕ್ಕೆ ಮುಗಿಸಿ ಸ್ವಲ್ಪ ಖುಷಿಯಾಗಿದ್ದ ನಾನು ವೀಕೆಂಡ್ನ ಪ್ಲಾನ್ ಮಾಡೋಕೆ ಶುರು ಮಾಡಿದೆ.

ಕೆಲಸ ಮುಗುಸಿ ಮನೆಗೆ ಬರೋವಾಗ್ಲೆ ದಾರಿಯಲ್ಲಿ ಸಿಕ್ಕ ಒಂದು ಹೋಟೆಲ್ ನಲ್ಲಿ ಊಟ ಮುಗಿಸಿದ್ದೆ. ಮನೆಗೆ ಬಂದಿದ್ದೆ, ನಮ್ಮ ಹಳೇ ಗುಂಪಿನವರಿಗೆ ವೀಕೆಂಡ್ ಪ್ಲಾನ್ ಗಾಗಿ message ಕಳುಸ್ದೆ. ತುಂಬಾ ದಿನ ದಿಂದ ಟಚ್ ಅಲ್ಲಿ ಇಲ್ಲದೆ ಇದಿದ್ದರಿಂದ ನನ್ನ "SMS " ಗೆ ಅಂತ ಆದರಣೆ ಸಿಗ್ಲಿಲ್ಲ. ಇದರಿಂದ ಸ್ವಲ್ಪ ಬೇಜರಾದ್ರುನು, ಇದಷ್ಟೇ ಜೀವನ ಅಲ್ಲಾ ಅಂದ್ಕೊಂಡು ಹಾಗೆ ಲ್ಯಾಪ್ಟಾಪ್ ಮುಂದೆ ಕುಂತೆ. ತುಂಬಾ ದಿನ ಆದಮೇಲೆ ಸಿಕ್ಕ ಆ ಆರಾಮಿನ ಕ್ಷಣಗಳನ್ನ ಹಾಗೆ ಆ ಒಯ್ಯಬಲ್ಲ ಗಣಕದಲ್ಲಿ, ತುಂಬಾ ದಿನದ ನಂತರ ಸಿಕ್ಕ ನನ್ನ ಅಂತರಜಾಲ ಮಿತ್ರರನ್ನ ಹಾಗೆ ಕೆದಕುತ್ತ, ಅದು ಇದು ಹುಡುಕುತ್ತ, ಹೊಸ ಹೊಸ profiles ನ ಹೆಕ್ಕುತ ಹಾಗೆ ಆ ರಾತ್ರಿನ ಕಳೀತ ಕೂತೆ. ಎಲ್ಲಾ ಮುಗಿಸಿ ಮಲಗೋಕೆ ಅಂತ ಹಾಸಿಗೆಮೇಲೆ ಬಿದ್ದಾಗಲೇ "ವೀಕೆಂಡ್" ಈ ರೀತಿ ಪ್ಲಾನ್ ಇಲ್ಲದೆ ಹಾಳು ಮಾಡಬಾರದು ಅಂತ ಅನ್ನುಸ್ತು, ಅಷ್ಟೇ ಬೆಳಿಗ್ಗೆ 6 ಗಂಟೆಗೆ ಎದ್ದು ನಮ್ಮ " ಹಕ್ಕಿ ವೀಕ್ಷಣೆ\ bird watching " ಶುರುಮಾಡೋಣ ಅಂತ ನಿರ್ಧಾರ ಮಾಡಿ, ಅದೇ ಗುಂಗಲ್ಲಿ ನಿದ್ದೆಗಿಳ್ದೆ.

ದಿನಾ ೭ ಗಂಟೆಗೇ ಕಷ್ಟಪಟ್ಟು ಏಳೋ ನಾವು, weekend ದಿನ ಮಾತ್ರ ಬೇಕಿರೋ ಟೈಮ್ ಗೆ ಯೆಳ್ತಿವಿ , ಅವತ್ತು ಹಾಗೆ ಬೆಳ್ಳಂಬೆಳಗ್ಗೆ ೫-೩೦ ಗೆ ಎದ್ದು ಆ ಮುಂಜಾವಿನ ಒತ್ತಡ ಬೇನೆ ಗಳನ್ನ ಮುಗುಸ್ಕೊಂಡು, ದೇಹ ಶುದ್ದಿ ಮಾಡಿಕೊಂಡು ಪಕ್ಷಿವಿಕ್ಷಣೆಯ "Getup ",  ಅದೇ binocular , ಒಂದು ಪುಸ್ತಕ, Birding Guide ಮತ್ತೆ ಒಂದು ಕ್ಯಾಮೆರಾ ಹೆಗಲಿಗೆ ಏರಿಸಿಕೊಂಡು, ಮನೆ ಹತ್ತಿರಾನೆ ಇರೋ ಅಗರ ಕೆರೆ ಕಡೇ ಹೊರಟೆ.

ಹಾಗೆ ಆ ಮುಂಜಾವಿನ ಮಂಜಿನಿಂದ ಕೂಡಿದ್ದ ಚಳಿಯಲ್ಲಿ, ಆ ಗುರುಗುಟ್ಟೋ ಬೀದಿ ನಾಯಿಗಳ ಕಾಟ ತಡಕೊಂಡು ಹಾಗೆ ಕೆರೆ ಕಡೆಯ ದಾರಿ ಇಡ್ಕೊಂಡು ಹೊರಟಿದ್ದೆ. ಕೆರೆಗೆ ಹೋಗೋ ದಾರಿಯಲ್ಲೇ ಇದ್ದ ಬೇಜಾನ್ ದೇವಸ್ತಾನಗಳಲ್ಲಿ ಬೆಳಕರಿಯೋ ಮುಂಚೆನೇ ದೇವರ ತಲೆ ಕೆಡಿಸೋಕೆ ಅಂತ ಸಾಲುಗಟ್ಟಿ ನಿಂತಿದ್ದ ಜನರ ಆ ಭಕ್ತಿಯಾ ಪರಾಕಾಷ್ಟೆ ನೋಡ್ಕೊಂಡೆ ಕೆರೆ ಬಳಿ ಬಂದೆ.

ಎಲ್ಲಾ ವಾಣಿಜ್ಯಿಕಾರಣ ಆಗಿರೋ ಈ ಬೆಂಗಳೂರಲ್ಲಿ, ಕಾಣೋತರ ಉಪಯೋಗಕ್ಕೆ ಅಥವಾ ದುಡ್ಡು ಬರೋ ವಸ್ತುಗಳು ಅಥವಾ ಪ್ರದೇಶಗಳಿಗೆ ಮಾತ್ರನೇ ಬೆಲೆ ಇಲ್ಲ ಮರ್ಯಾದೆ. ಈ ಕೆರೆಗಳ ಇಂದಲೂ ಕಾಣೋ ರೀತಿಲಿ ಅಂತ ಲಾಭ ಇಲ್ಲದಿರೋದ್ರಿಂದ ಇವುಗಳ ಬಗ್ಗೆನು ದಿವ್ಯ ನಿರ್ಲಕ್ಷ್ಯ. ಆ ರೀತಿಯ ನಿರ್ಲಕ್ಷ್ಯ ಅಸಡ್ಡೆ ಗಳಿಗೆ ಗುರಿಯಾಗಿ, ಅವಸಾನದ ಅಂಚಿಗೆ ಬಂದು ಇಗೋ ಅಗೋ ಅನ್ನೋ ಹಾಗಿರೋ ಆ ಘತಕಾಲದ ಭವ್ಯ ಕೆರೆಯಾ ಹೀನಾಯ ಸಿತಿತಿ ನೋಡ್ಕೊಂಡೆ ಅದರ ಏರಿಯ ಕಡೇ ಹೊರಟೆ. ಹೇಗಿದ್ರು ಮನೇಲಿ ನಲ್ಲಿ ತಿರುವಿದರೆ ನೀರು ಬರುತ್ತೆ so ಈ ಕೆರೆಗಳ ಉಪಯೋಗ ಏನು ಅಂತ ತಿಳಿದಿರೋ ನಮ್ ಈ ಜನ ಸಹ, ಈ ಕೆರೆಗಳ ಬಗ್ಗೆ ಒಳ್ಳೆ ನಿರ್ಲಕ್ಷ್ಯನೆ ಹೊಂದಿದರೆ. ಹಾಗೆ ಕೆರೆ ಏರಿ ಕಡೆಗೆ ಹೋಗುವ ದಾರಿ ಕೆಂಡಮಾಯವಾಗಿದ್ದರು, ಹಾಗೆ ಆ ಸುವಾಸನೆಯ ನಡುವೆ ಸ್ವಲ್ಪ ಮುನ್ನಡೆದಾಗ ಕಂಡಿದ್ದು, ಚಿಲಿಪಿಲ್ಲಿ ಸಪಳ್ಲ ಮಾಡ್ತಾ ಆ ಹೂವಿನ ಗಿಡದಲ್ಲಿ ಆಟಡ್ತಿದ್ದ "Flower Pecker" ಪಕ್ಷಿಗಳು. ಆ ಪಕ್ಷಿಗಳ ಆಟ ನೋಡಿ ಖುಷಿಯೊಂದಿಗೆ, ನಾವು ಹೀಗೆ ನೆಮ್ಮದಿಯಾಗಿ ಇರೋಕೆ ಆಗದೆ ಇರೋದರ ಬಗ್ಗೆ ಬೇಸರನು ಮಾಡ್ಕೊಂಡು, ಕಡೆಗೂ ಆ ಕೆರೆ ಏರಿ ತರ ಇರೋ ಆ "walking track " ಮೇಲೆ ಬಂದು ಸೇರಿದೆ.
ಆಗ್ಲೇ ತುಂಬಾ ಜನ ಅಲ್ಲಿ ಮೈ ಭಾರ ಹಾಗು ಮನಸಿನ ಭಾರ ಇಳಿಸೋಕೆ ಅಂತ ಆ ನಿರ್ಮಲ, ನಿರಾಳತೆಯ ಕೆರೆಯ ಪರಿಸರದಲ್ಲಿ, ಅತಿಂದಿತ ಅಲೆದಾಡುತಿದ್ದರು.

ತುಂಬಾ ದಿನದ ನಂತರ ಸಿಕ್ಕ ಈ ರೀತಿಯ ನಿರಾಳ, ಪ್ರಶಾಂತ ಪರಿಸರದಲ್ಲಿ, ನನ್ನ ತಲೇಲು ನೂರೆಂಟು ಆಲೋಚನೆ, ಯೋಚನೆಗಳು ಶರವೇಗದಲ್ಲಿ ಒಂದನ್ನೊಂದು ಡಿಕ್ಕಿ ಹೊಡೆಯುತ್ತ ಗಿರಕಿ ಹಾಕ ತೊಡಗಿದವು. ನಾ ಕಣ್ಣುಹಾಕಿದ್ದ ಹುಡುಗಿ ಬಗ್ಗೆ, ನನ್ನ ಮೇಲೆ ಕಣ್ಣುಹಾಕಿದ್ದ ಕೆಲವರ ಬಗ್ಗೆ, ದಿನ ತಲೆ ಕೆಡಿಸೋ ಆ ನನ್ನ ಕೆಲಸದ ಬಗ್ಗೆ, ಇಂಜಿನಿಯರಿಂಗ್ ಎಂಬ ನಾ ಮಾಡಿದ  ದೊಡ್ಡ ತೊಪ್ಪಿನ ಬಗ್ಗೆ ಹಾಗು ಮುಂದೆ ನಾನು ಸಾದಿಸ ಬಹುದಾದ ಕೆಲವು ವಿಷಯಗಳ ಬಗ್ಗೆ ಧೀರ್ಘವಾಗಿ ಯೋಚಿಸುತ್ತ, ದಿಗಂತದ ಕಡೇ ನೋಟ ಬಿರುತ್ತ ಆ ಕೆರೆ ಅಂಚಿನಲ್ಲೇ ನಡಿತಿದ್ದೆ. ಅಲ್ಲೇ ಮುಂದೆ ಬಂದ ಒಂದು ಮರಗಳ ಸಮೂಹದಲ್ಲಿ ನಲಿತಿದ್ದ, ನುಲಿತಿದ್ದ ಕೆಲವು ಪಕ್ಷಿಗಳನ್ನ ವಿಕ್ಷಿಸುತ್ತ, ಕೆರೆಯ ಒಂದು ಭಾಗ ದಲ್ಲಿ ಕಟ್ಟಿರೋ ವೀಕ್ಷಣ ಕಟ್ಟೆಯ ಬಳಿ ಬಂದು ನಿಂತೇ.



ಒಂದು ಕಡೇ ತಂಗಾಳಿ, ಮತೊಂದುಕಡೆ ಎಳೆ ಬಿಸಿಲ, ಆ ಮನಮೋಹಕ ಸಮ್ಮಿಲನದಿಂದ ಉಂಟಾಗಿದ್ದ ಪ್ರಶಾಂತ ಪರಿಸದರಲ್ಲಿ, ಆ ಕೆರೆಯ ಕಟ್ಟೇ ಮೇಲೆ ನಿಂತು ವಿಶಾಲವಾಗಿ ಹರಡಿದ್ದ ಕೆರೆಯ ಪ್ರದೇಶವನ್ನ ಹಾಗೆ ನೋಡ್ತಾ ನಿಂತೇ. ಅಲ್ಲೇ ಆ ನಿರ್ಮಲ ನಿರಳತೆಗೆ ಧಕ್ಕೆ ತರೋ ರೀತಿಲಿ ಒಂದು ನವ ವಿವಾಹಿತ ಜೋಡಿಯಾ ಮಧುವೆ ನಂತರವೂ ಮುಗಿಯದ ಆ ಸಲ್ಲಪಗಳ ಸಪ್ಪಳದಲ್ಲಿ ನನ್ನ ಏಕಾಗ್ರತೆಗೆ ದಕ್ಕೆ ಉಂಟಾಗಿ, ಆ ಜೋಡಿಗೆ ಒಂದು ಹಿಡಿ ಶಾಪ ಹಾಕಿ ಮತ್ತೆ ಆ ವಿಶಾಲ ಕೆರೆಯ ನೋಡನಿಂತೆ. ಆ ವೀಕ್ಷಣ ಕಟ್ಟೆಯ ಬಳಿಯೇ ಒಂದು ಹೆಂಗಸು ತಮ್ಮ ಬಟ್ಟೆಯ ಕೊಳೆ ತೆಗೆಯುತಲ್ಲೇ ಕೆರೆಗೆ ಆ ಕೊಳೆಯನ್ನ ತುಂಬುತಿದಳ್ಳು. ಮತ್ತೆ ಆಗಷ್ಟೇ ಮುಗಿದಿದ್ದ ಕೆಲವು ಧರ್ಮಗಳ ಹಬ್ಬ ಹರಿದಿನಗಳ, ಅಟ್ಟಹಾಸದ ಆಚರಣೆಗಳ ಅತ್ಯಾಚಾರಕ್ಕೆ ಗುರಿಯಾಗಿದ್ದ ಆ ಕೆರೆ, ಕಣ್ಣಲ್ಲೂ ನೋಡಲಾಗದಷ್ಟು ರಾಡಿ ಯಾಗಿತ್ತು. ಭವ್ಯವಾಗಿ ಮೆರೆದಿರಬಹುದಾದ ಈ ವಿಶಾಲ ಕೆರೆ ಇಂದು ತನ್ನ ಸುತ್ತಲು ಆದ ಅಭಿವೃದ್ದಿ ಎಂಬ ಮಾರಣಾಂತಿಕ ಹಲ್ಲೆ ಇಂದ ತನ್ನ ಉಳಿವನ್ನೇ ಪ್ರಶ್ನಾರ್ತಕ ಚಿನ್ಹೆ ಹಾಕಿಕೊಂಡು ನೋಡೋಹಗಾಗಿದೆ. ಸುತ್ತ ಬಂದ ಆ ಡಾಂಬಾರು  ರಸ್ತೆಗಳಿಂದ, ಇದರ ನೀರಿನ ಮೂಲವೇ ಅಳಿಸಿ ಹೋಗಿ ಇಂದು ಅರ್ದದಷ್ಟು ಸಹ ತುಂಬುತಿಲ್ಲಾ.

ಇಷ್ಟೆಲ್ಲಾ ಯೋಚಿಸುತ್ತ ಆ ಕಟ್ಟೇ ಮೇಲೆ ನಿಂತಿದ್ದ ನನ್ನ ಬಳಿ, ಯಾರೋ ಒಬ್ಬ ಉತ್ತರ ಭಾರತದ ವ್ಯಕ್ತಿ ಒಬ್ಬ ಬಂದು ನಿಂತ. ನನ್ನ ಪಾಡಿಗೆ ನಾನು, ಆ ಕೆರೆಲೇ ಇದ್ದ ನೂರಾರು ಹಕ್ಕಿ ಗಳ ನೋಡಲೆಂದು ನನ್ನ "binocular " ತೆಗೆದು, ಅಲ್ಲೇ ಕುಂತಿದ್ದ ಒಂದು ಕರೀ ಪಕ್ಷಿಯನ್ನ ದಿಟ್ಟಿಸಲು ಶುರುಮಾಡಿದೆ, ಅಷ್ಟರಲ್ಲೇ ನನ್ನ ಪಕ್ಕ ನಿಂತಿದ್ದ ಆ ವ್ಯಕ್ತಿ ಅದು "cormorant " ಪಕ್ಷಿ ಎಂದ. ಹಾಗೆ ಆ ಪಕ್ಷಿ ಈ ಪಕ್ಷಿ ಅಂತ ಶುರುವಾದ ನಮ್ಮ ಆ ವಿಚಕ್ಷಣ ರಹಿತ ಮಾತಿನ ಲಹರಿ, ಅವನು ಹೇಗೆ ಬೇಟೆಯಡುವದನ್ನು ಬಿಟ್ಟು ಈಗ ಒಬ್ಬ ಶಿಕ್ಷಕನಾದ ಹಾಗು ಅವನ ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಒಂದು ಸಂಕ್ಷಿಪ್ತ ವಿವರದ ವರೆಗೆ ಸಾಗಿತು. ನಮ್ಮ ಸಂಬಾಷಣೆ ಅಲ್ಲಿಗೆ ಮೊಟಕು ಗೊಳಿಸಿ ನಮ್ಮ ನಮ್ಮ ದಾರಿ ಹಿಡಿದು ಮುಂದೆ ಸಾಗಿದೆವು.

ತಲೆಯಲ್ಲಿ ಹರಿದಾಡುತಿದ್ದ ನೂರೆಂಟು ಆಲೋಚನಾ ಅಲೆಗಳಲ್ಲಿ ತೇಲುತ್ತ, ಆ ನಿರ್ಮಲ ಪರಿಸದಲ್ಲಿ ಕೆರೆಯ ಏರಿ ಮೇಲೆ ಪಾದಸೇವೆ ಮುಂದುವರಿಸಿದೆ. ಇನ್ನೇನು ಅವಸಾನದ ಅಂಚಿನಲ್ಲಿರೋ ಆ ಕೆರೆಲೂ ತುಂಬಾನೆ "wetland " birds ವಿಹರಿಸುತಿದ್ದವು. ಅಲ್ಲೇ "sunbath " ಗೆ ಅಂತ ರೆಕ್ಕೆ ಬಿಚ್ಚಿ ಒಳ್ಳೆ babe ತರ ಪೋಸ್ ಕೊಡ್ತಿದ್ದ "Cormorant "ಗಳು, ಹಾಯಾಗಿ ನೀರಮೇಲೆ ತೇಲುತಿದ್ದ " ನಾಮ ಹೊತ್ತ common coot 's " , ವಿವಿದ ರೀತಿಯ ಬಾತುಕೋಳಿಗಳು, ಮೀನು ಹಿಡಿತ ಬ್ಯುಸಿ ಇದ್ದ purple heron , grey heron , pond heron , Egret ಗಳು ಹಾಗು ಇನ್ನು ಹಲವು ಖಗ ಮಿತ್ರರು. ಇವರ ಈ ನಿಶ್ಚಿಂತ ಜೀವನ ನೋಡಿ, ನಮ್ಮ ಈ ಬಿಡುವಿಲ್ಲದ ದರಿದ್ರ ಜೀವನದೊಂದಿಗೆ ಹೋಲಿಸಿ ಅನುಕಂಪೆ, ಅಸೂಯೆ ಎರಡನ್ನು ಮಾಡ್ಕೊಂಡು ಮುನ್ನಡೆದೆ. ಅಲ್ಲಿಗೆ ಕೆರೆಯ ಎರಡು ಕಡೇ ಏರಿಯನ್ನ ಕ್ರಮಿಸಿದ್ದ ನಾನು ಈಗ ಮುಖ್ಯ ರಸ್ತೆಗೆ ಹತಿರವಿದ್ದ ಏರಿಯ ಬಳಿ ಬಂದು ಸೇರಿದ್ದೇ. ಈ ಭಾಗದ ಏರಿಯ ಪಕ್ಕ ವಿರಾಜಮಾನವಾಗಿ, ವಿಜ್ರುಂಬಣೆಯಿಂದ, ಮೈತುಂಬಿ ಹರಿತಿದ್ದ ನಮ್ಮ ನಗರಗಳ ಜೀವ ನದಿಯಾ ರೀತಿ ಕಾಣಸಿಗುವ ಒಂದು ದೊಡ್ಡ "ಚರಂಡಿ ಅಥವಾ ಮೋರಿ" ನೆಲಿಸಿತ್ತು. ಆ ಮೋರಿಯಾ ವೈಭವ ನಿಜಕ್ಕೂ ಈ ಕೆರೆಯನ್ನು ನಾಚಿಸುವ ಹಾಗಿತ್ತು. ಕೆರೆಯಲ್ಲಿ ಜೀವಿಸುತಿದಂತ ಕೆಲವು ಪಕ್ಷಿಗಳು "adaptability "ಗೆ ಮಾರುಹೋಗಿ ಈ ಮೋರಿಯನ್ನೇ ತಮ್ಮ ವಾಸ(ನಾ)ಸ್ಥಾನವಾಗಿ ಮಾಡಿಕೊಂಡಿವೆ.

ಹೀಗೆ ಒಂದು ಮುಂಜಾವಿನಲ್ಲಿ ಮಾಡಿದ  ಒಂದು ನಿರಾಯಾಸ ನಡಿಗೆಯಲ್ಲೇ ಕಂಡ ನೂರೆಂಟು ಸಮಸ್ಯೆಗಳು ಹಾಗು ಆ ಸಮಸ್ಯಗಳಿಗೆ ಕಾರಣೀಬೂತರಾದವರ ಬಗ್ಗೆ ಆಲೋಚಿಸುತ್ತ, ಆ ಮುಂಜಾವಿನ ಪ್ರಾಕೃತಿಕ ಸೌಂದರ್ಯ ಸವಿಯುತ್ತ ಸಾಗುತ್ತಿದ್ದೆ.

ಹೀಗೆ ಸಾಗುತ್ತಿದ್ದ ನನಗೆ, ನಿಂತ ನೀರಲ್ಲಿ ಕಲ್ಲು ಒಗೆದಾಗ ಅಗೋ ಅಲ್ಲೋಲಕಲ್ಲೋಲ ದಂತೆ, ನನ್ನ ಆ ಧ್ಯಾನ ನಿರತ ನಡಿಗೆಗೆ ಕಲ್ಲು ಹಾಕಿದ ಹಾಗೆ ನನ್ನ ಮೊಬೈಲ್ ಗೆ "ದೂರವಾಣಿ ಕರೆ " ಬಂತು. ಅ ಕಲ್ಲು ಎಸೆದವನು ಮತ್ತಾರೂ ಅಲ್ಲಾ, ನನ್ನ ದೋಸ್ತ್ "Bucket ಗುಂಡ".

"ಎನಲ ಏನ್ ದಬ್ಬಾಕುತಿದಿಯ" ಅಂತ ಒಂದು ಅರ್ತನಾದದೊಂದಿಗೆ ಮತ್ತೆ ಆ ನಿರ್ಮಲ ಪರಿಸರದಿಂದ ಕಳಚಿಕೊಂಡು ಬಂದು ಈ ನಾಗ(ರ)ರೀಕಾ ಬದುಕಿಗೆ ವಾಪಸಾದೆ.


--

Happy

Tuesday, November 16, 2010

ಪುಂಗಾಯಣ

ರಂಗ : ಏನೋ ಮಗನೆ, ಹೇಗಿದಿಲೆ, ಎಲ್ಲಿಗೋ ಓಡೊಕತ್ತಿ ?

ಪುಂಗಾ: ನಮಸ್ಕಾರ ಕಣನ್ನೋ, ಸಂದಕಿದಿನೀ, ಯಾವಾಗ ಬಂದ್ರಿ ಊರಕಡೆ?

ರಂಗ: ಅದಿರ್ಲಿ, ಎಲ್ಲಿಗೋ ಓಡೋಕತ್ತಿ ? ಅಂತ ಹೊಗೆಹಾಕಿಸಿಕೊಂಡಿರೋ ವಿಷ್ಯ ಏನೋ?

ಪುಂಗಾ: ಏನಿಲ್ಲ ಕಣನ್ನೋ, ಹಿಂಗೆ ರಾಜ್ಯೋತ್ಸವ ಪ್ರಶಸ್ತಿಗೆ " Nomination" ಹಾಕೋಕೆ ಹೊಯ್ತಿದಿನಿ.

ರಂಗ: ಅದೇನ್ಲ, ಏನ್ ಬೋಗೊಳಕತ್ತಿ. ಅಲ್ಲಲೇ ದ್ಯಾಬೇರಿ ನೀ ಏನ್ ಕಿಸಿದಿದಿಯಾ ಅಂತಲೇ ನಿಂಗೆ ಪ್ರಶಸ್ತಿ?

ಪುಂಗಾ: ಅಲ್ಲ ಪ್ರಶಸ್ತಿ ಸಿಕ್ಕಿರೋರೆಲ್ಲ ಏನ್ ಕಿಸ್ದೊವ್ರೆ ಅಂತ. ಈ ಕಿತ ಬೇರೆ ಪ್ರತಿಯೊಂದು ಜಿಲ್ಲೆಗೂ ಪ್ರಶ್ಯಸ್ತ ಕೊಟ್ಟೋರೆ ಮತ್ತೆ ಸಿಕ್ಕ ಸಿಕ್ಕ ಎಲ್ಲಾ ಕ್ಷೇತ್ರಗಳಿಗೂ ಕೊಟ್ಟೋರೆ. ಏನೋ ಮುಂದಿನ ಕಿತ ಪ್ರತಿಯೊಂದು ತಾಲುಕಿಗೂ ಅದನ್ನ ಕೊಡ್ತಾರೋ ಏನೋ. ಅದು ಅಲ್ಲದೆ ಎಡ್ಡಿಗೋ, ಇಲ್ಲ ಕಾರಜೋಳಗೋ ಅದು ಆಗಿಲ್ಲ ಅಂದ್ರೆ ಪ್ರಶಸ್ತಿ ಸಮಿತಿಯವರಿಗೆ ಯಾರಿಗದ್ರು ಒಂದು ಪೋನ್ ಮಾಡಿ ಕೇಳುದ್ರೆ ಸಾಕಂತೆ... ಅದುಕ್ಕೆ ಪಷ್ಟು "ಅಪ್ಲಿಕೇಶನ್" ಹಾಕಿ ಆಮ್ಯಾಗೆ ಅವ್ರಿಗೆ ಪೋನ್ ಮಾಡ್ಕೊತೀನಿ. ಸ್ವಲ್ಪ ದುಡ್ಡಿಂದು ಕಾಟ ಇತ್ತು ಅದುಕ್ಕೆ ಈ ಪ್ರಶಸ್ತಿ ನ ಗಿಟ್ಟಿಸಿಕೊಂಡರೆ ಮೇಲು ಅಂತ.

ರಂಗ: ಅಲ್ಲಾ ಲೇ ಇಗ ಕೊಟ್ಟಿರೋರ್ಗೆಲ್ಲ ಹೇಳ್ಕೊಲೋಕೆ ಯಾವುದೂ ಒಂದು ಕ್ಷೇತ್ರ ಅಯ್ತೆ, ನಿಂಗೆ ಯಾವುದಯ್ತೆಲೆ?

ಪುಂಗಾ: ಯಾಕೆ ಹಾಗೆಳ್ತಿರಿ, ಈ ಸಲ ಅದು ಇದು ಅಡೋರಿಗೆ, ಹೊಲದಾಗೆ ಸುಮ್ಕೆ ಕೆಲಸ ಮಾಡ್ಕೊತಿರೋರಿಗೆ ಹಾಗೇನೆ TV ನ್ಯಾಗೆ ಸುಮ್ಕೆ ಪುನ್ಗೊರಿಗೆ ಮತ್ತೆ ಪೇಪರ್ ನೋರಿಗೆ, ಎಲ್ಲರಿಗೂ ಕೆಲವು ಪ್ರಶಸ್ತಿ ಕೊಟ್ಟೋರೆ. ನನ್ ಏನ್ ಕಡಿಮ್ ತಿಂದಿನಿ, ನಾನು ಉರಾಗಿರೋ ಎಲ್ಲ ವಿಷ್ಯನು ಸಕ್ಕತ್ತಾಗಿ ಮಸಾಲೆ ಹಾಕಿ ನಿಮ್ಮಂತೋರಿಗೆಲ್ಲ ಹೇಳ್ಕೊಂಡ್/ ಹಬ್ಬಿಸಿಕೊಂಡು ಬರ್ತೀನಿ. ಅದುಕ್ಕೆ ನಾನು " ಪ್ರಾದೇಶಿಕ ವರದಿಗಾರ " ಅಂತ Nomination ಹಾಕೋತಿನಿ. ಪಷ್ಟು ಹೆಸರು ಬರ್ಸುದ್ರೆ ಸಾಕು, ಆಮ್ಯಾಗೆ ಯಾರಕಯ್ಯಗಾದ್ರು ಪೋನ್ ಮಾಡ್ಸಿ ಗಿಟ್ಟುಸ್ಕೊಂತೀನಿ

ರಂಗ: ಲೇ ತಿರ್ಬೋಕಿ ನಿಂಗೆ ಯಾರಲ ಪೋನ್ ಮಾಡಿ ಪ್ರಶಸ್ತಿ ಕೊಡ್ಸೋದು?

ಪುಂಗಾ: ನಮ್ಮೂರು ಮಿನಿಸ್ಟ್ರು PS ಸ್ಸು(ಪರ್ಸನಲ್ secretary) ನಮ್ಮನೆ ಪಕ್ಕನೆ ಇರೋದು, ಎಲೆಕ್ಷನ್ ಟೈಮಾಗೇ ಅದು ಇದು ಪುಂಗಿ ಅವರಿಗೆ ಸ್ವಲ್ಪ ಹೆಲ್ಪ್ ಮಾಡಿದ್ದೆ. ಅದುಕ್ಕೆ ಅವರ್ನ ಕೇಳುದ್ರೆ ಆಗೋಯ್ತದೆ

ರಂಗ: ಅವಯ್ಯ ಇನ್ನವ್ ಮಿನಿಸ್ಟ್ರು ಲೇ, ಅವಯ್ಯ ಮೊದಲಿಂದಾನು ಅನರ್ಹ ಶಾಸಕ ಆಗಿದ್ರುನು, ಎಲ್ಲಾರಿಗೂ ಗೊತ್ತಾಗೋ ಹಾಗೆ ಈಗ ಅನರ್ಹ ಶಾಸಕ ಅಂತ ಬೋಪಯ್ಯನೋರು announce ಮಾಡೋರೆ.

ಪುಂಗಾ: ಅದೆಲ್ಲ ಏನೆ ಇರಲಿ ಬಿಡಿ, ಈ ರಾಜಕೀಯದೋರಿಗೆ ಗೆದ್ರು, ಸೋತರು, ಇದ್ರೂ, ಅನರ್ಹರಾದರು ಅವರಿಗೆ ಸ್ವಲ್ಪ ಹವಾ ಇರುತ್ತೆ. ಕುಮಾರಣ್ಣನ ಅವಾಗವಾಗ ಹೇಳ್ತಾರಲ್ಲ " ರಾಜಕಿಯದಾಗೆ 'ಶಾ'ಶ್ವತ ಶತ್ರುಗಳಿಲ್ಲ ಅಂತ", ಹಾಗೆ ಯಾರಿಗೊತ್ತು ಎಡ್ಡಿ ಮತ್ತೆ ರೆಡ್ಡಿ ಗೇಲ್ಸಿ ನಮ್ ಮಿನುಸ್ತ್ರುನ ಬೆಂಬಲ ಕೊಡಿ ಅಂತ ಕೆಳ್ಕೊತರೇನೋ. ಅಂಗೆನಾರ ಕೇಳುದ್ರೆ, ಈ ಕಿತ ದುಡ್ಡು ಜತೆಗೆ ಒಂದು ನಾಲ್ಕು ರಾಜ್ಯೋತ್ಸವ ಪ್ರಶಸ್ತಿ ನಮ್ಮುರಿನವರಿಗೆ ಕೊಡ್ಸಿ ಅಂತ ಕೇಳೋಕೆ ಹೇಳುದ್ರೆ ಆಗೋಯ್ತದೆ. ಎಂಗೋ ಅಲ್ಲಿ ಇಲ್ಲಿ ಅಂತ ಸುತ್ತಡಿದೃನು ಎಡ್ಡಿನಾ ಕೆಳಗಿಲ್ಸಿ, ಒಂದು ಒಳ್ಳೆ position  ಗಿಟ್ಟಿಸ್ಕೊಳೊ ಪ್ಲಾನ್ ಹೋಗೆ ಹಾಕಿಸ್ಕೊಂಡು, ಕುಮಾರಣ್ಣನನ್ನ ನಂಬಿ ಬಲೆಗೆ ಸಿಕ್ಕಿಬಿದ್ದ ಹಂದಿ ತರ ಆಗಿರೋ ಇವರಿಗೆ, ಇಗ ಏನ್ ಕೊಡ್ತೀವಿ ಅಂದ್ರುನು ಓಡೋಯ್ತನೆ.

ರಂಗ: ಲೇ ಪುಂಗಿ, ನಿಂತಗು ಬಾಳ ವಿಷ್ಯ ಆಯ್ತಲೆ. ಭಲೇ ತಲೆ ಇಟ್ಟಿಯಲೇ. ಅದ್ರುನು ನಿ ಕೇಳುದ್ರೆ ಅವಯ್ಯ ಕೆಳ್ತಾನೆನ್ಲೆ.

ಪುಂಗಾ: ಕೇಳ್ತಿವಿ ಒಪ್ಕೊಂಡ್ರೆ ಸರೆ...

ರಂಗ: ಇಲ್ಲಾಂದ್ರೆ?

ಪುಂಗಾ: ಎನಯ್ತೆ, ಈಗ ರೇವಣ್ಣನ ತರ ಒಂದು ನಿಂಬೆಹಣ್ಣು ಇಟ್ಕೊಂಡು ಹೊಯ್ತಿದಿನಿ, ಇದುಕ್ಕು ಬಗಿಲ್ಲ ಅಂದ್ರೆ....

ರಂಗ: ಅಂದ್ರೆ?

ಪುಂಗಾ: ಯೆನಯ್ತೆ ಎಡ್ಡಿ ತರ ನಾವುನೂ ಬುಲ್ಡೆ, ಬೂದಿ ತಗೊಂಡು ಮಂತ್ರ ಹಾಕುಸ್ತಿನಿ
ರಂಗ: ಅಯ್ಯೋ ಬೇವರ್ಸಿ, ನಿ ಉದ್ದಾರ ಆಗೋಲ್ಲ ಕಣ್ಲ. ಕೊಳ್ಳೆಗಾಲ, ಮಳವಳ್ಳಿ ಆಕಡನೆ ಇದ್ದ ಈ ಮಂತ್ರ ತಂತ್ರ ನಮ್ಮುರ್ಗು ತರ್ತಿಯೇನ್ಲೆ. ಅಲ್ಲಾ ಲೇ ನಿಂಗ್ಯಕ್ಲೆ ಆ ಪ್ರಶಸ್ತಿ ಮ್ಯಾಗೆ ಅಸ್ಟೊಂದು ಆಸೆ.


ಪುಂಗಾ: ಪ್ರಶಸ್ತಿ ಬಂದ್ರೆ, ನಮ್ಗುಯ ಜನ ಸ್ವಲ್ಪ ಮರ್ವಾದಿ ಕೊಡ್ತಾರೆ. ಹಾಗೇನೆ ಸ್ವಲ್ಪ ದುಡ್ದುನೂ ಗಿಟ್ಟುತ್ತೆ. ನೋಡುತಿರ್ರಿ ಈ ಪ್ರಶಸ್ತಿ ಸಿಕ್ಮ್ಯಗೆ ನೀವು " ಬದಲಾಗಿರೋ ಪುಂಗನ್ನ" ನೋಡ್ತಿರಿ

ರಂಗ: ಲೇ ಗೂಬೆ, ತಿಂಗ್ಲಿಒಂದ್ಸಲ ಬದಲಾಗೋಕೆ ನಿ ಏನ್ ಎಡ್ಡಿ ಕೆಟ್ಟೋದ. ಅವ್ರು ಅಂದರೆ ಸಿಯೆಮ್ಮು ಯಾವಾಗಬೇಕದ್ರು ಬದಲಾಗ್ತಾರೆ. ಮೊನ್ನೆ ತಾನೆ ಹೇಳಿದ್ದೆ, ನಮ್ಮೂರು ಮಿನಿಸ್ಟ್ರು ಬಂಡಾಯದ ಬಾವುಟ ಹಾರುಸ್ದಾಗ, ನನಿಗೆ ಟೈಮ್ ಬಂದೆಯ್ತೆ, ಇನ್ ಮ್ಯಾಗೆ ಪುಂಗಾ ಬದಲಾಗ್ತನೆ ಅಂತ. ಯಾಕೆ ಅವಗೆನು ಗಿಟ್ಲಿಲ್ವ? ಈಗ ಮತ್ತೆ ಪ್ರಶಸ್ತಿ ಮ್ಯಾಗೆ ಕಣ್ಣಾಕಿ?

ಪುಂಗಾ: ನಿಮಿಗೆ ಗೊತಲ್ವ, ಆಗ ಪಾಪ ನಮ್ ಮಿನಿಸ್ಟರ್ ಅವರೇ ಹೋಗೆ ಹಾಕಿಸ್ಕೊಂಡೊರೆ. ಆ situation ನಾಗೆ ಏನರ ಕೇಳಿದ್ರೆ, ಮಿನಿಸ್ಟರ್ ಆಗಿದ್ದಾಗ ಏತಿದ್ದ ಒಂದೆಲ್ದು ರೇಷ್ಮೆ ಸೀರೆ ಕೊಟ್ಟು ಕಳಿಸ್ತಿದ್ರು.

ರಂಗ: ಆ ಸೀರೆಗೆ ಎಷ್ಟು scope ಗೊತ್ತ, ಭಾಗ್ಯಲಕ್ಷ್ಮಿ ಸೀರೆ ಈಗ ನಮ್ಮ ರಾಜ್ಯದ ಅಭಿರುಧಿಯ ಸಂಕೇತನಂತೆ.  ಅದೆಂಗೆ ಅಂತ ನಂಗು ಗೊತ್ತಿಲ್ಲ.
ಸರೇ ಪುಂಗಾ ನಿಂಜತೆ ಹರಟೋಕೆ ಪುರಸೋತಿಲ್ಲ ಮತ್ತೆ ಸಿಗ್ತೀನಿ. ಅದೇನು ನಿಂಬೆಹಣ್ಣೆ ಇಟ್ಕೊತಿಯೋ ಇಲ್ವೋ ಬೂಧಿ ನೆ ಬಳುಸ್ತಿಯೋ, ಪ್ರಶಸ್ತಿ ಏನರ ಸಿಕ್ಕರೆ ನಮಿಗು ಸ್ವಲ್ಪ ಮುಖ ತೋರ್ಸಿ.  ಸರೇ ತಗೋ ಮತ್ತೆ ಯಾವಾಗರ ಪುಂಗಿಯಂತೆ.

ಪುಂಗಾ: ಸರೇ ತಗಳಿ ಮತ್ತೆ ಸಿಗ್ತೀನಿ.....

Sunday, October 24, 2010

ಸಾಗುತ, ತೀರ ಹತ್ತಿರ

ಅದೇ ಮೊನ್ನೆ ನಡೀತಲ್ಲ bharath ಬಂದ್ಹ್, ಅದೇ ರೀ petrol, diesel, gas rate ಜಾಸ್ತಿ ಆಗಿದೆ ಅಂತ ಅದೇ petrol ಬಳಸೋ two wheeler ಗಾಡಿ ಹಾಕೊಂಡು strike ಮಾಡುದ್ರಲ್ಲ ಹಾಗೆ ಮಿಕ್ಕವರು ಮನೇಲೆ ಅದೇ rate ಜಾಸ್ತಿ ಆಗಿರೋ gas stove ಬಳುಸ್ಕೊಂಡು ಒಳ್ಳೆ ಅಡುಗೆ ಮಾಡ್ಕೊಂಡು ತಿಂದು ತೇಗುದ್ರಲ್ಲ, ಅದ್ರ ಹಿಂದಿನ ದಿನ.. ಆ ಅದೇ sunday ದಿನ ನಡೆದ ವಿಷಯ ...
ಅದೇನಪ್ಪ ಅಂದ್ರೆ, ಭಾರತ್ bandh ಕಾರಣದಿಂದ ಅದು ಒಂದು long ವೀಕೆಂಡ್ ಆಯಿತು. ನಾವು basically unplanned but weekend ಪ್ಲಾನ್ ಮಾತ್ರ ತಯಾರು ಮಾಡ್ಕೊಂಡೆ ಇರ್ತಿವಿ. ಶನಿವಾರ ಸಂಜಯ್ ಗುಬ್ಬಿ ಅವರ " ವನ್ಯಪ್ರಾಣಿಗಳ ಜಾಡು ಹಿಡಿದು " Book release ಕಾರ್ಯಕ್ರಮ attend ಮಾಡಿ ಬಂದೆ. ಅದು ಸಕತ್ತಾಗಿತು, Anil Kumble, Meera Saxena, Ullas ಕಾರಂತ್ ಹಾಗು ನಮ್ಮಂಥ ದೊಡ್ಡ ದೊಡ್ಡವರೆಲ್ಲ ಸೇರಿದಂತ ಕಾರ್ಯಕ್ರಮ. So ಶೆನಿವಾರನ ಈ ರೀತಿ ಅರ್ಥ ಪೂರ್ಣವಾಗಿ ಜೋಶಲ್ಲಿ ಮುಗಿಸಿದೆ. ಮತ್ತೆ ಬಾನುವಾರ ತುಮಕೂರಿಗೆ ಹೋಗೋ plan ಇತ್ತು. ನನ್ನ friend ಒಬ್ಬ ಬಾಂಬೆಯಲ್ಲಿ ಕೆಲಸ ಮಾಡ್ತಿದಾನೆ, ಪಾಪ ಅವನು ಪ್ರತಿಸಲನು ಒಂದ್ ವಾರ ರಜೆ ಹಾಕಿ ಮನೆಗೆ ಬರ್ತಾನೆ ಆದರೆ ಪ್ರತಿಸಲನು saturday ಬಂದು next saturday return ಹೋಗ್ತಾನೆ so ನಮ್ಮ್ಗುಲ್ಯಾರಿಗೂ ಸಿಗ್ತಿರ್ಲಿಲ್ಲ. ಆದರೆ ಈ ಸಲ ಅವನು ಎರಡು ದಿನ ಹೆಚ್ಚಾಗಿ ರಜೆ ಹಾಕಿದ್ರಿಂದ sunday meet ಅಗೋ plan ಮಾಡಿದ್ವಿ . ಅವನಿಗು sunday morning 6am ಗೆ bangalore ಇಂದ ಹೊರ್ಡ್ತ್ಹಿನಿ ಅಂತ ಹೇಳಿದ್ದೆ but as usual ಸ್ವಲ್ಪ late ಆಗಿ 10ಗೆ ಮನೆ ಬಿಟ್ಟೆ, 11 ಗೆ majestic ಸೇರ್ಕೊಂಡೆ.

Actual ಆಗಿ ವಿಷಯ ಶುರು ಆಗೋದೇ ಇಲ್ಲಿಂದ. Marthalli ಇಂದ majestic ಗೆ volvo bus ಅಲ್ಲಿ, ಪಕ್ಕದ seat alli ಕುಂತಿದ್ದ ಜಿಂಗಚಕ್ ನ ನೋಡುಕೊಂಡು, FMಅಲ್ಲಿ ಬರ್ತಿದ್ದ ಅದೇ situation ಗೆ ಸೇರಿಯಾಗಿರೋ " ಸಕತ್ತ್ಗಗವ್ಲೇ ಸುಮ್ನೆ ನಗ್ತಾಳೆ" ಹಾಡನ enjoy ಮಾಡ್ಕೊಂಡ್ ಬರೋವಗ್ಲೆ, ಹೋರಗೆ, traffic jam ಇಲ್ಲದೆ ಇರೋ bangalore roads ನ ಗಮನಿಸಿದ್ದೆ. ಹಾಗೆ ಮೂರನ್ನು ಗಮನಿಸುತ್ತ BMTC bustand ಸೇರ್ಕೊಂಡು ಅಲ್ಲಿಂದ tumkur ಬಸ್ stop ಗೆ ಬಂದೆ. ಅಲ್ಲಿ ನೋಡುದ್ರೆ, ಇಡೀ ಸ್ಟ್ಯಾಂಡ್ಎಲ್ಲ bus ಇಲ್ಲದೆ ಕಾಲಿ ಓಡಿತಿದೆ. ಆದ್ರೆ ಕಾಯುತಿದ್ದ ಜನರಿಗೇನು ಕಡಿಮೆ ಇರ್ಲಿಲ್ಲ. ನಾನೂ Tumkur bus ಗೆ wait madtha ನಿಂತೆ. ಯಾವಾಗಲು ಆಟೋಗಳಿಗಿಂತ ಹೆಚ್ಚಾಗಿರೋ tumkur busಗಳು ಇಲ್ಲದೆ ಇರೋದು ಒಂಥರಾ ಕೆಟ್ಟ ಕೋಪ ತರುಸ್ತು. ಅದ್ರು ಪರವಾಗಿಲ್ಲ tumkur stand ಅಲ್ವ, ಸೊ ಕೆಲವು exciting things ಇದ್ವು ಅದಲ್ಲ ಅಂದ್ರು ಅದರ ಪಕ್ಕದ್ದೆ mangalore stand, ಅದರಿಂದ attractions ಗೇನು ಕೊರತೆ ಇರ್ಲಿಲ್ಲ. ಅದೇ ಎಡವಟ್ಟಾಗಿ ನಮ್ಮೂರ stand ಅಲ್ಲಿ ಕಾಯೋ ಪರಿಸ್ಥಿತಿ ಬಂದಿದ್ರೆ, ಬೇಡ ಬಿಡಿ ಬೇಜಾರು ಆಗುತ್ತೆ, atleast ಪಕ್ಕ ನೋಡೋಣ ಅಂದ್ರೆ ಅದು ರಾಯಚೂರು ಸ್ಟ್ಯಾಂಡ್ ಅದು ಇನ್ನು....

ಹೀಗೆ ಚೆನ್ನಾಗಿರೋ, ಸಹ ಬಸ್ ನಿರೀಕ್ಷಣಾರ್ತಿಗಳನ್ನೂ ನೋಡ್ಕೊಂಡು, ನನ್ನ ಹೀಗೆ ಕಾಯೋ ಹಾಗೆ ಮಾಡಿಡ ಫ್ರೆಂಡ್ ನ ಬಯ್ಕೊಂಡು ಈ ಷಡ್ಚಕ್ರ ವಾಹನಕ್ಕಾಗಿ ಕಾಯ್ತಿದ್ದೆ. ಈ ಬಸ್ ಗಳೆಲ್ಲ ಎಲ್ಲೋಗಿರ್ಬಹುದು ಅಂತ ಯೋಚುಸ್ಥಿದೆ, long weekend ಆಗಿರೋದ್ರಿಂದ ಎಲ್ಲ ಕಡೆಗೂ special bus ಕಳ್ಸಿರ್ಬೇಕು ಇಲ್ಲ ksrtc ಬಡ್ಡಿಮಕ್ಳು ಬಂಧಗೆ ಭಯಬಿದ್ದು bus cancel ಮಾಡಿರಬೇಕು ಅಂತ ಅಂದ್ಕೊಂಡೆ. But ಆಗಲೇ ಗುರ್ತು ಬಂತು, ಅವತು ನಮ್ಮ ಕಮಲ ಪಕ್ಸದವ್ರು " ಹಿಂದುಳಿದ ವರ್ಗಗಳ ಸಮಾವೇಶ" fix ಮಾಡ್ಕೊಂಡಿರೋದು. 60 ವರ್ಷಗಳಿಂದನು ಅವರನ್ನ ಹಿಂದುಳಿದವರು ಅಂತ ಹೇಳಿ ಹೇಳಿ ನೆ ಹಿಂದೋಗಿರೋರ್ನ ಇವೆ ksrtc bus ಅಲ್ಲಿ ಮುಂದೆತರೋ/ ಸಮಾವೇಶಕ್ಕೆ ತರೋ ಪ್ರಯತ್ನ ನಡೆದಿತ್ತು. ಇದೆ ನಮ್ಮ bus ಕಾಯೋ ಪರಿಸ್ಥಿತಿಗೆ ಕಾರಣ. ಹೀಗೆ ತಲೆ ಗೆ ಹುಳ ಬಿಟ್ಕೊಂಡು, ಕಣ್ಣಲ್ಲಿ ಅ busstand ಅಲ್ಲಿದ ಒಂದ್ figure ನ ನೋಡ್ಕೊಂಡು ಇರ್ಬೇಕಾದ್ರೆ sudden ಆಗಿ ಒಂದು ತುಮಕೂರ್ ಬಸ್ ಬಂದೆ ಬಂತು. ಆದ್ರೆ ಇಲ್ಲಿದ population ಗೆ ಅದಲ್ಲ ಅಂತ ೪ bus ಬಂದ್ರು ತುಂಬಿಹೋಗ್ತಿತ್ತು.ಆ ಜನ bus ಹತ್ತೋ ಪರಿ ನೋಡಿ, ಈ ಬಸ್ ಹತ್ತೋ ಆಲೋಚನೆ drop ಮಾಡಿದೆ. ಡ್ರಾಪ್ ಮಾಡೋಕೆ ಇನ್ನೊ ಒಂದು reason ಅಂದ್ರೆ ನಾನು ಕಣ್ಣಾಕಿದ್ದ ಹುಡುಗಿನೂ ಹತ್ತೋ ಸಾಹಸ ಮಾಡಿರಲಿಲ್ಲ ಸೊ..... ನನ್ನ ಪಾಡಿಗೆ ನಾನು, ಅವಳ ಪಾಡಿಗೆ ಅವಳು ಹಾಗೆ ಮಿಕ್ದವ್ರು ಅವರವರ ಪಾಡಿಗೆ ಅವರು next ಬಸ್ ಗಾಗಿ ಕಾಯ್ತಾ ಇದ್ರೂ.

ಹೀಗೆ ಅವರ ಪಾಡಿಗೆ ಅವರು, ಮಾತಾಡಿಕೊಂಡು, ಯೋಚನೆ ಮಾಡಿಕೊಂಡು, ಕಿತ್ತಾಡಿಕೊಂಡು, ksrtc ಅವರನ್ನ ಬೈದಾಡಿಕೊಂಡು ಜನ wait ಮಾಡುತಿರಬೇಕಾದರೆ ಇನ್ನೊಂದು bus ಬಂತು. ಈಗಲೂ first ಬಸ್ಸಿಗೆ ಆದಂಥ situationಯೇ, full ನೂಕುನುಗ್ಗಲು. ಆದ್ರೆ ಈ bus ಅತ್ತಲೇ ಬೇಕಂತ decide ಆಗಿ, ನಾನು ಮುನ್ನುಗಿ bus ಒಳಗೆ ಸೇರ್ಕೊಂಡೆ.

ಅವತು ಮೋಡ ಬೇರೆ ಇತ್ತು ಮತ್ತೆ ಬೆಳಿಗ್ಗೆ ಬೇರೆ, ಅದ್ರು ಸಹ ಅ ಕಿಕ್ಕಿರಿದ Bus ಅಲ್ಲಿ ಅದೇ ಬೆವರ ಕಂಪು. ಜನರೆಲ್ಲ bus ಕಿಟಕಿ ಇಂದ seat ಗೋಸ್ಕರ ಅದು ಇದು ಅಂತ ಹಾಕ್ತಿದ್ರು , ಬಟ್ ನಾನು ಒಬ್ನೇ ಅದರಿಂದ ಹೇಗಿದ್ರು ಒಂದು seat ಸಿಗುತ್ಹೆ ಅಂತ ಮಾಡಿ ಬಸ್ ಹತ್ಹಿದೆ. As usual ನಮಿಗೆ last ಬಟ್ one 3 seater ಅಲ್ಲಿ ಒಂದು seat ಸಿಕ್ತು. ಅ ಮೂರೂ seat ಅಲ್ಲಿ ಆಗಲೇ ಒಬ್ಬ ದಡಿಯ 1.5 seat ನ ಆಗಲೇ ಕಬಳಿಸಿದ್ದ. ಹೇಗೋ seat ಸಿಕ್ಕಿರೋ ಖುಷಿಲಿ ಬೆವರು ಕಂಪನ್ನೇ enjoy ಮಾಡ್ಕೊಂಡು ಆ ದಡಿಯನ ಪಕ್ಕಕುಂತ್ಕೊಂಡೆ. ಕಿಟಕಿ ಪಕ್ಕಇದ್ದ ಆ ದಡಿಯಂಗೆ ಕೆಳಗಿದ್ದ ಯಾರೋ ಒಂದು ಹುಡುಗಿ, Rush ಇದ್ದ ಅ bus ಅಲ್ಲಿ, seat ಹಾಕೋಕೆ ಅಂತ ಅವಳ backpack ನ ಇವನಿಗೆ ಕೊಟ್ಳು. ಇವನು ಇಷ್ಟ ಇದ್ರೂ ಸಹ ಸ್ವಲ್ಪ ಆದರ್ಶಗಳ ಪಾಲನೆಗೆ ಹೋಗಿ ಅ bag ನ ಮುಂದಿನ seat ಗೆ ಎಸೆದ. ಆದರೆ ಇವನ ಅದೃಷ್ಟ ಕುಲಾಯಿಸಿ, ಮುಂದಿನ seat ಅಲ್ಲಿ towel ಹಾಕಿರೋರೋ ಬಂದು ಅ bag ನ ಮತ್ತೆ ಇವನ ಕೈಗೆ ಎಸೆದರು. ಅದೇ ಖುಷಿಲಿ ಅ bag ನ ಅವನ ಪಕ್ಕ (even ನನ್ನ ಪಕ್ಕ) ಹಾಕೊಂಡ.

ಆದೇ ಬೆಳಬೆಳಗ್ಗೆ ಮುಖ ತೊಳೀದೇ ಸ್ನಾನನು ಮಾಡದ ಜನರಿಂದ ಕಿಕ್ಕಿರಿದಿದ್ದ bus ಒಳ್ಳಗೆ, ಹುಡುಕಿದರೂ ನೋಡೋಂಥ ದೃಷ್ಯ ಯಾವುದು ಇರಲಿಲ್ಲ. ಅಲಲ್ಲಿ, ಯಾವುದೊ ದೇವಸ್ತಾನಕ್ಕೆ ಹೋಗೋಕೆ ಅಂತ ಅಚ್ಚು ಕಟ್ಟಾಗಿ ತಯಾರಾಗಿ ಬಂದಿದ್ದ ಹುಡುಗಿರು ಸ್ವಲ್ಪ ಆಕರ್ಶಿಸುತಿದ್ದರು. ಆದರೆ sudden ಆಗಿ ಈ ಅಸಾಮಾನ್ಯ ಜನ ಸಾಗರದ ಮಧ್ಯೆ ಒಂದು attractive ವಸ್ತು ಕಾಣಿಸಿಕೊಳ್ತು, ಒಂದು ಶ್ವೇತ ವರ್ಣದ, ಹುರುಪಾದ ಮೈ ಕಾಂತಿಯ, disturb ಮಾಡದೇ ಬಿಟಿದ್ದ ಗುಂಗುರು ಕೂದಲ ಒಂದು ಚೆಲುವೆ, ಹಸಿರು ಬಣ್ಣದ ತೋಳಿಲ್ಲದ T - shirt ಹಾಕೊಂಡಿದ್ದ ಆ ಮಿಂಚು ಕಣ್ಣಿನ ಬೆಡಗಿ.... ಅದೇ ಗುರು Figure ಊ. ನಾವು ಮೊದಲೇ 'ಗೋ ಗ್ರೀನ್' followers , ಸೊ ಇ ಗ್ರೀನ್ ನೂ ಸಹ ಹಾಗೆ ನೋಡ್ತಾನೆ ಇದ್ವಿ.

ಹಾಗೆ ಕಣೆತ್ತಿ ನೋಡೋಕು ಬೇಜಾರಗ್ತಿದ್ದ ಆ ಬಸ್ ನಲ್ಲಿ, ಏನೋ ಒಂದುತರ ಆಕರ್ಷಣೆ, ಅದನ್ನೇ ನೋಡುಕೊಂಡು ಇದ್ದ ನನಿಗೆ ಇದ್ದಕಿದ್ದಂತೆ ಆಶ್ಚರ್ಯ. ಏನಪ್ಪಾ ಅಂದ್ರೆ, ಆ ಗುಂಗರು ಕೂದಲ, ತೋಳಿಲ್ಲದ T -ಶರ್ಟ್ ಸುಂದರಿ ಈಗ ನನ್ನ ಬಳೀನೆ ನಿಂತಿದಾಳೆ ಅಲ್ಲದೆ ನನ್ನೇ ನೋಡುತಿರೋ ಹಾಗೆ, ನನ್ನ ಪಕ್ಕದಲ್ಲಿರೋ ಆ ದಡಿಯನನ್ನ ನೋಡುತಿದ್ಲು. ಆಗ್ಲೇ ಗೊತ್ತಾಗಿದ್ದು, ಕೆಳಗಿಂದ seat ಹಾಕೋಕೆ ಅಂತ ಕಿಟಕಿಯಲ್ಲಿ ಬ್ಯಾಗ್ ಕೊಟ್ಟ ಹುಡುಗಿ ಇವಳೇ ಅಂತ. ಈ ಬ್ಯಾಗ್ ಮಾತು ಪಾಕಕ್ಕೆ ಇಟ್ಟರೆ, ಅವಳು ಈಗ ನಮ್ ಸೀಟ್ ಅಲ್ಲೇ ಕೂರೋದು ಅಂತಾಯ್ತು.

ನಮ್ ಬಳಿ ಬಂದ ಅವಳು, ಆ ದಡಿಯನನ್ನ ಬ್ಯಾಗ್ ಎಲ್ಲಿ, ಯಾವ ಸೀಟ್ ಅಂತ ಕೆಳುದ್ಲು. ಅವನು ಅದಕ್ಕೆ, ನನ್ನ ಹಾಗು ಅವನ ಮಧ್ಯೆ ಇದ್ದ ಬ್ಯಾಗ್ ಮತ್ತು ಸೀಟ್ ನ ತೋರುಸಿದ. ಅಂದುಕೊಂಡ ಹಾಗೇನೆ, ಅವಳು ನಮ್ಮಿಬ್ಬರ ಮಧ್ಯೆ ಕೂಡೋಕೆ ಇಚ್ಚಿಸದೆ, ನನ್ನ ಆ ದಡಿಯನ ಪಾಕಕ್ಕೆ ಸರಿಯೋಕೆ ಹೇಳಿ, ಅವಳು ನನ್ನ ಪಕ್ಕ ಕೂತುಕೊಂಡಳು. ಇದುಕ್ಕೆ ಅಲ್ಲಿದ ಜನ ಹಾಗು ನನ್ನ ಪಕ್ಕ ಇದ್ದ ದಡಿಯ, ನನ್ನ ಹಾಗು ಆ ಗುಂಗರು ಕೂದಲು ಹುಡುಗಿನ ಗುರಯಿಸುತಿದ್ದರು.
ಇದಕ್ಕೆ add on ಅನ್ನೋತರ, ನನ್ನ ಪಕ್ಕ ಕೂತಿದ್ದ ಆ ತೋಳಿಲ್ಲದ T -ಶರ್ಟ್ ಸುಂದರಿ ಅವಳ friend ಒಬಳನ್ನ ಇದೇ ಸೀಟ್ ಅಲ್ಲಿ adjust ಮಾಡಿಕೋಳೋಣ ಅಂತ ಕುರಿಸಿಕೊಂಡಳು. ಅಲ್ಲಿಗೆ ಆ 3 ಜನರ ಸೀಟಿನಲ್ಲಿ ದಡಿಯ 1 .5 ಸೀಟ್ occupy ಮಾಡ್ಕೊಂಡಿದ್ದ ಇನ್ನ ಉಳಿದ ಆ 1 . 5 ಸೀಟ್ ನಲ್ಲಿ ನಾವು ಮೂವರು ಅಂಟಿ ಕೊಂಡು ಕೂತಿದ್ವಿ.
ಆ ಫ್ರೆಂಡ್ ಬಂದು ಕೂತ ಮೇಲೆ, ಆ ದಡಿಯ ಅಂತಾನೆ --- ಏನ್ ಗುರು ಮಾತಾಡ್ಕೊಂಡೆ ಆ figure ನ ಪಕ್ಕ ಕೂರಿಸಿಕೊಂಡುಬಿಟ್ಟೆ ಅಂತ....

ಅಂತು, ಬಸ್ ಇಲ್ಲದೆ ಇದಿದ್ದು, ಆ ಭಾರತ್ ಬಂದ್ಹ್, ಕಮಲ ಪಕ್ಸದೊರ ಸಮಾವೇಶ ಹಾಗು ಊರಿಗೆ ಬಂದಿದ್ದ ನನ್ನ ಫ್ರೆಂಡ್, ಇವೆಲ್ಲವೂ ಗಳ ದೆಸೆ ಇಂದ ನನಗು " ಓಗಟ್ಟಿ ನಲ್ಲಿ ಬಲವಿದೆ, ಇಕಟ್ಟಿನಲ್ಲಿ ........" ಅಂತ ತಿಳಿತು....

ಹೀಗೆ ಅಂಟಿಕೊಂಡು, ತುಮಕೂರು ಕಡೆಗೆ ನಮ್ಮ ಪ್ರಯಾಣ ಸಾಗಿತು. ಮಜೆಸ್ಟಿಕ್ ನಿಂದ ಸ್ವಲ್ಪ ಹೊರಗಡೆ ಬರ್ತಿದ್ದಹಾಗೆ ಒಂದು situational ಪೋಸ್ಟರ್ ಬೇರೆ ಕಾಣಿಸಿತು ಅದೇ " ಸಾಗುತ ದೂರ ದೂರ ".... ನಾವು ಹಾಗೆ ಸಾಗುತ್ತೆ ಅಂದುಕೊಂಡ್ವಿ ಆದರೆ ಅವತ್ ಯಾಕೋ ಬಸ್ ತುಂಬಾ ಬೇಗ ತುಮಕೂರು ಸೇರ್ಕೊಳ್ತು. ಏನು ಮಾಡೋಕೆ ಆಗಲ್ಲ....ಅಂಟಿ ಹೊರಟ ಆ ಕ್ಷಣ...ಸಾಗಿತು ತೀರ ಹತ್ತಿರ.

ಆಗೋದೆಲ್ಲ ಒಳ್ಳೇದಕ್ಕೆ.... Happens is all for Well.







--
Happy

Thursday, October 7, 2010

ಆ ನಿರೀಕ್ಷೆ.....

ಕಾದು ಕುಳಿತಿದ್ದೆ ಮನೆ ಬಳಿಯೇ ನಾನು,
ಅಕಸ್ಮಾತ್ ಅವಳು ಕಾಣುಸ್ಕೋ ಬಹುದೋ ಎನೋ.
ದೃಷ್ಟಿ ನೆಟಿದ್ದೆ ಆ ದಾರಿಯ ಮೇಲೆ,
ತಪ್ಪಿಯೂ ತಪ್ಪಿಸಿಕೊಬಾರದು ನನ್ನ ಕಣ್ಣಿಂದ ಅವಳ ಛಾಯೆ
ಸ್ವಲ್ಪ ಕೇಳಿದರು ಆ ವಯ್ಯಾರ ನಡಿಗೆಯ ಗಜ್ಜೆ ಸದ್ದು,
ಮನೆ ಹೊರಗೆ ಬೀಳ್ತಿದ್ದೆ ಎದ್ದು ಬಿದ್ದು,
ಅಲ್ಲೇ ಇದ್ದವರು, ಊರಿಂದ ಬಂದವರು, ಇದ್ದರು ಬೇಜಾನ್ ಗೆಳೆಯರು,
ಆದರು ನನ್ನ ಆ ದಿನವೆಲ್ಲ ಅವಳ ನೋಡೂದಕ್ಕೆ ಮೀಸಲು
ಬೆಳಕೀವ ಸೂರ್ಯ ಮನೆ ಕಡೆಗೆ ನಡೆದರೂ,
ಕೊನೆಯಾಗಲೇ ಇಲ್ಲ ಅವಳ ನೋಡುವ ನನ್ನ ಕಾತುರವು
ಹುಸಿಯಾಗಿಯೇ ಉಳಿಯಿತು ನನ್ನ ಆ ನಿರೀಕ್ಷೆಯು.......

ಹಹ
ಬರಲಿಲ್ಲ ಕೆಲಸಕ್ಕೆ ನಮ್ ಮನೆಯ ಕೆಲಸದವಳು
ಅಮ್ಮನ ಆಜ್ಞೆಯಂತೆ ನಿರೀಕ್ಷೆಯಲ್ಲಿ ಆಯಿತು ನನ್ನ weekend ಹಾಳು

ಮನೆ ಕೆಲಸದವರು ಸಿಗೋದು ತೀರನೆ ಕಷ್ಟ ಆಗ್ಬಿಟ್ಟಿದೆ, ಸಿಕ್ರು ಅವರು regular ಆಗಿ ಕೆಲಸಕ್ಕೆ ಬಂದರೆ ನಮ್ ಅದೃಷ್ಟ.... ನೋಡಿ ಮೊನ್ನೆ weekend ಪೂರ್ತಿ ನಮ್ ಮನೆ ಕೆಲಸದವಳಿಗೆ ಕಾಯೋದೇ ಆಯಿತು,
ಏನೋ ನನ್ನ ಹುಡುಗಿಗೆ ಕಾದಿದೃ ಒಂದು ಅರ್ತ ಇರೋದು .....