Life Goes On...

Life Goes On...
Life--- The way u Look at it

Sunday, May 12, 2013

ಅವಳ ಮಧುವೆ!!

ಆರ್ತನಾದದಿ ಮೊಳಗುತ್ತಿತ್ತು ನನ್ನ ದೂರವಾಣಿ,
ತುಂಬಾ ದಿನದ ನಂತರ ಕರೆ ಮಾಡಿದ್ಲು ನನ್ನ ಕನಸಿನ ರಾಣಿ,
ಅವಳಂದಳು - ನನ್ನ ಮಧುವೆ, Please "Come , ಬನ್ನಿ"
ಅದ ಕೇಳಿದ ನನ್ನ, ಕಣ್ಣಲ್ಲಿ "ಕಂಬನಿ"

ಇದರ ಮುಂದಿನ ಭಾಗ ...... 



ಅಚಾನಕ್ಕಾಗಿ ಎದುರಾದಾಗ ನಾವು, ಅವಳು ಬೀರಿದಳು ಮಂದಹಾಸ
ಅಂದು ನಮ್ಮ ಪ್ರೇಮಾಂಕುರದ ದಿನ
ನಾನಿಂತಿರುವೆ ಗೆಸ್ಟ್ ಸಾಲಿನಲಿ ಈಗ , ಅವಳ ರಿಸೆಪ್ಶನ್ ಎಂಬ ಪರಿಹಾಸ
ಇಂದು ನಮ್ಮ ಪ್ರೇಮಾಂತ್ಯದ ದಿನ

ಆಡುತ ಆದ ಗಾಯಕ್ಕೆ, ಅಂದು ಕಟ್ಟಿದೆ ಅವಳ ಹಣೆಗೆ ಗಾಯದ ಪಟ್ಟಿ
ಅದು ನಮ್ಮ ಬಾಂಧವ್ಯದ ಗುರುತು
ಹಸೆಮಣೆಯ ಮೇಲೆ ಕೂತವಳ ಹಣೆಯಲ್ಲಿ ಮಿಂಚುತಿದೆ ಬಾಸಿಂಗದ ಪಟ್ಟಿ
ಇಂದು ನಮ್ಮ ಬಾಂಧವ್ಯ ಅಲ್ಪವಸ್ತು

ಮಳೆ ಸುರಿಯುವ ಇರುಳಲಿ ನನ್ನ ಕೊಡೆಯಡಿಯಲ್ಲಿಯೇ ನಡೆದಿದ್ದೆವು ಒಂದಾಗಿ
ಅಂದದು ನಮ್ಮ ಒಲುಮೆಯ ಸಂಕೇತ
ಭವ್ಯ ಮಂಟಪದಡಿಯಲ್ಲಿ ಅಗ್ನಿಕುಂಡ ಸುತ್ತುತಿರುವಳು ಇನ್ನೋರ್ವನ ಜತೆ ಚಂದಾಗಿ
ಇಂದು ನನ್ನ ಒಲುಮೆಗೆ ಆಘಾತ

ಕಾಲೇಜು ಕಾರ್ಯಕ್ರಮದ ರ್‍ಯಾಂಪಿನ ಮೇಲೆ, ನನ್ನ ಕೈಹಿಡಿದು ಹೆಜ್ಜೆಹಾಕಿದ್ದಳು ನಾಚುತ ಅಂದು
ಅದು ನಮ್ಮ ಆತ್ಮೀಯತೆಯ ಪ್ರದರ್ಶನ
ಅವನು ಅವಳ ಹೆಬ್ಬೆಟಿಡಿದು ಸಪ್ತಪದಿಗೆ ಕರೆಯಲು, ಹೆಜ್ಜೆ ಹಾಕುತಿರುವಳು ನಗುತ ಇಂದು
ಇದು ನಮ್ಮ ಆತ್ಮೀಯತೆಗೆ ತಿಲಾಂಜನ

ಅಂದು ರಾತ್ರಿ, ಅಗಣಿತ ತಾರೆಗಳ ನಡುವೆ ತೋರಿಸಲು "ಅರುಂದತಿ", ಕಂಡಿಲ್ಲವೆಂದು ರೇಗಿಸಿದ್ದಳು
ಅದು ನಮ್ಮ ಸಲುಗೆಯ ಸಲ್ಲಾಪ
ಇಂದು ಸೂರ್ಯನ ಬೆಳಕಲಿ ಮನ ತೋಚಿದೆಡೆ ಕೈ ತೋರಲವನು, ಕಂಡಿತೆಂದು ತಲೆಯಾಡಿಸುತಿರುವಳು
ಇದು ನನ್ನ ಸುಲಿಗೆಯ ಕಲಾಪ

ಇಂದು ಅವಳಿಗೆ ಬಿತ್ತು ಮೂರು ಗಂಟು
ಆ ನಿಮಿಷದಲ್ಲೇ ಮುಗಿಯಿತು ನನ್ನ ಅವಳ ನಂಟು
ಅವರ ಕತ್ತಲಿ ವಿರಮಿಸುತ್ತಿದೆ ಹೂವಿನ ಹಾರ
ನನ್ನ ಮನವ ಕುಗ್ಗಿಸುತ್ತಿದೆ ದುಗುಡ ಭಾರ
ಅರ್ಥವಾಗಲೇ ಇಲ್ಲ ಅವಳಿಗೆ ನನ್ನ ಪ್ರೀತಿಯ ನಿವೇಧನೆ
ಇನ್ನೂ ನನ್ನ ಪಾಲಿಗೆ ಅವಳು ಇನಿಲ್ಲವೆಂಬ ವೇಧನೆ

ನನ್ನ ಕಲ್ಪನೆ, ಈ ಕೆತ್ತನೆ --- ಸಂತ

6 comments:

  1. ಸೂಪರ್.. ಆದರೆ "ಪ್ರೇಮಾಂತ್ಯದ ದಿನ"... ಪ್ರೀತಿ ಪ್ರೇಮ ಎಂಬುದು ಆದಿ,ಅಂತ್ಯ,ಹುಟ್ಟು,ಸಾವುಗಳನ್ನು ಮೀರಿದಂತ ಭಾವನೆ..ಅದು ಅಷ್ಟು ಸುಲಭವಾಗಿ ಕಳಚುವಂತಹ ಕೊಂಡಿಯಲ್ಲ.

    "ಅಂದು ರಾತ್ರಿ, ಅಗಣಿತ ತಾರೆಗಳ ನಡುವೆ ತೋರಿಸಲು "ಅರುಂದತಿ", ಕಂಡಿಲ್ಲವೆಂದು ರೇಗಿಸಿದ್ದಳು
    ಅದು ನಮ್ಮ ಸಲುಗೆಯ ಸಲ್ಲಾಪ
    ಇಂದು ಸೂರ್ಯನ ಬೆಳಕಲಿ ಮನ ತೋಚಿದೆಡೆ ಕೈ ತೋರಲವನು, ಕಂಡಿತೆಂದು ತಲೆಯಾಡಿಸುತಿರುವಳು
    ಇದು ನನ್ನ ಸುಲಿಗೆಯ ಕಲಾಪ" --- ಈ ಸಾಲುಗಳು ಸೂಪರ್

    ಕೆಲ ಅಲ್ಪ ಪ್ರಾಣ, ಮಹಾ ಪ್ರಾಣಗಳ ತಪ್ಪುಗಳು
    ಮಧುವೆ - ಮದುವೆ
    ಅರುಂದತಿ - ಅರುಂಧತಿ
    ದುಗುಡ - ದುಗುಢ
    ನಿವೇಧನೆ-ನಿವೇದನೆ
    ಇನಿಲ್ಲವೆಂಬ ವೇಧನೆ - ಇನ್ನಿಲ್ಲವೆಂಬ ವೇದನೆ

    "ನನ್ನ ಕಲ್ಪನೆ" -- ಇದು ಸತ್ಯಕ್ಕೆ ದೂರವಾದ ಮಾತು :)

    ReplyDelete
  2. Idu kalpaneyee??? Nage yako doubtu :P

    ReplyDelete
  3. Nanna ella comments, ninna friend na maatugala tadrupiyanteye.

    ReplyDelete
  4. @shyam -- Thanks for reading and those review points. And those gramatic errors are because of copy paste from Quill pad to blogger.
    @Chethan -- Yes kalpanene (ninne friend madhuve le trigger aythu)
    @Sudhi -- hmmm

    ReplyDelete
  5. Tumba channagedi padyada salugalu... kalpaneyo athava nija marmavo yaru thiliyaru...

    ReplyDelete