Life Goes On...

Life Goes On...
Life--- The way u Look at it

Thursday, June 6, 2013

ಜಾಲಿಬಾರು!!!

ಜಾಲಿ ಬಾರಿನಲ್ಲಿ ಕೂತು, ಅವನು ಅವಳು ಕುರ್ಚಿಗಾತು
ಆಡುತಿದ್ರು ಪೋಲಿ ಮಾತು, ಮಂದಿ ನಾಚುತಿದ್ದರು
ಅವಳ ಮೊಬೈಲ್ ಕ್ಯಾಮ್ರ ಎತ್ತಿ, ಅವರ ಜೋಡಿ ಫೋಟೋ ಒತ್ತಿ
ಫೇಸೆಬುಕ್‌ನಲ್ಲಿ ಟ್ಯಾಗ್ ಮಾಡಿ, ಸುಮ್ಮನೊಮ್ಮೆ ನಕ್ಕಳು

ಅವನ ಜೇಬಿಗೆ ಕೈಯ ಹಾಕಿ, ಒಂದು ಸಿಗರಟೆ ಹೊರಗೆ ಹೆಕ್ಕಿ
ಕಡ್ಡಿ ತೀಡಿ ಕಿಡಿಯು ಹತ್ತಿ , ಹಮ್ಮನೊಗೆಯ ಬಿಟ್ಟಳು
ಅವಳ ಕುರುಲು ಜಾರಲಾಗ, ಅವನು ಸರೆಸಲದನು ಬದಿಗೆ
ಸೆಳೆಯೊ ನೋಟ ಬೀರಲವಳು, ಅವನ ಆಸೆ ಹೆಚ್ಚಿತು

ಕರೆಯುತಿರಲು ಅವನು ಅವಳು, ಮೇಜಿನೆಡೆಗೆ ಸರ್ವರ್ ಬರಲು
ಎಣ್ಣೆ ತಾರೋಆಣ್ನ ಎನಲು, ತರಲು ಒಳಗೆ ಹೊರಟನು
ಅವಳ ಕೆನ್ನೆ ಕೈಯಲ್ಲಿಡಿದು, ತುಟಿಗೆ ತುಟಿಯ ಚುಂಬಿಸಿರಲು
ಎಣ್ಣೆ ತಂದ ಸರ್ವರ್ನಾಚಿ, ಮುಖವ ಮುಚ್ಚಿಕೊಂಡನು

ವೋಡ್ಕಾದೊಡನೆ  ಸೋಡಾ ಸೇರಿ, ಅವನಿಗೊಂದು ಚಿಯರ್ಸ್ ಹೇಳಿ
ತುಟಿಯ ನಡುವೆ ಗ್ಲಾಸನೊತ್ತಿ, ಒಮ್ಮೆ ತನ್ಮಯಳಾದಳು
ತಮಗೆ ಅರಿವೇ ಇಲ್ಲ ಕೊಂಚ, ಪಾನಸೇರಿ ಕಂಠದಂಚ
ನಶೆಯು ಏರುತಿರಲು ಅವಗೆ,  ಬಾನುಭೂಮಿ  ಅದಲು ಬದಲು
                                                                                   -- ಸಂತ 

Based on

ತೂಗುಮಂಚ

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು |
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ 
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು ||

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ 
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು |
ಸೆರಗು ಜಾರುತಿರಲು ಕೆಳಗೆ ಬಾನುಭೂಮಿ ಮೇಲು ಕೆಳಗೆ 
ಅದುರುತಿರುವ ಅಧರಗಳಿಗೆ ಬೆಳ್ಳಿಹಾಲ ಬಟ್ಟಲು ||

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು 
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೆಲಿತೋ 
ತನಗೆ ತಾನೇ ತೂಗುಮಂಚ ತಾಗುತಿತ್ತು ದೂರದಂಚ 
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ 

No comments:

Post a Comment