ತಲುಪಿದರೆ ನಮ್ಮ ವಯಸ್ಸು ಇಪ್ಪತೈದರ ಆಸುಪಾಸು
ಮನೆಯವರು ಶುರುಹಚ್ಚುವರು ಮಧುವೆ ಮಾತಿನ ರೋಸು
ಒಂದು ಹುಡುಗೀಗೆ ಬಾಳು ಕೊಡುವಷ್ಟು ಪ್ರಬುದ್ಧನೋ? ಎನ್ನುವುದು ಮನಸ್ಸು!!
ಶುರುವಿಡಲು
ಒಂಬತ್ತು ಚೌಕಗಳ ಮನೆಯಲ್ಲಿ ಗ್ರಹಗಳ ಬಂಧಿಸಿ, ಬರೆಸುತ್ತಾರೆ ಕುಂಡಲಿ
ಅದನ್ನು ವೀರಾವೇಶದಿ ಹಂಚುತ್ತಾರೆ ಆತ್ಮೀಯ ಹತ್ತು ಹಲವರಲ್ಲಿ
ಕೆಲದಿನಗಳ ನಂತರ ಪ್ರತಿಯೊಬ್ಬರು ಕೇಳುತ್ತಾರೆ ಇದರ ಬಗ್ಗೆ ಕಂಡ ಕಂಡಲ್ಲಿ!!
ಮುಂದೆ
ಹಂಚಲು ಬೇಕೆನ್ನುತಾರೆ ನಮ್ಮ ಛಾಯಚಿತ್ರ
ಇದಕ್ಕೆಂದೇ ತೆಗೆಯುತ್ತಾರೆ ಹತ್ತಾರು ಭಂಗಿ ಆಂಗಿಯಲ್ಲಿ, ಚಿತ್ರ ವಿಚಿತ್ರ
ಅಲ್ಲಿಗೆ ಶುರು, ಮಾತಾಡ್ದೆ ಒಪ್ಪಿಕೊಳ್ಳುವ ನಮ್ಮ ಮೂಖಿ ಪಾತ್ರ!!
ತರಿಸುವರು ಹತ್ತಾರು ಜಾಥಕಗಳು, ಹಲವು ರೀತಿ
ಅದರಲ್ಲಿ ಸುಮಾರು ಹೊಂದಿಕೆಯಾಗದು ನೋಡಿದ ಮೇಲೆ ರಾಶಿ, ನಕ್ಷತ್ರ ಗ್ರಹಗತಿ
ಇದು ಮನೆಯವರಿಗೆ ಪಜೀತಿ, ಆದರೆ ನಮಗೆ ಬಿಡುವಿನ ರಿಯಾಯಿತಿ!!
ಪ್ರಯತ್ನಗಳ ನಂತರ ಹೊಂದುವುದು ಯಾವುದೋ ಒಂದು
ತೋರಿಸುವರು ಅವರ ಛಾಯಾ ಚಿತ್ರವನ್ನು ತಂದು
ನಮ್ಮ ಅಭಿರುಚಿಯೇ ಅರ್ಥವಾಗದೆ ಸಂಧಿಗ್ದದಲ್ಲಿ ಸಿಲುಕುವೆವು ಅಂದು!!
ಗುಣ ಮುಖ್ಯವೆಂದರು, ಫೋಟೋದಲ್ಲಿನ ಮುಖ ನೋಡಿಯೇ ಒಪ್ಪುವರು
ಮನೆತನದ ವಿಷಯ ಜಾಲಾಡಿ, ಅಭಿಪ್ರಾಯ ನಿರ್ಧರಿಸುವರು
ಎಲ್ಲ ಮೆಚ್ಚುವಂತಿದ್ದರೆ, ಮನೆಗೆ ಬರುವೆವೆಂದು ಅವರಿಗೆ ತಿಳುಸುವರು!!
ಕೆಲವೇ ಸಾಲುಗಳಲ್ಲಿ ಇಲ್ಲಿವರೆಗೂ ಬಂದಿದೀವಿ ಆದ್ರೆ real ಆಗಿ ಈ level ಗೆ ಬರೋದು ಒಂದು ಪ್ರಹಸನವೇ ಸರಿ
ಇದೇನಿದೆ ಆ ಹುಡುಗಿ ನೋಡೋ ವಿಷ್ಯ ಇನ್ನೂ ಕ್ಲಿಷ್ಟ ಹಾಗೂ ಸ್ವಾರಸ್ಯಕರ,, ಅದು ಮುಂದಿನ ಭಾಗದಲ್ಲಿ
ಕೆಲವೇ ಸಾಲುಗಳಲ್ಲಿ ಇಲ್ಲಿವರೆಗೂ ಬಂದಿದೀವಿ ಆದ್ರೆ real ಆಗಿ ಈ level ಗೆ ಬರೋದು ಒಂದು ಪ್ರಹಸನವೇ ಸರಿ
ಇದೇನಿದೆ ಆ ಹುಡುಗಿ ನೋಡೋ ವಿಷ್ಯ ಇನ್ನೂ ಕ್ಲಿಷ್ಟ ಹಾಗೂ ಸ್ವಾರಸ್ಯಕರ,, ಅದು ಮುಂದಿನ ಭಾಗದಲ್ಲಿ
--ಸಂತ
No comments:
Post a Comment