ಅದರ ಅಪಾರತೆ ಮೀರಿಸಲು ಆ ಕಡಲಿಗೂ ಆಗದು ಸಾಧ್ಯ
ನಮ್ಮಿಬರಿಗಷ್ಟೇ ಕೇಳುತ್ತೆ ನಾವು ನುಡಿಸುತಿರುವ ಪ್ರೀತಿ ಎಂಬ ವಾದ್ಯ
ಪ್ರತಿದಿನ ಎದುರಾಗುತ್ತೇವೆ ಒಂದಿಲ್ಲೊಂದು ರೀತಿ
ನಮಗರಿವಿಲ್ಲದೆ ಬಲಗೋಳ್ಳುತಿದೆ ಒಬ್ಬರ ಮೇಲೊಬ್ಬರ ಪ್ರೀತಿ
ಅದಕ್ಕೆ ಸದ್ಯಕಿಲ್ಲ ಇತಿ ಮಿತಿ
ಆ ಕಡಲ ಅಲೆಗಳ ಸದ್ದನ್ನು ಮೀರಿಸಿ ಸಾಗುತಿತ್ತು ನಮ್ಮ ಮಾತಿನ ಲಹರಿ
ನಮ್ಮ ಸಲುಗೆಯ ನೋಡಿ ನಾಚಿ, ರವಿ ಅವಿತುಕೊಳ್ಳುತಿದ್ದ ಕಡಲಿಗೆ ಜಾರಿ
ನಮ್ಮೊಟಿಗೆ ನಕ್ಕು, ಕೆಂಬಣ್ಣ ಚೆಲ್ಲುತ್ತಿತ್ತು ಕಡಲಾಗಸದಿ
ನನ್ನ ಭಾವನೆಗಳ ನಮೋದಿಸಲು ಆ ಕಡಲಂಚಿನ ಮರಳೆ, ಹಾಳೆಗಳು
ತಡ ಮಾಡಿ ಬರುತಿದ್ದ ಅವಳು ನೋಡುವಷ್ಟರಲ್ಲಿ, ಅಲೆಗಳ ನರ್ತನದಲ್ಲಿ ಅಳಸಿರುತಿತ್ತು ನನ್ನ ಆ ಚಿತ್ತಾರಗಳು,
ಆ ನೋವ ಹೇಳಿಕೊಳ್ಳಲು ಇಲ್ಲ ಪದಗಳು,
ಕಡಲಂಚಿನಲ್ಲಿ ನಿಂತು ಕಣ್ಣು ಹಾಯಿಸಿದಲೆಲ್ಲ ಕಾಣುವುದು ಬರೀ ನೀರು,
ನನ್ನ ಮನದ ದಂಡೆಯಲ್ಲಿ ನಿಂತರೆ ಕಾಣುವುದು ಬರೀ ಅವಳು,
ದೊರದಲ್ಲಿ ಎಲ್ಲೋ ಕಡಲು ಮುಗಿಲು ಒಂದಾದ ಹಾಗೆ ಭಾಸ,
ದೂರದಿಂದ ಒಂದಾದ ಹಾಗೆ ಕಾಣುವೆವು ನಾವೂ , ಅದು ಬರೀ ಮೋಸ.......
ದೂರದಿಂದ ಒಂದಾದ ಹಾಗೆ ಕಾಣುವೆವು ನಾವೂ , ಅದು ಬರೀ ಮೋಸ.......