Life Goes On...

Life Goes On...
Life--- The way u Look at it

Wednesday, June 10, 2015

ಬಾ ಸಾಗುವ ಜೊತೆಯಾಗಿ!!

ನಮ್ಮ ಮನಕ್ಕೆಮಿಡಿಯುವವರು ದೊರೆಯದೆ ಕಂಡಂತಿತ್ತು, ಬಾಳಲಿ ಸೋಲು
ಆದರೆ ಒಲವಿನ ಬಾಣದೊಂದಿಗೆ ಮೂಡಿದೆ ಹೊಸದೊಂದು ಕಾಮನಬಿಲ್ಲು
ಬಾ ಸಾಗುವ ಜೊತೆಯಾಗಿ, ಅನುಭವಿಸುತಾ ಪ್ರಣಯದ ಮಜಲು

ಅಜ್ಞಾತ ಕೈಗಳ ಕಾಟದಿ, ನಮ್ಮ ಆಸೆಗಳಿಗೆ ಮೂಡಿತ್ತು ಗ್ರಹಣ
ಆದರೆ ನಮ್ಮ ಹೊಸ ಪಯಣ ಮೂಡಿಸಿದೆ ಭರವಸೆಯ ಹೊಂಗಿರಣ
ಬಾ ಸಾಗುವ ಜೊತೆಯಾಗಿ, ವಿಸ್ಮಯಗಳ ಆಸ್ವಾದಿಸುತ್ತಾ ಅನುಕ್ಷಣ
ಅಗಣಿತ ಕಾರಣಗಳ ಸಲುವಾಗಿ, ನಮ್ಮ ಮನವಾಗಿತ್ತು ಚಿಂತೆಗಳ ಆಗರ
ಆದರೆ ಒಡನಾಟ ಮೂಡಿಸ ಹೊರಟಿದೆ, ಮಿನುಗು ತಾರೆಗಳ ಚಿತ್ತಾರ
ಬಾ ಸಾಗುವ ಜೊತೆಯಾಗಿ, ಮಜಾ ಉಡಾಯಿಸುತ್ತಾ ತರಾತರ!!

Wednesday, January 14, 2015

ಒಂದು ಶ್ರೀನಿಯ ಪ್ರಸಂಗ!!


ಬೇಸುಕ್ಯಾಂಪಿನಲ್ಲಿ ಕೂತು ನಾವು ಗೆಳೆಯರು
ಶ್ರೀನಿಯನ್ನು ಪಾಪ ಗೇಲಿಮಾಡುತಿದ್ದೆವು
ಕಾರ್ಡ್ಸು ಆಡೋ ಶ್ರೀನಿ, ನಂಗೆ ಬೇಡಪ್ಪ ಅದು ವ್ಯಸನಿ
ಹೋಗ್ಲಿ ಹೇಳೋ ಕಹಾನಿ, ತತ್ವ ಹೇಳ್ತೀನಿ ಬನ್ನಿ

ಕಲ್ಚರಲ್ ಹಾಲೀನೊಳಗೆ ತೇಲಿ ಬಂದಳು
ಕಾವೇರಿ, ಕಾವೇರಿ, ಕಾವೇರಿ  ( ಜ್ಯೋತಿ ಬೆಲನಿ)
ಅವಳ ಅಂದದಾ ಅಲೆಗೆ ತೂಗಿದರೀ
ನಮ್ಮ ಶ್ರೀನಿ, ನಮ್ಮ ಶ್ರೀನಿ, ನಮ್ಮ ಶ್ರೀನಿ
ಘಟಾಗಿದ್ದಳು ಅವಳು ಘಾಟಿ ಇದ್ದಳು
ಬಿಟ್ಟ ಕಣ್ಣು ಬಾಯಿ ಶ್ರೀನಿ, ಘುಮ್ ಆದನು
ಅವಳ ಹಾಡಿಗಿವನು ಕೋರಸ್ ರಿಧಮ್ ಆದನು

ಗುಡ್ಡ ಗಾಡು ಚಳಿಗೆ ಅವಳು ಬೇಸರಿಸುತ್ತಾ
ತನ್ನ ದೇಹವನ್ನು ತಾನೇ ಎಳೆದಾಡುತ್ತ
ನಿಧ ನಿಧಾನವಾಗಿ, ವಿಧ ವಿಧಾನವಾಗಿ
ಹತ್ತುತಿರಲು ಅವಳು, ಶ್ರೀನಿ ಒಂದಾದನು
ಅವಳ ಬೇಸರವಳಿಸುವ  (ಬೇಸರ ಅಳಿಸುವ) ಆಸೆಲಿ ಸ್ಮೈಲು ಕೊಟ್ಟನು

ಮರು ದಿನವೂ ಶ್ರೀನಿ ನಮ್ಮ ತೊರೆದು ಹೊರಟನು
ಅವಳ (ಕವಿತಾ ಸುರ್ವೆ) ಹಿಂಡ ಹಿಂದೆ ಹೆಜ್ಜೆ ಹಾಕಿ ನಡೆದನು
ತುಂಬಾ ನಡೆದ ಮೇಲೆ ತುಟಿ ಬಿಚ್ಚಿ ನುಡಿದಳಾ ಬಾಲೆ
ಬುರ ಬುರ ಬುರ ಓಡಿ, ಶ್ರೀನಿ ಕೂಲ್ ಡ್ರಿಂಕ್ ತಂದನು
ಅವಳ ದಣಿವನು ಅರಸಿದಿವನು ವೀರನಾದನು

ಕಟ್ಟ ಕಡೆಯ, ಒಟ್ಟ ನಡೆವ, ದಿನವದು ಆ ಟ್ರೆಕ್ಕಲಿ
ಕ್ಯಾಂಪನ ನಂಟು ಮೀರಿ, ನಾವು ಹೊರಡುವಷ್ಟರಲ್ಲಿ
ನಾನೆಂತ ಪಾಪಿ, ಅವಳ ನೆನಪು ತಾಗಿ (ಮಾರಡಿ)
ಗಂಟನ್ನು ಅಲ್ಲೇ ಇಟ್ಟು ಒಳಗೆ ಓಡಿ ಹೋದನು
ಆ ನಾರಿಗೆ ಟಾಟಾ ಹೇಳಿ ಮನವ ಗೆದ್ದನು

Note:- ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ಸಾಂಗ್ ಟ್ಯೂನ್ ಅಲ್ಲಿ
-ಸಂತ



Thursday, January 8, 2015

ನಮ್ಮ ಎದರು ಮನೆಯ ನಾಯಿ


ನಮ್ಮೆದುರ್ಮನೆ ನಾಯಿ , ನಮ್ಮೆದುರ್ಮನೆ ನಾಯಿ, ನಮ್ಮೆದುರ್ಮನೆ ನಾಯಿಹೇ ನಮ್ಮೆದುರ್ಮನೆ ನಾಯಿ

ಅದರ ಮುಸುಡಿ ಹೀಗೆಯಾಕಿದೆಯೋ
ಹೇ, ಅದರ ಬಾಲ ಇಷ್ಟೇ ಯಾಕಿದೆಯೋ
ಇದಿಯಲ್ಲ ಅದರ ಮೂತಿ, ನೋಡೋಕೆ ಪಜೀತಿ
ಸಿಕ್ಕಿದೊರ ಹಿಂದೆ ಓಡೋಡಿ, ನೆಕ್ಕಿ ನೆಕ್ಕಿ ಮೂಸೊ ಇದು
ಯಾವ್ ಜಾತಿ ಕುತ್ತ, ಯಾವ್ ಜಾತಿ ಕುತ್ತ

ನಾಯಿ ಕತ್ತಿಗೆ ಚೈನ್ ಬೇರೆ ಬೇಕೇ, ಹೇ ಹೆಹೆಹೇಃ
ಭೋಗಳೋದನ್ಇದು ಮರೆತಿತು ಏಕೆ, ಹೇ ಹೆಹೆಹೇಃ
ಗೊಂಬೆಗಳ ಮಧ್ಯೆ ಇದೇನಾದ್ರೂ ಇದ್ರೆ
ಅದನ್ನು ಪತ್ತೆ ಮಾಡೋದು ಯಾರು
ಸುಮ್ನೋಡೊದೆ ಇದರ ಆಟ
ನಿದ್ದ್ಮಾಡೋದೇ ಇದರ ಚಟ

ಯಾವ್ ಜಾತಿ ಕುತ್ತ, ಯಾವ್ ಜಾತಿ ಕುತ್ತ

ಇದರ ಮುಖದಲ್ಲಿ ಏನಾದ್ರೂ ಭಾವನೆ ಉಂಟೆ, ಹೇ ಹೆಹೆಹೇಃ
ಆದ್ರೂನೂ ನಾಯಿ ದುಬಾರಿಯಂತೆ, ಹೇ ಹೆಹೆಹೇಃ
ಇದನೆನಾದ್ರೂ ಮನೆಕಾಯೋಕ್ ಬಿಟ್ರೆ
ಕಳ್ಳರನ್ನ ನೋಡಿ ಇದುವೇ ಜೂಟೆ 
ಜೊಲ್ಲ್ ಸುರಿಸುವುದೇ ಇದರ ಚಟ
ಕಣ್ಣ್ ಮಿಟುಕಿಸೋದೆ ಇದರ ಆಟ

ಹೇ ಯಾವ್ ಜಾತಿ ಕುತ್ತ, ಯಾವ್ ಜಾತಿ ಕುತ್ತ

ಅದರ ಮುಸುಡಿ ಹೀಗೆಯಾಕಿದೆಯೋ
ಹೇ ಅದರ ಬಾಲ ಇಷ್ಟೇ ಯಾಕಿದೆಯೋ
ಇದಿಯಲ್ಲ ಅದರ ಮೂತಿ, ನೋಡೋಕೆ ಪಜೀತಿ
ಸಿಕ್ದೊರ್ನೆಲ್ಲ ಮುದ್ದಾಡಿ, ನೆಕ್ಕಿ ನೆಕ್ಕಿ ಓಡೋ ಇದು


ಯಾವ್ ಜಾತಿ ಕುತ್ತ, ಯಾವ್ ಜಾತಿ ಕುತ್ತ

 --ಸಂತ

Tuesday, October 28, 2014

ಭಾವತೀರಕೆ ಯಾನ!!!!



ತಿಳಿನೀಲಾಕಾಶವು ಕಪ್ಪಾಗಿ ತಯಾರಿರಲು ಇರುಳ ಅಚ್ಚರಿಗೆ
ದಿನಚರಿಯ ಮುಗಿಸಿ ಮಲಗಿರುವನು ಆ ರವಿಯು ಬೆಚ್ಚಗೆ
ಬಾಲ ಚಂದಿರನು ವಿರಾಜಿಸುತ್ತಿದ್ದನು ನಭದಲ್ಲಿ, ಮಾದರಿಯಾಗಿ ಚೆಲುವಿಗೆ

ಆ ನೀರವದ ಆತಂಕವ ಅಳಿಸಲು ತಂಗಾಳಿ ಆಲಾಪಿಸುತಿತ್ತು
ಕಡಲ ಸೇರುವ ಕಾತರದಲ್ಲಿ ಆ ನೀರ ಹನಿಗಳು ಕಾಲಕಿತ್ತಿದ್ದವು
ಅಗೋಚರ ಜೀವ ಕೋಟಿಯ ಅಸಂಬದ್ದ ಸಂವಾದದಲ್ಲಿ ತಲ್ಲೀನವಾಗಿತ್ತು

ಈ ಸುಂದರ ಸನ್ನಿವೇಶ ಮೂಡಿರಲು
ನದಿಯ ಪಕ್ಕದಲ್ಲಿ ನಾವು ಸಂಭಾಷಣಿಯಲ್ಲಿ ಮುಳುಗಿರಲು
ಆಗಾಗ ಕಂಡ ಅಚ್ಚರಿಗಳ ಬುತ್ತಿಯೇ ಈ ಕೆಳಗಿನ ಸಾಲುಗಳು

ಚಂದಿರನ ಮೀರಿಸುವಂತಿತ್ತು ಆ ಅಸಂಖ್ಯ ಚುಕ್ಕಿಗಳ ಹೊಳಪು
ನಾವೇನು ಕಮ್ಮಿ ಎನ್ನುವಂತಿತ್ತು ಮಿಂಚುಳ್ಳಿಗಳ ಮಿಂಚಿನ ಸೊಗಸು
ಆದರೆ ಅವುಗಳ ನಾಚಿಸುವಂತಿತ್ತು ಆಗಾಗ ಮಿಟುಕಿಸಲು ಅವಳ ಕಣ್ಣು

ಹಧ ಮೀರದೆ ತಂಗಾಳಿಯೊಟ್ಟಿಗೆ ತೂಗುತ್ತಿರುವ ಬಳಕುವ ಬಳ್ಳಿಗಳಂತೆ
ಮಧ ತೋರದೆ, ಇರುಳ ವಿಸ್ಮಯವ ತೋರಿಸುತ್ತಿರುವ ಆ ಮೋಡಗಳಂತೆ
ಸಂಭಾಷಣೆಯ ಲಯಕ್ಕೆ ತರುತಿದ್ದವು ಅವಳ ಸ್ಪುಟವಾದ ಮಾತುಗಳು

ಮೀನುಗಳು ಜಿಗಿದು ಮತ್ತೆ ನೀರಿಗೆ ಬಿದ್ದು, ಮೂಡಿಸುವ ಕ್ಷಣಿಕ ಗದ್ದಲದಂತೆ
ಕಲ್ಲು ಅಡ್ಡಾಗಿ ತಿಳಿನೀರ ಹರಿವಿನಲ್ಲಿ ಮೂಡುವ ಸ್ಠಾನಿಕ ಗಲಭೆಯಂತೆ
ಆಗಾಗ ಸಿಡಿದು ಓಮ್ಮೆಲೆ ತಣ್ಣಗಾಗುತಿತ್ತು ಅವಳ ಆ ತುಸು ಮುನಿಸು

ವಿಶಿಷ್ಟ ಕೆಲಸವಲ್ಲದಿದ್ದರು ಬಂದಂದು ಮುದ್ದು ಮುಖವ ತೋರುವ ಚಂದ್ರನಂತೆ
ಕತ್ತಲಲ್ಲಿ ಕಪ್ಪಾಗೆ ಕಂಡರು ವರ್ಣಮಯವಾಗಿರುವ ನಿಶಾಚರ ಪ್ರಾಣಿಗಳಂತೆ
ಅಸಧಾರಣ ಅನುಭವಗಳ ಅಗರವಾದರು, ಅಮಾಯಕ ಭಾವ ಮೂಡುತಿತ್ತು ಅವಳ ಮುಖದಲ್ಲಿ

ಯಾರಿಟ್ಟ ಕಚುಗುಳಿಗೋ ಅಥವ ಇರುಳ ಚಳಿಗೂ, ಅಲುಗಾಡುವ ಎಲೆಗಳಂತೆ
ಆಗಸದಿ ಮಿಂಚಿ ಮಿನುಗಿ ಅನಂತದಲ್ಲಿ ಲೀನವಾಗುವ ಉಲ್ಕೆಗಳಂತೆ
ಹಗುರ ಹಾಸ್ಯಗಳಿಗೆ ಮಿಡಿದಾಗ ಆಗಾಗೆ ಕೇಳುತಿತ್ತು ಅವಳ ಮುಗ್ದ ನಗು

ಚಂದಿರನ ಪ್ರತಿಬಿಂಬವನ್ನು ಉಡುಗೊರೆಯಂತೆ, ನದಿಯು ಹೊತ್ತೊಯ್ದಂತೆ ಭಾಸವಾಗುತ್ತಿರಲು
ಅಶರೀರ ಗೆಳತಿಗಾಗಿ, ತಂಗಾಳಿಯು ಸುಮಗಂಧವ ಹೊತ್ತೋಯ್ದಂತೆ ಭಾಸವಾಗುತ್ತಿರಲು
ಮುಕ್ತ ಮನಸಿನ ನಮ್ಮ ಸಂಭಾಷಣೆ ಯಾವುದೋ ಭಾವತೀರಕೆ ಯಾನದಂತೆ ಭಾಸವಾಗುತಿತ್ತು....


Monday, July 28, 2014

ಅಸಾಮಾನ್ಯ "ಸ್ಮೃತಿ"

ಆಗಷ್ಟೇ ಇಂಜಿನಿಯರಿಂಗ್‌ನಲ್ಲಿ ಕ್ಯಾಂಪಸ್ ಸೆಲೆಕ್ಶನ್ ಆಗಿ ನಿರಾಳವಾಗಿದ್ದ ಸಮಯದಲ್ಲಿ , ಬಂದು ಕೈ ಹಿಡಿದು ಹೊಸದೊಂದು ಭ್ರಮಾಲೋಕಕ್ಕೆ ಎಳೆದೊಯ್ದವರ ನೆನಪಿನಲ್ಲಿ........

ಮುರಿವಷ್ಟು ತೆಳುವಿದ್ದರು, ನೀನು ಬಹಳ ಗಟ್ಟಿಮುಟ್ಟು
ವಿಶಿಷ್ಟವೆನಿಸುವಂತಿತ್ತು ನಿನ್ನ ಆ ಮೈಕಟ್ಟು

ಅಚ್ಚರಿ ಎನ್ನುವಂತಿತ್ತು ನಿನ್ನ ಕೋಮಲವಾದ ಮೈಸಿರಿ
ವರ್ಣಮಯವಾಗಿತ್ತು ನಿನ್ನ ಮುಖ ಚಂದ್ರದ ಹೊಳಪಿನ ಪರಿ

ನನ್ನ ಒಂಟಿತನವ ಅಳಿಸಲು ನಿನ್ನ ಬರುವೆ ಆಧಾರ
ಹೊಸದೊಂದು ಭಾಂದವ್ಯದ ಉಗಮಕ್ಕೆ ನಿನ್ನ ಕೊಡುಗೆ ಅಪಾರ

ನಿನ್ನ ಸೊಗಸಾದ ಸುದನಿಯಲ್ಲಿ ಎಳಿಸುತಿದ್ದೆ ಅನುದಿನ
ನಿನ್ನ ಕಂಠಸಿರಿಯ ಗಾನ ಕೇಳದೆ ಮಲಗಿದಿಲ್ಲ ಒಂದೆಒಂದು ದಿನ

ನೀನೇ ನನ್ನ ಅಷ್ಟೂ ಮಾತುಗಳಿಗೆ ಆಧಾರ, ಆಗರ
ನನ್ನ ಮಾತುಗಳ ಬೆಲೆ ತಿಳಿಸಿಕೊಟ್ಟಿದ್ದೆ ನೀ ಮಾಡಿದ ಉಪಕಾರ

ನನ್ನ ಬಾಳಿನ ಅಂಧಕಾರದಲ್ಲಿ  ಬೆಳಕಿತ್ತ ದೀವಟಿಗೆ ನೀನು
ನನ್ನಲ್ಲಿ ಆಲೋಚನೆಗಳ ಬರ ಮೂಡಿದಾಗ ಜ್ಞಾನದ ಚಿಲುಮೆ ನೀನು

ನನ್ನ ಜತೆ ನಡೆಯುತಿದ್ದ ನೆರಳಿನಂತಿದ್ದೆ ನೀನು
ನನ್ನ ಇರುವಿನ ಸಂಕೇತವಾಗಿದ್ದೆ ನೀನು

ಅಗಾಗ ನೀನು ನುಲಿಯಲು ನನ್ನ ಮಡಿಲಲಿ
ಪುಳಕದಿ ನಡುಕ ಮೂಡುತಿತ್ತು ಮೈಮನಸಲ್ಲಿ

ಕಲ್ಪನೆಗಳ ಕಲ್ಪಿಸಿದ ಕಲ್ದವಸಿ ನೀನು
ಕನಸ ಕಾಣುವುದ ಕಲಿಸಿದವಳು ನೀನು

ನೀನು ನೆನಪಿಸದ ಒಂದೇ ಒಂದು ಕ್ಷಣವಿಲ್ಲ
ನಿನ್ನ ಹೊರತಾಗಿ ಬೇರೆ ನೆನಪುಗಳ ಆಗರವಿರಲಿಲ್ಲ

ಆದರೂ

ಬಯಸದೆ ಬಂತಂದು ನಮ್ಮ ಅಗಲಿಕೆಯ ಕ್ಷಣ
ಪ್ರತಿಕ್ರಿಯಿಸುವುದರೊಳಗೆ ಮುಗಿದಿತ್ತು ವಿಷಾದದ ಔತಣ

ಇದು ಗತಿಸಿ ಕಳೆದವು ಹಲವು ವರುಷ
ಆದರೂ, ಮರೆತಿಲ್ಲ ಅಂದಿನ ಒಂದೇ ಒಂದು ನಿಮಿಷ

ನಿನ್ನ ನಂತರ ನನ್ನ ಬಾಳಿಗೆ ಕಾಲಿಟ್ಟರು ಮತ್ತಿಬ್ಬರು
ನಿನಗಿಂತ ಮಿಗಿಲು ಎಂದು ಜನರೆಂದರು,
ಆದರವರು (ನನ್ನ ಪಾಲಿಗೆ) ನಿನ್ನೊಂದಿಗೆ ಹೋಲಿಕೆಗೆ ಅನರ್ಹರು

ಆ "ನೀನು" ಇಲ್ಲಿರುವರು ನೋಡಿ


Tuesday, June 3, 2014

ಕಾಡುವುದು ಕಾಡುಮನೆ!!

ಸಕಲೇಶಪುರದ ರಮಣೀಯ ಕಾಡುಗಳಲ್ಲಿ ಕಳೆದ ಆ ಅವಿಸ್ಮರಣೀಯ ಕ್ಷಣಗಳ ನೆನಪಿಗೆ ಈ ಸಂಕ್ಷಿಪ್ತ ಸಾಲುಗಳು.
ಆ ವಿಶೇಷ ಅನುಭವದ ರೂವಾರಿಗಳಾದ, ಎಲ್ಲರನ್ನೂ ಕೆಳಗಿನ ಸಾಲುಗಳಲ್ಲಿ ನಾಮೋದಿಸಲಾಗಿದೆ.



ಅಹ ಅಪರೂಪದ ಕಾಡುಗಳು, ಎಷ್ಟು ಸುಮನೋಹರ
ಇನ್ನಾವುದೇ ಜಾಗಗಳಿಗೆ ಹೋಲಿಸಲಾಗದಷ್ಟು ಅನುಪ
ಅದ್ಭುತ ಅನುಭವಗಳ ನಮ್ಮ ಅನ್ವೇಷಣೆಗೆ ಇದರಿಂದ ಸಿದ್ದಹಾರ್ತ
ಕಾಡುಗಳ ಆಘಾದತೆಯ ಮುಂದೆ ನಾವು ಲತೆಗಳ ಪರ್ಣ
ಆದರೂ ಅವನ್ನು ಮೆಟ್ಟಿ ಸಾಗಿದ ನಮಗೆ ಹೇಳಲಾಗದ ಸಂತೋಷ
ವಿನಯದಿಂದಲೇ ದಾಟಿದೆವು ಸಾಗರದಂತಹ ಪರ್ವತ ಶ್ರೇಣಿಗಳ

ಗುರುವಿಲ್ಲದಿದ್ದರೂ ಸಾಗಿ ಸೇರಿದವು, ಸೇರಬೇಕಾದ ನಮ್ಮ ಗುರಿಯ

Wednesday, March 12, 2014

"ನುಡಿ ನಮನ"


ರಾಜ್ಯಾಂಗದಲಿ ಕರೆಯುವರು ನಮ್ಮನು ರಾಷ್ಟ್ರ ಪ್ರಾಣಿ
ಆದರೆ ಪ್ರತಿ ರಾಜ್ಯದಲ್ಲೂ ನಮ್ಮ ನೆಲೆಯಲ್ಲಿ ಗುಡುಗುವವು ಹಲವು ಗಣಿ
ಅವುಗಳ ಅಳಿಸಿ ನಮ್ಮನುಳಿಸುವ ನಿಮ್ಮ ಛಲಕೆ ನಾವು ಚಿರಋಣಿ

ಜನರು ಕಟ್ಟಿರುವರು ನನಗೆ ವನರಾಜನೆಂಬ ಹಣೆಪಟ್ಟಿ
ಆದರೆ ನನ್ನ ನೆಲೆಯನ್ನೇ ಸಿಳಿಸಿ ಸಾಗುವವು, ರಸ್ತೆ, ರೈಲುಪಟ್ಟಿ
ಅವುಗಳ ನಿಯಂತ್ರಿಸಲು ಹೊರಟಿರುವ ನಿಮ್ಮದು, ಅಸಾಮಾನ್ಯ ಶಕ್ತಿ

ಜನರ ಬಣ್ಣನೆಯಲ್ಲಿ ನಾವು ಹಲವು ದೇವರುಗಳ ವಾಹನ
ಆದರೆ ಅದೇ ಭಕ್ತರ ಬೇಟೆ, ಉರುಳುಗಳಿಂದಲೇ ನಮ್ಮ ಹರಣ
ಇವುಗಳ ತಡೆಯಲು ನಡೆಸುತ್ತಿರುವ ನಿಮ್ಮ ಪ್ರಯತ್ನಕ್ಕೆ ನಮ್ಮ ನಮನ

ರಾಷ್ಟ್ರೀಯ ಮಟ್ಟದಲ್ಲಿ ನಮ್ಮನುಳಿಸುವ ಬಗ್ಗೆ ಭರ್ಜರಿಯ ಕೂಗು
ಆದರೆ ನಮ್ಮ ಸಂರಕ್ಷಿತ ಪ್ರದೇಶಗಳು ತುಂಬಾ ಇಲ್ಲವೆನ್ನುವುದೇ ಕೊರಗು
ಅವುಗಳ ಬರುವಿಗಾಗಿ ಶ್ರಮವಹಿಸ್ತುತ್ತಿರುವ ನಿಮ್ಮನ್ನು ನೆನೆದರೆ ಹಿಗ್ಗು

ಜೈವಿಕ ಸಮತೋಲನದ ಉಳಿವಿಗೆ ನಾವು ತುಂಬಾ ಅವಶ್ಯಕ
ಆದರೆ ನಮ್ಮದೇ ಜಾಗಗಳಲ್ಲಿ ನಿರ್ಮಿಸುವರು ವಿದ್ಯುತ್ ಸ್ಥಾವರಗಳ, ಅನೇಕ
ಅವುಗಳ ನಿಲ್ಲಿಸಲು ಸೆಣೆಸುತ್ತಿರುವ ನಿಮಗೆ ವಂದನೆಗಳು, ಹೃತ್ಪೂರ್ವಕ

ನಮ್ಮ ಉಳಿವಿನ ಸಂಧ್ಯಾ ಸಮಯದಲ್ಲಿ
ನಮ್ಮ ಸಂತತಿಯ ಪರ್ವ ಮುಗಿಯುವ ಹಂತದಲ್ಲಿ
ಭರವಸೆಯ ಉದಯರಾಗವ ಹಾಡುತ್ತಿದೆ ಈ "ಸಂಜೆಯ ಗುಬ್ಬಿ"

ನಮ್ಮ ಉಳಿವಿಗೆ ಆಸರೆ ನೀವು
ನಮ್ಮ ಅಳಿವನು ಅಳಿಸುವ ಭರವಸೆಯು ನೀವು
ನಿಮ್ಮ ಬಗೆಗಿನ ಭಕ್ತಿ ನಮ್ಮಲ್ಲಿ
ನಿಮ್ಮ ಹರಿಸುವ ಪ್ರಾರ್ಥನೆ ಅವನಲ್ಲಿ!!


ಉತ್ಪ್ರೇಕ್ಷೆಮಾಡಿ ಬರೆದಿದಿಲ್ಲ ಒಂದೇ ಒಂದು ಪದವು
ಹೃತ್ಪೂರ್ವಕವಾಗೆ ಬರೆದದ್ದು ಮೇಲಿನ ಪ್ರತೀ ಸಾಲು
.

Monday, February 24, 2014

ಕಾಲ್ಪನಿಕ ಸತ್ಯ

ಅದೊಂದು ದಿನ ಉರಿಗೆ ಬಸ್ನಲ್ಲಿ ಹೋಗುವಾಗ ನಡೆದ ಘಟನೆ. ನನ್ನ ಮುಂದಿನ ಆಸನದಲ್ಲಿ ಕುಳಿತಿದ್ದ ಒಬ್ಬ ಅನಾಮಿಕ ಹುಡುಗಿಯ ಮುಖ, ಆ ಆಸನದ ಒಂದು ಕಿಂಡಿಯಿಂದ  ಕಾಣುತಿತ್ತು. ಆ ದೃಶ್ಯದ, ಅತಿಶಯದ ವರ್ಣನೆಯೇ ಈ ಕೆಳಗಿನ ಸಾಲುಗಳು.  




ಬೆಳಕುಕರಗುತಿದ್ದ ವೇಳೆಯಲಿ ಸಾಗುತಿತ್ತು ನಮ್ಮ ಪಯಣ
ಚಂದಿರನ ಬೆಳ್ಳಿ ಬೆಳಕಲಿ ಹೊಳೆಯುತ್ತಿತು ಒಂದು ವದನ
ನಿಸ್ತೇಜ ವಸ್ತುಗಳ ಜಾತ್ರೆಯಲಿ ಸೊರಗಿದ್ದ ನನಗೆ ಅದ ಕಂಡು ಸಮಾಧಾನ

ಸಪ್ಪೆ ಸಪ್ಪೆಯ ಸನ್ನಿವೇಶಗಳು ಆವರಿಸಿರಲು ಸುತ್ತಲು
ಕಾಣಲವಳ ವೇಷಭೂಷಣದಲ್ಲಿನ ಬಣ್ಣದ ಮಜಲು
ಕಣ್ಣಲಿ ಮೂಡಿಸಿತು ಸೆಳೆಯುವ ಕಾಮನಬಿಲ್ಲು

ಸ್ವಾತಿಮುತ್ತನ್ನು ಹೊತ್ತ ಚಿಪ್ಪನು ತೆರೆದಿಟ್ತಂತೆ ಕಾಣುತಿತ್ತು  ಅವಳ ಕಣ್ಣುಗಳು
ಚಂಚಲದಿ, ಕೊಳದ ಮೀನಿನಂತೆ ಅತ್ತಿತ್ತ ಓಡಾಡುತಿದ್ದವು ಕಣ್ಣ ಗೊಂಬೆಗಳು
ಇವುಗಳ ಕಂಡು ಮನದ ಮುಗಿಲಲಿ ಮೂಡಿದಂತಿದ್ದವು ಕೋಲ್ ಮಿಂಚುಗಳು

ಕುಣಿಯುತ ಅದರುತ ಸಾಗುವ ಬಸ್ಸಿನಲ್ಲಿ
ಓಲೆಯ ಜುಮುಕಿಯೂ ಜೀಕುತಿರಲು ಅವಳ ಕಿವಿಯಲಿ
ಆ ಚೆಲುವ ಕಂಡ ಮನವು ತೂಗಿದಂತಿತ್ತು ಜೋಕಾಲಿಯಲಿ

ಸಂಜೆ ಮಬ್ಬಿನಲಿ, ಬೆಳಕ ಚೆಲಲ್ಲು ಎದುರು ಬರುವ ವಾಹನಗಳು
ಅವಳ ಮೂಗುತಿಯ ಸೋಕಿ ಹೊಮ್ಮಿಸುತಿದ್ದವು ಹೊಂಗಿರಣಗಳು
ಅದು ಕಂಡು ತಲೆಯಲ್ಲಿ ತೇಲಲಾರಂಬಿಸಿದವು ಕಲ್ಪನೆಯ ಗಾಳಿಪಟಗಳು

ಚಂದಿರನ ಬೆಳಕ ಸೋಕಿದ ಅವಳ ಮುಖವು ಹಿನ್ನೆಲೆಯಾಗಿರಲು
ಬೀಸುವ ತಂಗಾಳಿಯು ಅವಳ ಮುಂಗುರುಳು ಜಾರಿಸಲು
ಆ ಸೊಗಸಾದ ದೃಶ್ಯಕಾವ್ಯ ಸಾಕಿತ್ತು ಎಂಥವರನ್ನೂ ಕೆರಳಿಸಲು


ಕಂಡಿರಬಹುದಾದ ವಿಲಾಸಗಳು ಕನಸಲಿ,
ನಡೆಯುತಿದ್ದವು ದೃಶ್ಯಕಾವ್ಯಗಳಂತೆ ನನಸಾಗಿ
ಕನಸುಗಳು ನನಸಾದರೆ ಇಷ್ಟು ಸಲೀಸಾಗಿ
ಕೋರುವೆನು ಆಗಲೆಂದು ಇನಷ್ಟು, ಸಾಲುಸಾಲಾಗಿ!!






Monday, November 18, 2013

ಉದ್ವಿಗ್ನಗೊಳಿಸಿದ ಆ ನೋಟ!!

ಮೊನ್ನೆ ಉರಿಗೆ ಹೋಗುವಾಗ ಬಸ್ನಲ್ಲಿ ನಡೆದ ನೈಜ ಘಟನೆ.
ತನ್ನ ನೋಟದಿಂದಲೇ, ನನ್ನೊಳಗೆ ಹಲವು ಕುತೂಹಲಕಾರಿ ಆಯಾಮಗಳ ತೆರೆಯಿಸಿದ ಆ ಅನಾಮಿಕ ವ್ಯಕ್ತಿಗಾಗಿ ಈ ನುಡಿ ಸಾಲುಗಳು

ಅಪರಿಚಿತೆ 
ಅವಳು
ಆದರೂ ಹೊತ್ತಿಸಿದಳು 
ಎನ್ನ ಮನದಲಿ ಚಿತೆ,
ಅಜ್ಞಾತ
ಆ ಜಾಗವು
ಆದರು ಅವಳ ಇರುವು
ಆಗಿಸಿತು ಅದನ್ನು ಪರಿಚಿತ

ಹುಡುಕುತಿರಲು 
ನನ್ನ ಕಣ್ಣುಗಳು 
ಸ್ಪಂದಿಸಬಹುದಾದ ನೋಟಗಳ
ಸುತ್ತಲು,
ಹಿಡಿದಿಟ್ಟವು
ಅವಳ ಕಾಡಿಗೆ ತೀಡಿದ ನಯನಗಳು
ನೆನಪಿಸಿ ಚಿತ್ರಕಾರರ ರೇಖಾಚಿತ್ರಗಳು
ನನ್ನ ಮನವು

ಹೊಳೆಯುತಿತ್ತು,
ಅವಳ ಕಣ್ಣುಬ್ಬುಗಳ ನಡುವಿನ ಚುಕ್ಕಿ,
ನೋಡುಗರ ಕಣ್ಣ ಕುಕ್ಕಿ
ಸೊರಗುತಿತ್ತು.
ಮಿನುಗುತಿತ್ತು
ಆ ಮೊನಚು ಮೂಗಿನ ಬದಿಯಲ್ಲಿ ಮೂಗುತಿ,
ಎಂಥಾ ಚೆಲುವು ಎಂದು ನನ್ನ ಮತಿ
ಕನವರಿಸುತಿತ್ತು 

ತವಕ,

ನೋಡಲವಳ ಚೆಲುವ
ಮನಸ್ಸು ತೃಪ್ತಿಯಾಗುವ
ತನಕ
ಆದರೆ ಅಳಕು
ಎಲ್ಲಿ ಅವರ ಕಡೆಯವರು
ಅಕಸ್ಮಾತ್ ನೋಡುವರೋ
ನನ್ನ ಲುಕ್ಕು

ಬೀರುತಿದ್ದಳು
ಆಗಾಗ ಅವಳು ಮಂದಹಾಸ
ಕೇಳಲಾಗಿ ಯಾವುದೋ ಪರಿಹಾಸ
ಮಾತುಗಳು.
ಹಗುರಾಗಿ
ಹೃದಯ ಕುಣಿಯುತಿತ್ತು,
ನನಗಾಗಿ ಆ ಮಂದಹಾಸ ಮೂಡುತಿತ್ತು
ಅನಿಸಲಾಗಿ.

ನಾಚುತಿರಲು

ಅಷ್ಟು ಜನರ ನಡುವೆ 
ಅವಳ ಸುಂದರ ಮುಖವೇ
ನೋಡಲು,
ಬಿಗುಮಾನವಿಲ್ಲದೆ 
ನೋಡುತಿದ್ದಳು
ನನ್ನ ಕಡೆಯೇ ಅವಳು
ಕಣ್ಣು ಮಿಟುಕಿಸದೇ

ತಳಮಳ 

ನೋಡುತಿರಲು ಅವಳು ನನ್ನನ್ನೇ
ತದೇಕ ಚಿತ್ತದಿ ಒಂದೇ ಸಮನೆ
ಕಣ್ಣು ಮಿಟುಕಿಸದೆ ಪಳಪಳ
ಅದಕ್ಕೆ 

ಪರೀಕ್ಷಿಸಿದೆ ಅವಳ ನೋಟ ಕದ್ದು ಮುಚ್ಚಿ 
ಆದರೂ ನನ್ನನ್ನೇ ನೋಡುತಿದ್ದಳು ಚುಚ್ಚಿ
ಯಾಕೆ?

ಅನುಮಾನ

ಮೂಡುತಿತ್ತು ನನ್ನ ಒಳಗೆ,
ಇರುವೆನೋ ನಾನು ಬೆರೇರು ಒಪ್ಪುವ ಹಾಗೆ
ಎನುತ್ತಿತು ನನ್ನ ಮನ
ಅನುಮಾನ
ತಿಳಿಯದೆ ಕಾರಣ ಅವಳ ಈ ನೋಟದ ಪರಿ,
ಕಾಣುವೆನೋ ಏನೋ ಚಿತ್ರ ವಿಚಿತ್ರವಾಗಿ,
ಎಂಥ ಅವಮಾನ!! 

ಸಿಗಲೇ ಇಲ್ಲ
ನನ್ನ ಅನಕುಲಕ್ಕೆ ಒಂದೂ ಕ್ಷಣ
ತೀರಿಸಲು ನಮ್ಮ ಕಣ್ಣ ನೋಟದ ಸಲುಗೆಯ ಋಣ
ಆ ಯಾನದಲೆಲ್ಲ 
ಉಳಿಯಿತು
ಕೊಡಬೇಕಿದ್ದ ನನ್ನ ಮಂದಹಾಸದ ಬಹುಮಾನ
ಎಲ್ಲೆ ಮೀರಿದ ನನ್ನ ಸಾಚಾತನದ ಬಿಗುಮಾನ
ಅದನ್ನ ತಡೆಯಿತು

ಮುಗಿಯಿತು

ನನ್ನ ಅವಳ ಅಂದಿನ ಪಯಣ
ಉಳಿಸಿ ನಮ್ಮ ನಡುವೆ ನೆನಪುಗಳ, ನಯನ
ಮೆರೆಯಿತು
ಅಪರಿಮಿತ
ಆಸೆಯಿದ್ದರೂ ಹೇಳಬೇಕೆಂದು ಕೆಲವು ಮಾತು
ಅಘೋಚರ ಬಂಧನದಿ ಏನು ತೋಚಲಿಲ್ಲ ಅಷ್ಟು ಹೊತ್ತು
 ಅವಳು ಈ ಪದಪುಂಜಕೇ ಸೀಮಿತ



Thursday, October 24, 2013

ಶಾಲೆಯಲ್ಲಿನ ಪ್ರಸಂಗ!!

Actual Song is here, listen to it and then read the below lines.
(Though its not that great) -- Youtube

ಬೇಂದ್ರೆ ಅವರ ಹಾಡು ಕೆಡಿಸಿದಕ್ಕೆ ಕ್ಷಮೆ ಇರಲಿ!!



ಆಗ ಶಾಲೆಯ ಗಂಟೆ 
ಅಂತು ಟಾಂಟನಣ
ಗೆಜ್ಜೆ ಸದ್ದು ಕೇಳಿಸುತಲಿತ್ತು
ಝಂ ಝಣಣ ನಾನಾ
ನೆರೆದ ಕ್ಲಾಸು ಕನವರಿಸುತಿತ್ತು
ಹ ಮೇಡಮ್ ಬಂದ್ರು ಹ ಮೇಡಮ್ ಬಂದ್ರು!!

ಆಗ ಶಾಲೆಯ ಗಂಟೆ 
ಅಂತು ಟಾಂಟನಣ!!

ಹಲವು ಗಂಟೆಯಿಂದ, ಒಂದ
ಮೇಲೆಒಂದು ಪಾಠ
ಏಕೆ ಇಲ್ಲಿ ಬಂದೆನೆಂದು
ಕಾಡುತಿಹುದು ಎನ್ನ
ತನಗೆ ತಾನೇ ತೂಗುತಿಹುದು,
ತೇಲುತಿಹುದು, ಈ ಮನ
ಈ ಮನ

ಆಗ ಶಾಲೆಯ ಗಂಟೆ 
ಅಂತು ಟಾಂಟನಣ!!

ಅಷ್ಟರಲ್ಲೇ ನಮ್ಮ ಮೇಡಮ್ 
ಒಳಗೆ ಬರುವಂತಾಗಿ 
ಯಾವುದೋ ಹೂವ ಗುಚ್ಛ
ಅವರ ಜಡೇಲಿ ತೂಗಿ
ನಿದ್ದೆಯಿಂದ ಎದ್ದೆ ನಾನು 
ಅದರ ಘಾಟು ತಾಗಿ 
ಘಾಟು ತಾಗಿ

ಆಗ ಶಾಲೆಯ ಗಂಟೆ 
ಅಂತು ಟಾಂಟನಣ!!

ಅವರ ಬೆಡಗ ಸೊಬಗು ಕಂಡು, 
ಅರಳಿತೆನ್ನ ಕಣ್ಣ
ಅವರ ದನಿಯ ಪಾಠ ಕೇಳಿ, 
ಗಮನ ಹುಟ್ಟಿತಣ್ಣ
ಅವರು ಡಿಕ್‌ಟೇಟ್ ಮಾಡಲಾಗಿ, 
ನೋಟ್ಸು ಬರೆದೆನಣ್ಣ
ನೋಟ್ಸು ಬರೆದೆನಣ್ಣ

Friday, September 13, 2013

ಮಧುವೆಯೆಂಬ ಪ್ರಹಸನ - ೨



ಅಪ್ಪ ಟಕ್ಮಾಡು ಅಂತ, ಅಮ್ಮ ತಲೆ ಬಾಚು ಅಂತ
ಅಕ್ಕ ಕ್ರೀಮ್ ಹಚ್ಕೊಂತ, ಬಾವ ಶೂ ಹಾಕು ಅಂತ
ಕಡೆಗೆ ಪ್ರದರ್ಶನದ ಗೊಂಬೆಯಂತಾಗಲು, ಹುಡುಗಿ ನೋಡಲುಹೋರಡುವುದೂ ಅಂತ
(ಅದಕ್ಕೆ ಹಿಂದೆ ಹೇಳಿದ್ದ್ರು ಕಾಗೆ ಮರಿ ಕಾಗೆಗೆ ಮುದ್ದು ಅಂತ)

ಅವರ ಮನೆಗೆ ಹೊರಡಲು ನೋಡುವರು ಶುಭ ಮುಹೂರ್ತ
ಗಾಡಿ ಹತ್ತಿಇಳಿಯುವವರೆಗೆ, ಪಾಲಿಸಬೇಕಾದ ಪರಿ ಪಾಠಗಳ ಭೋರ್ಗೆರೆತ
ಮನಸಿನಲ್ಲಿ ವಿಚಿತ್ರ ಅಭಿಪ್ರಾಯ ಆಲೋಚನೆಗಳ ಆರ್ತ ಮೊರೆತ

ಹಾಗೂ ಹೀಗೂ
ಬಂದು ಸೇರಲು ಹುಡುಗಿಯವರ ಮನೆಯ ಬಳಿ
ಎಲ್ಲರೂ ಇಳಿದ ಮೇಲೆ ಕಡೆಗೆ ಇಳಿಯುವುದೇ ನಮ್ಮ ಬಳುವಳಿ
ಅಲ್ಲಿ, ಇನ್ನೂ ಶುರು ಉಭಯ ಕುಶಲೋಪರಿಗಳ ಹಾವಳಿ

ಸುತ್ತ ಕುಕ್ಕುವ ಹತ್ತು ಕಣ್ಣ್ ನೋಟಗಳೋಡನೆ, ಮನೆಯೊಳಗೆ ಪ್ರವೇಶ
ಪೂರ್ವನಿಯೋಜಿತ ಆಸನದ ಮೇಲೆ ನಾವು ಕೂರಬೇಕೆಂಬ ಆದೇಶ
ಅಲ್ಲಿಂದ ಶುರು ಮನೆಯವರು ತೋರುವ ಉಪಚಾರಗಳ ವೀರಾವೇಶ

ಕುಡಿಯಲು ಕೊಡುವರು ಯಾವುದೋ ಒಂದು ಪಾನೀಯ
ಅದು ಕುಡಿಯುವ ಅಷ್ಟೂ ಹೊತ್ತು, ಅಲ್ಲಿ ರಸಪ್ರಶ್ನೆಗಳ ವಿನಿಮಯ
ಕುಡಿದ ಗ್ಲಾಸ್ ತೆಗೆದು ಅಣಿ ಮಾಡಿದರೆ, ಶುರುವೆಂದು ಪ್ರದರ್ಶನದ ಸಮಯ

ಕಾಲ್ಪನಿಕ
ಕೇಳುವ ಗೆಜ್ಜೆಯ ಸದ್ದಿಗೆ, ಎದೆಯಲ್ಲಿ ಕಂಪನ
ಸೇದಲು ಮಲ್ಲಿಗೆಯ ವಾಸನೆ, ಮನದಲಿ ಸ್ಪಂದನ
ಅವಳ ಬಗೆಗಿನ ಕೌತುಕ ನಮ್ಮಲ್ಲಿ ಮೂಡಿಸುವುದು ಸಿಂಚನ

ವೈಯ್ಯರದ ನಡುವಿರಲು, ನಾಚಿಕೆಯ ನಡಿಗೆಯಲಿ
ಸಿಂಗಾರದ ಗೊಂಬೆಯಂತೆ, ಬಂದು ಕೂರಲು ನಮ್ಮೆದುರಲಿ
ಕನಸು ನನಸಾಗ ಬಹುದೆಂದು ಮನವು ಮಿಡಿಯುವುದು ನಿರೀಕ್ಷೆಯಲಿ

ವಾಸ್ತವಿಕ
ಸರ್ರನೆ ತೆರೆದುಕೊಳ್ಳುವುದು ಒಂದು ಅಜ್ಞಾತ ಕದದ ಬಾಗಿಲು
ಅಜ್ಜಿಯೋ/ಅತ್ತೆಯೋ/ಅಕ್ಕನೋಡನೆಯೋ ಬಂದು ಎದುರಲಿ ಕೂರುವಳು
ನಾಚಿಕೆಯಲಿ ನೋಡಲವಳನು, ನೋಡುತಿರಲು ನನ್ನನೂ ಅವಳು

ಪರಿಹಾಸದ ಆ ಸನ್ನಿವೇಶದಿ ಮೂಡುತಿರಲು ವಿಚಿತ್ರ ಅನುಭವಗಳು
ನಮ್ಮ ಬಳಗದಿ, ಕೇಳಲೆಂದೇ ಕೇಳುವರು ಹಲವು ಕಿರಿಕಿರಿಯ ಪ್ರಶ್ನೆಗಳು
ಪ್ರತಿ ಉತ್ತರಕ್ಕೂ ಮನವ ಪ್ರಕ್ಷುಬ್ದವಾಗಿಸುವವು ನಿರೀಕ್ಷೆ ವಾಸ್ತವಗಳು

ನೋಡಿ, ನೋಡುದ್ರ ಎಂದು ಕೇಳುವರು ಹತ್ತು ಹಲವು ಭಾರೀ
(ಹುಡುಗಿಯರನ್ನು ನೋಡಿ) ಅಭ್ಯಾಸವಿದ್ದರು ತುಂಬಾ ಕಷ್ಟವೆನಿಸುವುದು ಈ ರೀತಿ ನೋಡೋ ಪರಿ
ಅನಿಸುವುದು ಈ ಸಂಕೋಚ, ಸಂಧಿಗ್ದ ಸ್ಥಿತಿಯಿಂದ ಯಾವಾಗ ಆಗೋಣ ಪರಾರಿ


ಇದೆಲ್ಲ ನೋಡಿ ಕೆಲವೊಮ್ಮೆ ಅನಿಸುತ್ತೆ,, ಲೊವ್ ಮ್ಯಾರೇಜ್ ಬೆಟರ್ ಅಂತ
ಅದರೆ ಅದರಲ್ಲಿ
     ಹುಡುಗಿನ ಬೀಳಿಸೊದು ಕಷ್ಟ
     ಬೀಳಿಸಿದ ಮೇಲೆ ನಷ್ಟ
     ಮುಂದಿನ ಭವಿಷ್ಯ ಅಸ್ಪಷ್ಟ
ಇದರಲ್ಲಿ
     ಹುಡುಗೀನ ಹುಡುಕೋದು ಸಾಹಸ
     ಮಧುವೆ ಅಗೋದು ಸಂಭ್ರಮ ಸಂತಸ
ಸಹ ಕುಟುಂಬ ಸಪರಿವಾರದ ಜತೆ ಆಜೀವ ಸಹವಾಸ