Life Goes On...

Life Goes On...
Life--- The way u Look at it

Wednesday, July 17, 2013

ನಿರೀಕ್ಷೆಯ ಕಗ್ಗ!!


ಮೂಕವಿಸ್ಮಿತ,
ಕಂಡು  ಆ  ವದನದಲಿ ಸ್ಮಿತಾ
ಅದ್ಭುತ,
ಆ ಕಣ್ಣುಗಳ ನೋಟದ ಸೆಳೆತ
ಎದೆಯಲ್ಲಿ ಕಚಗುಳಿ, 
ಮೂಡಲವಳ  ಗಲ್ಲದಲಿ ಗುಳಿ
ನಿಬ್ಬೆರಗು,
ಕಾಣಲವಳ ವಯ್ಯಾರದ ಬೆಡಗು
ಮಂತ್ರಮುಗ್ದ,
ಹೊರಡಲವಳ ಆನನದಿ ಪದ
ರೋಮಾಂಚನ
ಕಂಡು ಆ ಹುಬ್ಬುಗಳ ನಡುವಿನ ಚುಕ್ಕಿಯನ್ನ

ಮನಮೋಹಕ,
ಅವಳ ಅಲಂಕಾರದ ಚಿತ್ತಾರ ಲೋಕ
ಚೇತೋಹಾರಿ,
ಬಳಕುತ ನಡೆವಾಗ ಗೆಜ್ಜೆ ಸದ್ದಿನ ಪರಿ
ಹೃದಯಂಗಮ,
ನೋಡಲು ಆ ಬೆಕ್ಕಿನ ನಡಿಗೆಯ ಹಂಗಾಮ
ಮನೋಹರ,
ಇರಲು ಆ ಕೊರಳಲಿ ಯಾವುದೇ ಹಾರ
ಅಸಾಧಾರಣ,
ಚಂದಿದ್ದರು ಆ ಕೋಮಲೆ ನಿರಾಭರಣ
ಆಶ್ಚರ್ಯ,
ನೋಡಲು ಅವಳ ಔದಾರ್ಯ
ಕೌತುಕ, 
ಆಗಲು ಆ ಸುಂದರಿ ಭಾವುಕ
ಭಾವಪರವಶ ,
ಅವಳ ಉಸಿರು ಸೋಕಿ ಮೂಡಿದಾಗ ಸ್ಪರ್ಶ
ಹೊಂಗನಸು,
ಮೇಲಿನವೆಲ್ಲ ಆಗುವವರೆಗೂ ನನಸು

ಮೇಲಿನವು ಬರೀ ನಿರೀಕ್ಷೆ ಅಷ್ಟೇ!!
ನನ್ನನರಸಿ ಬರುವವಳು ಆಗದಿದ್ದರೂ ಮಿಂಚಿನಂತ ಬೆಡಗಿ
ನಮ್ಮನೆಯ ದೀಪ ಆರದಂತೆ ನೋಡಿಕೊಂಡರು ಸಾಕು, ನಮಗೆ ಒಗ್ಗಿ!!


Friday, June 28, 2013

ಮಧುವೆಯೆಂಬ ಪ್ರಹಸನ - ೧



ತಲುಪಿದರೆ ನಮ್ಮ ವಯಸ್ಸು ಇಪ್ಪತೈದರ ಆಸುಪಾಸು
ಮನೆಯವರು ಶುರುಹಚ್ಚುವರು ಮಧುವೆ ಮಾತಿನ ರೋಸು
ಒಂದು ಹುಡುಗೀಗೆ ಬಾಳು ಕೊಡುವಷ್ಟು ಪ್ರಬುದ್ಧನೋ? ಎನ್ನುವುದು ಮನಸ್ಸು!!

ಶುರುವಿಡಲು
ಒಂಬತ್ತು ಚೌಕಗಳ ಮನೆಯಲ್ಲಿ ಗ್ರಹಗಳ ಬಂಧಿಸಿ, ಬರೆಸುತ್ತಾರೆ ಕುಂಡಲಿ
ಅದನ್ನು ವೀರಾವೇಶದಿ ಹಂಚುತ್ತಾರೆ ಆತ್ಮೀಯ ಹತ್ತು ಹಲವರಲ್ಲಿ
ಕೆಲದಿನಗಳ ನಂತರ ಪ್ರತಿಯೊಬ್ಬರು ಕೇಳುತ್ತಾರೆ ಇದರ ಬಗ್ಗೆ ಕಂಡ ಕಂಡಲ್ಲಿ!!

ಮುಂದೆ
ಹಂಚಲು ಬೇಕೆನ್ನುತಾರೆ ನಮ್ಮ ಛಾಯಚಿತ್ರ
ಇದಕ್ಕೆಂದೇ ತೆಗೆಯುತ್ತಾರೆ ಹತ್ತಾರು ಭಂಗಿ ಆಂಗಿಯಲ್ಲಿ, ಚಿತ್ರ ವಿಚಿತ್ರ
ಅಲ್ಲಿಗೆ ಶುರು, ಮಾತಾಡ್ದೆ ಒಪ್ಪಿಕೊಳ್ಳುವ ನಮ್ಮ ಮೂಖಿ ಪಾತ್ರ!!

ತರಿಸುವರು ಹತ್ತಾರು ಜಾಥಕಗಳು, ಹಲವು ರೀತಿ
ಅದರಲ್ಲಿ ಸುಮಾರು ಹೊಂದಿಕೆಯಾಗದು ನೋಡಿದ ಮೇಲೆ ರಾಶಿ, ನಕ್ಷತ್ರ ಗ್ರಹಗತಿ
ಇದು ಮನೆಯವರಿಗೆ ಪಜೀತಿ, ಆದರೆ ನಮಗೆ ಬಿಡುವಿನ ರಿಯಾಯಿತಿ!!

ಪ್ರಯತ್ನಗಳ ನಂತರ ಹೊಂದುವುದು ಯಾವುದೋ ಒಂದು
ತೋರಿಸುವರು ಅವರ ಛಾಯಾ ಚಿತ್ರವನ್ನು ತಂದು
ನಮ್ಮ ಅಭಿರುಚಿಯೇ ಅರ್ಥವಾಗದೆ ಸಂಧಿಗ್ದದಲ್ಲಿ ಸಿಲುಕುವೆವು ಅಂದು!!

ಗುಣ ಮುಖ್ಯವೆಂದರು, ಫೋಟೋದಲ್ಲಿನ ಮುಖ ನೋಡಿಯೇ ಒಪ್ಪುವರು
ಮನೆತನದ ವಿಷಯ ಜಾಲಾಡಿ, ಅಭಿಪ್ರಾಯ ನಿರ್ಧರಿಸುವರು
ಎಲ್ಲ ಮೆಚ್ಚುವಂತಿದ್ದರೆ, ಮನೆಗೆ ಬರುವೆವೆಂದು ಅವರಿಗೆ ತಿಳುಸುವರು!!

ಕೆಲವೇ ಸಾಲುಗಳಲ್ಲಿ ಇಲ್ಲಿವರೆಗೂ ಬಂದಿದೀವಿ ಆದ್ರೆ real ಆಗಿ ಈ level ಗೆ ಬರೋದು ಒಂದು ಪ್ರಹಸನವೇ ಸರಿ
ಇದೇನಿದೆ ಆ ಹುಡುಗಿ ನೋಡೋ ವಿಷ್ಯ ಇನ್ನೂ ಕ್ಲಿಷ್ಟ ಹಾಗೂ ಸ್ವಾರಸ್ಯಕರ,, ಅದು ಮುಂದಿನ ಭಾಗದಲ್ಲಿ


--ಸಂತ



    

Thursday, June 6, 2013

ಜಾಲಿಬಾರು!!!

ಜಾಲಿ ಬಾರಿನಲ್ಲಿ ಕೂತು, ಅವನು ಅವಳು ಕುರ್ಚಿಗಾತು
ಆಡುತಿದ್ರು ಪೋಲಿ ಮಾತು, ಮಂದಿ ನಾಚುತಿದ್ದರು
ಅವಳ ಮೊಬೈಲ್ ಕ್ಯಾಮ್ರ ಎತ್ತಿ, ಅವರ ಜೋಡಿ ಫೋಟೋ ಒತ್ತಿ
ಫೇಸೆಬುಕ್‌ನಲ್ಲಿ ಟ್ಯಾಗ್ ಮಾಡಿ, ಸುಮ್ಮನೊಮ್ಮೆ ನಕ್ಕಳು

ಅವನ ಜೇಬಿಗೆ ಕೈಯ ಹಾಕಿ, ಒಂದು ಸಿಗರಟೆ ಹೊರಗೆ ಹೆಕ್ಕಿ
ಕಡ್ಡಿ ತೀಡಿ ಕಿಡಿಯು ಹತ್ತಿ , ಹಮ್ಮನೊಗೆಯ ಬಿಟ್ಟಳು
ಅವಳ ಕುರುಲು ಜಾರಲಾಗ, ಅವನು ಸರೆಸಲದನು ಬದಿಗೆ
ಸೆಳೆಯೊ ನೋಟ ಬೀರಲವಳು, ಅವನ ಆಸೆ ಹೆಚ್ಚಿತು

ಕರೆಯುತಿರಲು ಅವನು ಅವಳು, ಮೇಜಿನೆಡೆಗೆ ಸರ್ವರ್ ಬರಲು
ಎಣ್ಣೆ ತಾರೋಆಣ್ನ ಎನಲು, ತರಲು ಒಳಗೆ ಹೊರಟನು
ಅವಳ ಕೆನ್ನೆ ಕೈಯಲ್ಲಿಡಿದು, ತುಟಿಗೆ ತುಟಿಯ ಚುಂಬಿಸಿರಲು
ಎಣ್ಣೆ ತಂದ ಸರ್ವರ್ನಾಚಿ, ಮುಖವ ಮುಚ್ಚಿಕೊಂಡನು

ವೋಡ್ಕಾದೊಡನೆ  ಸೋಡಾ ಸೇರಿ, ಅವನಿಗೊಂದು ಚಿಯರ್ಸ್ ಹೇಳಿ
ತುಟಿಯ ನಡುವೆ ಗ್ಲಾಸನೊತ್ತಿ, ಒಮ್ಮೆ ತನ್ಮಯಳಾದಳು
ತಮಗೆ ಅರಿವೇ ಇಲ್ಲ ಕೊಂಚ, ಪಾನಸೇರಿ ಕಂಠದಂಚ
ನಶೆಯು ಏರುತಿರಲು ಅವಗೆ,  ಬಾನುಭೂಮಿ  ಅದಲು ಬದಲು
                                                                                   -- ಸಂತ 

Based on

ತೂಗುಮಂಚ

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು |
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ 
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು ||

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ 
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು |
ಸೆರಗು ಜಾರುತಿರಲು ಕೆಳಗೆ ಬಾನುಭೂಮಿ ಮೇಲು ಕೆಳಗೆ 
ಅದುರುತಿರುವ ಅಧರಗಳಿಗೆ ಬೆಳ್ಳಿಹಾಲ ಬಟ್ಟಲು ||

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು 
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೆಲಿತೋ 
ತನಗೆ ತಾನೇ ತೂಗುಮಂಚ ತಾಗುತಿತ್ತು ದೂರದಂಚ 
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ 

Sunday, May 12, 2013

ಅವಳ ಮಧುವೆ!!

ಆರ್ತನಾದದಿ ಮೊಳಗುತ್ತಿತ್ತು ನನ್ನ ದೂರವಾಣಿ,
ತುಂಬಾ ದಿನದ ನಂತರ ಕರೆ ಮಾಡಿದ್ಲು ನನ್ನ ಕನಸಿನ ರಾಣಿ,
ಅವಳಂದಳು - ನನ್ನ ಮಧುವೆ, Please "Come , ಬನ್ನಿ"
ಅದ ಕೇಳಿದ ನನ್ನ, ಕಣ್ಣಲ್ಲಿ "ಕಂಬನಿ"

ಇದರ ಮುಂದಿನ ಭಾಗ ...... 



ಅಚಾನಕ್ಕಾಗಿ ಎದುರಾದಾಗ ನಾವು, ಅವಳು ಬೀರಿದಳು ಮಂದಹಾಸ
ಅಂದು ನಮ್ಮ ಪ್ರೇಮಾಂಕುರದ ದಿನ
ನಾನಿಂತಿರುವೆ ಗೆಸ್ಟ್ ಸಾಲಿನಲಿ ಈಗ , ಅವಳ ರಿಸೆಪ್ಶನ್ ಎಂಬ ಪರಿಹಾಸ
ಇಂದು ನಮ್ಮ ಪ್ರೇಮಾಂತ್ಯದ ದಿನ

ಆಡುತ ಆದ ಗಾಯಕ್ಕೆ, ಅಂದು ಕಟ್ಟಿದೆ ಅವಳ ಹಣೆಗೆ ಗಾಯದ ಪಟ್ಟಿ
ಅದು ನಮ್ಮ ಬಾಂಧವ್ಯದ ಗುರುತು
ಹಸೆಮಣೆಯ ಮೇಲೆ ಕೂತವಳ ಹಣೆಯಲ್ಲಿ ಮಿಂಚುತಿದೆ ಬಾಸಿಂಗದ ಪಟ್ಟಿ
ಇಂದು ನಮ್ಮ ಬಾಂಧವ್ಯ ಅಲ್ಪವಸ್ತು

ಮಳೆ ಸುರಿಯುವ ಇರುಳಲಿ ನನ್ನ ಕೊಡೆಯಡಿಯಲ್ಲಿಯೇ ನಡೆದಿದ್ದೆವು ಒಂದಾಗಿ
ಅಂದದು ನಮ್ಮ ಒಲುಮೆಯ ಸಂಕೇತ
ಭವ್ಯ ಮಂಟಪದಡಿಯಲ್ಲಿ ಅಗ್ನಿಕುಂಡ ಸುತ್ತುತಿರುವಳು ಇನ್ನೋರ್ವನ ಜತೆ ಚಂದಾಗಿ
ಇಂದು ನನ್ನ ಒಲುಮೆಗೆ ಆಘಾತ

ಕಾಲೇಜು ಕಾರ್ಯಕ್ರಮದ ರ್‍ಯಾಂಪಿನ ಮೇಲೆ, ನನ್ನ ಕೈಹಿಡಿದು ಹೆಜ್ಜೆಹಾಕಿದ್ದಳು ನಾಚುತ ಅಂದು
ಅದು ನಮ್ಮ ಆತ್ಮೀಯತೆಯ ಪ್ರದರ್ಶನ
ಅವನು ಅವಳ ಹೆಬ್ಬೆಟಿಡಿದು ಸಪ್ತಪದಿಗೆ ಕರೆಯಲು, ಹೆಜ್ಜೆ ಹಾಕುತಿರುವಳು ನಗುತ ಇಂದು
ಇದು ನಮ್ಮ ಆತ್ಮೀಯತೆಗೆ ತಿಲಾಂಜನ

ಅಂದು ರಾತ್ರಿ, ಅಗಣಿತ ತಾರೆಗಳ ನಡುವೆ ತೋರಿಸಲು "ಅರುಂದತಿ", ಕಂಡಿಲ್ಲವೆಂದು ರೇಗಿಸಿದ್ದಳು
ಅದು ನಮ್ಮ ಸಲುಗೆಯ ಸಲ್ಲಾಪ
ಇಂದು ಸೂರ್ಯನ ಬೆಳಕಲಿ ಮನ ತೋಚಿದೆಡೆ ಕೈ ತೋರಲವನು, ಕಂಡಿತೆಂದು ತಲೆಯಾಡಿಸುತಿರುವಳು
ಇದು ನನ್ನ ಸುಲಿಗೆಯ ಕಲಾಪ

ಇಂದು ಅವಳಿಗೆ ಬಿತ್ತು ಮೂರು ಗಂಟು
ಆ ನಿಮಿಷದಲ್ಲೇ ಮುಗಿಯಿತು ನನ್ನ ಅವಳ ನಂಟು
ಅವರ ಕತ್ತಲಿ ವಿರಮಿಸುತ್ತಿದೆ ಹೂವಿನ ಹಾರ
ನನ್ನ ಮನವ ಕುಗ್ಗಿಸುತ್ತಿದೆ ದುಗುಡ ಭಾರ
ಅರ್ಥವಾಗಲೇ ಇಲ್ಲ ಅವಳಿಗೆ ನನ್ನ ಪ್ರೀತಿಯ ನಿವೇಧನೆ
ಇನ್ನೂ ನನ್ನ ಪಾಲಿಗೆ ಅವಳು ಇನಿಲ್ಲವೆಂಬ ವೇಧನೆ

ನನ್ನ ಕಲ್ಪನೆ, ಈ ಕೆತ್ತನೆ --- ಸಂತ

Tuesday, April 23, 2013

ಹಸಿರು



ಹಸಿರು ನಿನ್ನದು ಉಸಿರು ನಿನ್ನದು
ಎನ್ನ ಜೀವನ ಕಣವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೇ ನನ್ನದು

ನೀನು ಉಳಿದರೆ ನಾನು ಉಳೀವೆನು
ನೀನು ಬೆಳೆದರೆ ನಾನು ಬೆಳೆವೆನು
ನಿನ್ನ ಹರಣದಿ ಹರಣ ನನ್ನದು
ನಿನ್ನ ಮರಣದಿ ಮರಣವು

ನನ್ನ ಉಳಿವಿಗೆ ನೀನೇ ಶಕ್ತಿ
ನನ್ನ ಹೃದಯದಿ ನಿನಗೆ ಭಕ್ತಿ
ನೀನೇ ಮಾಯಾ ಮೋಹಾಷಕ್ತಿಯು
ನನ್ನ ಜೀವನ ಮುಕ್ತಿಯು



Monday, March 25, 2013

ಪ್ರಕ್ಷೂಬ್ಧ ನನ್ನ ಪ್ರಾರಬ್ಧ



ಹಿಂದೆ ಗುರುಯಿಲ್ಲ
ಮುಂದೆ ಗುರಿಯಿಲ್ಲ
ದಿಕ್ಕು ದೆಸೆಯಿಲ್ಲದಂತಾಗಿದೆ ಈ ಪಯಣ
ಎತ್ತ ಸಾಗುತಿದೆ ಈ ಜೀವನ?

ದಿನವೂ ಮಿಡಿಯುತಿದೆ ಮನವು, ಮುಂದೇನು? ಮುಂದೇನು?
ದಿನವೂ ತುಡಿಯುತಿದೆ ಅಂತಃಕರಣ ಇನ್ನೆಂದು? ಇನ್ನೆಂದು?
ಮೂಡುತಿವೆ ಸಾಸಿರ ಪ್ರಶ್ನೆಗಳು ಅನುದಿನ
ಅವುಗಳ ಉತ್ತರ ಹುಡುಕುವುದರೊಳಗೆ ಮೂಡುತಿದೆ ಮರುದಿನ
ಪ್ರತಿದಿನವೂ ಕಾಣುವುದು ನೂರು ದಿಕ್ಕು ದಾರಿ
ಸಾಗುವುದು ಎತ್ತಕಡೆ ಎಂದು ತಿಳಿಯದೇ ಈ ವರಿ

ದುಡಿಮೆಗೆ ಮಾಡುತಿರುವ ಕೆಲಸವೇಕೋ ಬೇಡವೆನಿಸುತ್ತೆ
ಇದನ್ನು ಬಿಟ್ಟರೆ ಬೇರೇನಿದೆ? ಅಂತಲೂ ಅನಿಸುತ್ತೆ.
ಮಾಡುತಿದ್ದರು ಹಲವು ಮನಸಿಗೊಪ್ಪುವ ಪ್ರವೃತ್ತಿಗಳು
ಅವನ್ನೇ ವೃತ್ತಿಗಳಾಗಿ ತೆಗೆದುಕೊಳ್ಳಲು ಹಲವು ತೊಡರುಗಳು
ತೊಡಗಿಸಿಕೊಂಡಿದ್ದರು ಕೆಲವು ವೈವಿದ್ಯಮಯ ಹವ್ಯಾಸಗಳಲ್ಲಿ
ಹೇಳಲಾಗದನ್ನ ಬಯಸಿ ಮನವು ಸೊರಗುತಿದೆ ಚಿಂತೆಯಲ್ಲಿ

ಇದ್ದರು ನಮ್ಮಬಳಿ ಬೇಕಾದ ಹತ್ತು ಹಲವು
ಸದಾ ತವಕಿಸುವೆವು ಬೇಕೆಂದು ಇನ್ನೂ ಕೆಲವು
ಎಲ್ಲರಂತೆ ನಾನಿರಬಾರದೆಂದು ಹಂಬಲಿಸಿದಂತೆ
ಆ ಆಲೋಚನೆಯಲ್ಲೇ ಆಗಿರುತ್ತೆವೆ ಹತ್ತರಲ್ಲಿ ಒಬ್ಬರಂತೆ

ಮಾಡಲೇ ಬೇಕು ಏನಾದರೊಂದು ಅದ್ಭುತ ಎಂಬ ಆಸೆ ಮನದಲ್ಲಿ
ಸದ್ಯಕ್ಕೆ ಮಾಡದಿದ್ದರೂ ಮುಂದೆ ಮಾಡುವೆವು ಎಂಬ ನಂಬಿಕೆಯಲ್ಲಿ

"ಇರುವ ಭಾಗ್ಯಾವ ನೆನೆದು ಬಾರನೆಂಬುದ ಬಿಡು, ಹರುಷಕಿದೆ ದಾರಿ" ಎಂದು ಡಿವಿಜೀ ಹೇಳಿದರು
"ಇರುವುದೆಲ್ಲ ಬಿಟ್ಟು ಇರುವೆ ಬೀಟ್ಕೊಂಡೇ" ಸಾಗಿಸುವೆವು ನಮ್ಮ ಜೀವನ!!

ನಾನೇ ಇಷ್ಟೊಂದು confusion ನಲ್ಲಿ ಒದ್ದಾಡ್‌ತಿದ್ರೆ, ಮನೇಲಿ ಹುಡುಗಿ ನೋಡೋಣ, ನಿನ್ ಮಧುವೆ ಮಾಡೋಣ ಅಂತಾರೆ... ಅದಕ್ಕೆ ಪ್ರಕ್ಷುಬ್ದ ವಾಗಿದೆ ನನ್ನ ಪ್ರಾರಬ್ದ!






Tuesday, March 12, 2013

ಮನಮೋಹಕ ಮಳೆ


ಆಗಸದಲ್ಲಿ ಮೇಘಗಳ ಆಲಿಂಗನ,
ಭುವಿಗೆ ಮಳೆ ಹನಿಗಳ ಚುಂಬನ,
ಮಳೆಗಾಲ - ಅದೆಂತ ರೋಮಾಂಚನ!!

ರವಿ ಕಾಣದೆ ಆ ಮುಗಿಲು, ಸುರಿಸಲು ವರುಷಧಾರೆಯ
ಅಲ್ಲೇ ಅವಿತು ಇಣುಕುತಿದ್ದ ಅವನು, ತುಂಟತನದಿ ಹರಿಸುತಿದ್ದ ಹರುಷಧಾರೆಯ
ತಣಿಸಲು ಮೂಡಿಸಿದ "ಕಾಮನಬಿಲ್ಲೆಂಬ" ಬಣ್ಣದ ಉಡುಗೊರೆಯ!!

ಅನಂತಾಕಶದ ಪರದೆಯ ಮೇಲೆ, ಮಧವೇರಿದ ಮೇಘಗಳದೇ ಆಟ
ಎಲ್ಲರ ರಂಜಿಪಲು ಮಳೆಯಸುರಿಸಿದಂತಿತ್ತು ಅವುಗಳ ಒಡನಾಟ
ಅತಿರೇಕದಿ ಗುದ್ದಾಡಲು ಕಂಡ "ಕೋಲ್ಮಿಂಚು" ನೆನಪಿಸಿತು ಖಡ್ಗ ಜಳಪಿಸಿದಂತೆಯ ನೋಟ!!