Life Goes On...

Life Goes On...
Life--- The way u Look at it

Monday, November 18, 2013

ಉದ್ವಿಗ್ನಗೊಳಿಸಿದ ಆ ನೋಟ!!

ಮೊನ್ನೆ ಉರಿಗೆ ಹೋಗುವಾಗ ಬಸ್ನಲ್ಲಿ ನಡೆದ ನೈಜ ಘಟನೆ.
ತನ್ನ ನೋಟದಿಂದಲೇ, ನನ್ನೊಳಗೆ ಹಲವು ಕುತೂಹಲಕಾರಿ ಆಯಾಮಗಳ ತೆರೆಯಿಸಿದ ಆ ಅನಾಮಿಕ ವ್ಯಕ್ತಿಗಾಗಿ ಈ ನುಡಿ ಸಾಲುಗಳು

ಅಪರಿಚಿತೆ 
ಅವಳು
ಆದರೂ ಹೊತ್ತಿಸಿದಳು 
ಎನ್ನ ಮನದಲಿ ಚಿತೆ,
ಅಜ್ಞಾತ
ಆ ಜಾಗವು
ಆದರು ಅವಳ ಇರುವು
ಆಗಿಸಿತು ಅದನ್ನು ಪರಿಚಿತ

ಹುಡುಕುತಿರಲು 
ನನ್ನ ಕಣ್ಣುಗಳು 
ಸ್ಪಂದಿಸಬಹುದಾದ ನೋಟಗಳ
ಸುತ್ತಲು,
ಹಿಡಿದಿಟ್ಟವು
ಅವಳ ಕಾಡಿಗೆ ತೀಡಿದ ನಯನಗಳು
ನೆನಪಿಸಿ ಚಿತ್ರಕಾರರ ರೇಖಾಚಿತ್ರಗಳು
ನನ್ನ ಮನವು

ಹೊಳೆಯುತಿತ್ತು,
ಅವಳ ಕಣ್ಣುಬ್ಬುಗಳ ನಡುವಿನ ಚುಕ್ಕಿ,
ನೋಡುಗರ ಕಣ್ಣ ಕುಕ್ಕಿ
ಸೊರಗುತಿತ್ತು.
ಮಿನುಗುತಿತ್ತು
ಆ ಮೊನಚು ಮೂಗಿನ ಬದಿಯಲ್ಲಿ ಮೂಗುತಿ,
ಎಂಥಾ ಚೆಲುವು ಎಂದು ನನ್ನ ಮತಿ
ಕನವರಿಸುತಿತ್ತು 

ತವಕ,

ನೋಡಲವಳ ಚೆಲುವ
ಮನಸ್ಸು ತೃಪ್ತಿಯಾಗುವ
ತನಕ
ಆದರೆ ಅಳಕು
ಎಲ್ಲಿ ಅವರ ಕಡೆಯವರು
ಅಕಸ್ಮಾತ್ ನೋಡುವರೋ
ನನ್ನ ಲುಕ್ಕು

ಬೀರುತಿದ್ದಳು
ಆಗಾಗ ಅವಳು ಮಂದಹಾಸ
ಕೇಳಲಾಗಿ ಯಾವುದೋ ಪರಿಹಾಸ
ಮಾತುಗಳು.
ಹಗುರಾಗಿ
ಹೃದಯ ಕುಣಿಯುತಿತ್ತು,
ನನಗಾಗಿ ಆ ಮಂದಹಾಸ ಮೂಡುತಿತ್ತು
ಅನಿಸಲಾಗಿ.

ನಾಚುತಿರಲು

ಅಷ್ಟು ಜನರ ನಡುವೆ 
ಅವಳ ಸುಂದರ ಮುಖವೇ
ನೋಡಲು,
ಬಿಗುಮಾನವಿಲ್ಲದೆ 
ನೋಡುತಿದ್ದಳು
ನನ್ನ ಕಡೆಯೇ ಅವಳು
ಕಣ್ಣು ಮಿಟುಕಿಸದೇ

ತಳಮಳ 

ನೋಡುತಿರಲು ಅವಳು ನನ್ನನ್ನೇ
ತದೇಕ ಚಿತ್ತದಿ ಒಂದೇ ಸಮನೆ
ಕಣ್ಣು ಮಿಟುಕಿಸದೆ ಪಳಪಳ
ಅದಕ್ಕೆ 

ಪರೀಕ್ಷಿಸಿದೆ ಅವಳ ನೋಟ ಕದ್ದು ಮುಚ್ಚಿ 
ಆದರೂ ನನ್ನನ್ನೇ ನೋಡುತಿದ್ದಳು ಚುಚ್ಚಿ
ಯಾಕೆ?

ಅನುಮಾನ

ಮೂಡುತಿತ್ತು ನನ್ನ ಒಳಗೆ,
ಇರುವೆನೋ ನಾನು ಬೆರೇರು ಒಪ್ಪುವ ಹಾಗೆ
ಎನುತ್ತಿತು ನನ್ನ ಮನ
ಅನುಮಾನ
ತಿಳಿಯದೆ ಕಾರಣ ಅವಳ ಈ ನೋಟದ ಪರಿ,
ಕಾಣುವೆನೋ ಏನೋ ಚಿತ್ರ ವಿಚಿತ್ರವಾಗಿ,
ಎಂಥ ಅವಮಾನ!! 

ಸಿಗಲೇ ಇಲ್ಲ
ನನ್ನ ಅನಕುಲಕ್ಕೆ ಒಂದೂ ಕ್ಷಣ
ತೀರಿಸಲು ನಮ್ಮ ಕಣ್ಣ ನೋಟದ ಸಲುಗೆಯ ಋಣ
ಆ ಯಾನದಲೆಲ್ಲ 
ಉಳಿಯಿತು
ಕೊಡಬೇಕಿದ್ದ ನನ್ನ ಮಂದಹಾಸದ ಬಹುಮಾನ
ಎಲ್ಲೆ ಮೀರಿದ ನನ್ನ ಸಾಚಾತನದ ಬಿಗುಮಾನ
ಅದನ್ನ ತಡೆಯಿತು

ಮುಗಿಯಿತು

ನನ್ನ ಅವಳ ಅಂದಿನ ಪಯಣ
ಉಳಿಸಿ ನಮ್ಮ ನಡುವೆ ನೆನಪುಗಳ, ನಯನ
ಮೆರೆಯಿತು
ಅಪರಿಮಿತ
ಆಸೆಯಿದ್ದರೂ ಹೇಳಬೇಕೆಂದು ಕೆಲವು ಮಾತು
ಅಘೋಚರ ಬಂಧನದಿ ಏನು ತೋಚಲಿಲ್ಲ ಅಷ್ಟು ಹೊತ್ತು
 ಅವಳು ಈ ಪದಪುಂಜಕೇ ಸೀಮಿತ



Thursday, October 24, 2013

ಶಾಲೆಯಲ್ಲಿನ ಪ್ರಸಂಗ!!

Actual Song is here, listen to it and then read the below lines.
(Though its not that great) -- Youtube

ಬೇಂದ್ರೆ ಅವರ ಹಾಡು ಕೆಡಿಸಿದಕ್ಕೆ ಕ್ಷಮೆ ಇರಲಿ!!



ಆಗ ಶಾಲೆಯ ಗಂಟೆ 
ಅಂತು ಟಾಂಟನಣ
ಗೆಜ್ಜೆ ಸದ್ದು ಕೇಳಿಸುತಲಿತ್ತು
ಝಂ ಝಣಣ ನಾನಾ
ನೆರೆದ ಕ್ಲಾಸು ಕನವರಿಸುತಿತ್ತು
ಹ ಮೇಡಮ್ ಬಂದ್ರು ಹ ಮೇಡಮ್ ಬಂದ್ರು!!

ಆಗ ಶಾಲೆಯ ಗಂಟೆ 
ಅಂತು ಟಾಂಟನಣ!!

ಹಲವು ಗಂಟೆಯಿಂದ, ಒಂದ
ಮೇಲೆಒಂದು ಪಾಠ
ಏಕೆ ಇಲ್ಲಿ ಬಂದೆನೆಂದು
ಕಾಡುತಿಹುದು ಎನ್ನ
ತನಗೆ ತಾನೇ ತೂಗುತಿಹುದು,
ತೇಲುತಿಹುದು, ಈ ಮನ
ಈ ಮನ

ಆಗ ಶಾಲೆಯ ಗಂಟೆ 
ಅಂತು ಟಾಂಟನಣ!!

ಅಷ್ಟರಲ್ಲೇ ನಮ್ಮ ಮೇಡಮ್ 
ಒಳಗೆ ಬರುವಂತಾಗಿ 
ಯಾವುದೋ ಹೂವ ಗುಚ್ಛ
ಅವರ ಜಡೇಲಿ ತೂಗಿ
ನಿದ್ದೆಯಿಂದ ಎದ್ದೆ ನಾನು 
ಅದರ ಘಾಟು ತಾಗಿ 
ಘಾಟು ತಾಗಿ

ಆಗ ಶಾಲೆಯ ಗಂಟೆ 
ಅಂತು ಟಾಂಟನಣ!!

ಅವರ ಬೆಡಗ ಸೊಬಗು ಕಂಡು, 
ಅರಳಿತೆನ್ನ ಕಣ್ಣ
ಅವರ ದನಿಯ ಪಾಠ ಕೇಳಿ, 
ಗಮನ ಹುಟ್ಟಿತಣ್ಣ
ಅವರು ಡಿಕ್‌ಟೇಟ್ ಮಾಡಲಾಗಿ, 
ನೋಟ್ಸು ಬರೆದೆನಣ್ಣ
ನೋಟ್ಸು ಬರೆದೆನಣ್ಣ

Friday, September 13, 2013

ಮಧುವೆಯೆಂಬ ಪ್ರಹಸನ - ೨



ಅಪ್ಪ ಟಕ್ಮಾಡು ಅಂತ, ಅಮ್ಮ ತಲೆ ಬಾಚು ಅಂತ
ಅಕ್ಕ ಕ್ರೀಮ್ ಹಚ್ಕೊಂತ, ಬಾವ ಶೂ ಹಾಕು ಅಂತ
ಕಡೆಗೆ ಪ್ರದರ್ಶನದ ಗೊಂಬೆಯಂತಾಗಲು, ಹುಡುಗಿ ನೋಡಲುಹೋರಡುವುದೂ ಅಂತ
(ಅದಕ್ಕೆ ಹಿಂದೆ ಹೇಳಿದ್ದ್ರು ಕಾಗೆ ಮರಿ ಕಾಗೆಗೆ ಮುದ್ದು ಅಂತ)

ಅವರ ಮನೆಗೆ ಹೊರಡಲು ನೋಡುವರು ಶುಭ ಮುಹೂರ್ತ
ಗಾಡಿ ಹತ್ತಿಇಳಿಯುವವರೆಗೆ, ಪಾಲಿಸಬೇಕಾದ ಪರಿ ಪಾಠಗಳ ಭೋರ್ಗೆರೆತ
ಮನಸಿನಲ್ಲಿ ವಿಚಿತ್ರ ಅಭಿಪ್ರಾಯ ಆಲೋಚನೆಗಳ ಆರ್ತ ಮೊರೆತ

ಹಾಗೂ ಹೀಗೂ
ಬಂದು ಸೇರಲು ಹುಡುಗಿಯವರ ಮನೆಯ ಬಳಿ
ಎಲ್ಲರೂ ಇಳಿದ ಮೇಲೆ ಕಡೆಗೆ ಇಳಿಯುವುದೇ ನಮ್ಮ ಬಳುವಳಿ
ಅಲ್ಲಿ, ಇನ್ನೂ ಶುರು ಉಭಯ ಕುಶಲೋಪರಿಗಳ ಹಾವಳಿ

ಸುತ್ತ ಕುಕ್ಕುವ ಹತ್ತು ಕಣ್ಣ್ ನೋಟಗಳೋಡನೆ, ಮನೆಯೊಳಗೆ ಪ್ರವೇಶ
ಪೂರ್ವನಿಯೋಜಿತ ಆಸನದ ಮೇಲೆ ನಾವು ಕೂರಬೇಕೆಂಬ ಆದೇಶ
ಅಲ್ಲಿಂದ ಶುರು ಮನೆಯವರು ತೋರುವ ಉಪಚಾರಗಳ ವೀರಾವೇಶ

ಕುಡಿಯಲು ಕೊಡುವರು ಯಾವುದೋ ಒಂದು ಪಾನೀಯ
ಅದು ಕುಡಿಯುವ ಅಷ್ಟೂ ಹೊತ್ತು, ಅಲ್ಲಿ ರಸಪ್ರಶ್ನೆಗಳ ವಿನಿಮಯ
ಕುಡಿದ ಗ್ಲಾಸ್ ತೆಗೆದು ಅಣಿ ಮಾಡಿದರೆ, ಶುರುವೆಂದು ಪ್ರದರ್ಶನದ ಸಮಯ

ಕಾಲ್ಪನಿಕ
ಕೇಳುವ ಗೆಜ್ಜೆಯ ಸದ್ದಿಗೆ, ಎದೆಯಲ್ಲಿ ಕಂಪನ
ಸೇದಲು ಮಲ್ಲಿಗೆಯ ವಾಸನೆ, ಮನದಲಿ ಸ್ಪಂದನ
ಅವಳ ಬಗೆಗಿನ ಕೌತುಕ ನಮ್ಮಲ್ಲಿ ಮೂಡಿಸುವುದು ಸಿಂಚನ

ವೈಯ್ಯರದ ನಡುವಿರಲು, ನಾಚಿಕೆಯ ನಡಿಗೆಯಲಿ
ಸಿಂಗಾರದ ಗೊಂಬೆಯಂತೆ, ಬಂದು ಕೂರಲು ನಮ್ಮೆದುರಲಿ
ಕನಸು ನನಸಾಗ ಬಹುದೆಂದು ಮನವು ಮಿಡಿಯುವುದು ನಿರೀಕ್ಷೆಯಲಿ

ವಾಸ್ತವಿಕ
ಸರ್ರನೆ ತೆರೆದುಕೊಳ್ಳುವುದು ಒಂದು ಅಜ್ಞಾತ ಕದದ ಬಾಗಿಲು
ಅಜ್ಜಿಯೋ/ಅತ್ತೆಯೋ/ಅಕ್ಕನೋಡನೆಯೋ ಬಂದು ಎದುರಲಿ ಕೂರುವಳು
ನಾಚಿಕೆಯಲಿ ನೋಡಲವಳನು, ನೋಡುತಿರಲು ನನ್ನನೂ ಅವಳು

ಪರಿಹಾಸದ ಆ ಸನ್ನಿವೇಶದಿ ಮೂಡುತಿರಲು ವಿಚಿತ್ರ ಅನುಭವಗಳು
ನಮ್ಮ ಬಳಗದಿ, ಕೇಳಲೆಂದೇ ಕೇಳುವರು ಹಲವು ಕಿರಿಕಿರಿಯ ಪ್ರಶ್ನೆಗಳು
ಪ್ರತಿ ಉತ್ತರಕ್ಕೂ ಮನವ ಪ್ರಕ್ಷುಬ್ದವಾಗಿಸುವವು ನಿರೀಕ್ಷೆ ವಾಸ್ತವಗಳು

ನೋಡಿ, ನೋಡುದ್ರ ಎಂದು ಕೇಳುವರು ಹತ್ತು ಹಲವು ಭಾರೀ
(ಹುಡುಗಿಯರನ್ನು ನೋಡಿ) ಅಭ್ಯಾಸವಿದ್ದರು ತುಂಬಾ ಕಷ್ಟವೆನಿಸುವುದು ಈ ರೀತಿ ನೋಡೋ ಪರಿ
ಅನಿಸುವುದು ಈ ಸಂಕೋಚ, ಸಂಧಿಗ್ದ ಸ್ಥಿತಿಯಿಂದ ಯಾವಾಗ ಆಗೋಣ ಪರಾರಿ


ಇದೆಲ್ಲ ನೋಡಿ ಕೆಲವೊಮ್ಮೆ ಅನಿಸುತ್ತೆ,, ಲೊವ್ ಮ್ಯಾರೇಜ್ ಬೆಟರ್ ಅಂತ
ಅದರೆ ಅದರಲ್ಲಿ
     ಹುಡುಗಿನ ಬೀಳಿಸೊದು ಕಷ್ಟ
     ಬೀಳಿಸಿದ ಮೇಲೆ ನಷ್ಟ
     ಮುಂದಿನ ಭವಿಷ್ಯ ಅಸ್ಪಷ್ಟ
ಇದರಲ್ಲಿ
     ಹುಡುಗೀನ ಹುಡುಕೋದು ಸಾಹಸ
     ಮಧುವೆ ಅಗೋದು ಸಂಭ್ರಮ ಸಂತಸ
ಸಹ ಕುಟುಂಬ ಸಪರಿವಾರದ ಜತೆ ಆಜೀವ ಸಹವಾಸ

Wednesday, July 17, 2013

ನಿರೀಕ್ಷೆಯ ಕಗ್ಗ!!


ಮೂಕವಿಸ್ಮಿತ,
ಕಂಡು  ಆ  ವದನದಲಿ ಸ್ಮಿತಾ
ಅದ್ಭುತ,
ಆ ಕಣ್ಣುಗಳ ನೋಟದ ಸೆಳೆತ
ಎದೆಯಲ್ಲಿ ಕಚಗುಳಿ, 
ಮೂಡಲವಳ  ಗಲ್ಲದಲಿ ಗುಳಿ
ನಿಬ್ಬೆರಗು,
ಕಾಣಲವಳ ವಯ್ಯಾರದ ಬೆಡಗು
ಮಂತ್ರಮುಗ್ದ,
ಹೊರಡಲವಳ ಆನನದಿ ಪದ
ರೋಮಾಂಚನ
ಕಂಡು ಆ ಹುಬ್ಬುಗಳ ನಡುವಿನ ಚುಕ್ಕಿಯನ್ನ

ಮನಮೋಹಕ,
ಅವಳ ಅಲಂಕಾರದ ಚಿತ್ತಾರ ಲೋಕ
ಚೇತೋಹಾರಿ,
ಬಳಕುತ ನಡೆವಾಗ ಗೆಜ್ಜೆ ಸದ್ದಿನ ಪರಿ
ಹೃದಯಂಗಮ,
ನೋಡಲು ಆ ಬೆಕ್ಕಿನ ನಡಿಗೆಯ ಹಂಗಾಮ
ಮನೋಹರ,
ಇರಲು ಆ ಕೊರಳಲಿ ಯಾವುದೇ ಹಾರ
ಅಸಾಧಾರಣ,
ಚಂದಿದ್ದರು ಆ ಕೋಮಲೆ ನಿರಾಭರಣ
ಆಶ್ಚರ್ಯ,
ನೋಡಲು ಅವಳ ಔದಾರ್ಯ
ಕೌತುಕ, 
ಆಗಲು ಆ ಸುಂದರಿ ಭಾವುಕ
ಭಾವಪರವಶ ,
ಅವಳ ಉಸಿರು ಸೋಕಿ ಮೂಡಿದಾಗ ಸ್ಪರ್ಶ
ಹೊಂಗನಸು,
ಮೇಲಿನವೆಲ್ಲ ಆಗುವವರೆಗೂ ನನಸು

ಮೇಲಿನವು ಬರೀ ನಿರೀಕ್ಷೆ ಅಷ್ಟೇ!!
ನನ್ನನರಸಿ ಬರುವವಳು ಆಗದಿದ್ದರೂ ಮಿಂಚಿನಂತ ಬೆಡಗಿ
ನಮ್ಮನೆಯ ದೀಪ ಆರದಂತೆ ನೋಡಿಕೊಂಡರು ಸಾಕು, ನಮಗೆ ಒಗ್ಗಿ!!


Friday, June 28, 2013

ಮಧುವೆಯೆಂಬ ಪ್ರಹಸನ - ೧



ತಲುಪಿದರೆ ನಮ್ಮ ವಯಸ್ಸು ಇಪ್ಪತೈದರ ಆಸುಪಾಸು
ಮನೆಯವರು ಶುರುಹಚ್ಚುವರು ಮಧುವೆ ಮಾತಿನ ರೋಸು
ಒಂದು ಹುಡುಗೀಗೆ ಬಾಳು ಕೊಡುವಷ್ಟು ಪ್ರಬುದ್ಧನೋ? ಎನ್ನುವುದು ಮನಸ್ಸು!!

ಶುರುವಿಡಲು
ಒಂಬತ್ತು ಚೌಕಗಳ ಮನೆಯಲ್ಲಿ ಗ್ರಹಗಳ ಬಂಧಿಸಿ, ಬರೆಸುತ್ತಾರೆ ಕುಂಡಲಿ
ಅದನ್ನು ವೀರಾವೇಶದಿ ಹಂಚುತ್ತಾರೆ ಆತ್ಮೀಯ ಹತ್ತು ಹಲವರಲ್ಲಿ
ಕೆಲದಿನಗಳ ನಂತರ ಪ್ರತಿಯೊಬ್ಬರು ಕೇಳುತ್ತಾರೆ ಇದರ ಬಗ್ಗೆ ಕಂಡ ಕಂಡಲ್ಲಿ!!

ಮುಂದೆ
ಹಂಚಲು ಬೇಕೆನ್ನುತಾರೆ ನಮ್ಮ ಛಾಯಚಿತ್ರ
ಇದಕ್ಕೆಂದೇ ತೆಗೆಯುತ್ತಾರೆ ಹತ್ತಾರು ಭಂಗಿ ಆಂಗಿಯಲ್ಲಿ, ಚಿತ್ರ ವಿಚಿತ್ರ
ಅಲ್ಲಿಗೆ ಶುರು, ಮಾತಾಡ್ದೆ ಒಪ್ಪಿಕೊಳ್ಳುವ ನಮ್ಮ ಮೂಖಿ ಪಾತ್ರ!!

ತರಿಸುವರು ಹತ್ತಾರು ಜಾಥಕಗಳು, ಹಲವು ರೀತಿ
ಅದರಲ್ಲಿ ಸುಮಾರು ಹೊಂದಿಕೆಯಾಗದು ನೋಡಿದ ಮೇಲೆ ರಾಶಿ, ನಕ್ಷತ್ರ ಗ್ರಹಗತಿ
ಇದು ಮನೆಯವರಿಗೆ ಪಜೀತಿ, ಆದರೆ ನಮಗೆ ಬಿಡುವಿನ ರಿಯಾಯಿತಿ!!

ಪ್ರಯತ್ನಗಳ ನಂತರ ಹೊಂದುವುದು ಯಾವುದೋ ಒಂದು
ತೋರಿಸುವರು ಅವರ ಛಾಯಾ ಚಿತ್ರವನ್ನು ತಂದು
ನಮ್ಮ ಅಭಿರುಚಿಯೇ ಅರ್ಥವಾಗದೆ ಸಂಧಿಗ್ದದಲ್ಲಿ ಸಿಲುಕುವೆವು ಅಂದು!!

ಗುಣ ಮುಖ್ಯವೆಂದರು, ಫೋಟೋದಲ್ಲಿನ ಮುಖ ನೋಡಿಯೇ ಒಪ್ಪುವರು
ಮನೆತನದ ವಿಷಯ ಜಾಲಾಡಿ, ಅಭಿಪ್ರಾಯ ನಿರ್ಧರಿಸುವರು
ಎಲ್ಲ ಮೆಚ್ಚುವಂತಿದ್ದರೆ, ಮನೆಗೆ ಬರುವೆವೆಂದು ಅವರಿಗೆ ತಿಳುಸುವರು!!

ಕೆಲವೇ ಸಾಲುಗಳಲ್ಲಿ ಇಲ್ಲಿವರೆಗೂ ಬಂದಿದೀವಿ ಆದ್ರೆ real ಆಗಿ ಈ level ಗೆ ಬರೋದು ಒಂದು ಪ್ರಹಸನವೇ ಸರಿ
ಇದೇನಿದೆ ಆ ಹುಡುಗಿ ನೋಡೋ ವಿಷ್ಯ ಇನ್ನೂ ಕ್ಲಿಷ್ಟ ಹಾಗೂ ಸ್ವಾರಸ್ಯಕರ,, ಅದು ಮುಂದಿನ ಭಾಗದಲ್ಲಿ


--ಸಂತ



    

Thursday, June 6, 2013

ಜಾಲಿಬಾರು!!!

ಜಾಲಿ ಬಾರಿನಲ್ಲಿ ಕೂತು, ಅವನು ಅವಳು ಕುರ್ಚಿಗಾತು
ಆಡುತಿದ್ರು ಪೋಲಿ ಮಾತು, ಮಂದಿ ನಾಚುತಿದ್ದರು
ಅವಳ ಮೊಬೈಲ್ ಕ್ಯಾಮ್ರ ಎತ್ತಿ, ಅವರ ಜೋಡಿ ಫೋಟೋ ಒತ್ತಿ
ಫೇಸೆಬುಕ್‌ನಲ್ಲಿ ಟ್ಯಾಗ್ ಮಾಡಿ, ಸುಮ್ಮನೊಮ್ಮೆ ನಕ್ಕಳು

ಅವನ ಜೇಬಿಗೆ ಕೈಯ ಹಾಕಿ, ಒಂದು ಸಿಗರಟೆ ಹೊರಗೆ ಹೆಕ್ಕಿ
ಕಡ್ಡಿ ತೀಡಿ ಕಿಡಿಯು ಹತ್ತಿ , ಹಮ್ಮನೊಗೆಯ ಬಿಟ್ಟಳು
ಅವಳ ಕುರುಲು ಜಾರಲಾಗ, ಅವನು ಸರೆಸಲದನು ಬದಿಗೆ
ಸೆಳೆಯೊ ನೋಟ ಬೀರಲವಳು, ಅವನ ಆಸೆ ಹೆಚ್ಚಿತು

ಕರೆಯುತಿರಲು ಅವನು ಅವಳು, ಮೇಜಿನೆಡೆಗೆ ಸರ್ವರ್ ಬರಲು
ಎಣ್ಣೆ ತಾರೋಆಣ್ನ ಎನಲು, ತರಲು ಒಳಗೆ ಹೊರಟನು
ಅವಳ ಕೆನ್ನೆ ಕೈಯಲ್ಲಿಡಿದು, ತುಟಿಗೆ ತುಟಿಯ ಚುಂಬಿಸಿರಲು
ಎಣ್ಣೆ ತಂದ ಸರ್ವರ್ನಾಚಿ, ಮುಖವ ಮುಚ್ಚಿಕೊಂಡನು

ವೋಡ್ಕಾದೊಡನೆ  ಸೋಡಾ ಸೇರಿ, ಅವನಿಗೊಂದು ಚಿಯರ್ಸ್ ಹೇಳಿ
ತುಟಿಯ ನಡುವೆ ಗ್ಲಾಸನೊತ್ತಿ, ಒಮ್ಮೆ ತನ್ಮಯಳಾದಳು
ತಮಗೆ ಅರಿವೇ ಇಲ್ಲ ಕೊಂಚ, ಪಾನಸೇರಿ ಕಂಠದಂಚ
ನಶೆಯು ಏರುತಿರಲು ಅವಗೆ,  ಬಾನುಭೂಮಿ  ಅದಲು ಬದಲು
                                                                                   -- ಸಂತ 

Based on

ತೂಗುಮಂಚ

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು |
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ 
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು ||

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ 
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು |
ಸೆರಗು ಜಾರುತಿರಲು ಕೆಳಗೆ ಬಾನುಭೂಮಿ ಮೇಲು ಕೆಳಗೆ 
ಅದುರುತಿರುವ ಅಧರಗಳಿಗೆ ಬೆಳ್ಳಿಹಾಲ ಬಟ್ಟಲು ||

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು 
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೆಲಿತೋ 
ತನಗೆ ತಾನೇ ತೂಗುಮಂಚ ತಾಗುತಿತ್ತು ದೂರದಂಚ 
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು ||

                                                                          - ಹೆಚ್. ಎಸ್. ವೆಂಕಟೇಶ ಮೂರ್ತಿ 

Sunday, May 12, 2013

ಅವಳ ಮಧುವೆ!!

ಆರ್ತನಾದದಿ ಮೊಳಗುತ್ತಿತ್ತು ನನ್ನ ದೂರವಾಣಿ,
ತುಂಬಾ ದಿನದ ನಂತರ ಕರೆ ಮಾಡಿದ್ಲು ನನ್ನ ಕನಸಿನ ರಾಣಿ,
ಅವಳಂದಳು - ನನ್ನ ಮಧುವೆ, Please "Come , ಬನ್ನಿ"
ಅದ ಕೇಳಿದ ನನ್ನ, ಕಣ್ಣಲ್ಲಿ "ಕಂಬನಿ"

ಇದರ ಮುಂದಿನ ಭಾಗ ...... 



ಅಚಾನಕ್ಕಾಗಿ ಎದುರಾದಾಗ ನಾವು, ಅವಳು ಬೀರಿದಳು ಮಂದಹಾಸ
ಅಂದು ನಮ್ಮ ಪ್ರೇಮಾಂಕುರದ ದಿನ
ನಾನಿಂತಿರುವೆ ಗೆಸ್ಟ್ ಸಾಲಿನಲಿ ಈಗ , ಅವಳ ರಿಸೆಪ್ಶನ್ ಎಂಬ ಪರಿಹಾಸ
ಇಂದು ನಮ್ಮ ಪ್ರೇಮಾಂತ್ಯದ ದಿನ

ಆಡುತ ಆದ ಗಾಯಕ್ಕೆ, ಅಂದು ಕಟ್ಟಿದೆ ಅವಳ ಹಣೆಗೆ ಗಾಯದ ಪಟ್ಟಿ
ಅದು ನಮ್ಮ ಬಾಂಧವ್ಯದ ಗುರುತು
ಹಸೆಮಣೆಯ ಮೇಲೆ ಕೂತವಳ ಹಣೆಯಲ್ಲಿ ಮಿಂಚುತಿದೆ ಬಾಸಿಂಗದ ಪಟ್ಟಿ
ಇಂದು ನಮ್ಮ ಬಾಂಧವ್ಯ ಅಲ್ಪವಸ್ತು

ಮಳೆ ಸುರಿಯುವ ಇರುಳಲಿ ನನ್ನ ಕೊಡೆಯಡಿಯಲ್ಲಿಯೇ ನಡೆದಿದ್ದೆವು ಒಂದಾಗಿ
ಅಂದದು ನಮ್ಮ ಒಲುಮೆಯ ಸಂಕೇತ
ಭವ್ಯ ಮಂಟಪದಡಿಯಲ್ಲಿ ಅಗ್ನಿಕುಂಡ ಸುತ್ತುತಿರುವಳು ಇನ್ನೋರ್ವನ ಜತೆ ಚಂದಾಗಿ
ಇಂದು ನನ್ನ ಒಲುಮೆಗೆ ಆಘಾತ

ಕಾಲೇಜು ಕಾರ್ಯಕ್ರಮದ ರ್‍ಯಾಂಪಿನ ಮೇಲೆ, ನನ್ನ ಕೈಹಿಡಿದು ಹೆಜ್ಜೆಹಾಕಿದ್ದಳು ನಾಚುತ ಅಂದು
ಅದು ನಮ್ಮ ಆತ್ಮೀಯತೆಯ ಪ್ರದರ್ಶನ
ಅವನು ಅವಳ ಹೆಬ್ಬೆಟಿಡಿದು ಸಪ್ತಪದಿಗೆ ಕರೆಯಲು, ಹೆಜ್ಜೆ ಹಾಕುತಿರುವಳು ನಗುತ ಇಂದು
ಇದು ನಮ್ಮ ಆತ್ಮೀಯತೆಗೆ ತಿಲಾಂಜನ

ಅಂದು ರಾತ್ರಿ, ಅಗಣಿತ ತಾರೆಗಳ ನಡುವೆ ತೋರಿಸಲು "ಅರುಂದತಿ", ಕಂಡಿಲ್ಲವೆಂದು ರೇಗಿಸಿದ್ದಳು
ಅದು ನಮ್ಮ ಸಲುಗೆಯ ಸಲ್ಲಾಪ
ಇಂದು ಸೂರ್ಯನ ಬೆಳಕಲಿ ಮನ ತೋಚಿದೆಡೆ ಕೈ ತೋರಲವನು, ಕಂಡಿತೆಂದು ತಲೆಯಾಡಿಸುತಿರುವಳು
ಇದು ನನ್ನ ಸುಲಿಗೆಯ ಕಲಾಪ

ಇಂದು ಅವಳಿಗೆ ಬಿತ್ತು ಮೂರು ಗಂಟು
ಆ ನಿಮಿಷದಲ್ಲೇ ಮುಗಿಯಿತು ನನ್ನ ಅವಳ ನಂಟು
ಅವರ ಕತ್ತಲಿ ವಿರಮಿಸುತ್ತಿದೆ ಹೂವಿನ ಹಾರ
ನನ್ನ ಮನವ ಕುಗ್ಗಿಸುತ್ತಿದೆ ದುಗುಡ ಭಾರ
ಅರ್ಥವಾಗಲೇ ಇಲ್ಲ ಅವಳಿಗೆ ನನ್ನ ಪ್ರೀತಿಯ ನಿವೇಧನೆ
ಇನ್ನೂ ನನ್ನ ಪಾಲಿಗೆ ಅವಳು ಇನಿಲ್ಲವೆಂಬ ವೇಧನೆ

ನನ್ನ ಕಲ್ಪನೆ, ಈ ಕೆತ್ತನೆ --- ಸಂತ

Tuesday, April 23, 2013

ಹಸಿರು



ಹಸಿರು ನಿನ್ನದು ಉಸಿರು ನಿನ್ನದು
ಎನ್ನ ಜೀವನ ಕಣವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೇ ನನ್ನದು

ನೀನು ಉಳಿದರೆ ನಾನು ಉಳೀವೆನು
ನೀನು ಬೆಳೆದರೆ ನಾನು ಬೆಳೆವೆನು
ನಿನ್ನ ಹರಣದಿ ಹರಣ ನನ್ನದು
ನಿನ್ನ ಮರಣದಿ ಮರಣವು

ನನ್ನ ಉಳಿವಿಗೆ ನೀನೇ ಶಕ್ತಿ
ನನ್ನ ಹೃದಯದಿ ನಿನಗೆ ಭಕ್ತಿ
ನೀನೇ ಮಾಯಾ ಮೋಹಾಷಕ್ತಿಯು
ನನ್ನ ಜೀವನ ಮುಕ್ತಿಯು



Monday, March 25, 2013

ಪ್ರಕ್ಷೂಬ್ಧ ನನ್ನ ಪ್ರಾರಬ್ಧ



ಹಿಂದೆ ಗುರುಯಿಲ್ಲ
ಮುಂದೆ ಗುರಿಯಿಲ್ಲ
ದಿಕ್ಕು ದೆಸೆಯಿಲ್ಲದಂತಾಗಿದೆ ಈ ಪಯಣ
ಎತ್ತ ಸಾಗುತಿದೆ ಈ ಜೀವನ?

ದಿನವೂ ಮಿಡಿಯುತಿದೆ ಮನವು, ಮುಂದೇನು? ಮುಂದೇನು?
ದಿನವೂ ತುಡಿಯುತಿದೆ ಅಂತಃಕರಣ ಇನ್ನೆಂದು? ಇನ್ನೆಂದು?
ಮೂಡುತಿವೆ ಸಾಸಿರ ಪ್ರಶ್ನೆಗಳು ಅನುದಿನ
ಅವುಗಳ ಉತ್ತರ ಹುಡುಕುವುದರೊಳಗೆ ಮೂಡುತಿದೆ ಮರುದಿನ
ಪ್ರತಿದಿನವೂ ಕಾಣುವುದು ನೂರು ದಿಕ್ಕು ದಾರಿ
ಸಾಗುವುದು ಎತ್ತಕಡೆ ಎಂದು ತಿಳಿಯದೇ ಈ ವರಿ

ದುಡಿಮೆಗೆ ಮಾಡುತಿರುವ ಕೆಲಸವೇಕೋ ಬೇಡವೆನಿಸುತ್ತೆ
ಇದನ್ನು ಬಿಟ್ಟರೆ ಬೇರೇನಿದೆ? ಅಂತಲೂ ಅನಿಸುತ್ತೆ.
ಮಾಡುತಿದ್ದರು ಹಲವು ಮನಸಿಗೊಪ್ಪುವ ಪ್ರವೃತ್ತಿಗಳು
ಅವನ್ನೇ ವೃತ್ತಿಗಳಾಗಿ ತೆಗೆದುಕೊಳ್ಳಲು ಹಲವು ತೊಡರುಗಳು
ತೊಡಗಿಸಿಕೊಂಡಿದ್ದರು ಕೆಲವು ವೈವಿದ್ಯಮಯ ಹವ್ಯಾಸಗಳಲ್ಲಿ
ಹೇಳಲಾಗದನ್ನ ಬಯಸಿ ಮನವು ಸೊರಗುತಿದೆ ಚಿಂತೆಯಲ್ಲಿ

ಇದ್ದರು ನಮ್ಮಬಳಿ ಬೇಕಾದ ಹತ್ತು ಹಲವು
ಸದಾ ತವಕಿಸುವೆವು ಬೇಕೆಂದು ಇನ್ನೂ ಕೆಲವು
ಎಲ್ಲರಂತೆ ನಾನಿರಬಾರದೆಂದು ಹಂಬಲಿಸಿದಂತೆ
ಆ ಆಲೋಚನೆಯಲ್ಲೇ ಆಗಿರುತ್ತೆವೆ ಹತ್ತರಲ್ಲಿ ಒಬ್ಬರಂತೆ

ಮಾಡಲೇ ಬೇಕು ಏನಾದರೊಂದು ಅದ್ಭುತ ಎಂಬ ಆಸೆ ಮನದಲ್ಲಿ
ಸದ್ಯಕ್ಕೆ ಮಾಡದಿದ್ದರೂ ಮುಂದೆ ಮಾಡುವೆವು ಎಂಬ ನಂಬಿಕೆಯಲ್ಲಿ

"ಇರುವ ಭಾಗ್ಯಾವ ನೆನೆದು ಬಾರನೆಂಬುದ ಬಿಡು, ಹರುಷಕಿದೆ ದಾರಿ" ಎಂದು ಡಿವಿಜೀ ಹೇಳಿದರು
"ಇರುವುದೆಲ್ಲ ಬಿಟ್ಟು ಇರುವೆ ಬೀಟ್ಕೊಂಡೇ" ಸಾಗಿಸುವೆವು ನಮ್ಮ ಜೀವನ!!

ನಾನೇ ಇಷ್ಟೊಂದು confusion ನಲ್ಲಿ ಒದ್ದಾಡ್‌ತಿದ್ರೆ, ಮನೇಲಿ ಹುಡುಗಿ ನೋಡೋಣ, ನಿನ್ ಮಧುವೆ ಮಾಡೋಣ ಅಂತಾರೆ... ಅದಕ್ಕೆ ಪ್ರಕ್ಷುಬ್ದ ವಾಗಿದೆ ನನ್ನ ಪ್ರಾರಬ್ದ!






Tuesday, March 12, 2013

ಮನಮೋಹಕ ಮಳೆ


ಆಗಸದಲ್ಲಿ ಮೇಘಗಳ ಆಲಿಂಗನ,
ಭುವಿಗೆ ಮಳೆ ಹನಿಗಳ ಚುಂಬನ,
ಮಳೆಗಾಲ - ಅದೆಂತ ರೋಮಾಂಚನ!!

ರವಿ ಕಾಣದೆ ಆ ಮುಗಿಲು, ಸುರಿಸಲು ವರುಷಧಾರೆಯ
ಅಲ್ಲೇ ಅವಿತು ಇಣುಕುತಿದ್ದ ಅವನು, ತುಂಟತನದಿ ಹರಿಸುತಿದ್ದ ಹರುಷಧಾರೆಯ
ತಣಿಸಲು ಮೂಡಿಸಿದ "ಕಾಮನಬಿಲ್ಲೆಂಬ" ಬಣ್ಣದ ಉಡುಗೊರೆಯ!!

ಅನಂತಾಕಶದ ಪರದೆಯ ಮೇಲೆ, ಮಧವೇರಿದ ಮೇಘಗಳದೇ ಆಟ
ಎಲ್ಲರ ರಂಜಿಪಲು ಮಳೆಯಸುರಿಸಿದಂತಿತ್ತು ಅವುಗಳ ಒಡನಾಟ
ಅತಿರೇಕದಿ ಗುದ್ದಾಡಲು ಕಂಡ "ಕೋಲ್ಮಿಂಚು" ನೆನಪಿಸಿತು ಖಡ್ಗ ಜಳಪಿಸಿದಂತೆಯ ನೋಟ!!

Monday, February 18, 2013

ಆಪ್ತಭಿಕ್ಷುಕ



ಊರ ಉರೂರ
ಊರ ಉರೂರ
ಊರ ಉರೂರ ತಿರುಗಿನಾಬಂದೆ ನಿಮ್ಮ ಮನೆಗೆ ಗೃಹಿಣಿ
ಊರ ಉರೂರ ತಿರುಗಿನಾಬಂದೆ ನಿಮ್ಮ ಮನೆಗೆ ಗೃಹಿಣಿ
ಕರುಣಾಮಯಿ, ಧಯೆತೊರುನೀ
ಬಳಲೊ ದೇಹಕ್ಕೆ, ನರಳೊ ಜೀವಕ್ಕೆ, ತಲೆ ತಿರುಗಿದ ತರವಿನ ತಿರುಗಿದೆ ಹಸಿವೆಯಲಿ
ಊರ ಉರೂರ
ಊರ ಉರೂರ
ತಿಂದೆ ಇಲ್ಲ ಲಂಚು, ನಂಗೆ ಮನಿ ಕ್ರಂಚು
ಹಸಿವೆಯಲ್ಲಿ ನ ಡ್ರೆಂಚು, ಯೆಲ್ಲ ದೆವ್ರ ಸಂಚು
ನನ್ನ ಪಾಡು, ನಾಯಿ ಪಾಡು, ಹೆಜ್ಜೆಯ ಇಟ್ಟಾಗ
ಮೈ ಕಂಪನ,  ಕಟುವಗಿ ನಡೆಯುತಿದೆ
ಕಾಡಿದೆ
ಬೇಡಿದೆ
ನಿಮ್ಮ ಸೌಹರ್ದದ, ವತ್ಸಲ್ಯದ, ಮನವ ಕಲುಕಿ ಈ
ಜೀವಾ
ಕವ್ಳ ಕವ್ಳ!!
ಸೋತುನಿಂತ ಕಣ್ಣ
ಖಾಲಿ ಹೊಟ್ಟೆ ಸಣ್ಣ
ಇಲ್ಲ ಕಾಂತಿಯಿನ್ನ, ಬೇಕೆ ಬೇಕು ಅನ್ನ
ನಿಮ್ಮ ಕಂಡು, ಮುಂದೆನಿಂದು , ಊಟನೆ ಅರಿಯದ ಈ
ಧೀನನು, , ಹಾ.....ನಿನ್ನನ್ನಕಿನ್ನು ಶರಣು..
ಒಲಿದು ಬಾ,
ಸಾಯೊ ಈ ಬಳಲಿಕೆ, ಈ ನರಳಿಕೆ, ಉದರ ಹಸಿವ
ತಣಿಸೊಣ,,ಹಹಹ ಆ ಬೇಗತನ್ನಿ 

Actual song lyrics
ಗರನೆ ಗರಗರನೆ..
ಗರನೆ ಗರಗರನೆ..
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ ..
ಗರನೆ ಗರಗರನೆ ತಿರುಗಿದೀ ದರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ, ಗಜ ಗಾಮಿನಿ, ಬಳುಕೊ ನಡೆಗೆ,
ಕುಲುಕೊ ಜಡೆಗೆ, ತಲೆ ತಿರುಗಿದ ತರವಿನ ತಿರುಗಿದೆ
ಅಮಲಿನಲಿ..
ಗರನೆ ಗರಗರನೆ.....!!
ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು , ನಿನ್ನ ನಗೆಯ ಸಂಚು..
ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು..
ಬಾನ ಸೀಳೊ ಮಿಂಚು , ನಿನ್ನ ನಗೆಯ ಸಂಚು..
ನಿನ್ನ ಪಾದ, ನುಣುಪಾದ , ಹೆಜ್ಜೆಯ ಇಡುವೆಡೆ
ಭೂ ಕಂಪನಾ, ಗುಟ್ಟಾಗಿ ನಡೆಯುತಿದೆ..
ಹೆದರಿದ..
ಬೆದರಿದ..
ನಿನ್ನ ಸೌಂದರ್ಯದ, ವಯ್ಯಾರಾದ , ಜಳಕೆ ಸಿಲುಕಿ ಆ
ಸೂರ್ಯ...
ಹೌಲ ಹೌಲಾ.......!!!
ಗರನೆ ಗರಗರನೆ.....!!!!
ದಂತದಂತೆ ಬಣ್ಣ..
ಸೊಂಟ ಸ್ವಲ್ಪ ಸಣ್ಣ..
ದಂತದಂತೆ ಬಣ್ಣ..
ಸೊಂಟ ಸ್ವಲ್ಪ ಸಣ್ಣ..
ಇಂತ ಕಾಂತಿಯನ್ನ ಕಂಡು ತಾರೆ ಚಿನ್ನ..
ನಿನ ಕಂಡು, ಮುದಗೊಂಡು, ಸೋಲನ್ನೇ ಅರಿಯದ ಈ
ಶೂರನು.. ಹ ಹಾ.. ನಿನ್ನಂದಕಿನ್ನು ಶರಣು..
ಒಲಿದು ಬಾ, ನಲಿದು ಬಾ..
ಸವಿ ಸಲ್ಲಾಪಕೆ , ಪಲ್ಲಂಗಕೆ, ಮದನ ಮದವ
ಮದಿಸೊಣ,.. ಹಹಹ ಆ ನಾಗವಲ್ಲಿ...

Wednesday, January 9, 2013

ಬದಲಾಗಲೆಬೇಕು ಏಲ್ಲ!!


ಗ್ರಹೋಪಗ್ರಹಗಳ ಅಂಕೆಯಲಿಟ್ಟು
ಅವುಗಳ ಸೃಷ್ಟಿಲಯಕ್ರಿಯೆಗಳಿಗು ಇವನೆ ಗುಟ್ಟು
ಜೀವಜಾಲದುಗಮಕ್ಕೆ ಬೆಳಕಕೊಟ್ಟರು
ಕತ್ತಲೊಸಗಿ ಮರೆಯಾಗಲೆಬೇಕು ಆ ರವಿಯೂ ಇರುಳಲಿ!!

ಮೇಘಗಳಾಲಿಂಗದಿ ಹನಿಗಳು ಜಿನುಗಿ
ಭೂತಳವೆಲ್ಲ ಹಚ್ಚಹಸುರಲಿ ಮಿನುಗಿ
ಸಕಲ ಜೀವಜಾಲಗಳಲ್ಲಿ ನವೋತ್ಸಾಹ ಚಿಗುರಿಸಿದರು
ಮುಂಗಾರು ಮುಗಿಯಲೇಬೇಕು ೩ ಮಾಸಗಳಲ್ಲಿ!!

ಬಿತ್ತ ಬೀಜ ಮೊಳಕೆಯೋಡೆದು
ಸಸಿಯಾಗಿ, ಹೂವ ತಳೆದು
ಪರಾಗದಿಂದ ಹಣ್ಣ್ ಕಾಯಿ ಹಡೆದು
ಹೊಲವನ್ನು ವಯ್ಯಾರದಿ ಆವರಿಸಿದರು,
ಕಿತ್ತು ಕೆಡವಲೆಬೇಕು ಅದನು, ಪಸಲಿನಾಸೇಯಲಿ!!

ಏರಡು ಕಣಗಳ ಮಿಲನದಿ ಮೂಡಿದ ಜೇವ ನಾವು
ಅಳುತ, ನಗುತ, ಕಲಿತ, ದುಡಿತ, ಸಾಗುತ ಸೇರುವೆವು ಸಾವು
ಇರುವ ನಲ್ಕೂದಿನದಲಿ ಪ್ರೀತಿ ಪ್ರೇಮ ಬಂಧನಗಳಲ್ಲಿ
ದಿನವು ಶಪಿಸುತ ಸಾಗುಸುವೆವು ಈ ನಶ್ವರದ ಜೀವನದಲಿ!!

ಶಾಶ್ವತವೆಂಬುದಿಲ್ಲ, ಬದಲಾಗಲೆಬೇಕು ಏಲ್ಲ!!