Life Goes On...

Life Goes On...
Life--- The way u Look at it

Monday, November 18, 2013

ಉದ್ವಿಗ್ನಗೊಳಿಸಿದ ಆ ನೋಟ!!

ಮೊನ್ನೆ ಉರಿಗೆ ಹೋಗುವಾಗ ಬಸ್ನಲ್ಲಿ ನಡೆದ ನೈಜ ಘಟನೆ.
ತನ್ನ ನೋಟದಿಂದಲೇ, ನನ್ನೊಳಗೆ ಹಲವು ಕುತೂಹಲಕಾರಿ ಆಯಾಮಗಳ ತೆರೆಯಿಸಿದ ಆ ಅನಾಮಿಕ ವ್ಯಕ್ತಿಗಾಗಿ ಈ ನುಡಿ ಸಾಲುಗಳು

ಅಪರಿಚಿತೆ 
ಅವಳು
ಆದರೂ ಹೊತ್ತಿಸಿದಳು 
ಎನ್ನ ಮನದಲಿ ಚಿತೆ,
ಅಜ್ಞಾತ
ಆ ಜಾಗವು
ಆದರು ಅವಳ ಇರುವು
ಆಗಿಸಿತು ಅದನ್ನು ಪರಿಚಿತ

ಹುಡುಕುತಿರಲು 
ನನ್ನ ಕಣ್ಣುಗಳು 
ಸ್ಪಂದಿಸಬಹುದಾದ ನೋಟಗಳ
ಸುತ್ತಲು,
ಹಿಡಿದಿಟ್ಟವು
ಅವಳ ಕಾಡಿಗೆ ತೀಡಿದ ನಯನಗಳು
ನೆನಪಿಸಿ ಚಿತ್ರಕಾರರ ರೇಖಾಚಿತ್ರಗಳು
ನನ್ನ ಮನವು

ಹೊಳೆಯುತಿತ್ತು,
ಅವಳ ಕಣ್ಣುಬ್ಬುಗಳ ನಡುವಿನ ಚುಕ್ಕಿ,
ನೋಡುಗರ ಕಣ್ಣ ಕುಕ್ಕಿ
ಸೊರಗುತಿತ್ತು.
ಮಿನುಗುತಿತ್ತು
ಆ ಮೊನಚು ಮೂಗಿನ ಬದಿಯಲ್ಲಿ ಮೂಗುತಿ,
ಎಂಥಾ ಚೆಲುವು ಎಂದು ನನ್ನ ಮತಿ
ಕನವರಿಸುತಿತ್ತು 

ತವಕ,

ನೋಡಲವಳ ಚೆಲುವ
ಮನಸ್ಸು ತೃಪ್ತಿಯಾಗುವ
ತನಕ
ಆದರೆ ಅಳಕು
ಎಲ್ಲಿ ಅವರ ಕಡೆಯವರು
ಅಕಸ್ಮಾತ್ ನೋಡುವರೋ
ನನ್ನ ಲುಕ್ಕು

ಬೀರುತಿದ್ದಳು
ಆಗಾಗ ಅವಳು ಮಂದಹಾಸ
ಕೇಳಲಾಗಿ ಯಾವುದೋ ಪರಿಹಾಸ
ಮಾತುಗಳು.
ಹಗುರಾಗಿ
ಹೃದಯ ಕುಣಿಯುತಿತ್ತು,
ನನಗಾಗಿ ಆ ಮಂದಹಾಸ ಮೂಡುತಿತ್ತು
ಅನಿಸಲಾಗಿ.

ನಾಚುತಿರಲು

ಅಷ್ಟು ಜನರ ನಡುವೆ 
ಅವಳ ಸುಂದರ ಮುಖವೇ
ನೋಡಲು,
ಬಿಗುಮಾನವಿಲ್ಲದೆ 
ನೋಡುತಿದ್ದಳು
ನನ್ನ ಕಡೆಯೇ ಅವಳು
ಕಣ್ಣು ಮಿಟುಕಿಸದೇ

ತಳಮಳ 

ನೋಡುತಿರಲು ಅವಳು ನನ್ನನ್ನೇ
ತದೇಕ ಚಿತ್ತದಿ ಒಂದೇ ಸಮನೆ
ಕಣ್ಣು ಮಿಟುಕಿಸದೆ ಪಳಪಳ
ಅದಕ್ಕೆ 

ಪರೀಕ್ಷಿಸಿದೆ ಅವಳ ನೋಟ ಕದ್ದು ಮುಚ್ಚಿ 
ಆದರೂ ನನ್ನನ್ನೇ ನೋಡುತಿದ್ದಳು ಚುಚ್ಚಿ
ಯಾಕೆ?

ಅನುಮಾನ

ಮೂಡುತಿತ್ತು ನನ್ನ ಒಳಗೆ,
ಇರುವೆನೋ ನಾನು ಬೆರೇರು ಒಪ್ಪುವ ಹಾಗೆ
ಎನುತ್ತಿತು ನನ್ನ ಮನ
ಅನುಮಾನ
ತಿಳಿಯದೆ ಕಾರಣ ಅವಳ ಈ ನೋಟದ ಪರಿ,
ಕಾಣುವೆನೋ ಏನೋ ಚಿತ್ರ ವಿಚಿತ್ರವಾಗಿ,
ಎಂಥ ಅವಮಾನ!! 

ಸಿಗಲೇ ಇಲ್ಲ
ನನ್ನ ಅನಕುಲಕ್ಕೆ ಒಂದೂ ಕ್ಷಣ
ತೀರಿಸಲು ನಮ್ಮ ಕಣ್ಣ ನೋಟದ ಸಲುಗೆಯ ಋಣ
ಆ ಯಾನದಲೆಲ್ಲ 
ಉಳಿಯಿತು
ಕೊಡಬೇಕಿದ್ದ ನನ್ನ ಮಂದಹಾಸದ ಬಹುಮಾನ
ಎಲ್ಲೆ ಮೀರಿದ ನನ್ನ ಸಾಚಾತನದ ಬಿಗುಮಾನ
ಅದನ್ನ ತಡೆಯಿತು

ಮುಗಿಯಿತು

ನನ್ನ ಅವಳ ಅಂದಿನ ಪಯಣ
ಉಳಿಸಿ ನಮ್ಮ ನಡುವೆ ನೆನಪುಗಳ, ನಯನ
ಮೆರೆಯಿತು
ಅಪರಿಮಿತ
ಆಸೆಯಿದ್ದರೂ ಹೇಳಬೇಕೆಂದು ಕೆಲವು ಮಾತು
ಅಘೋಚರ ಬಂಧನದಿ ಏನು ತೋಚಲಿಲ್ಲ ಅಷ್ಟು ಹೊತ್ತು
 ಅವಳು ಈ ಪದಪುಂಜಕೇ ಸೀಮಿತ