Life Goes On...

Life Goes On...
Life--- The way u Look at it

Sunday, September 19, 2010

ಇತ್ತು ಬಿಡುವು, ಹೋಗಿದ್ವಿ ಮುತ್ಯಾಲ ಮಡುವು

ಇತ್ತು ನಿನ್ನೆ(saturday) ಬಿಡುವು
ಸುಮ್ಮನಿರಲಾರದೆ, ಹೋಗಿದ್ವಿ ನೋಡೋಕೆ ಮುತ್ಯಾಲ ಮಡುವು (pearl valley)
Falls ಬಗ್ಗೆ ಗೊತ್ತಿಲ್ಲ, ಕಣ್ಣು ಅರಳಿಸಿದರೆ ಕಂಡಿತು ಚಿಕ್ಕ ನೀರ ಜರಿ,
ಹುಡುಕಿಕೊಂಡು ಹೋಗಿದ್ದ ನಮಗೆ ಮೆಯ್ಯಲ್ಲ ಉರಿ.......
But ಮಜಾ ಕೊಡ್ತು ನಮ್ಮ bike ಸವಾರಿ ಮತ್ತೆ ಪಕ್ಷಿ ವೀಕ್ಷಣೆಯ ಪರಿ.......


ಮೇಲಿನ ಸಾಲುಗಳ ವಿಸ್ತಾರ ವಿವರಣೆ ಹೀಗಿದೆ...
ಸುಮಾರು ಒಂದು ತಿಂಗಳಿಂದ cousin's , sibbling's ಮಧುವೆಗಳಿಗೆ ಬಿಡುವಿಲ್ಲದೆ ತಿರುಗಾಡಿದ್ದ ನಮ್ ದೋಸ್ತ್ 'ಬಕೆಟ್ ಗುಂಡ', ಕಳೆದ ವಾರಾಂತ್ಯದಿಂದ ಸ್ವಲ್ಪ ಉಸಿರಾಡೋ ತರ ಆಗಿದ್ದ. ಅದು ಅಲ್ಲದೆ ಯಾವದೋ ಎಡವಟ್ಟು ಗಳಿಗೇಲಿ ಇದ್ದ company ಬಿಟ್ಟು ದುಡ್ಡು ಚೆನ್ನಾಗಿ ಕೊಡೊ ಮತ್ಹೊಂದುಕ್ಕೆ ಸೇರ್ಕೊಂಡ. ದುಡ್ದೇನು ಸುಮ್ಮನೆ ಜಾಸ್ತಿ ಕೊಡ್ತಾರೆ, ಸೆರಿಯಾಗಿ ಅರಿಯೋತರ ದುಡಿಸಿಕೊಳ್ತಿದರೆ. ಸೊ ಇಸ್ಟೆಲ್ಲಾ tensions ಅಲ್ಲಿ ಬಿಗಿಯಾಗಿದ್ದ ನಮ್ ಗುಂಡನಿಗೆ ಸ್ವಲ್ಪ relax ಮಾಡ್ಸೋಣ ಅಂತ್ಹೇಳಿ ಒಂದು outing ಪ್ಲಾನ್ ಮಾಡಿದ್ವಿ. ಆ ಪ್ಲಾನಿನ ಪಲಿತಾಂಶವೇ ಈ ಮುತ್ಯಾಲ ಮಡುವಿನ ride . ಗುಂಡನಿಗೆ ಅಂತಾನೆ ಅಲ್ಲಾ, ನಾವುಗಳು ಸಹ relax ಆಗೋಣ ಅಂತ. ಹಾಗೇನೆ ಮಧುಗೆ photography ಮತ್ತು ನನಿಗೆ birding ಮಾಡೋಕು ಅವಕಾಶ ಸಿಗುತ್ತೆ ಅಂತ.

ಪ್ರತಿಸಲ ಅಗೊತರಾನೆ ಈ trip ಸಹ ಅಂತ ಪೂರ್ವ ತಯಾರಿ ಇಲ್ಲದೆನೆ ಮುಗುಸ್ಬಿಟ್ವಿ. ನಾನು Bosch ಸೇರ್ಕೊಂಡ ಮೇಲೆ, ನನ್ನ ಹತ್ರನು ಜನ ಕೆಲಸ ಮಾಡ್ಸೋತರ ಆಗಿದಾರೆ ಮತ್ತೆ ಈ bosch ಅಲ್ಲಿ internet access ಬೇರೆ ಕಷ್ಟ. ಈ ಎಲ್ಲವುಗಳ ದೆಸೆಯಿಂದ Trips plan ಮಾಡೋದು ಸ್ವಲ್ಪ ಕಷ್ಟ. ನಾವುಗಳು ವಾರದಲ್ಲಿ ಐದು ದಿನ ಗಳಿಕೆಗಾಗಿ ಈ corporate ಕಾಡಲ್ಲಿ ಟೈಮ್ ಯೆಲ್ಲಾ ಹೊಗೆಹಾಕ್ಸಿಕೊಳ್ತಿವಿ ಅದರಿಂದ ಎಲ್ಲ ಪ್ಲಾನ್ ಗಳು ಶುಕ್ರವಾರ ಸಂಜೆ sudden ಆಗಿ ತಯಾರಾಗ್ತವೆ.

ಮೊನ್ನೆ ಶುಕ್ರವಾರ ಸಂಜೆ ಇವರುಗಳು ಗುರ್ತುಸೋ ವರಿಗೂ ನನೆಗೆ ಟ್ರಿಪ್ ಪ್ಲಾನ್ ಮರ್ತೆಹೊಗಿತ್ತು. ಕೆಲವು call ಹಚ್ಚಿ ಕಡೆಗೂ ನಾಲ್ಕು ಜನ ಟ್ರಿಪ್ ಹೋಗೋ ಹಾಗೆ ಮಾಡ್ಕೊಂದ್ವಿ. ನಾಲ್ಕು ಜನ ಬರೋಕೆ ready ಇದ್ರೂ ಹೊಗೊದೆಲ್ಲಿಗೆ ಅಂತ ಮಾತ್ರ ಫಿಕ್ಸ್ ಆಗಿರಲಿಲ್ಲ, ಎರಡು ದ್ವಿಚಕ್ರ ವಾಹನಗಳು ಇದ್ವು ಅಂತ ದೈರ್ಯ. ಬಾಯಲ್ಲೇ ತಿರುಗ್ತಿದ್ದ "pearl valley " ಅಥವಾ " ಮುತ್ಯಾಲ ಮಡುವು" ಗೆ ಹೋಗೋಣ ಅಂತ ಹೇಳಿ, ಎಲ್ಲರನ್ನು ಆಕಡೆ ಹೊರಡೋಕೆ ತಯಾರಾದ್ವಿ

ಬೆಳಗ್ಗೆ ೯ ಗಂಟೆಗೆ ಹೊರಡೋ ಪ್ಲಾನ್ ಮಾಡ್ಕೊಂಡಿದ್ದ ನಾವು ಕಡೆಗೂ 11 30 ಗೆ ಮನೆ ಇಂದ ಹೊರಟು silk board ಬಳಿ ಎಲ್ಲರೂ ಸೇರಿ, ಹಾಗೆ ಮುಂದೆ ಸಾಗಿ Electronic City ನ ಹಿಂದಿಕ್ಕಿ, ಕಡೆಗೂ ಚಂದಾಪುರ ಸೇರ್ಕೊಂಡು ಒಂದು ಒಳ್ಳೆ ತಿಂಡಿ ಮುಗಿಸಿದ್ವಿ. ಅಲ್ಲಿಂದ right ಗೆ ತಿರುಗಿ 9km ಎಲ್ಲೂ ನಿಲ್ಲದೆ ಸೀದ ದಾರಿ ಬಳುಸ್ಕೊಂಡೆ ಹೋದ್ರೆ ನಮಿಗೆ ಸಿಕ್ಕಿದು ಆನೇಕಲ್. ಅಲ್ಲಿನ ಜನ ಹೇಳಿದ ರೈಟ್ ಅನ್ನೋ ಲೆಫ್ಟ್, ಲೆಫ್ಟ್ ಅನ್ನೋ ರೈಟ್, ಇಲ್ಲೇ ಅನ್ನೋ ಅಲ್ಲೇ, ಹೀಗೆ ಹೇಳಿದ confusing ದಾರಿನೆಲ್ಲ follow ಮಾಡ್ಕೊಂಡು ಕಡೆಗೂ ಈ ಊರಿನ ಆಚೆಗೆ ಬಂದು ಮುತ್ಯಾಲ ಮಡುವಿನ ದಾರಿ ಹಿಡುದ್ವಿ. ಇದೇ ದಾರಿಯಲ್ಲಿ ಸಾಗಿದರೆ ಒಂದು km ನಂತರ "ಮುತ್ಯಾಲ ಮಡುವಿಗೆ" ದಾರಿ ಅಂತ ಹೇಳಿ ಬಲಗಡೆ ತಿರುವೊಂದನ್ನ point ಮಾಡ್ತಿರು ಕಲ್ಲುಸಿಕ್ತು. ಅಲ್ಲಿ ತೋರಿಸಿದ ದಿಕ್ಕಲ್ಲೇ ತುರುದ್ರೆ 3kms ಅದಮೇಲೆ ಸಿಕ್ತು ನಾವು ನೋಡ್ಬೇಕು ಅಂತಿದ್ದ 'ಮುತ್ಯಾಲ ಮಡುವು'.

ಅಬ್ಬಾ ಅಲ್ಲಿ ಕಂಡ ಮೊದಲ ದೃಷ್ಯನೆ ನಮ್ಮ ಎಕ್ಷ್ಪೆಕ್ತತಿಒನ್ ನೆಲ್ಲ nullify ಮಾಡ್ತು. ಏನಂತಿರ, ಈ ಜನ ಸಂಖ್ಯೆ ಮಿತಿಮೀರಿರೋ ನಮ್ ಬೆಂಗಳೂರು ಅಂತ ಊರಲ್ಲಿ ಕೇಳ್ಬೇಕ ಸ್ವಲ್ಪ ಹೆಸರಿರೋ ಯಾವ place ಗೆ ಹೋದರು, ಆ place ನೂ ಮಾರೆಮಾಚೋ ತರ ಜನ ಸೇರಿರ್ತಾರೆ. ಅದೇ ರೀತಿ ಇಲ್ಲೂ ಸಹ ಬಂದಿದ್ದ ಜನ ಹಾಗು ಅವರುಗಳ ವಾಹನಗಳದೆ ಕಾರುಬಾರು. usually ನಾವುಗಳು ಹೋಗೋ ಜಗದಲ್ಲಿ ನಮನ್ನ ಬಿಟ್ಟು ಬೇರೆಯವರು ಇರೋದೋ ಬಾಳನೆ ವಿರಳ ಸೊ ಈ ಜನ ಸಮೂಹ ನೋಡಿ ನಮಿಗೆ......

ಫಾಲ್ಸ್ ಗೆ ಅಂತಿದ್ದ ಮೆಟ್ಟಿಲ ಮೇಲೆ ನಾವು ನಮ್ಮ ಪಾದ ಸೇವೆನ ಅದೇ ಜನರ ಮಧ್ಯೆ ಶುರು ಮಾಡುದ್ವಿ. ಸ್ವಲ್ಪ ಮೆಟ್ಟಿಲು ಇಳಿತಿದ್ದ ಹಾಗೆ ಬೇಜಾನ್ birds ಕಾಣಿಸೋಕೆ ಶುರುವಾದವು, ಸೊ ನಾವು ನಮ್ binocs ನ ಕೈಗೆತ್ತಿ ಕೊಂಡು ತಯಾರಾದ್ವಿ. ಅಷ್ಟರಲ್ಲೇ ನಮ್ ಎದ್ರಿಗೂ ಕೆಲವು chicks ಬಂದು ನಮ್ಮ attention ನ ಅವರಕಡೆಗೆ ತಿರಿಗಿಸಿಕೊಂಡರು. ಅಲ್ಲಿದ ಸಿಟಿ ಜನರ ಪಾಡು....ಪಾಪ ಅಪ್ಪಿತಪ್ಪಿ ಅಲುಗಾಡಿನು ರೂಡಿ ಇಲ್ಲದಿರೋ ಇವರು ಗಳು ಅ ಮೆಟ್ಟಿಲು ಇಳಿಯೋವಾಗ ಪಡುತಿದ್ದ ಕಷ್ಟ, ನೋಡಿನೇ ಖುಷಿ ಪಡಬೇಕು. 20 ಮೆಟ್ಟಿಲು ಇಳಿದಿಲ್ಲ ಆಗಲೇ ಎಷ್ಟ್ ದೂರ ಇದೆ ಅಂತ ಒಬ್ರು, ಅಲಿದ್ದ ಸಾಮಾನ್ಯ ಮೆಟ್ಟಿಲಿಗಳನ್ನೇ ಏನೋ ಒಂದು ದೊಡ್ಡ trek ಮುಗಿಸಿದ್ದ ಹಾಗೆ feel ಕೊಡ್ತಿದ್ದ ಇನ್ ಕೆಲವರು, ತೀರ್ಥ ಯಾತ್ರೆಗೆ ಹೊರಟು ಬಂದ ಹಾಗೆ ಇಡೀ family batalion ಗಳು ಕೆಲವು, ಹಾಗೆ ಕದ್ದು ಮಾಡೋ/ತಿರುಗೋಕೆ ಅಂತ ಹೇರಳವಾಗಿ ಬಂದಿದ್ದ ಜೋಡಿ ಹಕ್ಕಿಗಳು ಮತ್ತು ಅವರುಗಳ Sweet nothing ಸು, sense ಇಲ್ಲದಿರೋ ಕಾಮಿಡಿ ಚಲ್ಲಾಟಗಳ ಚಿಲಿಪಿಲಿ disturbance..... ಇನ್ನು ಹಲವು.

ಇವೆಲ್ಲವುಗಳನ್ನು ತಡಕೊಂಡು, ಎದುರುಗಡೆ ಹಿಂತಿರುಗಿ ಬರ್ತಿದ್ದವರ ಖುಷಿ ನೋಡಿಕೊಂಡು, ಆ ಫಾಲ್ಸ್ ಬಗ್ಗೆ ನಮ್ಮದೇ ಆದ ಒಂದು ಅಭಿಪ್ರಾಯ ಬೆಳಿಸಿಕೊಂಡು ಅವೇ ಮೆಟ್ಟಿಲುಗಳನ್ನ ಇಳಿಕೊಂಡು,, ಕಡೆಗೂ ಅ ಫಾಲ್ಸ್ ಅನ್ನೋ ಫಾಲ್ಸ್ ಹತ್ತಿರಕ್ಕೆ ಬಂದೆ ಬಂದ್ವಿ. ಅಲ್ಲಿಗೆ ಬಂದಮೇಲೆನೆ ನಮಿಗೆ ಆಶ್ಚರ್ಯ ಆಗಿದ್ದು. ಎಲ್ರು ಫಾಲ್ಸ್ ಅಂತ ನೋಡಿ ಖುಷಿ ಪಡುತಿದ್ದ ಸ್ತಳದಲ್ಲಿ ನಾವು ಹುಡುಕಿದರೂ ನಮಿಗೆ ಫಾಲ್ಸ್ ಅನ್ನೋತರ ಏನು ಕಾಣಿಸಿದ್ದೆ ಇಲ್ಲ. ಏನೋ ಒಂದು ದೊಡ್ಡ ಬಂಡೆಗಳ ಗುಂಪು, ಅವುಗಳನ್ನ ನೆನೆಸೋಕೆ ಅಂತ ಹರಿತಿದ್ದ ಹಾಗಿದ್ದ ನೀರ ಜರಿ, ಹಾಗೆ ಹರಿದ ನೀರು ಆ ಬಂದೆ ಗಳ ಕೊನೇಲಿ ನಲ್ಲಿಯಿಂದ ಬೀಳೊಹಾಗೆ ಬೀಳ್ತಿತ್ತು ... ಅದನ್ನೇ ಜನ ಫಾಲ್ಸ್ ಅಂತ ಹೇಳಿ ನೋಡಿ ನಲಿತಿದ್ರು, ನೆನೆದು ನುಲಿತಿದ್ರು, ಖುಷಿಯಿಂದ ಚೀರುತಿದ್ರು, ಕ್ಯಾಮೆರಾಗೆ ಪೋಸ್ ಕೊಡ್ತಿದ್ರು, ಅವರದೇ ರಿತಿಲಿ ತಮ್ಮ ಪ್ರೀತಿ ಪಾತ್ರರಿಗೆ ಇದರ ಸೌಂದರ್ಯನ ವರ್ನಿಸುತಿದ್ದರು. ಆ ಬಂಡೆಗಳ ಕೊನೆಯಿಂದ ಬಿಳುತಿದ್ದ ಅಲ್ಲಾ ಜರುತಿದ್ದ ಆ ನೀರಿನ ಸಿರಿಯಣ್ಣ ಏನಂಥ ಬಣ್ಣಿಸಲಿ, ಅದರ ಸೌಂದರ್ಯ ವನ್ನ ನೀವೇ ನೋಡಿ ನಿಮ್ಮ ಮನಸಲ್ಲಿ ಮುದೋ ಭಾವನೆಗಳನ್ನ ನೀವೇ ಅರ್ಥ ಮಾಡ್ಕೊಂಡು ಹಬ್ಬ ಮಾಡ್ಕೊಳಿ.. ತಗೋಳಿ ಆ ಸುಂದರ, ರುದ್ರ ರಮಣೀಯ, ಮನೋಹರ, ಮೈ ಪುಳಕಿಸುವ, ಪದಗಳಿಗಿ ಮೀರಿದ ಆ ಪ್ರಕೃತಿಕಾ ವಿಸ್ಮಯದ ಆ ವಿಹಂಗಮ ನೋಟವನ್ನ ಈ ಪೋಟೋ ದಲ್ಲಿ ನೋಡಿ ಖುಷ್ ಆಗಿ.

ಹೀಗೆ ನೋಡಿದರೆ ಬರೀ ನೀರ ಜರಿ.....


ಹೀಗೆ zoom ಮಾಡಿ ನೋಡಿದರೆ Pearl valley ....


ಆ ವಿಸ್ಮಯವದಂತಹ, ವಿಚಿತ್ರವಾದಂತಹ, ಮೈ ನವಿರೇಳಿಸುವಂತಹ, ಕಣ್ಣ ಕುಕ್ಕುವ ಆ ರುದ್ರ ರಮಣೀಯ ಮುತ್ಯಾಲ ಮಡುವನ್ನು ನೋಡಿ ಚಕಿತರಗಿ, ಪುಳಕಿತರದ ನಾವು, ಮತ್ತೆ ಶುರು ಹಚ್ಹಿಕೊಂಡದ್ದೆ Photography . ಅಲ್ಲೇ ಆ ನಿಂತ ನೀರಿನ ಬಳಿ ಸುಳಿದಾಡುತಿದ್ದ "Dragon Flies , ಕೆಲವು ವರ್ಣರಂಜಿತ ಪುಟ್ಟ ಪುಟ್ಟ ಹೂಗಳು, ಇನ್ನು ಕೆಲವು ನೀರ ಹುಳುಗಳು, ಅಲ್ಲೇ ಕೀಳೋ ಕೆಲಸವಿಲ್ಲದೆ ನಿಂತಿದ್ದ ನಮ್ಮ ಗುಂಡ ಹಾಗು ಆ ಫಾಲ್ಸ್ ಅನ್ನೋ ಫಾಲ್ಸ್ ಬಳಿ ಏನೋ ಮಾಡ್ತಿದ್ದ ಪ್ರೇಮ ಪಕ್ಷಿಗಳನ್ನ ನಮ್ಮ ಪುಟ್ಟ ಕ್ಯಾಮೆರಾ ಕಣ್ಣಿಂದ ವಿವಿದ ಬಂಗಿಗಳಲ್ಲಿ ಬಂದಿಸುತ್ತಾ ನಮ್ಮ ಛಾಯಾಗ್ರಹಣದ ಪರಿಯನ್ನ ಮುಂದುವರ್ಸಿದ್ವಿ.

ಅಲಿದ್ದ ಜನರ ಹಾಗು ಅದೇ levelಗಿದ್ದ ಕೋತಿಗಳ ಕಟ ತಡಿಯೋಕೆ ಆಗದೆ, ಆ ನೀರಿನ ಪ್ರಾಕೃತಿಕ ವೈಭವ ನಮ್ಮ ಕಣ್ಣಿಂದ ನೋಡೋಕೆ ಆಗದೆ ಕಡೆಗೂ, ನಾನು ಗುಂಡ ಅಲ್ಲಿಂದ ಕಾಲುಕಿತ್ವಿ. ಆದರೆ ನಮ್ಮ budding photograghy buddy ಮಧು ಮಾತ್ರ ಆ ಫಾಲ್ಸ್ ನ pearls ತರ ಪೋಟೋ ತಗಿಲೇಬೇಕೆಂದು ಅಲ್ಲೇ ಇದ್ದ. ಜತೆಗೆ ನಮ್ ಪ್ರಶಾಂತ್ ಸಹ ಆ ಫಾಲ್ಸ್ ಅನ್ನೋ ಫಾಲ್ಸ್ ಬಳಿ ಪೋಟೋ ತಗಿಸುಕೋಬೇಕಂತ ಮಧು ಜತೇನೆ ಇದ್ದ.

ನಾನು ಗುಂಡನಿಗೆ relax ಮಾಡಿಸಲೇ ಬೇಕಂತ ಫಿಕ್ಸ್ ಆಗಿ, ಅಲ್ಲೇ ಸುತ್ತ ಇದ್ದ ಪೋದುರಿನಂತಹ ಕಾಡಿಗೆ ಪಕ್ಷಿ ವೀಕ್ಷಣೆಗೆ ಅಂತ ಕರೆದುಕೊಂಡು ಹೊರಟೆ. ಸುಮ್ನೆ bird watching ಗೆ ಅಂದ್ರೆ ನಮ್ ಗುಂಡ ಬರ್ತನ, ಅದುಕ್ಕೆ ಜೋಡಿ ಹಕ್ಕಿ ಗಳನ್ನ ತೋರುಸ್ತೀನಿ ಅಂತ ಹೇಳಿ ಅವನನ್ನ ಕರೆದುಕೊಂಡು ಹೋದೆ. ಆದರೆ Expect ಮಾಡಿದಕ್ಕಿಂತ ತುಂಬಾನೆ ಪಕ್ಷಿಗಳು ಅಲ್ಲಿದ್ವು moreover ನಾವು ಹೋಗಿದ್ದ ಕಡೇ ಆ ಜೋಡಿ ಹಕ್ಕಿಗಳ ಕಾಟನೂ ಇರಲಿಲ್ಲ. Binocs ನಲ್ಲಿ ಪಕ್ಷಿಗಳನ್ನ ನೋಡಿದ ಗುಂಡ ಕಂಗಾದ, ಹಾಗೇನೆ ಅವುಗಳ ಬಗ್ಗೆ ಸ್ವಲ್ಪ ಆಸಕ್ತಿನೂ ಬೆಳುಸ್ಕೊಂಡ. Purple rumped sunbird, lotten sunbird, red whiskered bulbul, red vented bulbul, yellow wagtail, few barbets, pied bushchat, bee eaters etc ಇನ್ನು ತುಂಬಾನೇ ಪಕ್ಷಿಗಳನ್ನ ಗುಂಡನಿಗೆ ತೋರುಸ್ದೆ. ಹೀಗೆ ಒಂದ್ one hour ಬರ್ಡ್ watching ಮಾಡ್ಕೊಂಡು ಮತ್ತೆ ಫಾಲ್ಸ್ ಅನ್ನೋ ಫಾಲ್ಸ್ ಹತ್ತಿರ ಬಂದ್ವಿ. ಅಲ್ಲಿಗೆ photography ಮುಗುಸ್ಕೊಂಡು ಏನ್ ಮಾಡಬೇಕು ಅಂತ ಯೋಚನೆ ಮಾಡ್ತಿದ್ದ, ನಮ್ಮ ಮಿಕ್ಕ ಸಹ ಪ್ರವಸಾರ್ತಿಗಳುನೂ ಸೇರಿಕೊಂಡು return journey ಶುರು ಮಾಡಿದ್ವಿ.

ಅದೇ ಮೆಟ್ಟಿಲುಗಳನ್ನ ಹತ್ಕೊಂಡು, ಅಡಿಅಡಿಗು ಅಡ್ದಸಿಕ್ತಿದ್ದ ಆ ಜನ ಸಾಗರದ ಅಡಚಣೆ ತಡ್ಕೊಂಡು ಕಡೆಗೂ ನಮ್ಮ ವಾಹನ ಗಳ ಬಳಿ ಬಂದು ಸೇರ್ಕೊಂಡುವಿ. ಸ್ವಲ್ಪ ಹೊಟ್ಟೆಗೆ ಅದು ಇದು ಅಂತ ಹಾಕೊಂಡು, ಮನೆಯಿಂದ ತಂದಿದ್ದ ಪಾರ್ಸೆಲ್ ನ ಮುಗಿಸೋಕೆ ಜಗ ಹುಡುಕಿಕೊಂಡು ನಮ್ಮ return journey ಶುರು ಮಾಡುದ್ವಿ. ಸ್ವಲ್ಪ ದೂರ ಬಂದು ಅಲ್ಲೇ ಇದ್ದ ಹೊಲದ ಪಕ್ಕದ ಮರದ ಕೆಳಗೆ ಗಾಡಿ ಪಾರ್ಕ್ ಮಾಡಿ ನಮ್ಮ ಪಾರ್ಸೆಲ್ ಕಾಲಿ ಮಾಡಿ, ಅಲ್ಲೇ ಪೋದರಲಿದ್ದ ಬೇಜಾನ್ ಪಕ್ಷಿಗಳನ್ನ watch ಮಾಡ್ಕೊಂಡು, ಆ ಹೊಲದಲ್ಲಿ ಸ್ವಲ್ಪ ಹೊತ್ತು photography ಮಾಡಿ ಮುಗುಸಿ... ಮನೆ ಕಡೇ ಹೊರುಟ್ವಿ.

ಇಷ್ಟೆಲ್ಲಾ ಮುಗುಸ್ಕೊಂಡು ನಾವು ಮನೆಗೆ ಸಂಜೆ ೫ ೩೦ ಗೆ ಸೇರ್ಕೊಂಡುವಿ.........
ಇದೆ ಮೇಲಿನ ಆ ಆರು ಸಾಲುಗಳ ವೃತ್ತಾಂತ .......

ಇಲ್ಲಿ ಬಳಕೆ ಆಗಿರೋ ಪತ್ರಗಳ ವಿಹಂಗಮ ನೋಟ ಹೇಗಿದೆ ನೋಡಿ.... viz Prashath, Mithun/Gunda, Madhu and Myself....

Tuesday, September 14, 2010

ನಮ್ಮೂರ ಉಸಾಬರಿ - 1

ನಮ್ಮೂರು ಈ level ಗೆ improve ಆಗಿರೋದು ನೋಡಿ, ಕೇಳಿ, ಖುಷಿ ಜತೆಗೆ ಗಾಬ್ರಿನು ಆಯಿತು... ಸಿಕ್ಕಾಪಟ್ಟೆ ಬೆಳಿತಿರೋ Real Estate, ಮೊನ್ನೆ ತಾನೆ ನಮ್ ಮಿನಿಸ್ಟರ್ inagurate ಮಾಡಿದ Textile Park, ಯಾವುದೊ ಮೈಸೂರ್ based BPO, Nursing ಮತ್ತೆ Degree college , ಈ college ಸಲುವಾಗಿ ಬಂದಿರೋ Kerala ಕುಟ್ಟಿಗಳು, ಊರಿಗೆ ಬರೋದ್ರಲ್ಲಿರೋ NH4 n NH7, ನಂಬೋಕೆ ಕಷ್ಟ ಇದ್ರೂ ನಮ್ ಊರಿಗೂ Train ಲೈನಿನ ಭರೋಸೆ, ಸೊಂಧಿ ಗೊಂದಿಗು ಹಾಕಿರೋ concrete Road, ಹೀಗೆ ಬೇಜಾನ್ reasons. ಅಸ್ಟೆ ಅಲ್ಲದೆ ನಮ್ಮೂರಿನ Circle Inspector, ಅದೇ ಶನೀಶ್ವರ ಸ್ವಾಮಿಗಳ Temple ಗೆ ಬರ್ತಿರೋ ಜನಾದರಣೆ. ನಮ್ ಊರಿನ ಶಾಸಕರಿಗೆ ಅದ್ರುಷ್ಟ ಅಟ್ಟಿಸಿಕೊಂಡು ಬಂದು ಆಟಕಯಿಸಿಕೊಂಡು Minister ಆದಮೇಲನ್ತು.....ಊರು......?????? ಇಷ್ಟೆಲ್ಲಾ ಒಳ್ಳೆ ವಿಷಯ ಹೇಳಿದ ಮೇಲೆ atleast ಕೆಲವದ್ರು interesting developments ಹೇಳಿಲ್ಲ ಅಂದ್ರೆ ಹೇಗೆ. ನಮ್ಮೂರ Outskirts ಅಲ್ಲಿ ಗಂಡು ಹೈಕ್ಲು ಹೆಣ್ಣು ಹೈಕ್ಲು ಉಜ್ಜಾಡಿಕೊಂಡು ತಿರುಗೊದ್ರಿಂದ ಹಿಡಿದು Bangalore ಗೆ ಹೋಗಿ ಮಜಾ ಉಡಾಯಿಸಿಕೊಂಡು ಬರೋ level ಗೆ ಉರು ಊರಿನ ಹುಡುಗುರು ಉದ್ದಾರ ಆಗಿದಾರೆ. ಈ ತರ ವಿಷಯನ ಬರಿ ಕೇಳ್ತಿದ್ದ ನನಿಗೆ ಈ ಬರಿ ನೋಡೋಕೆ ಸಿಕ್ಕಿದ ಅದೃಷ್ಟ. ನಾವು bird watching ಗೆ ಅಂತ ಲೇಟ್ evenings ವರಿಗೂ ಉರಾಚೆನೆ ಇರ್ತಿದ್ವಿ so return ಬರೋವಾಗ ಈ ಜೋಡಿ ಹಕ್ಕಿಗಳದೆ ಕಾರುಬಾರು. ಊರಾಚೆ ಈ ಪಡ್ಡೆ ಹುಡುಗರು ಮಾಡೋ Get togethers, meetingಸು ಬೇಡಪ್ಪ ಬೇಡ .... Banglore ನ Forum Mall ಎದುರುಗಡೆನೆ ನಮ್ office ಇರೋದ್ರಿಂದ ನಮಿಗೆ ದಿನ ಇದೇ ದರಿದ್ರ ನೋಡಿ ಬೇಜರಾಗಿದ್ವಿ ಈಗ ಅದು ಇಲ್ಲೂ ಶುರುವಾಗಿದೆ.... ಇಷ್ಟೇನಾ ಅಂದ್ರೆ, ಹಬ್ಬಕ್ಕೆ ಅಂತ ಬಂದಿದ್ದ ನಮ್ ಹಳೇ ಫ್ರೆಂಡ್ಸ್ ನ ಬೇರೆ ಮೀಟ್ ಆಗಿದ್ವಿ. Usually ಊರಿನ ಹಳೇ ಫ್ರೆಂಡ್ಸ್ ಸಿಕ್ಕರೆ ನಮಿಗೆ ತಿಳಿಯೋ ವಿಷಯಗಳೇ, recent ಆಗಿ ನಡಿದ eloping/ಎದ್ದೊಗಿರೋ caseಗಳು ಹಾಗು ಅವುಗಳಿಗೆ ಇವರೇ ready ಮಾಡಿರ್ತಕಂತ investigation report ಅಥವಾ ವಿಶ್ಲೇಷಣ ವರಧಿ, ಅದೇ time ಗೆ ಕಣ್ಣಮುಂದೆ ಹೋಗೋ any random ಹುಡುಗಿ ಬಗ್ಗೆ ಪರಿಚಯ, ಅಲ್ಲದೆ ನಮ್ batch plus ನಮ್ ಹಿಂದೂ ಮುಂದಿನ ೨/3 batches ಹುಡುಗ್ರು ಹುಡುಗೀರ ಬಗ್ಗೆ curiosity ಇಂದ ಕುಡಿರೋ ಕಳಕಳಿ, ಹಾಳಗಿರೋವ್ರ ಬಗ್ಗೆ concluded ಸಹಾನುಭೂತಿ, ಹಾಳಗೋಕೆ verge ಅಲ್ಲಿರೋವರ ಬಗ್ಗೆ ಎಚ್ಚರಿಕೆಯ ಬುದ್ದಿಮಾತುಗಳು... ಹೀಗೆಲ್ಲ youth discussions ಆದಮೇಲೆ ಜನರಲ್ topics (murders, fights, thefts, updates on saturday evenings Bird watching in Temple and few city's development topics ) ಬಗ್ಗೆ ಒಂದು ಸುಧೀರ್ಗ ಚರ್ಚೆ ನಡಿಯುತ್ತೆ. ಈ ಸಲ ಸಹ ಈ ಎಲ್ಲ Discussions ನಡುದ್ವು ಆದರೆ this time ನಮ್ discussions ಅಲ್ಲಿ ನಮ್ ಫ್ರೆಂಡ್ಸ್ ಮಾಡಿರೋ ಸಾಹಸಗಾಥೆ/ಲೀಲೆ ಗಳದೆ ಮಾತು. ಹೇಳಬಾರದು ಬಟ್, ಮಾಡೋಕೆ ಕೆಲಸ ಇಲ್ಲದಿದ್ರು ಯಾವುದೊ ಹುಡುಗಿನ catch ಹಾಕಿಕೊಂಡು ಹೋಗಿ ಈಗ ಅದೇ ಖುಷಿಲಿ ಏಟು ತಿಂತಿರೋನೊಬ್ಬ, ಮಧುವೆ ಆಗಿರೋ ಒಬ್ಬ ತನ್ನ friend ತಂಗಿ ಜತೆನೆ ಸುತ್ತುತಿರೋ ಸುದ್ದಿ, ಯಾರೋ ಜೋಡಿ ಎದ್ದೊದ್ರೆ ಅವರ help ಗೆ ಅಂತ ಅವರ ಜತೆನೆ joker ತರ ಹೋದ ಇನ್ನೊಬ್ಬ, ಕೆಲಸ ವಿಲ್ಲದ ಒಬ್ಬ ಸಿಕ್ಕ ಒಂದು company offer ನ branded company ಅಲ್ಲಾ ಅಂತ್ಹೇಳಿ reject ಮಾಡಿದಂತ ಕಲಾವಿದ ಅಸ್ಟೇ ಅಲ್ಲಾ ಆಗಿನ figuresu ಈಗ ಸ್ವಲ್ಪ fame ಕಡಿಮೆ ಇರೋ ಹುಡುಗಿ ಯಾರನ್ನ ಹುರಿದುಂಬಿಸೋ ಮಹತ್ತರ ಕಾರ್ಯ ಮಾಡ್ತಿದಾನೆ. ಈ ಮೇಲೆ ಹೇಳಿದ ಒಬ್ಬೊಬರು ಸಹ ನನ್ನ Friends.

ಹುಡುಗ್ರು ಹುಡುಗಿರು ಮಾತಾಡೋದೇ ಸುದ್ದಿ ಮಾಡ್ತಿದ್ದ ಪರಿಸ್ಥಿತಿ ಇದ್ದ ನಮ್ಮೂರಲ್ಲಿ ಈಗ ಇವರುಗಳು ಅಂಟಿಕೊಂಡು ಆಟಾಡಿಕೊಂಡು ತಿರುಗೋತರ ಆಗಿದಾರೆ. ನೋಡಿ Gobalization ಮತ್ತೆ Global warming effects ಯಾವತರ ಇರುತ್ತೆ ಅಂತ. ಹಾಳಗೋಕೆ ಏನು ಚಾನ್ಸ್ ಇಲ್ಲದೇನೆ ಹಾಳಾಗಿದ್ದ ನಮ್ ಹುಡುಗರಿಗೆ ಈಗ Nursing and BEd college ಶುರುವಾಗಿ...... Bustand ನ ಮೂಲೆ ಯಲ್ಲಿರೋ ಒಂದು ಅಂಗಡಿಲಿ ಇಣುಕಿ ನೋಡುದ್ರೆ ಗೊತ್ತಾಗುತ್ತೆ ನಮ್ ಊರಿನ ಧಮ್ಮ್ ಓಡಿಯೋ gang ಯಾವುದು ಅಂತ ಅದಲ್ಲದೆ ನಮ್ಮೂರ Field ನಲ್ಲಿ ರಾತ್ರಿ ಹೊತ್ತು ಕುಂತ್ರೆ ಗೊತ್ತಾಗುತ್ತೆ ಯಾರುಯಾರು ತಂಗಿನ (ತಂಗಿನ ಕಾಯಿ shape ಅಲ್ಲಿ pack ಮಾಡಿಸಿಕೊಂಡು ಬರೋ Bottles ) ನೀರು ಕುಡಿತಾರೆ ಅಂತ. ಈ ಎಲ್ಲಾ ಕಲ್ಪನೆಗೂ ಮೀರಿದ ಕು ತಂತ್ರಗಳನ್ನ ಮಾಡೋವರಲ್ಲಿ ನನ್ನ ಫ್ರೆಂಡ್ಸ್ ಸಹ ಇದಾರೆ.

ಇಸ್ಟೆಲ್ಲಾ ಏನಕ್ಕೆ ಹೇಳ್ತಿದೀನಿ ಅಂದ್ರೆ, ಇವರು ಹಾಳಗುತಿದರೆ ಅಂತ ಅಲ್ಲಾ ಇವುಗಳಿಂದ ಊರಿನ ಮರ್ಯಾದೆ ಹಾಳಗ್ತಿದೆ ಅಂತ. ಒಂದು ಕಾಲದಲ್ಲಿ ಹೇಗಿತ್ತು ನಮ್ಮೂರು, ಹುಡುಗರು, ಯುವಕರು, highschool , college ಗೆ ಹೋಗೋ ಟೈಮ್ ಅಲ್ಲಿ atleast ಒಂದು ಲೆವೆಲ್ maintain ಮಾಡ್ತಿದ್ರು, atleast ಒಂದಾದರು ದೊಡ್ಡ ಗಲಾಟೆ ಮಡ್ಕೊತಿದ್ರು, ಒಂದಾದರು gang wars ಮಡ್ಕೊತಿದ್ರು, ಹುಡುಗಿರನ್ನ teachers ನ್ನ ಆಟಡುಸ್ತಿದ್ರು, bags ಅಲ್ಲಿ rods, chains ಇಟ್ಕೊಂಡು ತಿರುಗ್ತಿದ್ರು, classes bunk ಹೊಡಿತಿದ್ರು... ಈಗ ಇವೆಲ್ಲ ಇಲ್ಲದೆ ಬರೆ ಹುಡುಗ್ರು ಹುಡುಗೀರ ಹಿಂದೇನೋ ಇಲ್ಲ ಈ ಚಟಗಳ ಹಿಂದೇನೋ ಬಿದ್ದಿದರೆ. ಎಲ್ಲೋದ್ರು ನಮ್ಮೂರಿನ Real men ಅಂತ. ಇದೇತರ ಹುಡುಗಿರು ಸಹ Tutions, classes ಮುಗಿತಿದ್ದಹಗೆ ಮನೆ ಸೇರ್ಕೊತಿದ್ರು, ಶನಿವಾರ ಸಂಜೆ Temples ಗೆ ಮತ್ತೆ ಪಾನಿಪುರಿ ತಿನ್ನೋಕೆ ಹೋಗ್ತಿದ್ರು, ಅವಾಗವಾಗ movie ನೋಡೋಕೆ theatre ಕಡೇ ಅಸ್ಟೇ....ಈಗ ಅಬ್ಬಾಬಾ....

ಹೇಳಬೇಕಾಗಿರೋದು ಬಾಳಾ ಇದೆ so ಭಾಗ ೨ ಕ್ಕೆ ನಿರೀಕ್ಷಿಸಿ

Friday, September 3, 2010

Mist and its Misrty Trails....

Monsoon beauty Agumbe at its Best.......
Hurray, I got a wonderful start to my Monsoon Trails. Yes, all thanks to Agumbe trip which I finished few weekends back. What a trip it was, Oh! my God I didn't expect this much excitement in Agumbe. And it was real show of Monsoon/Rain in Agumbe (Which gets Highest Rainfall ).

It all started with Sunil, who told the plan of having trip to this Rain Forest zone. Although it was a months back plan but our "Earning trails" in this concrete complex corporate world, deferred it. Its our interests, photography and birding which drove us to towards this Mist(ery) Land.

All the logistics were planned by Sunil and accordingly we started our 'To' Journey on Friday Night in Shimoga Express. Our excitement started from 'To' Journey itself. I being Lazy, thought of starting at 9 30Pm but in actual I started at 10PM. And thanks to less frequent BMTC buses from my place to majestic which gave much needed initial excitement and Finally with many uncertain thoughts I reached the Railway station at 11. Even for Sunil excitements were extreme as he left some important things in room, so had couple of Auto journeys with Time running and pocket getting drained.

Both of us finally met in Railway Station at 11.5pm and Train was scheduled to depart at 11 15PM. Our waiting list Ticket couldn't win the 'Seat competition' and we were suppose to share Single seat. We were bit down with this single seat issue and was working out our plans to share the same. But suddenly we were happy when we saw a group (had couple of Gals) who were seat less( they booked Train for Morning trip but ...). At around 1am we got other seat and finally had enough sleep.
We reached shimoga station at 5:45 and Shimoga BusStand by walk at 6am. By someones grace we got a car to Agumbe for cost same as bus charge and boarded that car after finishing Post Brushing BreakFast.

It was 5kms to Agumbe, nothing was visible and it seemed as if we were in a white blanket. It was a nice Art by Rain n Mist. With an slow and steady drive, we reached Agumbe at 8 30Am. Driver left us at the only lodge in Agumbe, First we were surprised to see nothing and then got glimpse of that Only Lodge in that thick Fog. Surprises and excitements never damped and we again got surprised when Only lodge owner showed "HouseFull" board. But it was just a Trade trick by him and with our counter Trick, we managed to get a single Room.

Once in the Room, we shed our "Weight" and got freshen up. Soon I was on the bed, to complete my regular "8 hour" sleep but Sunil was in hurry to start Trails. With his strong urge, we started our first Trial and decide to try "Onakeabbi Falls". We got dressed up in our Trek wears and with protection gears for our DSLR, Binocular and our selves from Rain. As we started our trail, it was all clear and could cover some distance with Josh. But soon the Rain started in full fledge and within secs water was dripping from our Costumes. Thank God, there was Ganesh Hotel near by and we peeped in there to avoid Rain. With nothing to do, we just thought of recharging ourselves and had a heavy breakfast with Malnad specials Bun and NiruDosa.



Above one is the first Pic in the Trip and is explaining situation that was in Agumbe, its Rain, Rain, Rain and Rain. It was awesome, it was abundant and it was Too much too. But it was fun, exciting and a very different experience. This heavy Rain sorry usual Agumbe Rain didn't compromised and finally we ourselves compromised and thought of returning to our Room. We carried a DSLR and a binocular and so we thought of calling off this "onakeabbi falls" trail. Back in room we just started our Snaps Saga by clicking our shutters at a Drenched Rope with dew Drops(below pic). But our Room/Lodge was exactly opposite to Police Station and as expected a Cop called us for inquiry. After Sunil's explanation, Cop gave some Gyan session of not taking pics in these restricted areas and finally left.



We were in Revenge mood, we again arranged ourselves and decided to finish Onakeabbi Trail. We left our DSLR and Binocs in Room and started towards the Onakeabbi again. Even now Rain was pouring down but we got used to it. Within minutes were in Agumbe outskirts and we/I were/was happy when we saw a Red Wattled Lawping, walking around. With our eyes following the Fly of this Lawping we proceeded further and reached Starting point of Onakeabbi. Here again we had Photo session with our cameras clicking at a Flower, a Bee, a Butterfly and etc. Also we got to see a Cuckoo sitting close to us.



Just two months back towards end of Summer, I was here in the path to Onakeabbi but now it is very different than what I saw that time. Now the path is invisible with Fog being dominant and trees are Green and looking great with dew drops resting on them. And to be frank it was getting very wild and scary as we advanced. Beside this wilderness we got lost in our photography and to Melodies of Birds. There were many Bird calls but we being amateur in our interests cannot notice them.

With our interests blocking our walk we took more than 2 hours to reach the Top of Onakeabbi falls. Although many Tourists were present in Agumbe but we could find none on our Trail. Only we two were dragging legs in that utterly wild, wet and foggy path. We heard many movements in bushes and trees but we were very clear that these forests have only antelope/deers, bisons and monkeys. On the way we met the People from RRC (rain forest research center). And with all this wild excitements when we reached Cliff of onakeabbi, we were thrilled to see the force with which water was falling down and the extreme gust ling sound. Last time I slept on a Rock at the cliff to see the Fall's base but this time remembering it self made me sweat. Even here, fog was so dense that we thought we are in clouds. Being excited, I took out my Tiny digi cam to capture this wonder and below are the outcomes.





So with lots of uncertainties and excitements we succeeded to take revenge on our Friend and foe--- Agumbe's Rain, by finishing this Misty Mistery trail of Onakeabbi. Really it was a wonderful exp, with only two of us walking in that wild track with our interests given importance.

Sorry this is not the end, its just conclusion to our first trail. We are still on Saturday evening. After this trail we again had heavy lunch in Ganesh hotel and went back to room to dump our heavily wet (and heavy because its wet) wears and to dry our gadgets. We spent few hours in that incandescent lighted single room with songs come out of my "Slim yet powerful" Nokia 6300 low batteried mobile. Then again had a brief session of Dinner and finally slipped in to sleep.

Trekking in the rain that is, walking when you are completely drenched is really a tiresome one and we had the same. So we got up on Sunday morning only at 9am. We again started our load shedding programs and I took bath to begin our Day. By 9 45 we finished breakfast and started towards Joginagundi Falls. As usual it was Raining but we were used to it. Its a 7kms round trip trail and most of it on Metal Road. With in minutes after starting our trail, some how rain showed mercy and got chans to drag out our gadgets to start clicks and looks. We were busy, me focusing on Flying colour's which were moving around including few Bulbuls, Barbets, Munias etc and Sunil with his SLR pointing at a Calote and a Butterfly. Soon Rain was back and made us to stop our activities. It was a big tussle between the Rain and our interests both being tough and dominant. With the intermittent yet considerable breaks from Rain, we had good chance for clicking and focusing. We got many good pics including a beautiful Stream and I was over joyed with sighting of a Golden oriole and White collared Munia's herds. Also a bunch of blue Drango's.





At the Snail's pace and getting stopped at almost every step we finally got into woody path to Joginagundi which was bearing a daunted look. The situation here was bit horrifying with series of incidents increasing our unnecessary doubts. Firstly we saw a Jeans trouser and a T being thrown out and secondly stinking smell of some Dead animal. This combo itself took our guts out and as we proceeded further in this lone abandoned looking path we found 3 Rain covers thrown aside and some water bottles. Altogether we were down with these but our urge to see Joginagundi made us to continue. Its a small path through woods and is hardly a 15 mins walk from Metal Road. The sound of gustling water was audible through out the trail and with in no time we were infront of Joginagundi falls. It was a mere surprise for me because during my last visit we saw a big Rock at the same place where now nothing other than water is visible. Even there were few Rocks away from Falls where we slept last time but now flowing water is all what I can see. Monsoon was so artistic, We were overjoyed by just looking at the Falls and the force of water flow.



Above one is the Pic of Joginagundi Falls at its best. Cherishing the moments at Falls we headed back to Room. We first got out of sight from Falls, after while out of the Woody path and in no time we were back to the Metal road. Our return journey from Joginagundi was dominated by Photography. Its a joy to take pics when rain just stoppe and everything looks beautiful with the Rains remains, I mean dew drops residing. Even my 7mm mini digi cam captured astonishing pics with Digital Macro mode. We had chance to see a Huge group of Crested Cuckoo's and Drango's, which had a Post Rain noisy discussion. Quite a few Butterflies were moving around us and giving nice poses indeed. At the tail end of our return trail from Joginagundi we had a long Photograph session when Sun was back. We got superb pics of some Flies, bees, ants, cricket, calote, frog and my Digi cams Macro mode really rocked. Finally finished the trail by saying Bye Bye to Barbets, Munias, Sun Birds and Diff Bulbuls. Had a malnad special lunch at some Hotel we got back to Room. Totally we took 7 hours to complete this 7kms trail with much fun, excitement and our interests given interest. Here is the link to Agumbe Trip pics (good ones).

http://picasaweb.google.com/sl.santhosh/Selected#

Inevitable, so we finally boarded our Rajahamsa bus to Bangalore at 8Pm. And with time moving on we gradually getting into Concrete jungles with their increasing intensity.
This may be a long post but this itself cannot explain the overall Exp we had in Agumbe....