Life Goes On...

Life Goes On...
Life--- The way u Look at it

Sunday, September 19, 2010

ಇತ್ತು ಬಿಡುವು, ಹೋಗಿದ್ವಿ ಮುತ್ಯಾಲ ಮಡುವು

ಇತ್ತು ನಿನ್ನೆ(saturday) ಬಿಡುವು
ಸುಮ್ಮನಿರಲಾರದೆ, ಹೋಗಿದ್ವಿ ನೋಡೋಕೆ ಮುತ್ಯಾಲ ಮಡುವು (pearl valley)
Falls ಬಗ್ಗೆ ಗೊತ್ತಿಲ್ಲ, ಕಣ್ಣು ಅರಳಿಸಿದರೆ ಕಂಡಿತು ಚಿಕ್ಕ ನೀರ ಜರಿ,
ಹುಡುಕಿಕೊಂಡು ಹೋಗಿದ್ದ ನಮಗೆ ಮೆಯ್ಯಲ್ಲ ಉರಿ.......
But ಮಜಾ ಕೊಡ್ತು ನಮ್ಮ bike ಸವಾರಿ ಮತ್ತೆ ಪಕ್ಷಿ ವೀಕ್ಷಣೆಯ ಪರಿ.......


ಮೇಲಿನ ಸಾಲುಗಳ ವಿಸ್ತಾರ ವಿವರಣೆ ಹೀಗಿದೆ...
ಸುಮಾರು ಒಂದು ತಿಂಗಳಿಂದ cousin's , sibbling's ಮಧುವೆಗಳಿಗೆ ಬಿಡುವಿಲ್ಲದೆ ತಿರುಗಾಡಿದ್ದ ನಮ್ ದೋಸ್ತ್ 'ಬಕೆಟ್ ಗುಂಡ', ಕಳೆದ ವಾರಾಂತ್ಯದಿಂದ ಸ್ವಲ್ಪ ಉಸಿರಾಡೋ ತರ ಆಗಿದ್ದ. ಅದು ಅಲ್ಲದೆ ಯಾವದೋ ಎಡವಟ್ಟು ಗಳಿಗೇಲಿ ಇದ್ದ company ಬಿಟ್ಟು ದುಡ್ಡು ಚೆನ್ನಾಗಿ ಕೊಡೊ ಮತ್ಹೊಂದುಕ್ಕೆ ಸೇರ್ಕೊಂಡ. ದುಡ್ದೇನು ಸುಮ್ಮನೆ ಜಾಸ್ತಿ ಕೊಡ್ತಾರೆ, ಸೆರಿಯಾಗಿ ಅರಿಯೋತರ ದುಡಿಸಿಕೊಳ್ತಿದರೆ. ಸೊ ಇಸ್ಟೆಲ್ಲಾ tensions ಅಲ್ಲಿ ಬಿಗಿಯಾಗಿದ್ದ ನಮ್ ಗುಂಡನಿಗೆ ಸ್ವಲ್ಪ relax ಮಾಡ್ಸೋಣ ಅಂತ್ಹೇಳಿ ಒಂದು outing ಪ್ಲಾನ್ ಮಾಡಿದ್ವಿ. ಆ ಪ್ಲಾನಿನ ಪಲಿತಾಂಶವೇ ಈ ಮುತ್ಯಾಲ ಮಡುವಿನ ride . ಗುಂಡನಿಗೆ ಅಂತಾನೆ ಅಲ್ಲಾ, ನಾವುಗಳು ಸಹ relax ಆಗೋಣ ಅಂತ. ಹಾಗೇನೆ ಮಧುಗೆ photography ಮತ್ತು ನನಿಗೆ birding ಮಾಡೋಕು ಅವಕಾಶ ಸಿಗುತ್ತೆ ಅಂತ.

ಪ್ರತಿಸಲ ಅಗೊತರಾನೆ ಈ trip ಸಹ ಅಂತ ಪೂರ್ವ ತಯಾರಿ ಇಲ್ಲದೆನೆ ಮುಗುಸ್ಬಿಟ್ವಿ. ನಾನು Bosch ಸೇರ್ಕೊಂಡ ಮೇಲೆ, ನನ್ನ ಹತ್ರನು ಜನ ಕೆಲಸ ಮಾಡ್ಸೋತರ ಆಗಿದಾರೆ ಮತ್ತೆ ಈ bosch ಅಲ್ಲಿ internet access ಬೇರೆ ಕಷ್ಟ. ಈ ಎಲ್ಲವುಗಳ ದೆಸೆಯಿಂದ Trips plan ಮಾಡೋದು ಸ್ವಲ್ಪ ಕಷ್ಟ. ನಾವುಗಳು ವಾರದಲ್ಲಿ ಐದು ದಿನ ಗಳಿಕೆಗಾಗಿ ಈ corporate ಕಾಡಲ್ಲಿ ಟೈಮ್ ಯೆಲ್ಲಾ ಹೊಗೆಹಾಕ್ಸಿಕೊಳ್ತಿವಿ ಅದರಿಂದ ಎಲ್ಲ ಪ್ಲಾನ್ ಗಳು ಶುಕ್ರವಾರ ಸಂಜೆ sudden ಆಗಿ ತಯಾರಾಗ್ತವೆ.

ಮೊನ್ನೆ ಶುಕ್ರವಾರ ಸಂಜೆ ಇವರುಗಳು ಗುರ್ತುಸೋ ವರಿಗೂ ನನೆಗೆ ಟ್ರಿಪ್ ಪ್ಲಾನ್ ಮರ್ತೆಹೊಗಿತ್ತು. ಕೆಲವು call ಹಚ್ಚಿ ಕಡೆಗೂ ನಾಲ್ಕು ಜನ ಟ್ರಿಪ್ ಹೋಗೋ ಹಾಗೆ ಮಾಡ್ಕೊಂದ್ವಿ. ನಾಲ್ಕು ಜನ ಬರೋಕೆ ready ಇದ್ರೂ ಹೊಗೊದೆಲ್ಲಿಗೆ ಅಂತ ಮಾತ್ರ ಫಿಕ್ಸ್ ಆಗಿರಲಿಲ್ಲ, ಎರಡು ದ್ವಿಚಕ್ರ ವಾಹನಗಳು ಇದ್ವು ಅಂತ ದೈರ್ಯ. ಬಾಯಲ್ಲೇ ತಿರುಗ್ತಿದ್ದ "pearl valley " ಅಥವಾ " ಮುತ್ಯಾಲ ಮಡುವು" ಗೆ ಹೋಗೋಣ ಅಂತ ಹೇಳಿ, ಎಲ್ಲರನ್ನು ಆಕಡೆ ಹೊರಡೋಕೆ ತಯಾರಾದ್ವಿ

ಬೆಳಗ್ಗೆ ೯ ಗಂಟೆಗೆ ಹೊರಡೋ ಪ್ಲಾನ್ ಮಾಡ್ಕೊಂಡಿದ್ದ ನಾವು ಕಡೆಗೂ 11 30 ಗೆ ಮನೆ ಇಂದ ಹೊರಟು silk board ಬಳಿ ಎಲ್ಲರೂ ಸೇರಿ, ಹಾಗೆ ಮುಂದೆ ಸಾಗಿ Electronic City ನ ಹಿಂದಿಕ್ಕಿ, ಕಡೆಗೂ ಚಂದಾಪುರ ಸೇರ್ಕೊಂಡು ಒಂದು ಒಳ್ಳೆ ತಿಂಡಿ ಮುಗಿಸಿದ್ವಿ. ಅಲ್ಲಿಂದ right ಗೆ ತಿರುಗಿ 9km ಎಲ್ಲೂ ನಿಲ್ಲದೆ ಸೀದ ದಾರಿ ಬಳುಸ್ಕೊಂಡೆ ಹೋದ್ರೆ ನಮಿಗೆ ಸಿಕ್ಕಿದು ಆನೇಕಲ್. ಅಲ್ಲಿನ ಜನ ಹೇಳಿದ ರೈಟ್ ಅನ್ನೋ ಲೆಫ್ಟ್, ಲೆಫ್ಟ್ ಅನ್ನೋ ರೈಟ್, ಇಲ್ಲೇ ಅನ್ನೋ ಅಲ್ಲೇ, ಹೀಗೆ ಹೇಳಿದ confusing ದಾರಿನೆಲ್ಲ follow ಮಾಡ್ಕೊಂಡು ಕಡೆಗೂ ಈ ಊರಿನ ಆಚೆಗೆ ಬಂದು ಮುತ್ಯಾಲ ಮಡುವಿನ ದಾರಿ ಹಿಡುದ್ವಿ. ಇದೇ ದಾರಿಯಲ್ಲಿ ಸಾಗಿದರೆ ಒಂದು km ನಂತರ "ಮುತ್ಯಾಲ ಮಡುವಿಗೆ" ದಾರಿ ಅಂತ ಹೇಳಿ ಬಲಗಡೆ ತಿರುವೊಂದನ್ನ point ಮಾಡ್ತಿರು ಕಲ್ಲುಸಿಕ್ತು. ಅಲ್ಲಿ ತೋರಿಸಿದ ದಿಕ್ಕಲ್ಲೇ ತುರುದ್ರೆ 3kms ಅದಮೇಲೆ ಸಿಕ್ತು ನಾವು ನೋಡ್ಬೇಕು ಅಂತಿದ್ದ 'ಮುತ್ಯಾಲ ಮಡುವು'.

ಅಬ್ಬಾ ಅಲ್ಲಿ ಕಂಡ ಮೊದಲ ದೃಷ್ಯನೆ ನಮ್ಮ ಎಕ್ಷ್ಪೆಕ್ತತಿಒನ್ ನೆಲ್ಲ nullify ಮಾಡ್ತು. ಏನಂತಿರ, ಈ ಜನ ಸಂಖ್ಯೆ ಮಿತಿಮೀರಿರೋ ನಮ್ ಬೆಂಗಳೂರು ಅಂತ ಊರಲ್ಲಿ ಕೇಳ್ಬೇಕ ಸ್ವಲ್ಪ ಹೆಸರಿರೋ ಯಾವ place ಗೆ ಹೋದರು, ಆ place ನೂ ಮಾರೆಮಾಚೋ ತರ ಜನ ಸೇರಿರ್ತಾರೆ. ಅದೇ ರೀತಿ ಇಲ್ಲೂ ಸಹ ಬಂದಿದ್ದ ಜನ ಹಾಗು ಅವರುಗಳ ವಾಹನಗಳದೆ ಕಾರುಬಾರು. usually ನಾವುಗಳು ಹೋಗೋ ಜಗದಲ್ಲಿ ನಮನ್ನ ಬಿಟ್ಟು ಬೇರೆಯವರು ಇರೋದೋ ಬಾಳನೆ ವಿರಳ ಸೊ ಈ ಜನ ಸಮೂಹ ನೋಡಿ ನಮಿಗೆ......

ಫಾಲ್ಸ್ ಗೆ ಅಂತಿದ್ದ ಮೆಟ್ಟಿಲ ಮೇಲೆ ನಾವು ನಮ್ಮ ಪಾದ ಸೇವೆನ ಅದೇ ಜನರ ಮಧ್ಯೆ ಶುರು ಮಾಡುದ್ವಿ. ಸ್ವಲ್ಪ ಮೆಟ್ಟಿಲು ಇಳಿತಿದ್ದ ಹಾಗೆ ಬೇಜಾನ್ birds ಕಾಣಿಸೋಕೆ ಶುರುವಾದವು, ಸೊ ನಾವು ನಮ್ binocs ನ ಕೈಗೆತ್ತಿ ಕೊಂಡು ತಯಾರಾದ್ವಿ. ಅಷ್ಟರಲ್ಲೇ ನಮ್ ಎದ್ರಿಗೂ ಕೆಲವು chicks ಬಂದು ನಮ್ಮ attention ನ ಅವರಕಡೆಗೆ ತಿರಿಗಿಸಿಕೊಂಡರು. ಅಲ್ಲಿದ ಸಿಟಿ ಜನರ ಪಾಡು....ಪಾಪ ಅಪ್ಪಿತಪ್ಪಿ ಅಲುಗಾಡಿನು ರೂಡಿ ಇಲ್ಲದಿರೋ ಇವರು ಗಳು ಅ ಮೆಟ್ಟಿಲು ಇಳಿಯೋವಾಗ ಪಡುತಿದ್ದ ಕಷ್ಟ, ನೋಡಿನೇ ಖುಷಿ ಪಡಬೇಕು. 20 ಮೆಟ್ಟಿಲು ಇಳಿದಿಲ್ಲ ಆಗಲೇ ಎಷ್ಟ್ ದೂರ ಇದೆ ಅಂತ ಒಬ್ರು, ಅಲಿದ್ದ ಸಾಮಾನ್ಯ ಮೆಟ್ಟಿಲಿಗಳನ್ನೇ ಏನೋ ಒಂದು ದೊಡ್ಡ trek ಮುಗಿಸಿದ್ದ ಹಾಗೆ feel ಕೊಡ್ತಿದ್ದ ಇನ್ ಕೆಲವರು, ತೀರ್ಥ ಯಾತ್ರೆಗೆ ಹೊರಟು ಬಂದ ಹಾಗೆ ಇಡೀ family batalion ಗಳು ಕೆಲವು, ಹಾಗೆ ಕದ್ದು ಮಾಡೋ/ತಿರುಗೋಕೆ ಅಂತ ಹೇರಳವಾಗಿ ಬಂದಿದ್ದ ಜೋಡಿ ಹಕ್ಕಿಗಳು ಮತ್ತು ಅವರುಗಳ Sweet nothing ಸು, sense ಇಲ್ಲದಿರೋ ಕಾಮಿಡಿ ಚಲ್ಲಾಟಗಳ ಚಿಲಿಪಿಲಿ disturbance..... ಇನ್ನು ಹಲವು.

ಇವೆಲ್ಲವುಗಳನ್ನು ತಡಕೊಂಡು, ಎದುರುಗಡೆ ಹಿಂತಿರುಗಿ ಬರ್ತಿದ್ದವರ ಖುಷಿ ನೋಡಿಕೊಂಡು, ಆ ಫಾಲ್ಸ್ ಬಗ್ಗೆ ನಮ್ಮದೇ ಆದ ಒಂದು ಅಭಿಪ್ರಾಯ ಬೆಳಿಸಿಕೊಂಡು ಅವೇ ಮೆಟ್ಟಿಲುಗಳನ್ನ ಇಳಿಕೊಂಡು,, ಕಡೆಗೂ ಅ ಫಾಲ್ಸ್ ಅನ್ನೋ ಫಾಲ್ಸ್ ಹತ್ತಿರಕ್ಕೆ ಬಂದೆ ಬಂದ್ವಿ. ಅಲ್ಲಿಗೆ ಬಂದಮೇಲೆನೆ ನಮಿಗೆ ಆಶ್ಚರ್ಯ ಆಗಿದ್ದು. ಎಲ್ರು ಫಾಲ್ಸ್ ಅಂತ ನೋಡಿ ಖುಷಿ ಪಡುತಿದ್ದ ಸ್ತಳದಲ್ಲಿ ನಾವು ಹುಡುಕಿದರೂ ನಮಿಗೆ ಫಾಲ್ಸ್ ಅನ್ನೋತರ ಏನು ಕಾಣಿಸಿದ್ದೆ ಇಲ್ಲ. ಏನೋ ಒಂದು ದೊಡ್ಡ ಬಂಡೆಗಳ ಗುಂಪು, ಅವುಗಳನ್ನ ನೆನೆಸೋಕೆ ಅಂತ ಹರಿತಿದ್ದ ಹಾಗಿದ್ದ ನೀರ ಜರಿ, ಹಾಗೆ ಹರಿದ ನೀರು ಆ ಬಂದೆ ಗಳ ಕೊನೇಲಿ ನಲ್ಲಿಯಿಂದ ಬೀಳೊಹಾಗೆ ಬೀಳ್ತಿತ್ತು ... ಅದನ್ನೇ ಜನ ಫಾಲ್ಸ್ ಅಂತ ಹೇಳಿ ನೋಡಿ ನಲಿತಿದ್ರು, ನೆನೆದು ನುಲಿತಿದ್ರು, ಖುಷಿಯಿಂದ ಚೀರುತಿದ್ರು, ಕ್ಯಾಮೆರಾಗೆ ಪೋಸ್ ಕೊಡ್ತಿದ್ರು, ಅವರದೇ ರಿತಿಲಿ ತಮ್ಮ ಪ್ರೀತಿ ಪಾತ್ರರಿಗೆ ಇದರ ಸೌಂದರ್ಯನ ವರ್ನಿಸುತಿದ್ದರು. ಆ ಬಂಡೆಗಳ ಕೊನೆಯಿಂದ ಬಿಳುತಿದ್ದ ಅಲ್ಲಾ ಜರುತಿದ್ದ ಆ ನೀರಿನ ಸಿರಿಯಣ್ಣ ಏನಂಥ ಬಣ್ಣಿಸಲಿ, ಅದರ ಸೌಂದರ್ಯ ವನ್ನ ನೀವೇ ನೋಡಿ ನಿಮ್ಮ ಮನಸಲ್ಲಿ ಮುದೋ ಭಾವನೆಗಳನ್ನ ನೀವೇ ಅರ್ಥ ಮಾಡ್ಕೊಂಡು ಹಬ್ಬ ಮಾಡ್ಕೊಳಿ.. ತಗೋಳಿ ಆ ಸುಂದರ, ರುದ್ರ ರಮಣೀಯ, ಮನೋಹರ, ಮೈ ಪುಳಕಿಸುವ, ಪದಗಳಿಗಿ ಮೀರಿದ ಆ ಪ್ರಕೃತಿಕಾ ವಿಸ್ಮಯದ ಆ ವಿಹಂಗಮ ನೋಟವನ್ನ ಈ ಪೋಟೋ ದಲ್ಲಿ ನೋಡಿ ಖುಷ್ ಆಗಿ.

ಹೀಗೆ ನೋಡಿದರೆ ಬರೀ ನೀರ ಜರಿ.....


ಹೀಗೆ zoom ಮಾಡಿ ನೋಡಿದರೆ Pearl valley ....


ಆ ವಿಸ್ಮಯವದಂತಹ, ವಿಚಿತ್ರವಾದಂತಹ, ಮೈ ನವಿರೇಳಿಸುವಂತಹ, ಕಣ್ಣ ಕುಕ್ಕುವ ಆ ರುದ್ರ ರಮಣೀಯ ಮುತ್ಯಾಲ ಮಡುವನ್ನು ನೋಡಿ ಚಕಿತರಗಿ, ಪುಳಕಿತರದ ನಾವು, ಮತ್ತೆ ಶುರು ಹಚ್ಹಿಕೊಂಡದ್ದೆ Photography . ಅಲ್ಲೇ ಆ ನಿಂತ ನೀರಿನ ಬಳಿ ಸುಳಿದಾಡುತಿದ್ದ "Dragon Flies , ಕೆಲವು ವರ್ಣರಂಜಿತ ಪುಟ್ಟ ಪುಟ್ಟ ಹೂಗಳು, ಇನ್ನು ಕೆಲವು ನೀರ ಹುಳುಗಳು, ಅಲ್ಲೇ ಕೀಳೋ ಕೆಲಸವಿಲ್ಲದೆ ನಿಂತಿದ್ದ ನಮ್ಮ ಗುಂಡ ಹಾಗು ಆ ಫಾಲ್ಸ್ ಅನ್ನೋ ಫಾಲ್ಸ್ ಬಳಿ ಏನೋ ಮಾಡ್ತಿದ್ದ ಪ್ರೇಮ ಪಕ್ಷಿಗಳನ್ನ ನಮ್ಮ ಪುಟ್ಟ ಕ್ಯಾಮೆರಾ ಕಣ್ಣಿಂದ ವಿವಿದ ಬಂಗಿಗಳಲ್ಲಿ ಬಂದಿಸುತ್ತಾ ನಮ್ಮ ಛಾಯಾಗ್ರಹಣದ ಪರಿಯನ್ನ ಮುಂದುವರ್ಸಿದ್ವಿ.

ಅಲಿದ್ದ ಜನರ ಹಾಗು ಅದೇ levelಗಿದ್ದ ಕೋತಿಗಳ ಕಟ ತಡಿಯೋಕೆ ಆಗದೆ, ಆ ನೀರಿನ ಪ್ರಾಕೃತಿಕ ವೈಭವ ನಮ್ಮ ಕಣ್ಣಿಂದ ನೋಡೋಕೆ ಆಗದೆ ಕಡೆಗೂ, ನಾನು ಗುಂಡ ಅಲ್ಲಿಂದ ಕಾಲುಕಿತ್ವಿ. ಆದರೆ ನಮ್ಮ budding photograghy buddy ಮಧು ಮಾತ್ರ ಆ ಫಾಲ್ಸ್ ನ pearls ತರ ಪೋಟೋ ತಗಿಲೇಬೇಕೆಂದು ಅಲ್ಲೇ ಇದ್ದ. ಜತೆಗೆ ನಮ್ ಪ್ರಶಾಂತ್ ಸಹ ಆ ಫಾಲ್ಸ್ ಅನ್ನೋ ಫಾಲ್ಸ್ ಬಳಿ ಪೋಟೋ ತಗಿಸುಕೋಬೇಕಂತ ಮಧು ಜತೇನೆ ಇದ್ದ.

ನಾನು ಗುಂಡನಿಗೆ relax ಮಾಡಿಸಲೇ ಬೇಕಂತ ಫಿಕ್ಸ್ ಆಗಿ, ಅಲ್ಲೇ ಸುತ್ತ ಇದ್ದ ಪೋದುರಿನಂತಹ ಕಾಡಿಗೆ ಪಕ್ಷಿ ವೀಕ್ಷಣೆಗೆ ಅಂತ ಕರೆದುಕೊಂಡು ಹೊರಟೆ. ಸುಮ್ನೆ bird watching ಗೆ ಅಂದ್ರೆ ನಮ್ ಗುಂಡ ಬರ್ತನ, ಅದುಕ್ಕೆ ಜೋಡಿ ಹಕ್ಕಿ ಗಳನ್ನ ತೋರುಸ್ತೀನಿ ಅಂತ ಹೇಳಿ ಅವನನ್ನ ಕರೆದುಕೊಂಡು ಹೋದೆ. ಆದರೆ Expect ಮಾಡಿದಕ್ಕಿಂತ ತುಂಬಾನೆ ಪಕ್ಷಿಗಳು ಅಲ್ಲಿದ್ವು moreover ನಾವು ಹೋಗಿದ್ದ ಕಡೇ ಆ ಜೋಡಿ ಹಕ್ಕಿಗಳ ಕಾಟನೂ ಇರಲಿಲ್ಲ. Binocs ನಲ್ಲಿ ಪಕ್ಷಿಗಳನ್ನ ನೋಡಿದ ಗುಂಡ ಕಂಗಾದ, ಹಾಗೇನೆ ಅವುಗಳ ಬಗ್ಗೆ ಸ್ವಲ್ಪ ಆಸಕ್ತಿನೂ ಬೆಳುಸ್ಕೊಂಡ. Purple rumped sunbird, lotten sunbird, red whiskered bulbul, red vented bulbul, yellow wagtail, few barbets, pied bushchat, bee eaters etc ಇನ್ನು ತುಂಬಾನೇ ಪಕ್ಷಿಗಳನ್ನ ಗುಂಡನಿಗೆ ತೋರುಸ್ದೆ. ಹೀಗೆ ಒಂದ್ one hour ಬರ್ಡ್ watching ಮಾಡ್ಕೊಂಡು ಮತ್ತೆ ಫಾಲ್ಸ್ ಅನ್ನೋ ಫಾಲ್ಸ್ ಹತ್ತಿರ ಬಂದ್ವಿ. ಅಲ್ಲಿಗೆ photography ಮುಗುಸ್ಕೊಂಡು ಏನ್ ಮಾಡಬೇಕು ಅಂತ ಯೋಚನೆ ಮಾಡ್ತಿದ್ದ, ನಮ್ಮ ಮಿಕ್ಕ ಸಹ ಪ್ರವಸಾರ್ತಿಗಳುನೂ ಸೇರಿಕೊಂಡು return journey ಶುರು ಮಾಡಿದ್ವಿ.

ಅದೇ ಮೆಟ್ಟಿಲುಗಳನ್ನ ಹತ್ಕೊಂಡು, ಅಡಿಅಡಿಗು ಅಡ್ದಸಿಕ್ತಿದ್ದ ಆ ಜನ ಸಾಗರದ ಅಡಚಣೆ ತಡ್ಕೊಂಡು ಕಡೆಗೂ ನಮ್ಮ ವಾಹನ ಗಳ ಬಳಿ ಬಂದು ಸೇರ್ಕೊಂಡುವಿ. ಸ್ವಲ್ಪ ಹೊಟ್ಟೆಗೆ ಅದು ಇದು ಅಂತ ಹಾಕೊಂಡು, ಮನೆಯಿಂದ ತಂದಿದ್ದ ಪಾರ್ಸೆಲ್ ನ ಮುಗಿಸೋಕೆ ಜಗ ಹುಡುಕಿಕೊಂಡು ನಮ್ಮ return journey ಶುರು ಮಾಡುದ್ವಿ. ಸ್ವಲ್ಪ ದೂರ ಬಂದು ಅಲ್ಲೇ ಇದ್ದ ಹೊಲದ ಪಕ್ಕದ ಮರದ ಕೆಳಗೆ ಗಾಡಿ ಪಾರ್ಕ್ ಮಾಡಿ ನಮ್ಮ ಪಾರ್ಸೆಲ್ ಕಾಲಿ ಮಾಡಿ, ಅಲ್ಲೇ ಪೋದರಲಿದ್ದ ಬೇಜಾನ್ ಪಕ್ಷಿಗಳನ್ನ watch ಮಾಡ್ಕೊಂಡು, ಆ ಹೊಲದಲ್ಲಿ ಸ್ವಲ್ಪ ಹೊತ್ತು photography ಮಾಡಿ ಮುಗುಸಿ... ಮನೆ ಕಡೇ ಹೊರುಟ್ವಿ.

ಇಷ್ಟೆಲ್ಲಾ ಮುಗುಸ್ಕೊಂಡು ನಾವು ಮನೆಗೆ ಸಂಜೆ ೫ ೩೦ ಗೆ ಸೇರ್ಕೊಂಡುವಿ.........
ಇದೆ ಮೇಲಿನ ಆ ಆರು ಸಾಲುಗಳ ವೃತ್ತಾಂತ .......

ಇಲ್ಲಿ ಬಳಕೆ ಆಗಿರೋ ಪತ್ರಗಳ ವಿಹಂಗಮ ನೋಟ ಹೇಗಿದೆ ನೋಡಿ.... viz Prashath, Mithun/Gunda, Madhu and Myself....