Life Goes On...

Life Goes On...
Life--- The way u Look at it

Thursday, March 8, 2012

ಕಾನನ ಉಳಿಸುವ ಚಲವಿರಲಿ....


ಹಚ್ಚ ಹಸುರಿನ ಕಾಡುಗಳಿದ್ದವು
ಕಾಡುಗಳೊಟ್ಟಿಗೆ ನಾವುಗಳಿದ್ದೆವು
ಹುಲಿಗಳು ಕಾಡನು ಆಳುತಲಿದ್ದವು
ಆನೆ ಜಿಂಕೆ ನವಿಲು ನಲಿಯುತಲಿದ್ದವು
ಕಬಿನಿ ಕಾವೇರಿ ನದಿಗಳು ಮೆರೆದವು
ತೊರೆ ಹೊಳೆ ತುಂಬಿ, ಬೆಳೆಗಳು ಬೆಳೆದವು

ಕಾಲ ಕಾಲಕ್ಕೆ ಮಳೆಗಳಾದವು ------ ಅಣ್ಣ
ಕಾಲ ಕಾಲಕ್ಕೆ ಮಳೆಗಳಾದವು
ಕಾಡು ನಾಡು ನೆಮ್ಮದಿ ಇದ್ದವು  ------ ಈಗ
ಎಲ್ಲಾ ಮಾಯಾ, ನಾಳೆ ನಾವು ಮಾಯಾ
ಎಲ್ಲಾ ಮಾಯಾ, ನಾಳೆ ನೀವು ಮಾಯಾ

ಕಾಡಿನ ಮಂದಿಯ ನಾಡಿಗೆ ಅಟ್ಟರು
ಕಾಡನು ಕಡಿದು ಮನೆ ಹೊಲ ಕೊಟ್ಟರು
ಮರ ಗಿಡ ಕಡಿದರು, ಹೊಲೆಯನು ಉರಿಸಲು
ಆನೆಯು ಮೈದವು ನಮ್ಮೆಯ ಪಸಲು
ಮೇವಿನ ಆಸೆಲೀ ನಾವೇ ಹಾಕಿ
ಧಗ ಧಗ ಉರಿಯಿತು ಕಾಡಿನ ಬೆಂಕಿ

ಹೀಗೆ ನಡೆದರೆ ನಮ್ಮ ಜನ.....ಅಣ್ಣ
ಹೀಗೆ ನಡೆದರೆ ನಮ್ಮ ಜನ
ಕಾಡೆಂಬುದಿರದು ಒಂದು ದಿನ .....
ಎಲ್ಲಾ ಮಾಯಾ, ನಾಳೆ ನಾವು ಮಾಯಾ
ಎಲ್ಲಾ ಮಾಯಾ, ನಾಳೆ ನೀವು ಮಾಯಾ

trench ಅನ್ನು ಮುಚ್ಚಿ ದನಗಳ ಬಿಟ್ಟರು
ಮುಚ್ಚಿದ trench ಏರಿ ಆನೆ ಹಂದಿ ಬಂದವು
ಮಾಂಸದ ಆಸೆಗೆ ಮೃಗಗಳ ಕೊಂದರು
ಕಾಸಿನ ಆಸೆಗೆ ಮರಗಳ ಕಡೆದರು
ಉರುಳನು ಹಾಕಿ ಹುಲಿ ಜಿಂಕೆ ಹಿಡಿದರು
ತಮ್ಮ ಕೈಗೆ ಸರಳನು ಪಡೆದರು

ಕಡಿದು ಬಡಿದು ಕಾನನ ಬರಿದು, --- ಅಣ್ಣ
ಕಡಿದು ಬಡಿದು ಕಾನನ ಬರಿದು
ನಮ್ಮ ಊರಿಗೆ ಮಳೆ ಬೆಳೆ ಬರದು
ಎಲ್ಲಾ ಮಾಯಾ, ನಾಳೆ ನಾವು ಮಾಯಾ
ಎಲ್ಲಾ ಮಾಯಾ, ನಾಳೆ ನೀವು ಮಾಯಾ

No comments:

Post a Comment