Life Goes On...

Life Goes On...
Life--- The way u Look at it

Tuesday, December 18, 2012

ಹಾಗೆ ತೊಚಿದ್ದು.....


ಹುಣ್ಣಿಮೆಯ ಚಂದಿರ  ಚೆಲುವ ಚೆಲ್ಲುತ್ತಿರಲು ಬಾನಿನಲಿ
ಮನಸೋತ  ಕಡಲು ನರ್ತಿಸುತಿತ್ತು ವಯ್ಯಾರದಿ 
ಅವನ  ಆಲಿಂಗನಕೆ, ಕುಣಿದು ಆಳೆತ್ತರದ  ಅಲೆಗಳಲಿ!!
                        ****
 
ಭಾನಂಗಳದಿ ಚುಕ್ಕಿಗಳು ಮೂಡಿಸಿದ ಹಾಗಿತ್ತು ಅವಳ ಹೆಸರ,
ಈ ನನ್ನ ಕಲ್ಪನೆಯ ಕಂಡು ನಗಾಡುತಿದ್ದ ಹುಣ್ಣಿಮೆಯ ಚಂದಿರ,
ಅವಳು ದೂರಾದ, ವಿರಹದಿಂದಲೇ ಇರಬೇಕು ಈ ವಿಚಿತ್ರ.....
                         ****
 
ಎಷ್ಟೇ ಸುರಸುಂದರನಾದರು ಚಂದಿರ
ಎಷ್ಟೇ ನಿಷ್ಟೇಯಿಂದ ಸುತ್ತಿದರು ವಸುಧೆಯ
ಅವಳ ಒಲಿಸಿಕೊಳ್ಳುವುದು ಅಸಾದ್ಯ!
                ****

ನನ್ನೆದೆಯ ಮುಗಿಲಲಿ ಮಿಂಚಿದ ತಾರೆನೀ
ಮಿನುಗಿ ಮರೆಯಾಗಿ ಉಳಿಸಿದೆನಗೆ ಕಂಬನಿ
ಆದರಿಂದು ಮೂಡಿದೊಂದು ಹುಣ್ಣಿಮೆ ಚಂದಿರ
ತಾರೆಯ ಹೊಳಪನು ಮರೆಸುತ, ಮೂಡಿಸಹೊರಟಿದೆ ನವ ಚಿತ್ತಾರ!!